ಮಂಗಳೂರು: ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ, ಪ್ರೇರಣಾದ ವತಿಯಿಂದ 4.12.2018ರಂದು ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರದ 10ನಯ ತರಗತಿಯ ವಿದ್ಯಾರ್ಥಿಗಳಿಗೆ ‘ಪರೀಕ್ಷೆಗಳಲ್ಲಿ ಧನಾತ್ಮಕ ಉತ್ತರಿಸುವಿಕೆ’ ವಿಷಯದ ಬಗ್ಗೆ ಕಾರ್ಯಾಗಾರ ನಡೆಸಿ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡಯಿತು.
ಪ್ರೇರಣಾ ಸಂಯೋಜಕ ಶ್ರೀ ಯು. ಎಸ್. ವಿಶ್ವೇಶ್ವರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಸರಳತೆಯಿಂದ ಕ್ಲಿಷ್ಟತೆಯೆಡೆಗೆ; ಉತ್ತೀರ್ಣನಾಗುವೆನೆಂಬ ಮಾನಸಿಕತೆ; ಉತ್ತರ ಗೊತ್ತಿರುವ ಪ್ರಶ್ನೆಗಳಿಂದ ಉತ್ತರಿಸತೊಡಗುವುದು; ಎಲ್ಲ ಪ್ರಶ್ನೆಗಳಿಗೂ ಉತ್ತರಗಳನ್ನು ಬರೆಯಲು ಯತ್ನಿಸುವುದು ಮುಂತಾದ ಧನಾತ್ಮಕ ಅಭ್ಯಾಸಗಳು ಪರೀಕ್ಷೆಯ ಕುರಿತು ಇರುವ ಭಯ ಮಾಯವಾಗಿ ಆತ್ಮವಿಶ್ವಾಸ ಹೆಚ್ಚಿ ಪರೀಕ್ಷೆಯನ್ನು ಗೆಲ್ಲಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಘಟಕದ ಸಂಯೋಜಕ ಉಪನ್ಯಾಸಕ ಶ್ರೀ ಅನಂತನಾರಾಯಣ ಪದಕಣ್ಣಾಯ ಸಹಕರಿಸಿದರು. ಪ್ರಶಾಂತಿ ವಿದ್ಯಾಕೇಂದ್ರದ ಪ್ರಾಂಶುಪಾಲ ಶ್ರೀ ಅನೂಪ್ ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಎಚ್. ಮಹಾಲಿಂಗ ಭಟ್ ಉಪಸ್ಥಿತರಿದ್ದರು.