ಪ್ರಧಾನಿ ಕಚೇರಿಯ ಉಪ ಕಾರ್ಯದರ್ಶಿ ಡಾ.ಕಾರ್ತಿಕ ಹೆಗಡೆಕಟ್ಟೆ ಜತೆ ಸಂವಾದ ನಾಳೆ

ವಿದ್ಯಾಲಯ ಸುದ್ದಿ

ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಈ ತಿಂಗಳ 30ರಂದು ಭಾನುವಾರ ಬೆಳಿಗ್ಗೆ 11.45ರಿಂದ “ಸಾಧನೆಯ ಮಾರ್ಗ” ಎಂಬ ಅಂತರ್ಜಾಲ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಧಾನಿ ಕಾರ್ಯಾಲಯದ ಉಪ ಕಾರ್ಯದರ್ಶಿ, ಉತ್ತರ ಕನ್ನಡ ಮೂಲದ ಪ್ರತಿಭಾವಂತ ಯುವ ಐಎಎಸ್ ಅಧಿಕಾರಿ ಡಾ.ಕಾರ್ತಿಕ ಹೆಗಡೆಕಟ್ಟೆ ಅವರು ‘ಸಾಧನೆಯ ಮಾರ್ಗ’ ವಿಷಯದ ಬಗ್ಗೆ ವಿಚಾರ ಮಂಡಿಸುವರು. ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ಮತ್ತಿತರರು ಭಾಗವಹಿಸುವರು.
ಹಲವು ಪ್ರತಿಕೂಲಗಳ ನಡುವೆಯೂ ಅದ್ಭುತ ಸಾಧನೆ ಮಾಡಿದ ಯುವ ಸಾಧಕರನ್ನು ಪರಿಚಯಿಸುವ ಮೂಲಕ ಯುವಜನಾಂಗಕ್ಕೆ ಸ್ಫೂರ್ತಿ ನೀಡುವ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಪರಿಷತ್ ಉಪಾಧ್ಯಕ್ಷ ಮರುವಳ ನಾರಾಯಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಮಾಹಿತಿ ಮತ್ತು ಮಾರ್ಗದರ್ಶನವನ್ನು ಡಾ.ಕಾರ್ತಿಕ್ ನೀಡುವರು. ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಲಿಂಕ್: https://meet.google.com/sty-mkmo-nvz
ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯಲ್ಲಿ ಜನಿಸಿ ಮುಂದೆ ಚಿನ್ನದ ಪದಕದೊಂದಿಗೆ ಎಂಬಿಬಿಎಸ್ ಪದವಿ, ಬಳಿಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಖಿಲ ಭಾರತ ನಾಗರಿಕ ಸೇವೆಗೆ ಆಯ್ಕೆಯಾದ ಡಾ.ಕಾರ್ತಿಕ್ ಅವರು ಪ್ರಧಾನಿ ಕಾರ್ಯಾಲಯದ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಕಚೇರಿಯ ಅತ್ಯಂತ ಕಿರಿಯ ವಯಸ್ಸಿನ ಉಪ ಕಾರ್ಯದರ್ಶಿ ಎಂಬ ಹೆಗ್ಗಳಿಕೆ ಅವರದ್ದು. ಬ್ಲಾಕ್‍ಚೆನ್ ತಂತ್ರಜ್ಞಾನ ಮತ್ತು ಕ್ರಿಪ್ಟೊಕರೆನ್ಸಿ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಅವರು, ವಿವಿಧ ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ 40ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರು ಕಾರವಾರದ ಹೃದ್ರೋಗ ತಜ್ಞ ಡಾ.ವಿ.ಪಿ.ಹೆಗಡೆಕಟ್ಟೆ ಮತ್ತು ಸರಸ್ವತಿ ಹೆಗಡೆಕಟ್ಟೆಯವರ ಪುತ್ರ.

Author Details


Srimukha

Leave a Reply

Your email address will not be published. Required fields are marked *