ಉಜಿರೆ: ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹಲವು ವರ್ಷಗಳ ಹಿಂದೆ ಸಂಕಲ್ಪಿಸಿ ಮಾರ್ಗದರ್ಶಿಸಿದ ಯೋಜನೆ ‘ವನಜೀವನ-ಯಜ್ಞ’. ಸಸ್ಯ-ವೃಕ್ಷ ಸಂಪತ್ತನ್ನು ಉಳಿಸಿ-ಬೆಳೆಸಿ ಪ್ರಕೃತಿಯ ಸಂರಕ್ಷಣೆ ಮೂಲಕ ಭಗವಂತನನ್ನು ಸಂಪ್ರೀತಗೊಳಿಸುವ ವಿಶೇಷ ‘ಯಜ್ಞ’ ಇದು.
ಕುಕ್ಕಿನಕಟ್ಟೆಯ ರಾಮಕೃಷ್ಣ ಭಟ್ ಬೈಪದವು ಹಾಗೂ ಮನೆಯವರು ‘ವನಜೀವನ ಯಜ್ಞ’ದ ಆಶಯವನ್ನು ಹೃದ್ಗತವಾಗಿಸಿಕೊಂಡು ಹಲವು ವರ್ಷಗಳಿಂದ ಹಲವೆಡೆ ಸಸಿವಿತರಣೆಯನ್ನು ಮಾಡುತ್ತಿದ್ದಾರೆ. ಮಾಣಿ ಮಠದಲ್ಲಿ ನಡೆದ ವಿಜಯ ಚಾತುರ್ಮಾಸ್ಯದ ಸಂದರ್ಭದಿಂದ ಆರಂಭಿಸಿ ಪ್ರತಿವರ್ಷವೂ ನೂರಾರು ಸಸಿಗಳನ್ನು ಸೇವಾರೂಪದಲ್ಲಿ ನೀಡುತ್ತಿದ್ದಾರೆ. ಹೊಸನಗರದ ಶ್ರೀಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಬಿಲ್ವಪತ್ರ ಸಸಿಗಳ ಸಮರ್ಪಣೆ, ಮುಳ್ಳೇರಿಯಾ ಮಂಡಲಾಂತರ್ಗತ ‘ವನಜೀವನ ಯಜ್ಞ’ದ ಪ್ರೇರಣೆ
ಉಜಿರೆ: ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹಲವು ವರ್ಷಗಳ ಹಿಂದೆ ಸಂಕಲ್ಪಿಸಿ ಮಾರ್ಗದರ್ಶಿಸಿದ ಯೋಜನೆ ‘ವನಜೀವನ-ಯಜ್ಞ’. ಸಸ್ಯ-ವೃಕ್ಷ ಸಂಪತ್ತನ್ನು ಉಳಿಸಿ-ಬೆಳೆಸಿ ಪ್ರಕೃತಿಯ ಸಂರಕ್ಷಣೆ ಮೂಲಕ ಭಗವಂತನನ್ನು ಸಂಪ್ರೀತಗೊಳಿಸುವ ವಿಶೇಷ ‘ಯಜ್ಞ’ ಇದು.
