ನಾಳೆ ರಾಮಾಶ್ರಮದಲ್ಲಿ ಸೋಮಪ್ರದೋಷ ಹಾಗೂ ಮಾಸ ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ ಹಾಗೂ ರುದ್ರಹವನ

ಉಪಾಸನೆ ಸುದ್ದಿ

ಬೆಂಗಳೂರು: ಶ್ರೀರಾಮಚಂದ್ರಾಪುರ‌ ಮಠದ ಶಾಖಾಮಠವಾದ ಗಿರಿನಗರದ ರಾಮಾಶ್ರಮದಲ್ಲಿ ಸೋಮವಾರ ದಿನಾಂಕ 05-11-2018 ರಂದು ಸೋಮಪ್ರದೋಷ ಹಾಗೂ ಮಾಸಶಿವರಾತ್ರಿ ಅಂಗವಾಗಿ ಬ್ರಹ್ಮೀಭೂತ ಶ್ರೀಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರ ಸಮಾಧಿಸಾನ್ನಿಧ್ಯದಲ್ಲಿ ಶ್ರೀಸಂಸ್ಥಾನದವರ ದಿವ್ಯಕರಗಳಿಂದ ವಿಶೇಷರುದ್ರಾಭಿಷೇಕ ನಡೆಯಲಿದೆ.

 

ಮುಂಜಾನೆ 10 ಗಂಟೆಗೆ ಶ್ರೀಕರಾರ್ಚಿತದೇವತಾ ಪೂಜೆಯೊಂದಿಗೆ ಧಾರ್ಮಿಕ‌ ಕಾರ್ಯಕ್ರಮಗಳು ಆರಂಭವಾಗಲಿದ್ದು, 11 ಗಂಟೆಗೆ ಶ್ರೀಸಂಸ್ಥಾನದವರು ಗುರುಮಂದಿರದಲ್ಲಿ ರುದ್ರಾಭಿಷೇಕ ನೆರವೇರಿಸಲಿದ್ದಾರೆ. 12 ಗಂಟೆಗೆ ಗುರು ವಂದನೆ, 12.30 ಕ್ಕೆ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ರುದ್ರಹವನದ ಪೂರ್ಣಾಹುತಿ, 1 ಗಂಟೆಗೆ ಶ್ರೀಸಂಸ್ಥಾನದವರ ಸಾನ್ನಿಧ್ಯದಲ್ಲಿ ಗುರುಮಂದಿರದಲ್ಲಿ ಮಹಾಮಂಗಳಾರತಿ ನಡೆಯಲಿದೆ.

 

ಬಳಿಕ ಪ್ರಸಾದಭೋಜನ ವ್ಯವಸ್ಥೆಯಿದ್ದು ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಸಭಾಕಾರ್ಯಕ್ರಮವಿದೆ. ಸಂಜೆ 5 ಗಂಟೆಗೆ ಗುರುಮಂದಿರದಲ್ಲಿ ಪ್ರದೋಷಪೂಜೆ ಹಾಗೂ 6 ಗಂಟೆಗೆ ಶ್ರೀಕರಾರ್ಚಿತದೇವತಾ ಪೂಜೆ ಜರುಗಲಿದೆ. ಭಕ್ತರು ಹಾಗೂ ಶ್ರೀಮಠದ ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಸಂಸ್ಥಾನ ಹಾಗೂ ದೇವರ ಕೃಪೆಗೆ ಪಾತ್ರರಾಗಲು ಶ್ರೀಮಠದ ಧರ್ಮಕರ್ಮ ವಿಭಾಗ ಪ್ರಕಟಣೆಯಲ್ಲಿ‌ ಕೋರಿದೆ.

Author Details


Srimukha

Leave a Reply

Your email address will not be published. Required fields are marked *