ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ : ಡಿಸೆಂಬರ್ 28, 29 ಮತ್ತು 30ರಂದು ಹವ್ಯಕರ ಹಬ್ಬ

ಶ್ರೀ ಅಖಿಲ ಹವ್ಯಕ ಮಹಾಸಭೆಯು ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತವಾಗಿ, ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿದೆ. ಗುರುಪೀಠಗಳ ದಿವ್ಯ ಮಾರ್ಗದರ್ಶನದೊಂದಿಗೆ 1943ರಿಂದ ಸಮಾಜದ ಸಂಘಟನೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದಿಶೆಯಲ್ಲಿ ತೊಡಗಿಸಿಕೊಂಡಿದೆ. ಅಮೃತಮಹೋತ್ಸವ ವರ್ಷದ ಹರ್ಷದಲ್ಲಿರುವ ಹವ್ಯಕ ಮಹಾಸಭೆಯು ಡಿ. 28, 29 ಹಾಗೂ 30ರಂದು ಐತಿಹಾಸಿಕ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಿದೆ.   ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ […]

Continue Reading

ರಾಮಮಂದಿರ‌‌ ನಿರ್ಮಾಣದ ಕುರಿತು ಶ್ರೀಸಂಸ್ಥಾನದ ನಿಲುವೇನು?- ವೀಕ್ಷಿಸಿ ನಾಳೆ ರಾತ್ರಿ ದಿಗ್ವಿಜಯ ಸುದ್ದಿವಾಹಿನಿಯಲ್ಲಿ

ಬೆಂಗಳೂರು: ನಾಳೆ ಅಂದ್ರೆ‌ ನವೆಂಬರ್ ದಿಗ್ವಿಜಯ‌ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ವಿಶೇಷ ಧಾರ್ಮಿಕ‌ ಸಂದರ್ಶನ ಪ್ರಸಾರವಾಗಲಿದೆ. ರಾತ್ರಿ 9.27 ಕ್ಕೆ‌ ಸರಿಯಾಗಿ ದಿಗ್ವಿಜಯ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ಇಂಟರವ್ಯೂ‌ಪ್ರಸಾರವಾಗಲಿದ್ದು ಹಲವು ವಿಚಾರಗಳ ಕುರಿತು ಶ್ರೀಸಂಸ್ಥಾನದವರು ತಮ್ಮ ‌ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರಾಮಮಂದಿರ‌ನಿರ್ಮಾಣ, ಹಾಗೂ ದೇಗುಲಗಳ ಸರ್ಕಾರಿ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ‌ ಕುರಿತು ಶ್ರೀಸಂಸ್ಥಾನದವರು ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು‌ ದಿಗ್ವಿಜಯ ವಾಹಿನಿಯಲ್ಲಿ ಸಂದರ್ಶನದ ಜೊತೆಗೆ ನಾಡಿನ‌ ಜನಪ್ರಿಯ‌ ದಿನಪತ್ರಿಕೆ ವಿಜಯವಾಣಿ ಯಲ್ಲಿ ಇದೇ ಸಂದರ್ಶನದ ವರದಿ […]

Continue Reading

ಜೇಡ್ಲ ಗೋಶಾಲೆಯಲ್ಲಿ ದೀಪಾವಳಿ : ಗೋಪೂಜೆ- ಕುಂಕುಮಾರ್ಚನೆ

ಸುಳ್ಯ : ಸುಳ್ಯ ಹವ್ಯಕ ವಲಯದ ವತಿಯಿಂದ ಸಂಪಾಜೆಯ ಜೇಡ್ಲದಲ್ಲಿರುವ ಶ್ರೀಮಠದ ಗೋಶಾಲೆಯಲ್ಲಿ ನವೆಂಬರ್ 09ರಂದು ಶೃದ್ಧಾಭಕ್ತಿಯಿಂದ ಗೋಪೂಜೆ‌ ನೆರವೇರಿಸಲಾಯಿತು.   ಗೋಪೂಜೆ ಸಂದರ್ಭದಲ್ಲಿಯೇ ಮಾತೆಯರು ಕುಂಕುಮಾರ್ಚನೆ ಗೈಯ್ದರು. ಅಲ್ಲದೇ ಸುಳ್ಯ ವಲಯ ವೈದಿಕ-ಸಂಸ್ಕಾರ ವಿಭಾಗದ ವತಿಯಿಂದ 114ನೇ ವೇದವಾಹಿನಿ ಪಾರಾಯಣವನ್ನೂ ಕೈಗೊಳ್ಳಲಾಯಿತು. ವೈದಿಕರಾದ ಎತ್ತುಕಲ್ಲು ಶ್ರೀ ನಾರಾಯಣ ಭಟ್, ಅರಂಬೂರು ಶ್ರೀ ಕೃಷ್ಣ ಭಟ್, ಶ್ರೀ ವಿಶ್ವಕೀರ್ತಿ ಜೋಯಿಸರು, ಶ್ರೀ ವೆಂಕಟೇಶ ಶಾಸ್ತ್ರೀ ಪಾರಾಯಣ ಹಾಗೂ‌ ಇತರ ಧಾರ್ಮಿಕ‌ ವಿಧಿವಿಧಾನ ನಡೆಸಿಕೊಟ್ಟರು.   ವಲಯದ ಅಧ್ಯಕ್ಷರಾದ […]

