ವಿಶಿಷ್ಟವಾಗಿ ಮಕ್ಕಳ‌ ದಿನಾಚರಣೆ ಆಚರಿಸಿದ ಶ್ರೀಭಾರತೀವಿದ್ಯಾಪೀಠ: ಸಂಭ್ರಮಿಸಿದ ವಿದ್ಯಾರ್ಥಿಗಳು

ಶಿಕ್ಷಣ ಸುದ್ದಿ

ಮುಜುಂಗಾವು: ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಶ್ರೀಭಾರತೀ ವಿದ್ಯಾಪೀಠ ಮುಜುಂಗಾವಿನಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು.

 

ಮಕ್ಕಳ‌ ದಿನಾಚರಣೆಯಂದು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ pic and act ಮತ್ತು pic and speech ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಚೀಟಿ ಆಯ್ದುಕೊಂಡು ತಮಗೆ ಬಂದ ವಿಷಯದ ಕುರಿತು ಅಭಿನಯ ಹಾಗೂ ಭಾಷಣ ಪ್ರಸ್ತುತಪಡಿಸಿದರು.

 

ಬಳಿಕ‌ ನಡೆದ‌‌ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಶ್ರೀ ಶ್ಯಾಂಭಟ್ ದರ್ಬೆಮಾರ್ಗ ಮಾತನಾಡಿ, ಮಕ್ಕಳ ದಿನಾಚರಣೆಯ ಮಹತ್ತ್ವ ಹಾಗೂ ಮಕ್ಕಳ‌ ಸರ್ವತೋಮುಖ ಬೆಳವಣಿಗೆಗೆ‌ ಅಗತ್ಯ ಕಿವಿಮಾತು‌ ಹೇಳಿದರು.

 

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ‌ ಮಕ್ಕಳಿಗೆ ಸಿಹಿತಿಂಡಿ ಹಾಗೂ ಪೆನ್ಸಿಲ್‌ ವಿತರಿಸಲಾಯಿತು. ಶಿಕ್ಷಕಿ‌ ಶ್ರೀಮತಿ ಸ್ವಾತಿ ಸ್ವಾಗತಿಸಿದರು. ಶಿಕ್ಷಕಿ ಶ್ರೀ ವಿಜಯಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ‌ ಶ್ರೀ ಹರಿಪ್ರಸಾದ್ ನಿರೂಪಿಸಿದರು. ಕು. ಕೃತಿಕಾ ಹಾಗೂ ತಂಡದವರಿಂದ‌ ಪ್ರಾರ್ಥನೆ ನಡೆಯಿತು. ಶಿಕ್ಷಕಿ‌ ಕು. ಕ್ಷಮಾ ವಂದಿಸಿದರು.

 

Author Details


Srimukha

Leave a Reply

Your email address will not be published. Required fields are marked *