ಮತ್ತೆ ಮಠಕ್ಕೆ‌‌ ಮಹಾಬಲ. ಸುಪ್ರೀಂ‌ ಆದೇಶವನ್ನು ಪಾಲಿಸಿದ‌‌ಕರ್ನಾಟಕ ಸರ್ಕಾರ. ಶ್ರೀ ಹಾಲಪ್ಪನವರಿಂದ ಹಸ್ತಾಂತರ ಪ್ರಕ್ರಿಯ

ಭಾರತದ ಸರ್ವೋಚ್ಚ ನ್ಯಾಯಲಯದ ಆದೇಶದಂತೆ ಕರ್ನಾಟಕ‌ ಸರ್ಕಾರ ಇಂದು ಶ್ರೀಮಹಾಬಲೇಶ್ವರ ದೇವಸ್ಥಾನವನ್ನು‌ ಮತ್ತೆ ಮಠಕ್ಕೆ‌ ಹಸ್ತಾಂತರಿಸತೊಡಗಿದೆ. ಶ್ರೀಮಹಾಬಲೇಶ್ವರನ‌ ಸನ್ನಿಧಿಯಲ್ಲಿ ಶ್ರೀಮಠದ‌ ಪ್ರತಿನಿಧಿಯಾಗಿ ಶ್ರೀ‌ ಜಿ.ಕೆ. ಹೆಗಡೆ, ಶ್ರೀ‌ಹಾಲಪ್ಪನವರಿಂದ ಆಡಳಿತ ಸ್ವೀಕರಿಸುತ್ತಿದ್ದಾರೆ.

Continue Reading

ಗೋವಿಗೆ ಮೇವು- ಶ್ರಮದಾನದ ಮೂಲಕ ವಿಭಿನ್ನ ಕಾರ್ಯ – ಅಮೃತಧಾರಾ ಗೋಶಾಲೆಗೆ ಗೋಪ್ರೇಮಿಗಳ ನೆರವು.

ಕಾಸರಗೋಡು: ಕಾಸರಗೋಡಿನ ಪೆರ್ಲದ ಬಜಕೂಡ್ಲುವಿನಲ್ಲಿರುವ ಅಮೃತಧಾರಾ ಗೋಶಾಲೆಗೆ ಸ್ವಯಂಪ್ರೇರಿತ ಶ್ರಮದಾನದ ಮೂಲಕ ಮೇವಿನ ಹುಲ್ಲನ್ನು ಒದಗಿಸುವ ವಿಭಿನ್ನ ಪ್ರಯತ್ನ ನಡೆಯಿತು.   ಕುಂಬಳೆ ವಲಯದ ಸೀತಾಂಗೋಳಿಯ ಹಮೀದ್ ನೆಲ್ಲಿಕುನ್ನು ಅವರಿಗೆ ಸೇರಿದ ಸ್ಥಳದಲ್ಲಿ ಹಸಿಹುಲ್ಲು ಬೆಳೆದಿತ್ತು‌. ಈ ಹುಲ್ಲನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಚಂದ್ರಗಿರಿ ಹವ್ಯಕ ವಲಯದ ನೇತೃತ್ವದಲ್ಲಿ ಗೋಪ್ರೇಮಿಗಳು ಈ ಹುಲ್ಲನ್ನು ಕತ್ತರಿಸಿ ವಾಹನದಲ್ಲಿ ತುಂಬಿ ಬಜಕೂಡ್ಲು ಅಮೃತಧಾರ ಗೋಶಾಲೆಗೆ ಕಳುಹಿಸಿಕೊಟ್ಟರು.   ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ […]

Continue Reading

ಉರುವಾಲಿನಲ್ಲಿ ಅರ್ಥಪೂರ್ಣ ರಾಜ್ಯೋತ್ಸವ ಆಚರಣೆ – ಆಂಗ್ಲಮಾಧ್ಯಮ ಮಕ್ಕಳಿಗೂ ಕನ್ನಡ ಪಾಠ – ಭಾಷೆ ಉಳಿಸಿ ನಾಡು ಬೆಳೆಸಿ ಎಂದ ಗಣ್ಯರು.