Continue Reading

ಗೋಸ್ವರ್ಗದಲ್ಲಿ ಗವ್ಯೋತ್ಪನ್ನ ತರಬೇತಿ ಶಿಬಿರ

ಸಾವಿರದ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ, ಸಪ್ತದೇವತೆಗಳ ಸನ್ನಿಧಿಯಾದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಸ್ವರ್ಗದಲ್ಲಿ ಕರ್ನಾಟಕ ರಾಜ್ಯ ಗೋಪರಿವಾರದ ಆಶ್ರಯದಲ್ಲಿ ನವೆಂಬರ್ 23,24,25 ರಂದು ಗವ್ಯೋತ್ಪನ್ನಗಳ ತಯಾರಿಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರ ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಗೋಮಯ, ಗೋಮೂತ್ರ ಸೇರಿದಂತೆ ಆರೋಗ್ಯ, ಕೃಷಿ, ಪರಿಸರದ ಸಮೃದ್ಧಿಗೆ ಸಹಕಾರವಾಗುವ ವಿವಿಧ ಗವ್ಯೋತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿಕೆಯ ಜೊತೆ ತರಬೇತಿ ನೀಡಲಾಗುವುದು. ಮೂರು ದಿನಗಳ ವಸತಿ ಸಹಿತ ಶಿಬಿರದಲ್ಲಿ ಊಟೋಪಚಾರ ಹಾಗೂ ಸಾಮೂಹಿಕ ವಸತಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಆಸಕ್ತರು ನವೆಂಬರ್ 20ನೇ […]

Continue Reading

ಮಾಲೂರು‌ ಗೋಶಾಲೆಯಲ್ಲಿ ಗೋಪೂಜೆ – ದೀಪೋತ್ಸವ – ಪುಣ್ಯಕಾರ್ಯದಲ್ಲಿ‌ ಪಾಲ್ಗೊಂಡ‌ ಗೋಪ್ರೇಮಿಗಳು

ಮಾಲೂರು: ಮಾಲೂರು ತಾಲೂಕು ಗಂಗಾಪುರದ ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ದೀಪಾವಳಿ ಅಂಗವಾಗಿ ನವೆಂಬರ್ 8 ರ ಸಂಜೆ ಗೋಪೂಜೆ‌ ನಡೆಯಿತು.   ವೇ. ಮೂ. ಗೋಪಾಲಕೃಷ್ಣ ಭಟ್ ರವರ ಮಾರ್ಗದರ್ಶನದಲ್ಲಿ ಗೋ‌ ಆಶ್ರಮ ನಿರ್ವಹಣಾ ಸಮಿತಿ ಕೋಶಾಧ್ಯಕ್ಷರು ಸೇರಿದ ಸಮಸ್ತರ ಪರವಾಗಿ ಗೋಪೂಜೆ ನಡೆಸಿದರು.   ಅನಂತರ‌ ದೀಪಾವಳಿ ಬೆಳಕನ್ನು ಗೋಶಾಲೆಯಲ್ಲೂ ಮೂಡಿಸುವ ಉದ್ದೇಶದಿಂದ ಗೋಶಾಲೆ‌ ಉದ್ದಕ್ಕೂ‌ ಹಣತೆಯನ್ನು ಹಚ್ಚಿ ದೀಪೋತ್ಸವ ನೆರವೇರಿಸಲಾಯಿತು.   ಇದೇ ಸಂದರ್ಭದಲ್ಲಿ ಸ್ಥಳದಲ್ಲಿರುವ ಶ್ರೀ ಸಿದ್ಧ ಆಂಜನೇಯಸ್ವಾಮಿ ದೇವರಿಗೂ ವಿಶೇಷ ಅಭಿಷೇಕ ಪೂಜೆ […]

