ಹೋಗಬೇಕೇಕೆ ಗೋಸ್ವರ್ಗಕೆ?

ನನಗೆ ನಿನ್ನೆ ಮೊದಲ ಬಾರಿಗೆ ಭೂ(ಗೋ)ಸ್ವರ್ಗವನ್ನು ನೋಡುವ ಅವಕಾಶ ಮಕ್ಕಳಮಹಾಸಮ್ಮೇಳನದಲ್ಲಿ ಭಾಗವಹಿಸುವ ಮುಖಾಂತರ ಸಿಕ್ಕಿತು.   ವಾರಗಳ ಹಿಂದೆಯಷ್ಟೇ ಒಬ್ಬರು ಸಿಕ್ಕಿ “ಹಸುಗಳನ್ನು ನೋಡಲು ಅಲ್ಲಿಗೆ ಹೋಗಬೇಕೇ?!” ಎಂದು ನನ್ನಲ್ಲಿ ಕೇಳಿದರು.   ಈಗ ಅವರಿಗೆ ಉತ್ತರವನ್ನು ಕೊಡಲು ಬಯಸುತ್ತೇನೆ.   “ಕೇವಲ ಹಸುಗಳನ್ನಷ್ಟೇ ನೋಡಲು ಅಲ್ಲ, ಗೋವುಗಳ ಸ್ವಾತಂತ್ರ್ಯವನ್ನು ನೋಡಲು ಬನ್ನಿ.   ಗೋವುಗಳ ಬಂಧನಮುಕ್ತ ಜೀವನವನ್ನು ನೋಡಲು ಬನ್ನಿ.   ಗೋವುಗಳು ತನಗೆ ಬೇಕಾದ ಹಾಗೆ ಓಡಾಡಿಕೊಂಡು ಇರುವುದನ್ನು ನೋಡಲು ಬನ್ನಿ.   ಗೋವುಗಳು […]

Continue Reading

ಏಕಾದಶಿಯ ಹರಿದಿನದಂದು, ಹರಿ ಕಾಪಾಡಿದ ಕಥೆ! ರಾಮ ಪದದ ಪ್ರಸಾದ : ರಮ್ಯಾ ಸುರೇಶ್ ಮಾಬಲಡ್ಕ

ರಾಮಪದ ಕೇಳಿ ಮರಳುತ್ತಿದ್ದುದರಿಂದ, ಸರಗಳ್ಳರು ಕೊರಳಿಗೆ ಕೈಹಾಕಿದ ಅರೆಕ್ಷಣ ಕೊರಳಲ್ಲಿ ಸರವೇ ಇಲ್ಲದಾಯಿತು, ಮೊದಲೂ ಇತ್ತು, ಮತ್ತೆಯೂ ಇತ್ತು, ಆ ದುಷ್ಟರು ಕೊರಳಿಗೆ ಕೈ ಹಾಕಿ ತೆಗೆಯಲು ಯತ್ನಿಸಿದಷ್ಟು ಹೊತ್ತು, ಶ್ರೀ ರಾಮನ ಕೈಯಲ್ಲಿ ಭದ್ರವಾಗಿತ್ತು, ಪವಾಡದ ಕಥೆಯನ್ನು ಓದಿ ನೋಡಿ.   ನವೆಂಬರ್ 3, 2018, ಏಕಾದಶಿಯ ಹರಿದಿನ. ಏಕಾದಶಿಯಂದು ಸಂಜೆ 6 ರಿಂದ 8 ರ ವರೆಗೆ ಶ್ರೀರಾಮಚಂದ್ರಾಪುರಮಠದಲ್ಲಿ ಶ್ರೀಸಂಸ್ಥಾನದವರು ಶಿಷ್ಯರಿಗಾಗಿ ನಡೆಸಿ ಕೊಡುವ ರಾಮಪದ; ರಾಮನೆದುರು, ರಾಮನ ಪದವನ್ನು ಹಾಡುತ್ತಾ, ರಾಮನ ಕಥೆ […]