ಉರುವಾಲು: ಇಲ್ಲಿನ ಶ್ರೀಭಾರತೀವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನವೆಂಬರ್ ೧ ರಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯೋತ್ಸವಕ್ಕೆ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು.   ರಾಜ್ಯೋತ್ಸವದ ಆಚರಣೆಗೆ ಮೂಲಕಾರಣವಾದ ಕನ್ನಡ ಏಕೀಕರಣದ‌ ಕುರಿತು, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಜಯಲಕ್ಷ್ಮೀ, ಸಹಶಿಕ್ಷಕರಾದ ಶ್ರೀಮತಿ ಕಮರುನ್ನೀಸಾ, ಶ್ರೀ ಲಕ್ಷ್ಮಣ ಗೌಡ ಅವರು ವಿವರಿಸಿದರು.   ಶಾಲಾ‌ಸಂಸತ್ತಿನ ವಿರೋಧ ಪಕ್ಷದ ನಾಯಕ ಕಾರ್ತೀಕ್ ರಾಜ್ಯೋತ್ಸವದ ಮಹತ್ತ್ವ ತಿಳಿಸಿದರು. […]

Continue Reading

ಶ್ರೀರಾಮಾಶ್ರಮದಲ್ಲಿ ಸಂಗೀತ ಸೇವೆ

ಬೆಂಗಳೂರು:- ದೇವರಿಗೆ ಹರಕೆ ರೂಪದಲ್ಲಿ‌ ಹೂವು-ಹಣ್ಣು ಕಾಣಿಕೆ‌ ಸಮರ್ಪಿಸುವಂತೆ ಸಂಗೀತ ಕಲಾವಿದರಾದ ಶ್ರೀರಘುನಂದನ ಬೇರ್ಕಡವುರವರು ಶ್ರೀಕರಾರ್ಚಿತ ದೇವರ ಸಮ್ಮುಖದಲ್ಲಿ ತಮ್ಮ ಗಾನಸುಧೆಯ ಮೂಲಕ ಹರಕೆ ಸಲ್ಲಿಸಿದರು.   ಗುರುವಾರ(೧-೧೧-೨೦೧೮) ಗಿರಿನಗರದ ಶ್ರೀರಾಮಾಶ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟರು. ರಾಗ ನಾಟದಿಂದ ಆರಂಭಿಸಿ, ಬಹುದಾರಿ, ದೇವಗಾಂಧಾರಿ, ರೀತಿಗೌಳ, ದರ್ಬಾರ್, ಪಂತುವರಾಳಿ, ಕಾನಡ, ಸಿಂಧುಬೈರವಿ, ದುರ್ಗಾ, ಮಿಶ್ರ ಪಹಾಡಿ, ಮೋಹನ, ಕಲ್ಯಾಣಿ, ಸೌರಾಷ್ಟ್ರ ರಾಗದಲ್ಲಿ ಹಾಡಿ ಶ್ರೀರಾಮನಿಗೆ ಕಲಾಸೇವೆಗೈದರು.   ಶ್ರೀಸಂಸ್ಥಾನದವರ ಆಶೀರ್ವಾದ ಹಾಗೂ ಸೂಚನೆಯ ಮೇರೆಗೆ […]

Continue Reading

ಗೋಕರ್ಣ‌ದೇವಾಲಯ ಹಸ್ತಾಂತರ‌ ವಿಚಾರ- ಸರ್ಕಾರಕ್ಕೆ ೩ ನೇ‌ ಬಾರಿ ಮುಖಭಂಗ- ಸೋಮವಾರದೊಳಗೆ ದೇವಾಲಯವನ್ನು‌ ಮಠದ ಸುಪರ್ದಿಗೆ ನೀಡಲು ಸುಪ್ರೀಂಕೋರ್ಟ್ ಆದೇಶ.