Continue Reading

ಮೊಬೈಲ್ ಕವರ್ ನಲ್ಲಿ ಶ್ರೀಸಂಸ್ಥಾನದವರ ಭಾವಚಿತ್ರ- ಶಿಷ್ಯವರ್ಗಕ್ಕೆ ಸಂತಸದ ಸುದ್ದಿ

ಬೆಂಗಳೂರು: ಮೊಬೈಲ್ ಇಂದು ಜೀವನಾವಶ್ಯಕ ವಸ್ತುಗಳ ಸಾಲಿಗೆ ಸೇರಿಹೋಗಿದೆ. ಮೊಬೈಲ್ ಇಲ್ಲದೇ ಒಂದು ಕ್ಷಣವೂ ಇರುವುದು ಸಾಧ್ಯವಿಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಮೊಬೈಲ್ ಗಳಲ್ಲಿ ನೂರಾರು ವೈರೈಟಿ, ಬೇರೆ ಬೇರೆ ದರ. ಇಂಥ ಮೊಬೈಲ್ ಗಳನ್ನು ಸಿಂಗರಿಸೋದೂ ಒಂದು ರೀತಿ ಸಂಭ್ರಮವೇ. ಸಿನಿಮಾ ನಟರು, ಬಾರ್ಬಿ ಗೊಂಬೆ, ಹೀಗೆ ವಿಭಿನ್ನ ಚಿತ್ರ-ಡಿಸೈನ್ ಹೊಂದಿದ ಮೊಬೈಲ್‌ ಕವರ್ ಗಳು ಮಾರುಕಟ್ಟೆ ಯಲ್ಲಿ ‌ಲಭ್ಯ. ಇದಕ್ಕೆ ಈಗ ಹೊಸ ಸೇರ್ಪಡೆ ಶ್ರೀಸಂಸ್ಥಾನದ ಚಿತ್ರವಿರುವ ಮೊಬೈಲ್ ಕವರ್.   ಶ್ರೀಸಂಸ್ಥಾನ ಗೋರಕ್ಷಣೆ‌ […]

Continue Reading

ಕೊಡಗು ನೆರೆ ಸಂತ್ರಸ್ಥೆಗೆ ಸಹಾಯ ಹಸ್ತ ಚಾಚಿದ ಶ್ರೀಮಠ: 1 ಲಕ್ಷ ರೂಪಾಯಿ ಚೆಕ್ ಹಸ್ತಾಂತರ

ಮುಳ್ಳೇರಿಯಾ : ಕೊಡಗು ವಲಯದ ನೆರೆ ಸಂತ್ರಸ್ತೆ ಶ್ರೀಮತಿ ಸರಸ್ವತಿ ಅಮ್ಮನವರಿಗೆ ಶ್ರೀಮಠದ ಸಹಾಯನಿಧಿ ವತಿಯಿಂದ ಧನಸಹಾಯ ನೀಡಲಾಯಿತು.   ನವೆಂಬರ್ 6ರಂದು ನಡೆದ ಸಭೆಯಲ್ಲಿ ಶ್ರೀಮಠದ ವತಿಯಿಂದ ₹ 1,00,000/- ವನ್ನು ಚೆಕ್ ಮೂಲಕ, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹರಿಪ್ರಸಾದ್ ಪೆರಿಯಾಪ್ಪು, ಮಂಡಲದ ಅಶೋಕೆ ವಿಭಾಗ ಪ್ರತಿನಿಧಿ ಶ್ರೀ ಹರೀಶ್ ಹಾರದೂರ್, ಅಧ್ಯಕ್ಷರಾದ ಶ್ರೀ ನಾರಾಯಣ್ ಮೂರ್ತಿ ಮತ್ತು ಗುರಿಕ್ಕಾರರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.   ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹರಿಪ್ರಸಾದ್ ಪೆರಿಯಾಪ್ಪು […]

Continue Reading

ನೀರ್ಚಾಲಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ: ಪ್ರಯೋಜ‌ನ ಪಡೆದುಕೊಂಡ ಗ್ರಾಮಸ್ಥರು

ನೀರ್ಚಾಲು: ಗ್ರಾಮೀಣ ಜನತೆಯ ಆರೋಗ್ಯ ರಕ್ಷಣೆಗಾಗಿ ಮುಜುಂಗಾವು ಶ್ರೀಭಾರತೀ ನೇತ್ರಚಿಕಿತ್ಸಾಲಯವು ವಿವಿಧೆಡೆ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ದೃಷ್ಟಿದೋಷದಿಂದ ಬಳಲುತ್ತಿರುವವರಿಗೆ ನೆರವಾಯಿತು. ಹಲವಾರು ಸಮಾಜಮುಖಿ ಯೋಜನೆಗಳ ಮೂಲಕ ಶ್ರೀಮಠವು ಗುರುತಿಸಿಕೊಂಡಿದೆ. ಶ್ರೀಮಠ ಹಾಗೂ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಸಮಾಜಸೇವೆ ಕೈಗೊಂಡಿರುವ ಶಿಷ್ಯವರ್ಗವೂ ಈ ರೀತಿಯ ಕಾರ್ಯಕ್ರಮಗಳ ಮೂಲಕ ಜನಸೇವೆ ನಡೆಸುತ್ತಿದೆ.   ಮುಜುಂಗಾವಿನಲ್ಲಿರುವ ಶ್ರೀ ಧರ್ಮಚಕ್ರ ಟ್ರಸ್ಟ್(ರಿ)ನ ಶ್ರೀಭಾರತೀ ನೇತ್ರಚಿಕಿತ್ಸಾಲಯವು ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಆಶ್ರಯದಲ್ಲಿ ಹಾಗೂ ನಬಾರ್ಡ್, ಮುಗು ಜಲಾನಯನ ಪದ್ಧತಿ, ನೀರ್ಚಾಲು ಇವರ […]

