ರಾಮಾಶ್ರಮದಲ್ಲಿ ಕಾರ್ತೀಕ ದೀಪೋತ್ಸವ ಆರಂಭ: ಸರ್ವರಿಗೂ ಹಾರ್ದಿಕ ಸ್ವಾಗತ

ಉಪಾಸನೆ ಸುದ್ದಿ

ಬೆಂಗಳೂರು: ಬೆಳಕಿನ‌ ಹಬ್ಬ ದೀಪಾವಳಿ ಮುಗಿಯುತ್ತಿದ್ದಂತೆ ಕಾರ್ತೀಕ ದೀಪೋತ್ಸವದ ಸಂಭ್ರಮ ಆರಂಭವಾಗುತ್ತದೆ. ಅಂತೆಯೇ ಬೆಂಗಳೂರಿನಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖಾಮಠದಲ್ಲಿಯೂ ಕಾರ್ತೀಕ ದೀಪೋತ್ಸವ ನವೆಂಬರ್ 8ರಿಂದ ಆರಂಭವಾಗಿದೆ.

 

ಈಗಾಗಲೇ ಪ್ರತಿದಿನ‌‌ ಸಂಜೆ ಸಪರಿವಾರ ಸಹಿತ ಶ್ರೀರಾಮದೇವರ ಸನ್ನಿಧಿಯಲ್ಲಿ, ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯ ದೀಪೋತ್ಸವ ನಡೆಯುತ್ತಿದ್ದು ಬೆಳಗುವ ದೀಪಗಳ‌ ನಡುವೆ ರಾಮದೇವರು ಹಾಗೂ ಶ್ರೀಸಂಸ್ಥಾನದವರನ್ನು ನೋಡುವುದೇ ಒಂದು ದಿವ್ಯ ಅನುಭವವಾಗಿದೆ.

 

ಕಾರ್ತಿಕ ದೀಪೋತ್ಸವ ಸೇವೆಯು ಕಾರ್ತಿಕ ಶುದ್ಧ ಪಾಡ್ಯದಿಂದ ಮಾರ್ಗಶಿರ ಶುದ್ಧ ಷಷ್ಠಿಯವರೆಗೆ ಅಂದರೆ ನವೆಂಬರ್ 8 ರಿಂದ ಡಿಸೆಂಬರ್‌ 13 ರವರೆಗೆ ನಡೆಯಲಿದೆ.

 

ದೀಪೋತ್ಸವದಂತಹ ಪುಣ್ಯ ಸೇವಾವಕಾಶದಲ್ಲಿ ಭಾಗವಹಿಸಲು ಎಲ್ಲ ಶಿಷ್ಯ-ಭಕ್ತರಿಗೆ ಅವಕಾಶವಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಶ್ರೀರಾಮಾಶ್ರಮದ ಪ್ರಕಟಣೆ ಕೋರಿದೆ.
ದೂ. ಸಂ.:
9449595215
9945030385

 

Author Details


Srimukha

Leave a Reply

Your email address will not be published. Required fields are marked *