Continue Reading

ಕನ್ಯಾಸಂಸ್ಕಾರ – ಒಂದು ಸ್ವಾನುಭವ : ಕು. ಅಂಕಿತಾ ನೀರ್ಪಾಜೆ

ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ! ಹೆಣ್ಣೊಬ್ಬಳು ಸಂಸ್ಕಾರವಂತಳಾದರೆ ಸಮಾಜವೇ ಸಂಸ್ಕಾರ ಪಡೆದಂತೆ! ಈ ಮಾತು ಹಿರಿಯರದು. ಆದರೆ ಅದು ಇಂದಿಗೂ ಎಂದೆಂದಿಗೂ ಪ್ರಸ್ತುತವೇ! ಕೂಡು ಕುಟುಂಬದ ಚಿಂತನೆ ಬದಲಾಗಿರಬಹುದು. ಹೆಣ್ಣಿನ ಸ್ಥಾನ-ಮಾನಗಳು, ಪುರುಷರಿಗೆ ಸಮಾನವೆನ್ನುವ ಮನೋಭಾವ ಬೆಳೆದಿರಬಹುದು. ಅದು ಮಹಿಳೆಯ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಮತ್ತು ಎಲ್ಲಾ ದಿಕ್ಕುಗಳಿಂದ ಎಸೆಯುವ ಬಾಣಗಳನ್ನು ಎದುರಿಸುವ ಮನೋಬಲ, ಚೈತನ್ಯ, ವಿವೇಚನೆಯಿರಬೇಕಾದುದು ಅನಿವಾರ್ಯ ಎಂದು ಹೇಳಲಾಗುತ್ತದೆ. ತಪ್ಪು ಒಪ್ಪುಗಳನ್ನು ಅರ್ಥೈಸಿಕೊಳ್ಳುವ ಅರಿವಿರಬೇಕು, ಸರಿಯಾದ ಪಥದಲ್ಲಿ ನಡೆಯುವ ಸಾಮರ್ಥ್ಯ ಬೇಕು, ಮಕ್ಕಳಿಗೂ ಉತ್ತಮ ನಡವಳಿಕೆ […]

Continue Reading

ಸ್ವಾನುಭವ – ಯು. ಗೋಪಾಲಕೃಷ್ಣ ಭಟ್ಟ (ಯು.ಜಿ.ಕೆ) 

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಚರಣಾರವಿಂದಗಳಲ್ಲಿ ಮಂಗಳೂರು ಮಂಡಲಾಂತರ್ಗತ, ಮಂಗಳೂರು ದಕ್ಷಿಣವಲಯದ ಪಡೀಲುಘಟಕ (ಸಂ.೧೦೦೧) ವ್ಯಾಪ್ತಿಯ ನಿವಾಸಿಯಾದ ಗೋಪಾಲಕೃಷ್ಣ ಭಟ್ಟನು ಮಾಡಿಕೊಳ್ಳುವ ವಿಜ್ಞಾಪನೆಗಳು. ಪೂಜ್ಯರೇ.   ನಾನು ೨೦೧೫ನೇ ಇಸವಿಯ ಕೊನೆಯ ಭಾಗದಲ್ಲಿ ಅರ್ಬುದ ವ್ಯಾಧಿಗೆ ತುತ್ತಾದ ಸಂಗತಿಯನ್ನೂ, ದೀರ್ಘಾವಧಿ ಚಿಕಿತ್ಸೆಯ ಕಾರಣದಿಂದ ಗುರಿಕ್ಕಾರ ಜವಾಬ್ದಾರಿಯನ್ನು ನಿರ್ವಹಣೆ ಮಾಡಲಾಗದ ಸ್ಥಿತಿಯನ್ನೂ ವಲಯಾಧ್ಯಕ್ಷರ ಮೂಲಕ ಬಿನ್ನವಿಸಿಕೊಂಡಿದ್ದೆ. ಆ ಬಳಿಕ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಶ್ರೀಮಠಕ್ಕೆ (ಗಿರಿನಗರ) ಬಂದು ಶ್ರೀಕರಾರ್ಚಿತ ದೇವರುಗಳ ಸನ್ನಿಧಿಯಲ್ಲಿ ಆರೋಗ್ಯ ಪ್ರಾಪ್ತಿಗಾಗಿ ಪ್ರಾರ್ಥನೆಯನ್ನು […]

Continue Reading

ಶ್ರೀ ರಾಮಚಂದ್ರಾಪುರ ಮಠದಲ್ಲಿ ಏಕಾದಶಿಯಂದು ಸುಗ್ರಾಸ ಸಂತರ್ಪಣೆ!