Continue Reading

ಇಂದಿನಿಂದ ಪೆರ್ಲದಲ್ಲಿ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮಿ ಮಹೋತ್ಸವ

ಪೆರ್ಲ: ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಇಂದಿನಿಂದ ನವೆಂಬರ 15ರ ತನಕ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮಿ ಮಹೋತ್ಸವ ನಡೆಯಲಿದೆ.   ನವೆಂಬರ್ ೭ ಬುಧವಾರ ಸಂಜೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ದೇವತಾ ಪ್ರಾರ್ಥನೆ, ಸಪ್ತಶುದ್ಧಿ, ಪುಣ್ಯಾಹ, ಮಂಟಪ ಸಂಸ್ಕಾರ, ವಾಸ್ತು ಪೂಜೆ, ರಾಕ್ಷೋಘ್ನ ಹವನ, ನ.8ರಂದು ಬೆಳಗ್ಗೆ 7ರಿಂದ ಗಣಪತಿ ಹವನ, ಕಾಮಧೇನು ಹವನ, ಸಂಜೆ 4.30ರಿಂದ ಭಜನರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಗೋಪೂಜೆ, ತುಳಸೀಪೂಜೆ, ಗೋಪಾಲಕೃಷ್ಣ ಪೂಜೆ, ರಾತ್ರಿ 7ರಿಂದ ದೀಪೋತ್ಸವ, ಮಂಗಳಾರತಿ, ಪ್ರಸಾದ […]

Continue Reading

ಗೋವಿಗಾಗಿ ಮೇವು- ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಕಾರ್ಯಕರ್ತರು

ಕಾಸರಗೋಡು: ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಪೆರಡಾಲ ವಲಯದ ಮಾಯಿಲಂಕೋಡಿ ಗಣೇಶ ಭಟ್ ಇವರ ಹಿತ್ತಲಲ್ಲಿ ಇದ್ದ ಮೇವಿನ ಹುಲ್ಲನ್ನು ಸಾಗಿಸಿ ತಲುಪಿಸುವ ಶ್ರಮದಾನ ಯಶಸ್ವಿಯಾಗಿ ಜರುಗಿತು.   ಮಂಗಳವಾರ ಗಣೇಶ್ ಭಟ್ ಅವರ ಹಿತ್ತಲಿನ ಹಸಿಹುಲ್ಲನ್ನು ಕಾರ್ಯಕರ್ತರ ನೇತೃತ್ವದಲ್ಲಿ ಕತ್ತರಿಸಲಾಯಿತು. ಮಹಾಮಂಡಲ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಶ್ಯಾಮ್ ಭಟ್ ಬೇರ್ಕಡವು, ಮುಳ್ಳೇರಿಯ ಮಂಡಲ ಮಾತೃ ವಿಭಾಗದ ಕುಸುಮಾ ಪೆರ್ಮುಖ, ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಶ್ಯಾಮ್ ಭಟ್ […]

Continue Reading

ದೀಪಾವಳಿಯಂದು ಮಹಾನಂದಿ ಗೋಲೋಕಕ್ಕೆ ಬನ್ನಿ- ಗೋಪೂಜೆ ಸಲ್ಲಿಸಿ, ಗೋಗ್ರಾಸ ನೀಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳಿ

ಹೊಸನಗರ: ಗೋವುಗಳು ಅನಾದಿಕಾಲದಿಂದಲೂ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಗೋವುಗಳು ಎಷ್ಟರಮಟ್ಟಿಗೆ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿತ್ತು ಎಂದರೆ ಹಿಂದಿನ ಕಾಲದಲ್ಲಿ ಯಾರ ಬಳಿ ಹೆಚ್ಚು ಗೋವುಗಳಿದೆ ಎಂಬ ಆಧಾರದ ಮೇಲೆ ಆತನ ಸಿರಿತನವನ್ನು ನಿರ್ಧರಿಸಲಾಗುತ್ತಿತ್ತು. ಅನ್ಯವಸ್ತುಗಳ ವಿನಿಮಯವೂ ಗೋವುಗಳ‌ ಮೂಲಕವೇ ಆಗುತ್ತಿತ್ತು. ಉಡುಗೊರೆಯಾಗಿಯೂ ಗೋವುಗಳನ್ನೇ ಕೊಡಲಾಗುತ್ತಿತ್ತು.   ಮನುಷ್ಯನ ಜೀವನ ಸಂಪೂರ್ಣ ಗೋ ಆಧಾರಿತ ಎಂದರೆ ತಪ್ಪಾಗಲಾರದು. ಏಕೆಂದರೆ ತಾಯಿ ಎದೆಹಾಲು ಕೊಡುವುದನ್ನು ನಿಲ್ಲಿಸಿದ ಮೇಲೆ ಅದಕ್ಕೆ ಪ್ರತಿಯಾಗಿ ತನ್ನ ಅಮೃತಸದೃಶ ಕ್ಷೀರವನ್ನು ಮನುಕುಲಕ್ಕೆ ಪೂರೈಸಿ ಮನುಷ್ಯನನ್ನು […]

Continue Reading

ಅಭಿರಾಮ ಹೆಗಡೆ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ

ಮಾನಹಾನಿಕರ ಹೇಳಿಕೆ ನೀಡದಂತೆ ಪ್ರತಿಬಂಧಕಾಜ್ಞೆ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ – ಶ್ರೀಸಂಸ್ಥಾನ ಗೋಕರ್ಣ – ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಘನತೆಗೆ ಧಕ್ಕೆ ಉಂಟುಮಾಡುವ ಹಾಗೂ ಮಾನಹಾನಿಕರವಾದ ಯಾವುದೇ ರೀತಿಯ ಹೇಳಿಕೆಯನ್ನು ಮಾಧ್ಯಮ – ಸಮಾಜಮಾಧ್ಯಮ ಹಾಗೂ ಇನ್ನಿತರ ಯಾವುದೇ ರೀತಿಯಲ್ಲಿ ನೀಡದಂತೆ ಅಭಿರಾಮ್ ಹೆಗಡೆ ವಿರುದ್ಧ ಪ್ರತಿಬಂಧಕಾಜ್ಞೆಯನ್ನು ನ್ಯಾಯಾಲಯ ನೀಡಿದೆ.   ಸದರಿ ವ್ಯಕ್ತಿಯು ಮಾಧ್ಯಮ – ಸಮಾಜಮಾಧ್ಯಮ ಮುಂತಾದವುಗಳನ್ನು ಬಳಸಿಕೊಂಡು ಶ್ರೀಮಠ ಹಾಗೂ ಶ್ರೀಗಳ ಗೌರವಕ್ಕೆ ಚ್ಯುತಿತರುವ ಸತ್ಯಕ್ಕೆ ದೂರವಾದ […]

Continue Reading

ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ : ಶ್ರೀಸಂಸ್ಥಾನದಿಂದ ಅನುಗ್ರಹ ಪಡೆದ ವೈದಿಕರು

ಬೆಂಗಳೂರು: ಬ್ರಹ್ಮರ್ಷಿ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನವು ಇದೇ ಬರುವ 12-11-2018, ಸೋಮವಾರದಿಂದ 20-11-2018, ಮಂಗಳವಾರದವರೆಗೆ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ ಹಮ್ಮಿಕೊಂಡಿದೆ.   ರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿ ಮಾಡಿದ ಸಂಪ್ರತಿಷ್ಠಾನದ‌‌‌ ಸದಸ್ಯರು, ಹಮ್ಮಿಕೊಂಡಿರುವ ಪಾರಾಯಣದ ವಿಚಾರ ಅರುಹಿ‌ ಮಂತ್ರಾಕ್ಷತೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ ಹಾಗೂ ಮಿತ್ತೂರು ಪುರೋಹಿತ ಶ್ರೀ ತಿರುಮಲೇಶ್ವರ್ ಭಟ್ ಸಂಪಾದಿಸಿದ ‘ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ ಹಾಗೂ ಮೈಕೆ ಶಂಕರನಾರಾಯಣ ಭಟ್ಟ ಜನ್ಮಶತಮಾನ ಸ್ಮರಣಸಂಪುಟ’ ಗ್ರಂಥವನ್ನು ಶ್ರೀಸಂಸ್ಥಾನದವರಿಗೆ ಅರ್ಪಿಸಿ ಆಶೀರ್ವಾದ […]

