ರಾಮಪದ ಕೇಳಿ ಮರಳುತ್ತಿದ್ದುದರಿಂದ, ಸರಗಳ್ಳರು ಕೊರಳಿಗೆ ಕೈಹಾಕಿದ ಅರೆಕ್ಷಣ ಕೊರಳಲ್ಲಿ ಸರವೇ ಇಲ್ಲದಾಯಿತು, ಮೊದಲೂ ಇತ್ತು, ಮತ್ತೆಯೂ ಇತ್ತು, ಆ ದುಷ್ಟರು ಕೊರಳಿಗೆ ಕೈ ಹಾಕಿ ತೆಗೆಯಲು ಯತ್ನಿಸಿದಷ್ಟು ಹೊತ್ತು, ಶ್ರೀ ರಾಮನ ಕೈಯಲ್ಲಿ ಭದ್ರವಾಗಿತ್ತು, ಪವಾಡದ ಕಥೆಯನ್ನು ಓದಿ ನೋಡಿ.
ನವೆಂಬರ್ 3, 2018, ಏಕಾದಶಿಯ ಹರಿದಿನ. ಏಕಾದಶಿಯಂದು ಸಂಜೆ 6 ರಿಂದ 8 ರ ವರೆಗೆ ಶ್ರೀರಾಮಚಂದ್ರಾಪುರಮಠದಲ್ಲಿ ಶ್ರೀಸಂಸ್ಥಾನದವರು ಶಿಷ್ಯರಿಗಾಗಿ ನಡೆಸಿ ಕೊಡುವ ರಾಮಪದ; ರಾಮನೆದುರು, ರಾಮನ ಪದವನ್ನು ಹಾಡುತ್ತಾ, ರಾಮನ ಕಥೆ ಗುರು ಹೇಳುವುದು, ಶಿಷ್ಯರು ಕೇಳುವುದು. ರಾಮಪದಕ್ಕೆ ನಾನೊಬ್ಬಳೇ , 2 wheeler , aviator ನಲ್ಲಿ ಹೊರಟೆ. ಸಮಯಕ್ಕೆ ಸರಿಯಾಗಿ ತಲುಪಿ, ರಾಮಪದದಲಿ ಮುಳುಗಿ, ರಾಮ ಸ್ಮರಣೆಯೊಂದಿಗೆ 8 ಗಂಟೆಗೆ ಮನೆಗೆ ಹೊರಟೆ.
ಮನೆಗೆ ನಿತ್ಯವೂ ಹೋಗುವ ದಾರಿ ಅಗೆದು ಹಾಕಿದ್ದರಿಂದ ಇನ್ನೊಂದು ಹಾದಿ ಹಿಡಿಯಬೇಕಾಯಿತು. ಬೆಂಗಳೂರಿನಲ್ಲಿ 8-8.30 ಹೆಂಗಸರು ಒಬ್ಬರೇ ಆದರೂ ಸಹಜವಾಗಿಯೇ ಹೋಗುತ್ತಾರೆ. ಆದರೆ ದಾರಿ ಬೇರೆ, ಆ ಸ್ಥಳ ಇನ್ನೂ ಅಷ್ಟು developed ಅಲ್ಲ, street lights ಜಾಸ್ತಿ ಇಲ್ಲ, ತುಂಬಾ humps ಬೇರೆ, ಒಂದು hump ನಲ್ಲಿ ನಿಧಾನವಾಗಿ ಹೋಗುತ್ತಿದ್ದಾಗ, ನನ್ನ ತುಂಬಾ ಹತ್ತಿರದಿಂದ ಒಂದು bikeನಲ್ಲಿ ಇಬ್ಬರು ಸವಾರರು ದಾಟಿದರು, ಯಾಕೆ ಇಷ್ಟು ಹತ್ತಿರ ಅಂತ ಒಮ್ಮೆ ನೋಡಿದೆ, ಏನೋ uncomfortable ಆಗಲು ಪ್ರಾರಂಭವಾಯಿತು. ಆ bike ಮುಂದೆ ತುಂಬಾ ನಿಧಾನವಾಗಿ ಹೋಗುತ್ತಿತ್ತು, ನಾನೂ ಅದರ ಹಿಂದೆ ನಿಧಾನ ಹೋದೆ ಸ್ವಲ್ಪ ದೂರದವರೆಗೆ. ಮತ್ತೆ ಅಲ್ಲಿ ಸ್ವಲ್ಪ ಜನರಿದ್ದ ಜಾಗ ಬಂತು, fast ಆಗಿ overtake ಮಾಡಿ, ಮುಂದೆ ಬೇಗ ಹೋದೆ. ಹಿಂದೆ head light ಕಾಣುತ್ತಿತ್ತು, ಆದರೆ ನಾನು ಮುಂದೆ ಬಂದಾಗಿತ್ತು. ಹಾಗಾಗಿ ಈ ವಿಷಯ ಸ್ವಲ್ಪ ಮನಸ್ಸಿಂದ ಹಿಂದೆ ಹೋಗಿ, ಬೇರೆ ದಾರಿ ಆದ್ದರಿಂದ ಮುಂದೆ ಹೇಗೆ ಹೋಗುವುದು ಎನ್ನುವ ಯೋಚನೆ ಮೇಲೆ ಬಿದ್ದಿತ್ತು. ಮುಂದೆ ಒಂದು ತಿರುವಿನಲ್ಲಿ ಸ್ವಲ್ಪ 500mtrs ನಷ್ಟು ದೂರ ಮನೆಗಳಿಲ್ಲ, street lights ಇಲ್ಲ, ಬೊಬ್ಬಿಟ್ಟರೂ ಕೇಳುವಷ್ಟು ದೂರ ಜನರಿಲ್ಲದ ಜಾಗ, ಬಂತು ಅದೇ bike ವೇಗದಿಂದ, ನನ್ನ scooter ನ ಚಕ್ರಕ್ಕೆ ತಾಗಿಸಿ ಅಡ್ಡ ಹಾಕಿತು. Cycle balance ಇದ್ದುದರಿಂದ scooter ಓಡಿಸಲು ಬರುತ್ತೆ ಬಿಟ್ಟರೆ ಅದರ ಭಾರವನ್ನೆಲ್ಲ ಹಿಡಿದು ನಿಲ್ಲುವಷ್ಟು ಶಕ್ತಿಯಿಲ್ಲ.
Bike ಬಂದು scooter tire ಗೆ ಹೊಡೆದ ರಭಸಕ್ಕೆ ನಾನು road ನಲ್ಲಿ ಬಿದ್ದೆ, ನನ್ನ ಮೇಲೆ scooter, ಒಂದು ಕಾಲು ಆಚೆ, ಇನ್ನೊಂದು ಈಚೆ scooter ನ ಮಧ್ಯದಲ್ಲಿ ನಾನು ಬಿದ್ದೇ ಬಿಟ್ಟೆ. ಜೋರಾಗಿ ಬೊಬ್ಬಿಟ್ಟೆ. ಆದರೆ ಮನುಷ್ಯರ ಕಿವಿಗೆ ಕೇಳುವಷ್ಟು ದೂರದಲ್ಲಿ ಮನೆಗಳಿಲ್ಲ, ಮನುಷ್ಯರಿರಲಿಲ್ಲ. ಆದರೆ, ಹಗಲಲ್ಲೂ, ಇರುಳಲ್ಲೂ, ಗಾಳಿಯಲ್ಲೂ, ನೆಲದಲ್ಲೂ , ಎಲ್ಲೆಲ್ಲೂ ಇರುವ ಆ ಭಗವಂತನಿಗೆ ಆ ಕರೆ ಕೇಳಿಸಿತು. ಆ bike ನಲ್ಲಿದ್ದ ಸರಗಳ್ಳರು bike ನ್ನು road ನಲ್ಲಿ ಬಿದ್ದಿದ್ದ ನನ್ನ ಬಳಿ ತಂದು, ಕೊರಳಿಗೆ ಕೈ ಹಾಕಿ ಎಳೆಯುವ ಪ್ರಯತ್ನ ಪಡುತ್ತಾನೆ. ಸರವನ್ನ ಕೊರಳಲ್ಲಿ ಹುಡುಕುತ್ತಾನೆ, ಎಲ್ಲಿಂದ ಬಂತೋ ಆ ಶಕ್ತಿ ತಿಳಿಯೆ, ಬಿದ್ದಿದ್ದರೂ ಗುದ್ದಿ ದೂಡಿ bike ನ balance ತಪ್ಪಸಿದ ನೆನಪು ನನಗಿದೆ. ಹುಡುಕುತ್ತಾನೆ, ಹುಡುಕಿ ಸಿಗುತ್ತಿಲ್ಲ, ಮುಂದಿನವ ಕೇಳಿದ ಸಿಕ್ಕಿತಾ? ಸಿಕ್ಕಿತಾ? ಆಗ ಹಿಂದಿನವ “ಏನೂ ಹಾಕೇ ಇಲ್ಲ, ಏನೂ ಇಲ್ಲ, ಹೋಗು ಹೋಗು” ಎಂದ. Bike ಮುಂದೆ ಹೋಗಿಯೇ ಬಿಟ್ಟಿತು. ಭಯವು ನನ್ನನ್ನ ಆವರಿಸಿತ್ತು. ಕೊರಳನ್ನ ಮುಟ್ಟಿ ನೋಡಿದೆ. ನನ್ನ ಕರಿಮಣಿ ಸರ ಅಲ್ಲಿಯೇ ಇತ್ತು. ಅರೆ ಕ್ಷಣ ಮೊದಲು ಸರಗಳ್ಳನಿಗೆ ಸಿಕ್ಕಿರಲಿಲ್ಲ, ಮೊದಲಿತ್ತು, ಮತ್ತೆಯೂ ಇದೆ. ಹಾಗಾದರೆ ಆ ಕ್ಷಣ ಎಲ್ಲಿತ್ತು? ರಾಮನ ಕೈಯಲ್ಲಿ ಭದ್ರವಾಗಿತ್ತು ಎಂದಲ್ಲದೆ ಮತ್ತಿನ್ನೇನು ಹೇಳಲಿ.. ಅಲ್ಲಿ ಇರಲಿಲ್ಲವೋ, ಆತನಿಗೆ ಸಿಗಲಿಲ್ಲವೋ ಅದು ಆ ಗುರು, ರಾಮ ಹಾಗೂ ಅಲ್ಲಿ ನನ್ನ ರಕ್ಷಣೆಗೆ ಸಾಕ್ಷಿಯಾದ ಗಾಳಿ, ಗಿಡ, ಚಂದ್ರ, ಭೂಮಿಯರಿಗೆ ಮಾತ್ರ ಗೊತ್ತು.
ನಂಬಿದ ಗುರು, ಕಾಪಾಡುವ ದೇವನು ಜೊತೆಗಿದ್ದಲ್ಲಿ ಯಾವ ಪವಾಡವೂ ನಡೆಯುವುದು ಎನ್ನುವುದಕ್ಕೆ ಇದೇ ಸಾಕ್ಷಿ.
