ಒಮ್ಮೆ ಒಬ್ಬ ಪುಟ್ಟ ಹುಡುಗಿ ಜಾತ್ರೆಯಲ್ಲಿ ಒಂದು ಮುತ್ತಿನಸರವನ್ನು ಖರೀದಿ ಮಾಡುತ್ತಾಳೆ. ಅದು ಅಸಲಿ ಮುತ್ತಲ್ಲ, ನಕಲಿ. ಆದರೂ ಅವಳು ಅದನ್ನು ‘ಅಸಲಿ’ ಎಂದೇ ಅತ್ಯಂತ ಜೋಪಾನವಾಗಿ ಕಾಪಾಡುತ್ತಾಳೆ. ಯಾರು ಕೇಳಿದರೂ ಕೊಡುತ್ತಿರಲಿಲ್ಲ. ಸ್ನಾನ ಮಾಡುವಾಗ ಮಾತ್ರ ನೀರು ತಾಗಿ ಹಾಳಾಗುತ್ತದೆ ಎಂಬ ಕಾರಣದಿಂದ ತೆಗೆದು ಇಟ್ಟಿರುತ್ತಿದ್ದಳು.
ಪ್ರತಿದಿನ ರಾತ್ರಿ ಅವಳು ಮಲಗುವಾಗ ಅವಳ ತಂದೆ ಒಂದು ಕಥೆ ಹೇಳಿ ಮಲಗಿಸುತ್ತಿದ್ದ. ಕಥೆ ಮುಗಿದ ಅನಂತರ- ‘ಆ ಹಾರ ನನಗೆ ಕೊಡು’ ಎಂದು ಪ್ರತಿದಿನ ಕೇಳುತ್ತಿದ್ದ. ಆದರೆ ಅವಳು ಕೊಡುತ್ತಿರಲಿಲ್ಲ.
ಹೀಗೆ ಕೆಲವು ಸಮಯ ಕಳೆಯಲು, ಆ ಹಾರ ನಕಲಿಯಾದ್ದರಿಂದ ಅದರ ಬಣ್ಣ ಮಾಸುತ್ತದೆ. ಬಣ್ಣ ಕಳೆದುಕೊಂಡ ಹಾರದ ಬಗ್ಗೆ ಅವಳ ಆಸೆಯೂ ಕ್ಷೀಣಿಸುತ್ತದೆ. ಎಂದಿನಂತೆ ತಂದೆ ಕಥೆ ಹೇಳಿ ಹಾರ ಕೇಳಿದಾಗ ಅವಳು ಕೈಯಿಂದ ಅದನ್ನು ತಂದೆಗೆ ಕೊಡುತ್ತಾಳೆ. ಆ ಹಾರವನ್ನು ತೆಗೆದುಕೊಂಡು ತನ್ನ ಕಿಸೆಯಿಂದ ಅಸಲಿ ಮುತ್ತಿನ ಹಾರವನ್ನು ತನ್ನ ಮಗಳಿಗೆ ಕೊಡುತ್ತಾನೆ.
ಇದರ ನೀತಿಯೆಂದರೆ ಭೌತಿಕವಾದ ವಸ್ತುಗಳೆಲ್ಲವೂ ನಕಲಿ, ಭಗವಂತ ಅಸಲಿ ವಸ್ತುವನ್ನು ಕೊಡಲು ಸದಾ ಕಾಯುತ್ತಿರುತ್ತಾನೆ. ನಾವು ಅದಕ್ಕಾಗಿ ನಮ್ಮನ್ನು ಭಗವಂತನಲ್ಲಿ ಸಮರ್ಪಿಸಿಕೊಂಡು ಸೇವೆ ಮಾಡಿ, ನಕಲಿ ವಸ್ತುಗಳನ್ನು ತ್ಯಾಗ ಮಾಡಿದರೆ ಅಸಲಿ ವಸ್ತು ನಮಗೆ ಸಿಗುತ್ತದೆ. ಅದು ಭಗವಂತನ ಸಾಕ್ಷಾತ್ಕಾರ.
Very nice
ಹರೇ ರಾಮ