Continue Reading

ಶ್ರೀಮಠದ ಶಿಷ್ಯ, ಹಿನ್ನೆಲೆ ಧ್ವನಿ ಕಲಾವಿದ, ನಿರೂಪಕ ಶ್ರೀ ಪ್ರದೀಪ ಬಡೆಕ್ಕಿಲ ಅವರಿಗೆ ‘ಸೃಷ್ಟಿ ಕಲೋಪಾಸಕ ಪ್ರಶಸ್ತಿ’

ಬೆಂಗಳೂರು: ಜಯನಗರದ ಜೆ‌.ಎಸ್.ಎಸ್. ಆಡಿಟೋರಿಯಂನಲ್ಲಿ ಶನಿವಾರ ನಡೆದ ಸೃಷ್ಟಿ ಕಲಾವಿದ್ಯಾಲಯದ ಸಂಗೀತ-ನೃತ್ಯೋತ್ಸವ ಸಮಾರಂಭದಲ್ಲಿ ಚಲನಚಿತ್ರ-ಕಿರುತೆರೆ‌ ನಟ, ಟಿವಿ ನಿರೂಪಕ, ಲೇಖಕ, ಶ್ರೀರಾಮಚಂದ್ರಾಪುರ‌ಮಠದ ಹಲವು ಪ್ರಸ್ತುತಿಗಳ ಧ್ವನಿ ಕಲಾವಿದರಾಗಿರುವ, ಶ್ರೀಮಠದ ಶಿಷ್ಯರೂ ಆಗಿರುವ ಶ್ರೀ ಪ್ರದೀಪ‌ ಬಡೆಕ್ಕಿಲ ಅವರಿಗೆ ಸೃಷ್ಟಿ ಕಲೋಪಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು.   ಕಿರುತೆರೆಯ‌ ಹಲವು ಜನಪ್ರಿಯ ಕಾರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿ ನೀಡಿರುವ ಇವರು ಮೆಟ್ರೋ ರೈಲಿನ ಉದ್ಘೋಷಗಳಿಗೂ ಧ್ವನಿಯಾಗಿದ್ದಾರೆ. ಶ್ರೀಯುತರಿಗೆ ಸಂದ ಗೌರವಕ್ಕೆ ಶ್ರೀಸಂಸ್ಥಾನ ಹಾಗೂ ಶಿಷ್ಯವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.   ಇದೇ […]

Continue Reading

ನಾಳೆ ರಾಮಾಶ್ರಮದಲ್ಲಿ ಸೋಮಪ್ರದೋಷ ಹಾಗೂ ಮಾಸ ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ ಹಾಗೂ ರುದ್ರಹವನ

ಬೆಂಗಳೂರು: ಶ್ರೀರಾಮಚಂದ್ರಾಪುರ‌ ಮಠದ ಶಾಖಾಮಠವಾದ ಗಿರಿನಗರದ ರಾಮಾಶ್ರಮದಲ್ಲಿ ಸೋಮವಾರ ದಿನಾಂಕ 05-11-2018 ರಂದು ಸೋಮಪ್ರದೋಷ ಹಾಗೂ ಮಾಸಶಿವರಾತ್ರಿ ಅಂಗವಾಗಿ ಬ್ರಹ್ಮೀಭೂತ ಶ್ರೀಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರ ಸಮಾಧಿಸಾನ್ನಿಧ್ಯದಲ್ಲಿ ಶ್ರೀಸಂಸ್ಥಾನದವರ ದಿವ್ಯಕರಗಳಿಂದ ವಿಶೇಷರುದ್ರಾಭಿಷೇಕ ನಡೆಯಲಿದೆ.   ಮುಂಜಾನೆ 10 ಗಂಟೆಗೆ ಶ್ರೀಕರಾರ್ಚಿತದೇವತಾ ಪೂಜೆಯೊಂದಿಗೆ ಧಾರ್ಮಿಕ‌ ಕಾರ್ಯಕ್ರಮಗಳು ಆರಂಭವಾಗಲಿದ್ದು, 11 ಗಂಟೆಗೆ ಶ್ರೀಸಂಸ್ಥಾನದವರು ಗುರುಮಂದಿರದಲ್ಲಿ ರುದ್ರಾಭಿಷೇಕ ನೆರವೇರಿಸಲಿದ್ದಾರೆ. 12 ಗಂಟೆಗೆ ಗುರು ವಂದನೆ, 12.30 ಕ್ಕೆ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ರುದ್ರಹವನದ ಪೂರ್ಣಾಹುತಿ, 1 ಗಂಟೆಗೆ ಶ್ರೀಸಂಸ್ಥಾನದವರ ಸಾನ್ನಿಧ್ಯದಲ್ಲಿ ಗುರುಮಂದಿರದಲ್ಲಿ ಮಹಾಮಂಗಳಾರತಿ ನಡೆಯಲಿದೆ.   […]