ಹೌದು.. ಈ ಸಂತರ್ಪಣೆಯು ಪ್ರತಿ ಏಕಾದಶಿಯಂದೂ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ಸಂಜೆ ಆರು ಗಂಟೆಗೆ ಸರಿಯಾಗಿ ನಡೆಯುವಂತಾದ್ದು. ಇದೇನು ಶ್ರೀಮಠದಲ್ಲಿ ಏಕಾದಶಿಯಂದು, ಅದೂ ಸಂಜೆ ದೇವರು ಬರುವ ಹೊತ್ತಿನಲ್ಲಿ ಊಟ ಮಾಡುವುದೇ…., ಎಂದು ಬೆಚ್ಚಿ ಬಿದ್ದಿರಾ!! ಬನ್ನಿ…. ನೋಡಿ… ನೀವೂ ಈ ಸಂತರ್ಪಣೆಯಲ್ಲಿ ಭಾಗವಹಿಸಿ, ಮನಃತೃಪ್ತಿಯಾಗಿ ಉಣಬನ್ನಿ. ಈ ಸಮಾರಾಧನೆ ಬಹಳ ವಿಶಿಷ್ಟವಾದದ್ದು, ಅನನ್ಯವಾದ್ದದ್ದು. ಪುರಂದರದಾಸರು ಹೇಳಲಿಲ್ಲವೇ? ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ, ವಿಠಲನಾಮ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೋ ಎಂದು! ಈ ಏಕಾದಶಿ ಉತ್ಸವದ […]

Continue Reading

ಸ್ವಾನುಭವ – ಶ್ರೀಮತಿ ಅನ್ನಪೂರ್ಣಾ ಕುಳಮರ್ವ

ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ಚ ಸಖಾ ತ್ವಮೇವ| ತ್ವಮೇವ‌ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವಂ ಮಮ ದೇವದೇವ|| ಮೊಟ್ಟಮೊದಲು ಗುರುವೂ ರಾಮನೂ ಅದ್ವೈತವಾದ ಶ್ರೀಪೀಠಕ್ಕೆ ಕೋಟಿ ಕೋಟಿ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಗುರುಕರುಣಾವರಣದೊಳಿರುವ ಅನ್ನಪೂರ್ಣಾ ಆದ ನಾನು ಮತ್ತೊಮ್ಮೆ ಗುರುಪದಕ್ಕೆ ಬರೆಯುತ್ತಿದ್ದೇನೆ. ಈ ಬರಹದಿಂದ ಗುರುಪೀಠಕ್ಕೆ ಸಂತೋಷ ಆಗಬಹುದೆಂಬ ವಿಶ್ವಾಸ ನನ್ನದು. ಇಲ್ಲಿಯವರೆಗೂ ನನ್ನ ಜೀವನದಲ್ಲಿ ಏನೇನೆಲ್ಲ ಘಟಿಸಿವೆಯೋ ಅವೆಲ್ಲವನ್ನೂ ಶ್ರೀಪೀಠದಲ್ಲಿ‌ ಕಾಲಕಾಲಕ್ಕೆ‌ ಭಿನ್ನವಿಸಿಕೊಂಡಿದ್ದೇನೆ. ಶ್ರೀರಾಮನನ್ನು, ಶ್ರೀಶಂಕರರನ್ನು ನಾವು ಕಂಡಿಲ್ಲ, ಆದರೆ ಶಂಕರರ […]

Continue Reading

ಸ್ವಾನುಭವ – ವಿದ್ಯಾಶಂಕರಿ ಯಸ್.

ಇದು ಆರೆಂಟು ತಿಂಗಳ ಹಿಂದಿನ ಘಟನೆ‌. ಬೆಳಿಗ್ಗೆ ಏಳುವಾಗ ಸರಿಯಾಗಿಯೆ ಇದ್ದ ಕಣ್ಣುಗಳು, ಸ್ವಲ್ಪ ಹೊತ್ತಿಗೆ ಉರಿಯಲಾರಂಭಿಸಿತು. ಅದೇನೋ ಕಣ್ಣೊಳಗೆ ಹೊಕ್ಕಿರಬಹುದು ಎಂದು ಉಜ್ಜಿದೆ, ನೀರು ಹಾಕಿ ತೊಳೆದೆ, ಇನ್ನೂ ಏನೇನೋ‌ ಮಾಡಿದೆ, ಉರಿ ಕಡಿಮೆಯಾಗುವ ಬದಲು ಜಾಸ್ತಿ ಆಗ್ತಾ ಹೋಯಿತು, ಕಣ್ಣು ಕೆಂಪಾಯಿತು ಅಷ್ಟೇ ಅಲ್ಲ ಕಣ್ಣಿನ ಸುತ್ತಲೂ ಬಾವು ಕೂಡ ಬಂದಿತ್ತು,‌ ನೋವು ಮತ್ತು ಉರಿ ತಡೆಯಲಾರದಾಯಿತು‌. ಗೋಮೂತ್ರ ಸರ್ವರೋಗಕ್ಕೂ ಮದ್ದು ಎಂದು ಶ್ರೀಗುರುಗಳು ಹೇಳಿದ್ದನ್ನು ಕೇಳಿದ್ದ ನಾನು, ನಮ್ಮ ಮನೆಯಲ್ಲಿದ್ದ ಮಾ ಗೋ […]

Continue Reading