ಸಂಭ್ರಮದ ಕಾನುಗೋಡು ವಲಯೋತ್ಸವ

ಸುದ್ದಿ

ಕಾನುಗೋಡು : ಶ್ರೀರಾಮಚಂದ್ರಾಪುರ ಮಂಡಲ ವ್ಯಾಪ್ತಿಯಲ್ಲಿ ವೈಭವದಿಂದ ಕಾನುಗೋಡು ವಲಯೋತ್ಸವ ಜರುಗಿತು. ವಲಯೋತ್ಸವದ ಬೆಳಗಿನ ಅವಧಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾಮಂಡಲದ ರುಕ್ಮಾವತಿ ಅವರು ನೆರವೇರಿಸಿದರು. ಎಲ್ಲಾ ವಿಭಾಗದಿಂದ ೧೧೦ ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಂಪ್ರದಾಯದ ಹಾಡು, ಕನ್ಯಾವರ್ತನೆ ಕಾಯಿ ಅಲಂಕಾರ, ಹೂವಿನ ಮಾಲೆ ಸ್ಪರ್ಧೆಗಳು ನಡೆದವು. ಎಲ್ಲ ವಿಭಾಗದಿಂದ ಸ್ಪರ್ಧೆಯಲ್ಲಿ ಜನರಿಂದ ಉತ್ತಮ ಪ್ರತಿಸ್ಪಂದನೆ ಕಂಡು ಬಂತು.

 

ಸಂಜೆಯ ಕಾರ್ಯಕ್ರಮದಲ್ಲಿ ಮಹಾಮಂಡಲ ಮಾತೃಪ್ರಧಾನೆ ಕಲ್ಪನಾ ತಲವಾಟ ಅವರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮದ ಮೂಲಕ
ಮಂಡಲದ ಜತೆ ಧ್ವನಿಗೂಡಿಸಿದ ಕಾನುಗೋಡು ವಲಯಕ್ಕೆ ಅಭಿನಂದನೆ ಸಲ್ಲಿಸಿದರು.

 

Author Details


Srimukha

Leave a Reply

Your email address will not be published. Required fields are marked *