Continue Reading

ರೈತರೇ, ನಿಮ್ಮ ಕೃಷಿಭೂಮಿ ಸಾರ ಹೆಚ್ಚಿಸಲು ಬಂದಿದೆ ಸ್ವರ್ಗಸಾರ : ಇದು ರೈತರಿಗಾಗಿ ಗೋಫಲ ಟ್ರಸ್ಟ್ ಸಿದ್ಧಪಡಿಸಿರುವ ಸಂಪೂರ್ಣ ಜೈವಿಕ‌ ಗೊಬ್ಬರ

ನಮ್ಮೆಲ್ಲ ಸನಾತನ ಉಲ್ಲೇಖಗಳು ಗೋಮಯೇ ವಸತೇ ಲಕ್ಷ್ಮೀ ಎಂದೇ ಹೇಳುತ್ತವೆ. ಅಂದ್ರೆ ಬದುಕಿನುದ್ದಕ್ಕೂ ಮಾನವನಿಗೆ ನೆರಳಾಗುವ ಗೋಮಾತೆಯು ನಮಗೆ ನೀಡುವ ಕೊಡುಗೆಗಳಲ್ಲಿ ಗೋಮಯ ಹಾಗೂ ಗೋಮೂತ್ರ ಪ್ರಧಾನವಾದದ್ದು. ಗೋಮಯ ಹಾಗೂ ಗೋಮೂತ್ರವನ್ನು ನಮ್ಮ ಹಿರಿಯರು ಲಕ್ಷ್ಮೀ ಹಾಗೂ ಗಂಗೆಯ ರೂಪದಲ್ಲಿ ನೋಡುತ್ತಿದ್ದರು. ಇಂಥ ಆರೋಗ್ಯ ಹಾಗೂ ಪೂಜನೀಯ ಗೋವಸ್ತುಗಳು ನಮ್ಮ ಭೂಮಿ ಸೇರಿದರೆ ಮಾತ್ರ ನಾವು ಸೇವಿಸುವ ಆಹಾರ ಆರೋಗ್ಯಪೂರ್ಣವಾಗಲು ಸಾಧ್ಯ.   ಹೀಗಾಗಿ ನಾವು ಸೇವಿಸುವ ಆಹಾರವನ್ನು ಆರೋಗ್ಯಪೂರ್ಣವಾಗಿಸುವ ನಿಟ್ಟಿನಲ್ಲಿ, ಆಹಾರವನ್ನು ಉತ್ಪಾದಿಸಿ ಕೊಡುವ ಭೂಮಿಗೂ […]

Continue Reading

ಶ್ರೀಮಠದ ಶಿಷ್ಯೆ ಸಂಗೀತ ವಿದುಷಿ ಶ್ರೀಮತಿ ವಸುಧಾಶರ್ಮಾಗೆ ಪ್ರಶಸ್ತಿ : ರಾಷ್ಟ್ರೀಯ ಯುವ ಸಂಗೀತೋತ್ಸವದಲ್ಲಿ ಸನ್ಮಾನ

ಮೈಸೂರು: ಮೈಸೂರಿನಲ್ಲಿ ನವೆಂಬರ್ 1ರಿಂದ 4ರ ವರೆಗೆ ನಾಲ್ಕು ದಿನಗಳ ಕಾಲ ನಡೆದ ‘ರಾಷ್ಟ್ರೀಯ ಯುವ ಸಂಗೀತೋತ್ಸವ – 2018’ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರಮಠದ ಶಿಷ್ಯೆ ಸಂಗೀತ ವಿದುಷಿ ಶ್ರೀಮತಿ ವಸುಧಾಶರ್ಮಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.   ಮೈಸೂರಿನ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮ ಹಾಗೂ ಸಂಸ್ಕಾರ ಭಾರತಿಯ ಸಹಯೋಗದೊಂದಿಗೆ ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಗಿದ್ದು ಇದರಲ್ಲಿ ಶ್ರೀಮತಿ ವಸುಧಾಶರ್ಮಾವರಿಗೂ ಸನ್ಮಾನ ಹಾಗೂ ಪ್ರಶಸ್ತಿ ಸಂದಿರುವುದು […]

