ಮಾತು~ಮುತ್ತು : ಒಳ್ಳೆಯ ಮಾತು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ    

ಶ್ರೀಸಂಸ್ಥಾನ

ಒಂದು ನದಿ ಹರಿಯುತ್ತಿದ್ದರೆ ಪಾವನವಾಗುತ್ತದೆ. ಅದೇ ರೀತಿ ಒಬ್ಬ ಸಂತ ಊರೂರು ಸಂಚರಿಸುತ್ತಿದ್ದರೆ ಆ ಊರೇ ಪಾವನವಾಗುತ್ತದೆ.

 

ಅದೊಂದು ಊರು. ಒಮ್ಮೆ ಆ ಊರಿನ ಒಂದು ಮಗುವಿಗೆ ಅಸೌಖ್ಯ ಉಂಟಾಗುತ್ತದೆ.  ಯಾವ ಔಷಧದಿಂದಲೂ ಗುಣವಾಗುವುದಿಲ್ಲ. ಆಗ ಆ ಊರಿನ ಜನ ಒಬ್ಬ ಸಂತನನ್ನು ಊರಿಗೆ ಬರಮಾಡಿಕೊಳ್ಳುತ್ತಾರೆ. ಆ ಸಂತನ ಆಶೀರ್ವಾದ ಪಡೆಯಲು ನೂರಾರು ಜನ ಆಗಮಿಸುತ್ತಾರೆ. ಅಸೌಖ್ಯದಿಂದ ಬಳಲುತ್ತಿರುವ ಮಗುವನ್ನು ಕರೆದುಕೊಂಡು ಅದರ ತಂದೆ ತಾಯಿಗಳು ಬರುತ್ತಾರೆ.
ಅವರನ್ನು ಆಶೀರ್ವದಿಸಿದ ಸಂತ ಒಂದು ಮಂತ್ರವನ್ನು ಹೇಳಿಕೊಟ್ಟು-
“ಇದನ್ನು ಅನುದಿನವೂ ಪಠಿಸುತ್ತಿರಿ; ಕೆಲವೇ ದಿನಗಳಲ್ಲಿ ಮಗು ಹುಷಾರಾಗುತ್ತದೆ” ಎಂದು ಹೇಳುತ್ತಾನೆ.

 

ಆಗ ಆ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ, ಗುರುವಿನ ಹತ್ತಿರ ಬಂದು-
“ಯಾವ ವೈದ್ಯರಿಂದಲೂ, ಯಾವ  ಔಷಧದಿಂದಲೂ ಗುಣವಾಗದ ಕಾಯಿಲೆ ನಿಮ್ಮ ಮಂತ್ರದಿಂದ ಗುಣವಾಗುತ್ತದೆಯೇ?” ಎಂದು ಕೇಳುತ್ತಾನೆ.

 

ಆ ಸಂತ- “ಮೂರ್ಖ! ಇಲ್ಲಿಂದ ಹೊರಟು ಹೋಗು” ಎನ್ನುತ್ತಾನೆ.

ಆಗ ಆ ಮನುಷ್ಯ ಸಿಟ್ಟಿನಿಂದ ಕುದಿಯುತ್ತಾನೆ, ಮುಖ ಕೆಂಪಾಗುತ್ತದೆ, ಕೈ ಮುಷ್ಟಿ ಕಟ್ಟಿ ಆ ಸಂತನನ್ನು ಹೊಡೆಯಲು ಹೋಗುತ್ತಾನೆ.
ಆಗ ಆ ಸಂತ ಶಾಂತವಾಗಿ-
“ನೋಡಿದೆಯಾ, ಕೇವಲ ಎರಡು ಪದ ನಿನ್ನಲ್ಲಿ ಇಂತಹ ಬದಲಾವಣೆ ತಂದಿರುವಾಗ ನನ್ನ ಮಂತ್ರದಿಂದ ಕಾಯಿಲೆ ಏಕೆ ಗುಣವಾಗಬಾರದು?” ಎಂದು ಕೇಳುತ್ತಾನೆ.

 

ಹೌದು ಒಂದು ಒಳ್ಳೆಯ ಮಾತು ಮಹತ್ತರವಾದ ಬದಲಾವಣೆಯನ್ನೇ ತರಬಲ್ಲದು. ಲಕ್ಷ್ಮಿ-ಸರಸ್ವತಿಯರು ನಾಲಗೆಯಲ್ಲಿಯೇ ನೆಲೆಸುತ್ತಾರೆ. ಆದ್ದರಿಂದ ಮಾತನ್ನು ಯಾವಾಗಲೂ ಅಳೆದು, ತೂಗಿ ಆಡಬೇಕು. ಒಳ್ಳೆಯ ಮಾತನ್ನು ಆಡುತ್ತಿದ್ದರೆ ಕೆಟ್ಟ ಪರಿಣಾಮವಂತೂ ಖಂಡಿತ ಆಗುವುದಿಲ್ಲ. ಹಾಗಾಗಿ ಸದಾ ಒಳ್ಳೆಯ ಮಾತನ್ನು ಆಡುವ ಗುಣ ಬೆಳೆಸಿಕೊಳ್ಳಬೇಕು.

Author Details


Srimukha

Leave a Reply

Your email address will not be published. Required fields are marked *