ಮಾತು~ಮುತ್ತು : ತ್ಯಾಗವಿಲ್ಲದೇ ದೊರೆಯದು ದೊಡ್ಡದು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

ಒಮ್ಮೆ ಒಬ್ಬ ತಾಯಿ ಪುಟ್ಟ ಪುಟ್ಟ ಪಾಟಿನಲ್ಲಿ ಬೆಳೆದ ಸಣ್ಣ ಸಣ್ಣ ಸಸಿಗಳನ್ನು ಕಿತ್ತು ಹೂದೋಟದಲ್ಲಿ ವಿಶಾಲವಾದ ಜಾಗದಲ್ಲಿ ಅವುಗಳನ್ನು ನೆಟ್ಟು ಸುತ್ತ ಮಣ್ಣು ಹಾಕುತ್ತಾಳೆ. ಇದನ್ನು ನೋಡಿದ ಆ ತಾಯಿಯ ಪುಟ್ಟ ಮಗು ತಾಯಿಯನ್ನು ಕೇಳುತ್ತದೆ-
“ಇಲ್ಲಿ ಕಿತ್ತು ಅಲ್ಲೇಕೆ ನೆಡುತ್ತಿದ್ದಿಯಾ?” ಎಂದು.

ಆಗ ತಾಯಿ-
“ಪುಟ್ಟ ಪಾಟಿನಲ್ಲಿ ಗಿಡ ಚೆನ್ನಾಗಿ ಬೆಳೆದು ಹೂ ಅರಳುವುದಿಲ್ಲ; ಅದನ್ನು ವಿಶಾಲವಾದ ಹೂದೋಟದಲ್ಲಿ ನೆಟ್ಟು ಅದಕ್ಕೆ ನೀರು, ಗೊಬ್ಬರ, ಮಣ್ಣು ನೀಡಿದರೆ ಅದು ಚೆನ್ನಾಗಿ ಬೆಳೆದು ಗಿಡದ ತುಂಬಾ ಹೂ ಅರಳುತ್ತದೆ.  ಆದ್ದರಿಂದ ಅಲ್ಲಿಂದ ಕಿತ್ತು ಇಲ್ಲಿ ನೆಡುತ್ತಿದ್ದೇನೆ” ಎನ್ನುತ್ತಾಳೆ.

 

ನಮ್ಮ ಜೀವನದಲ್ಲಿಯೂ ಹಾಗೆಯೇ.  ಏನನ್ನಾದರೂ ಕಳೆದುಕೊಂಡಾಗ ಅದಕ್ಕಿಂತ ಅಮೂಲ್ಯವಾದದ್ದು, ದೊಡ್ಡದು ಸಿಗಬಹುದು. ನಮ್ಮ ಜೀವನ ಅರಳಿದ ಹೂವಾಗಿ ನಾಲ್ಕು ಜನರಿಗೆ ಸಂತೋಷವನ್ನು ನೀಡಬೇಕಾದರೆ ನಾವು ಬಾವಿಯೊಳಗಿನ ಕಪ್ಪೆಯಾಗದೇ ವಿಶಾಲವಾದ ಜಾಗವನ್ನು ಅರಸಿ ಹೋಗಬೇಕು. ಕೆಲವೊಮ್ಮೆ ಮರಣವೂ ಉತ್ತಮ ಜನ್ಮವನ್ನೇ ತರಬಲ್ಲದು. ಸ್ವಲ್ಪವೂ ತ್ಯಾಗ ಮಾಡದೇ ಏನನ್ನೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಚಿಕ್ಕಪುಟ್ಟದನ್ನು ತ್ಯಾಗ ಮಾಡಲು ಯಾವಾಗಲೂ ಹಿಂಜರಿಯಬಾರದು.

Leave a Reply

Your email address will not be published. Required fields are marked *