ವರ್ಕಾಡಿಯ ಶ್ರೀನಾರಾಯಣಗುರು ಮಂದಿರದಲ್ಲಿ ಯಶಸ್ವಿಯಾದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ

ಸುದ್ದಿ

ವರ್ಕಾಡಿ: ‘ಪರಮಪೂಜ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿರುವ ಮುಜುಂಗಾವು ಶ್ರೀಭಾರತೀ ನೇತ್ರ ಚಿಕಿತ್ಸಾಲಯವು ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ನೇತ್ರಚಿಕಿತ್ಸಾ ಶಿಬಿರಗಳನ್ನು ನಡೆಸುವ ಮೂಲಕ ಅನೇಕ ಜನರ ದೃಷ್ಟಿದೋಷ ನಿವಾರಣೆಗೆ ಸಹಕಾರಿಯಾಗಿದೆ. ನಾವೂ ಕೂಡ ಶ್ರೀಭಾರತೀ ನೇತ್ರ ಚಿಕಿತ್ಸಾಲಯದ ಜೊತೆ ಸೇರಿ ಈಗಾಗಲೇ ಎರಡು ಶಿಬಿರಗಳನ್ನು ನಡೆಸಿದ್ದೇವೆ. ಇನ್ನು ಮುಂದೆಯೂ ಇಂತಹ ನೂರಾರು ಶಿಬಿರಗಳನ್ನು ನಡೆಸುವ ಮೂಲಕ ಜನರಿಗೆ ಇನ್ನಷ್ಟು ಸೇವೆ ಮಾಡುವ ಉದ್ದೇಶವನ್ನು ಹೊಂದಿಕೊಂಡಿದ್ದೇವೆ’ ಎಂದು ವರ್ಕಾಡಿ ಶ್ರೀನಾರಾಯಣಗುರು ಮಂದಿರದ ಅಧ್ಯಕ್ಷರೂ, ಯಕ್ಷಗಾನ ಕಲಾವಿದರೂ ಆಗಿರುವ ಶ್ರೀ ನಾರಾಯಣ ಬೆಜ್ಜಂಗಳ ಅವರು ನುಡಿದರು.

 

ಅವರು 18.11.2018ರ ಆದಿತ್ಯವಾರದಂದು ಶ್ರೀಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಮತ್ತು ಪ್ರೊ. ಶಂಕರ ನಾರಾಯಣ ಭಟ್ ಬಜಾಲು ಇವರ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ವರ್ಕಾಡಿ ಶ್ರೀನಾರಾಯಣಗುರು ಪ್ರಸಾದಿತ ಯಕ್ಷಗಾನ ಕಲಾ ಮಂದಿರದಲ್ಲಿ ನಡೆಸಲಾದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದ ಸ್ವಾಗತ ಮತ್ತು ಕಾರ್ಯಕ್ರಮದ ನಿರೂಪಣೆಗೈಯುತ್ತಿದ್ದರು.

 

ಅರ್ಜುನಗುಳಿ ಶ್ರೀ ಯಸ್. ಎನ್. ಭಟ್ ದೀಪ ಪ್ರಜ್ವಲಿಸುವ ಮೂಲಕ ಈ ಶಿಬಿರವನ್ನು ಉದ್ಘಾಟಿಸಿದರು. ಶ್ರೀನಾರಾಯಣಗುರು ಮಂದಿರದ ಕಾರ್ಯದರ್ಶಿಗಳಾಗಿರುವ ಶ್ರೀ ಶ್ರೀಧರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು ಇದರ ಆಡಳಿತಾಧಿಕಾರಿಗಳಾಗಿರುವ ಡಾ| ಶ್ರೀ ಶ್ರೀಧರ ಭಟ್ಟರು ಪ್ರಾಸ್ತಾವಿಕ ಭಾಷಣ ಮಾಡಿದ ಈ ಕಾರ್ಯಕ್ರಮಕ್ಕೆ ಶೇಡಿಗುಮ್ಮೆ ಶ್ರೀ ಯಸ್. ಎನ್. ಶರ್ಮಾ ಶುಭ ಹಾರೈಸಿದರು. ಶ್ರೀನಾರಾಯಣಗುರು ಮಂದಿರದ ಜೊತೆ ಕಾರ್ಯದರ್ಶಿಗಳಾದ ಶ್ರೀ ಸುರೇಂದ್ರ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ಆನಂದ ಅವರು ಭಾಗವಹಿಸಿದ್ದರು.

 

ಯಶಸ್ವಿಯಾಗಿ ನಡೆದ ಈ ಶಿಬಿರದಲ್ಲಿ ವರ್ಕಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಹಲವಾರು ಜನರು ಪ್ರಯೋಜನವನ್ನು ಪಡೆದುಕೊಂಡರು.

 

Author Details


Srimukha

Leave a Reply

Your email address will not be published. Required fields are marked *