ಬೆಂಗಳೂರು:- ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ತಕ್ಷಣ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವಂತೆ ಘನ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ಆದೇಶಿಸಿದೆ. ಶ್ರೀಮಠ ಸಲ್ಲಿಸಿದ್ದ ನ್ಯಾಯಾಂಗನಿಂದನೆ ಅರ್ಜಿಯನ್ನು ಇಂದು ಮಾನ್ಯ ಮಾಡಿದ ಘನ ಸರ್ವೋಚ್ಚ ನ್ಯಾಯಾಲಯ ; ಸರ್ಕಾರದ ಕ್ರಮದ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೇವಾಲಯವನ್ನು ಶ್ರೀಮಠಕ್ಕೆ ತಕ್ಷಣ ಹಸ್ತಾಂತರಿಸುವಂತೆ ಆದೇಶ ನೀಡಿದೆ. ಸೆಪ್ಟೆಂಬರ್ ೧೯ ರ ವರೆಗೂ ದೇವಾಲಯ ಶ್ರೀಮಠದ ಆಡಳಿತದಲ್ಲೇ ಇತ್ತು, ಅಲ್ಲಿಯವರೆಗೂ ಯಾವುದೇ ಆಡಳಿತಾಧಿಕಾರಿಯ ಪ್ರಭಾರ ಇರಲಿಲ್ಲ. ಸೆ. ೭ ರ ಯಥಾಸ್ಥಿತಿಯನ್ನು ಮುಂದುವರಿಸುವಂತೆ […]

Continue Reading

ಈ ಸಲದ ಧರ್ಮಭಾರತಿಯಲ್ಲಿ

ಭಾರತೀಯರ ಮನಸ್ಸು, ಸಂಪ್ರದಾಯ, ಪರಂಪರೆಗಳನ್ನು ಭಗವದ್ಭಕ್ತಿಯ ಮೂಲಕ ನೆಲೆಗೊಳಿಸಿ ಉಳಿಸಿ ಬೆಳೆಸುವಲ್ಲಿ ಶ್ರೀತ್ಯಾಗರಾಜರ ಕೊಡುಗೆ ಅಪಾರ. ಅವರು ರಚಿಸಿದ ಉತ್ಸವಸಂಪ್ರದಾಯ ಕೀರ್ತನೆಗಳ ಬಗೆಗಿನ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಸವಿವರ ಬರಹ. ‘ಈ ರಾಜ್ಯದ ಕುರಿತು ಹೇಳಜ್ಜೀ’ ಎಂದ ರಾಜ. ‘ಅದನ್ನು ನೀನು ಕೇಳಬಾರದು. ನಾನು ಹೇಳಲೂ ಬಾರದು’ ಎಂದಳು ಅಜ್ಜಿ. ಕಥೆಯೇನು ಅಡಗೂಲಜ್ಜಿಯ ರಾಜ್ಯದ್ದು? ಶ್ರೀಗೋಪಾಲಕೃಷ್ಣ ಕುಂಟಿನಿಯವರ ಕಥೆಯಲ್ಲಿ. ದಿವ್ಯಸನ್ನಿಧಿಯಲ್ಲಿ ಶ್ರೀಸಂಸ್ಥಾನದವರ ಪ್ರವಚನಾಮೃತ – ನಲಿವಿನ ನೆಲೆಗೆ ನಲವತ್ತು ಮೆಟ್ಟಿಲು. ಶ್ರೀಸಂಸ್ಥಾನದವರ ಲೇಖನಾಮೃತ – ರಾಮರಶ್ಮಿ. […]

