ಸರಘ್ ಸಾಫ್ಟ್‌ ಟೆಕ್ನಾಲಜೀಸ್ ಗೆ ನ್ಯಾಷನಲ್ ಎಂಟರ್ಪ್ರೆನರ್ಶಿಪ್ ಅವಾರ್ಡ್

ಸುದ್ದಿ

ದೆಹಲಿ: ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ಸಚಿವಾಲಯವು (Ministry of Skill Development and Entrepreneurship – MSDE) ವಿವಿಧ ವಿಭಾಗದ ಉದ್ಯಮಗಳಿಗೆ ಸಂಬಂಧಿಸಿ ನೀಡುವ ಪ್ರತಿಷ್ಠಿತ ‘ನ್ಯಾಷನಲ್ ಎಂಟರ್ಪ್ರೆನರ್ಶಿಪ್ ಅವಾರ್ಡ್’ನ ಈ 2018ರ ಸಾಲಿನ ವಿಜೇತರನ್ನು ಘೋಷಿಸಿದೆ. ಶ್ರೀಮಠದ ಶಿಷ್ಯರ ಸಂಸ್ಥೆಯಾದ Saragh Soft Technologies Pvt. Ltd ಈ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪ್ರಮೋದ್ ಕುಮಾರ್ ಎಂ. ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರದೀಪ್ ಶಂಕರ್ ಎಂ., ಇದೆಲ್ಲವೂ ಶ್ರೀಸಂಸ್ಥಾನ ಹಾಗೂ ರಾಮದೇವರ ಸೇವೆ ಮಾಡಿದುದರ ಫಲ ಎಂದು ಹೇಳಿಕೊಂಡಿದ್ದಾರೆ.

 

ಕೇಂದ್ರ ಸರ್ಕಾರವು ಯುವ ಉದ್ಯಮಿಗಳಿಗೆ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿ ಭಾರತೀಯ ಉದ್ಯಮ ರಂಗದಲ್ಲಿ ಅತಿ ದೊಡ್ಡ ಗೌರವವಾಗಿದೆ. ದೇಶದಲ್ಲಿ ಒಟ್ಟು 43 ವಿಭಾಗಗಳ 43 ನವೋದ್ಯಮಿಗಳಿಗೆ ಈ ಪ್ರಶಿಸ್ತಿಯನ್ನು ಕಳೆದ 3 ವರ್ಷದಿಂದ ನೀಡಲಾಗುತ್ತಿದೆ.

 

Author Details


Srimukha

Leave a Reply

Your email address will not be published. Required fields are marked *