ಕುಕ್ಕಿನಕಟ್ಟೆಯ ರಾಮಕೃಷ್ಣ ಭಟ್ ಬೈಪದವು ಹಾಗೂ ಮನೆಯವರು ‘ವನಜೀವನ ಯಜ್ಞ’ದ ಆಶಯವನ್ನು ಹೃದ್ಗತವಾಗಿಸಿಕೊಂಡು ಹಲವು ವರ್ಷಗಳಿಂದ ಹಲವೆಡೆ ಸಸಿವಿತರಣೆಯನ್ನು ಮಾಡುತ್ತಿದ್ದಾರೆ. ಮಾಣಿ ಮಠದಲ್ಲಿ ನಡೆದ ವಿಜಯ ಚಾತುರ್ಮಾಸ್ಯದ ಸಂದರ್ಭದಿಂದ ಆರಂಭಿಸಿ ಪ್ರತಿವರ್ಷವೂ ನೂರಾರು ಸಸಿಗಳನ್ನು ಸೇವಾರೂಪದಲ್ಲಿ ನೀಡುತ್ತಿದ್ದಾರೆ. ಹೊಸನಗರದ ಶ್ರೀಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಬಿಲ್ವಪತ್ರ ಸಸಿಗಳ ಸಮರ್ಪಣೆ, ಪೊಸಡಿಗುಂಪೆಯ ಶ್ರೀಶಂಕರ ಧ್ಯಾನ ಮಂದಿರಕ್ಕೆ, ವಿಷ್ಣುಗುಪ್ತ ವಿಶ್ವವಿದ್ಯಾಲಯದ ಪರಿಸರಕ್ಕೆ ಸಸಿಗಳ ಸಮರ್ಪಣೆ, ಶ್ರೀಮಠದ ಪೆರಾಜೆ-ಮಾಣಿ ಶಾಖೆಗೆ ಪುನರ್ಪುಳಿ ಸಸಿಗಳ ಸಮರ್ಪಣೆ ಮಾಡಿದ್ದಾರೆ.
ಈ ವರ್ಷ ಅಧಿಕ ಜ್ಯೇಷ್ಠ ಕೃಷ್ಣ ಚತುರ್ದಶಿಯಂದು (14-06-2026) ಕಂಬಾರು ಕ್ಷೇತ್ರಕ್ಕೆ 200ಕ್ಕೂ ಹೆಚ್ಚು ವಿವಿಧ ತಳಿಗಳ ಉತ್ತಮ ಗುಣಮಟ್ಟದ ಸಸಿಗಳನ್ನು ಸೇವಾ ರೂಪದಲ್ಲಿ ಸಮರ್ಪಿಸಿದರು. ಇವುಗಳಲ್ಲಿ ಪನ್ನೇರಳೆ, ನಾಗಲಿಂಗ ಪುಷ್ಪ, ಬಿಲ್ವಪತ್ರೆ, ಬಾದಾಮಿ ಸೇರಿದಂತೆ ಹಲವು ಅಪರೂಪದ ಸಸಿಗಳು ಒಳಗೊಂಡಿವೆ. ಈ ಸಂದರ್ಭದಲ್ಲಿ ಗುರಿಕಾರರು ಮತ್ತು ಗುಂಪೆ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು., ವಿಷ್ಣುಗುಪ್ತ ವಿಶ್ವವಿದ್ಯಾಲಯದ ಪರಿಸರಕ್ಕೆ ಸಸಿಗಳ ಸಮರ್ಪಣೆ, ಶ್ರೀಮಠದ ಪೆರಾಜೆ-ಮಾಣಿ ಶಾಖೆಗೆ ಪುನರ್ಪುಳಿ ಸಸಿಗಳ ಸಮರ್ಪಣೆ ಮಾಡಿದ್ದಾರೆ.
ಈ ವರ್ಷ ಅಧಿಕ ಜ್ಯೇಷ್ಠ ಕೃಷ್ಣ ಚತುರ್ದಶಿಯಂದು (14-06-2026) ಕಂಬಾರು ಕ್ಷೇತ್ರಕ್ಕೆ 200ಕ್ಕೂ ಹೆಚ್ಚು ವಿವಿಧ ತಳಿಗಳ ಉತ್ತಮ ಗುಣಮಟ್ಟದ ಸಸಿಗಳನ್ನು ಸೇವಾ ರೂಪದಲ್ಲಿ ಸಮರ್ಪಿಸಿದರು. ಇವುಗಳಲ್ಲಿ ಪನ್ನೇರಳೆ, ನಾಗಲಿಂಗ ಪುಷ್ಪ, ಬಿಲ್ವಪತ್ರೆ, ಬಾದಾಮಿ ಸೇರಿದಂತೆ ಹಲವು ಅಪರೂಪದ ಸಸಿಗಳು ಒಳಗೊಂಡಿವೆ. ಈ ಸಂದರ್ಭದಲ್ಲಿ ಗುರಿಕಾರರು ಮತ್ತು ಗುಂಪೆ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.