Continue Reading

ಶನಿವಾರ ರಾಮಾಶ್ರಮದಲ್ಲಿ ರಾಮಪದ ಸತ್ಸಂಗ

ಬೆಂಗಳೂರು:- ಏಕಾದಶಿಯ ಹರಿದಿನದಂದು ಶ್ರೀಸಂಸ್ಥಾನದವರು ಶಿಷ್ಯರೊಡಗೂಡಿ ರಾಮಪದಗಳನ್ನು ಹಾಡುವ ರಾಮಪದ ಸಹಜ ಸತ್ಸಂಗ ಕಾರ್ಯಕ್ರಮ ಶನಿವಾರ(೩-೧೧-೨೦೧೮) ದಂದು ಸಂಜೆ ೬ ರಿಂದ ೮ ಗಂಟೆಯವರೆಗೆ ನಡೆಯಲಿದೆ. ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿರುವ ಈ ರಾಮಪದದಲ್ಲಿ ಪ್ರತಿಬಾರಿಯಂತೆ ಶ್ರೀಸಂಸ್ಥಾನ ರಾಮಪದತಲದಲ್ಲಿ ಕುಳಿತು ಶ್ರೀರಾಮನ ಹಾಡುಗಳನ್ನು ಹಾಡುತ್ತ‌ ಶ್ರೀರಾಮನ ಗುಣವಿಶೇಷಗಳನ್ನು ಪರಿಚಯಿಸುತ್ತ ಸತ್ಸಂಗ ನಡೆಸಲಿದ್ದಾರೆ. ಈ ಬಾರಿಯ ರಾಮಪದ ಕಾರ್ಯಕ್ರಮದಲ್ಲಿ ಗಾಯಕರಾಗಿ ಹಿಂದೂಸ್ಥಾನಿ ಸಂಗೀತಕ್ಷೇತ್ರದ ಉದಯೋನ್ಮುಖ‌ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ಪಾಲ್ಗೊಳ್ಳಲಿದ್ದಾರೆ. ಕಲಾರಾಮ ಅರ್ಪಿಸುವ ಈ ಅಪರೂಪದ ರಾಮಪದ ಕಾರ್ಯಕ್ರಮದಲ್ಲಿ ನೀವೆಲ್ಲರೂ […]

Continue Reading

ಮಾತಾಪಿತೃಗಳಿಗೆ ಪಾದಪೂಜೆ ನೆರವೇರಿಸಿದ ಮಕ್ಕಳು : ಸಂಸ್ಕೃತಿ ಅರಿವು ಮೂಡಿಸಲು ನಡೆಯಿತು ವಿಶಿಷ್ಟ ಕಾರ್ಯಕ್ರಮ..

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಹಾಗೂ ಹೆತ್ತವರ ಮಹತ್ತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಇಂದು ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಶ್ರೀಭಾರತೀವಿದ್ಯಾಲಯದಲ್ಲಿ ಜನ್ಮದಾತರಿಗೆ ಪೂಜೆ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ ಜರುಗಿತು. ಕನ್ನಡ ರಾಜ್ಯೋತ್ಸವದ ಈ ಶುಭದಿನದಂದು ಹೆತ್ತವರ ಪಾದ ತೊಳೆದು ಪೂಜೆ ಸಲ್ಲಿಸಿದ ಮಕ್ಕಳು, ಬದುಕಿಡಿ ತಮ್ಮನ್ನು ಸಲಹುವ ತಂದೆ-ತಾಯಿಗಳನ್ನು ಗೌರವದಿಂದ ಕೊನೆತನಕ ಸಲಹುವ ಶಪಥ ಗೈಯ್ದರು. ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಹಾಗೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ […]

Continue Reading

ರಾಮಾಶ್ರಮದಲ್ಲಿ ರಾಮದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಪನ್ನ

ಬೆಂಗಳೂರು : ಶ್ರೀರಾಮಚಂದ್ರಾಪುರಮಠದ‌ ಶಾಖಾಮಠವಾದ ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ಸಪರಿವಾರ ಶ್ರೀರಾಮಚಂದ್ರದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಾಗಿ ನಡೆಯಿತು. ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವಿಲಂಬ ಸಂವತ್ಸರದ ಅಶ್ವಯುಜ ಕೃಷ್ಣ ಷಷ್ಠಿ ಹಾಗೂ ಸಪ್ತಮಿಯಂದು ಹಲವು ಧಾರ್ಮಿಕ‌ ಕಾರ್ಯಕ್ರಮಗಳು ನಡೆದವು. (ದಿನಾಂಕ 30.10.2018 ಹಾಗೂ 31.10.2018) ಮಂಗಳವಾರದಂದು ಗುರುದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಣಪತಿ ಪೂಜೆ, ದೇವನಾಂದಿ, ಪುಣ್ಯಾಹ, ಕೌತುಕ ಬಂಧನ, ಧ್ವಜಾರೋಹಣ, ಬಲಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ರಂಗಪೂಜೆ, ಪಲ್ಲಕ್ಕಿ ಉತ್ಸವ, […]

Continue Reading