ಆ ಸಂದರ್ಭ ಹೇಗಿತ್ತೆಂದರೆ – ರಾತ್ರಿಯ ಸಮಯ, street light ಬೆಳಕಿಲ್ಲ, ಪಕ್ಕದಲ್ಲಿ ಮನೆಯೂ ಇಲ್ಲ, ಹಿಂದಿನಿಂದಾಗಲಿ, ಮುಂದಿನಿಂದಾಗಲಿ ವಾಹನಗಳು ಬರುತ್ತಿರಲಿಲ್ಲ, ಜನ ಸಂಚಾರವೂ ಇರಲಿಲ್ಲ. ನಾನು ಒಬ್ಬಂಟಿ, ಗಾಡಿ ಗುದ್ದಿ balance ತಪ್ಪಿ ನೆಲದಲ್ಲಿ ಬಿದ್ದಿದ್ದೇನೆ, ಓಡಿ ಹೋಗೋಣ ಎಂದರೆ ಗಾಡಿ ನನ್ನ ಮೇಲಿದೆ. ಅಷ್ಟೂ helpless situation, ಅಷ್ಟೂ ದುರ್ಬಲಳು, ಏನು ಬೇಕಾದರೂ ಆಗಬಹುದಿತ್ತು, ಆದರೆ “ಏನೂ” ಆಗದೆ ಬಂದಿದ್ದೇನೆ ಎಂದಾದರೆ it is just miracle. ರಾಮಾ ಎಂದು ಕೂಗಿ, ಇರುವ ಶಕ್ತಿಯನ್ನೆಲ್ಲ ಹಾಕಿ scooter ಎತ್ತಿ, ಮತ್ತೆ start ಮಾಡಿ ಸುರಕ್ಷಿತವಾಗಿ ಮನೆಗೆ ಮರಳಿದೆ. ನಾನು road ನಲ್ಲಿ ಬಿದ್ದಿದ್ದು, ಗಾಯವಾಗಲಿಲ್ಲ, ಗಾಡಿ ನನ್ನ ಮೇಲೆ ಬಿದ್ದಿತ್ತು, ಗಾಯವಾಗಲಿಲ್ಲ.ಎಳ್ಳಿನಷ್ಟೂ, ಎಳ್ಳಷ್ಟೂ ಗಾಯವೂ ಆಗಿಸದೆ, ಸರವನ್ನೂ ಉಳಿಸಿ ರಕ್ಷಿಸಿದ ನನ್ನ ಭಗವಂತ.
ಹೊರಗಡೆಯಿಂದ ಸಹಾಯಕ್ಕೆ ಯಾರೂ ಇರಲಿಲ್ಲ. ಆದರೆ ಈ ಚಮತ್ಕಾರ ಮಾಡಿದವರಿಬ್ಬರೂ ನನ್ನೊಳಗಿದ್ದರು. ತಲೆಯಲ್ಲಿತ್ತು ಗುರುವಿತ್ತ ಒಂದು ಮಂತ್ರಾಕ್ಷತೆ ಕಾಳು, ಹೃದಯದಲ್ಲಿತ್ತು ರಾಮಪದದಿ ಕೇಳಿದ ರಾಮಕೃಷ್ಣರ ಕಥೆಗಳು. ಇದರಿಂದಾಯಿತು ಚಮತ್ಕಾರಗಳು.
ಆ ಕ್ಷಣವನ್ನು ನೆನೆಸಿದರೆ ಈಗಲೂ ಭಯ, ಅದೊಂದು ದುಷ್ಟ ಕ್ಷಣವಾಗಿತ್ತು ಅನ್ನಿಸುತ್ತದೆ, ಆದರೆ ಅದರ ಪರಿಣಾಮದಿಂದ ನನಗೆ ಗುರು-ರಾಮರಲ್ಲಿದ್ದ ನಂಬಿಕೆ ಮತ್ತೂ ಬಲವಾಯಿತು, ಮತ್ತೂ ದೃಢವಾಯಿತು.
ಇವರೀರ್ವರಿರುವಲ್ಲಿ ಭಯವೇಕೆ?
ಇವರೀರ್ವರ ನೆನೆಯದ ಜೀವವೇಕೆ?
ಇವರೀರ್ವರನ್ನು ಮನದಲ್ಲಿ ಇರಿಸಿ, ಅವರಾಡುವ ಆಟಕೆ, ಅವರು ನಡೆಸುವ ಚಮತ್ಕಾರಗಳಿಗೆ ಸಾಕ್ಷಿಗಳಾಗೋಣ, ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ.
“ತುಮ್ ರಕ್ಷಕ್ ಕಾಹೂಕೋ ಡರ್ನಾ??” ಹನುಮಾನ ಚಾಲೀಸದ ಈ ಸಾಲುಗಳು ಮತ್ತೆ ಮತ್ತೆ ಬರುತಿದೆ ಮನಕೆ.