ಅದೊಂದು ವನ ಪ್ರದೇಶ. ಅಲ್ಲಿ ಒಂದು ಗಂಡು ಒಂದು ಹೆಣ್ಣು, ಎರಡು ಚಿಟ್ಟೆಗಳು ಒಂದು ಮತ್ತೊಂದನ್ನು ತುಂಬಾ ಪ್ರೀತಿಸುತ್ತಾ ಬಹಳ ಅನ್ಯೋನ್ಯವಾಗಿದ್ದವು. ಒಮ್ಮೆ ಅವರಲ್ಲಿ ಯಾರು ಹೆಚ್ಚು ಪ್ರೀತಿಸುತ್ತಾರೆ ಎಂಬುದನ್ನು ತಿಳಿಯಲು ಅವರಲ್ಲಿ ಒಂದು ಸ್ಪರ್ಧೆ ಏರ್ಪಟ್ಟು, ಒಂದು ಪರೀಕ್ಷೆಯ ಮೂಲಕ ತಿಳಿಯೋಣ ಎಂದು ಅವು ತೀರ್ಮಾನಿಸುತ್ತವೆ. ಪರೀಕ್ಷೆ ಏನೆಂದರೆ ಅಲ್ಲಿಯೇ ಇರುವ ಒಂದು ಹೂವಿನ ಗಿಡವನ್ನು ನೋಡಿ, ಆ ಹೂವಿನ ಗಿಡದ ಹೂವು ಅರಳುವುದಕ್ಕಿಂತ ಮುಂಚಿತವಾಗಿ ಮರುದಿನ ಯಾರು ಅದರ ಮೇಲೆ ಕುಳಿರುತ್ತಾರೆಯೋ, ಅವರೇ ಹೆಚ್ಚು ಪ್ರೀತಿಸಿದಂತೆ. ಈ ಪಂಥವನ್ನು ಗೆಲ್ಲಲು ಗಂಡು ಚಿಟ್ಟೆ ಸೂರ್ಯೋದಯಕ್ಕಿಂತ ಬಹಳ ಮುಂಚಿತವಾಗಿ ಬಂದು ಹೂ ಅರಳುವುದನ್ನೇ ಕಾಯುತ್ತಾ ಗಿಡದ ಎದುರಿನ ಮರದಲ್ಲಿ ಕುಳಿತಿರುತ್ತದೆ. ಸೂರ್ಯೋದಯವಾಗಿ ಹೂ ಅರಳಿದ ಕೂಡಲೇ ಅದರ ಮೇಲೆ ಗಂಡು ಚಿಟ್ಟೆ ತಾನೇ ಪ್ರಥಮ ಎಂಬಂತೆ ಹೋಗಿ ಕುಳಿತುಕೊಳ್ಳಬೇಕೆಂದು ನೋಡಿದಾಗ ಹೆಣ್ಣು ಚಿಟ್ಟೆ ಆಗಲೇ ಅದರ ಮೇಲೆ ಬಂದು ಕುಳಿತಿತ್ತು. ಹೂ ಅರಳುವುದಕ್ಕಿಂತ ಮುಂಚಿತವಾಗಿ ರಾತ್ರಿಯೇ ಅದರೊಳಗೆ ಬಂದು ಕುಳಿತಿದ್ದರಿಂದ ಉಸಿರುಗಟ್ಟಿ ಸತ್ತು ಹೋಗಿರುತ್ತದೆ. ಅದನ್ನು ನೋಡಿ ಗಂಡು ಚಿಟ್ಟೆಗೆ ದಿಗ್ಭ್ರಾಂತಿಯಾಗುತ್ತದೆ.
ಈ ಕತೆಯಿಂದ ತಿಳಿಯುವುದೇನೆಂದರೆ ಪ್ರೀತಿಯ ಆಳವನ್ನು ಅಳೆಯಲು ಸಾಧ್ಯವಿಲ್ಲ. ಪ್ರಾಣಿ, ಪಕ್ಷಿಗಳೂ ಪ್ರೀತಿಗಾಗಿ ತಮ್ಮ ಪ್ರಾಣವನ್ನೇ ಬಲಿಕೊಡಬಲ್ಲವು. ಪ್ರೀತಿಯಲ್ಲಿ ಅಪಾರವಾದ ಸಂತೋಷವಿರುವಂತೆ ನೋವೂ ಇರುತ್ತದೆ. ನಿಜವಾದ ಪ್ರೀತಿಯೆಂದರೆ ತ್ಯಾಗ, ಅದು ಅಮರ