Continue Reading

ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿಯಿಂದ‌ ಮನವಿ

ಸಮೂಹ ಪ್ರಾರ್ಥನೆ ಶ್ರೀಮಠದ ಸಂರಕ್ಷಣೆಗೆ ಕಟಿಬದ್ಧರಾದ ಗುರುಬಂಧುಗಳೇ,   ಶ್ರೀಮಠದ ಸಂರಕ್ಷಣೆಗಾಗಿ ಸಮಾಜ ‘ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿ’ ಯ ರೂಪದಲ್ಲಿ ಒಂದಾಗಿರುವುದು ವೇದ್ಯವಷ್ಟೇ. ಸಮಿತಿಯ ಮುಂದಿನ ಸಂರಕ್ಷಣಾ ಸತ್ಕಾರ್ಯಗಳಿಗೆ ಅನುಕೂಲವಾಗಲು ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಬೇಕಿದೆ.   ಇದಕ್ಕಾಗಿ ದಿನಾಂಕ: 10.11.2018ನೇ ಶನಿವಾರ ಶ್ರೀಮಠದ ಶಿಷ್ಯವ್ಯಾಪ್ತಿಯ ಎಲ್ಲ ಘಟಕಗಳಲ್ಲೂ ಶ್ರಿರಾಮಚಂದ್ರಾಪುರಮಠ ಸಂರಕ್ಷಣಾ ಪ್ರಾರ್ಥನೆ ಸಲ್ಲಿಸಲು ಯೋಜಿಸಿದೆ. ಘಟಕದ ಎಲ್ಲ ಶಿಷ್ಯರು ಮತ್ತು ಬೇರೆ ಸಮಾಜದ ಶ್ರೀಮಠದ ಅಭಿಮಾನಿಗಳು ಸೇರಿ ಈ ಕಾರ್ಯವನ್ನು ನಿರ್ವಹಿಸಬೇಕೆಂದು ವಿನಂತಿಸುತ್ತಿದ್ದೇವೆ. ನಮ್ಮ ಮುಂದಿನ ಹೋರಾಟಗಳಿಗೆ […]

Continue Reading

ಸುಳ್ಯ ವಲಯದಲ್ಲಿ ವೇದವಾಹಿನಿ ಕಾರ್ಯಕ್ರಮ : ಸಂಪನ್ನಗೊಂಡ ಪಾರಾಯಣ – ವೇದಶ್ರವಣ

ಸುಳ್ಯ: ಸುಳ್ಯ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗದಿಂದ 112 ಮತ್ತು 113ನೆಯ ವೇದವಾಹಿನಿ ಕಾರ್ಯಕ್ರಮಗಳು ನವೆಂಬರ್ 2ರಂದು ನಡೆದವು.   112ನೆಯ ವೇದವಾಹಿನಿ ಕಾರ್ಯಕ್ರಮವನ್ನು ಪಾರೆ ಶ್ರೀ ಕೇಶವಯ್ಯ ಭಟ್ ಅವರ ಮನೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮನೆಯ ಯಜಮಾನರು ಕುಟುಂಬ ಸಮೇತರಾಗಿ ವೇದಶ್ರವಣ ಮಾಡಿದರು. ಘಟಕ ಗುರಿಕಾರರಾದ ಶ್ರೀ ವಿಷ್ಣುಕಿರಣ ಭಟ್ ಅವರು ಉಪಸ್ಥಿತರಿದ್ದರು. ಇದೇ ದಿನ ನೀರಬಿದರೆ ಶ್ರೀ ವೆಂಕಟರಮಣ ಭಟ್ ಅವರ ಮನೆಯಲ್ಲಿ ನಡೆದ 113ನೆಯ ವೇದವಾಹಿನಿ ಕಾರ್ಯಕ್ರಮದಲ್ಲಿ ಮನೆ ಯಜಮಾನರು ಕುಟುಂಬ […]

Continue Reading

ಮತ್ತೆ ಮಠಕ್ಕೆ‌ ಮಹಾಬಲ : ಕ್ಷೇತ್ರದ ಪುನರುತ್ಥಾನಕ್ಕೆ ಸರ್ವರಿಗೆ ಶ್ರೀಸಂಸ್ಥಾನದ ಕರೆ

ಮಹಾಬಲೇಶ್ವರ-ಮಹಾಸಮರದಲ್ಲಿ ಇತ್ತ ನಿಂತವರೇ, ಅತ್ತ ನಿಂತವರೇ, ಸುತ್ತ ನಿಂತವರೇ, ಎಲ್ಲರೂ ಬನ್ನಿ! ನಾವೆಲ್ಲ ಜೊತೆಗೂಡಿ ಪ್ರಪಂಚಕ್ಕೇ ಮಾದರಿಯಾಗುವ ಪರಿಯಲ್ಲಿ ಕ್ಷೇತ್ರವನ್ನು‌ ಕಟ್ಟೋಣ. ಮಹಾಬಲನ ಮಹಾಪ್ರಸಾದವನ್ನು ಸರ್ವಜೀವಗಳಿಗೂ ತಲುಪಿಸೋಣ. – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ‌ಮಹಾಸ್ವಾಮಿಗಳು ಶ್ರೀಸಂಸ್ಥಾನ‌ಗೋಕರ್ಣ-ಶ್ರೀರಾಮಚಂದ್ರಾಪುರಮಠ

Continue Reading