ಮನಮೋಹನನ ಕುಂಚದಲ್ಲಿ ಅರಳಿದ ಚಂದದ ಕಲಾಕೃತಿಗಳು

ಅಂಕುರ

 

ಪುತ್ತೂರಿನ ಯುವ ಕಲಾವಿದ ಪಿ.ಎಂ.ಮನಮೋಹನ ತನ್ನ ಕುಂಚದಲ್ಲಿ ಪ್ರತಿದಿನವೂ ವಿಭಿನ್ನ ಚಿತ್ರಗಳನ್ನು ಬಿಡಿಸುವ ಮೂಲಕ ಜನಮನ್ನಣೆ ಪಡೆಯುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಕಲೆಯ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದ ಮನಮೋಹನ, ಚಿಕ್ಕಂದಿನಿಂದಲೇ ಬೇರೆ ಬೇರೆ ಪುಸ್ತಕಗಳನ್ನು ನೋಡಿ ಚಿತ್ರ ಬಿಡಿಸುವ, ಬಣ್ಣ ಹಚ್ಚುವ ಅಭ್ಯಾಸ ಮಾಡುತ್ತಾ ಅಂದಿನಿಂದಲೇ ಕಲೆಯ ಬಲೆಯಲ್ಲಿ ಬಂಧಿಯಾದರು.

ಮೂಲತಃ ಪುತ್ತೂರು ತಾಲೂಕಿನ ಕಾವು ಪಾಲಾಶತಡ್ಕದ ಪಿ.ವಿ.ಮುರಳಿನರಸಿಂಹ ಮತ್ತು ವಿದ್ಯಾಭಾರತೀ ದಂಪತಿಯ ಪುತ್ರ ಮನಮೋಹನ, ಈಶ್ವರಮಂಗಲದ ಗಜಾನನ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಸದ್ಯ ಪುತ್ತೂರಿನ ವರ್ಣಕುಟೀರದ ಶಿಕ್ಷಕ ಪ್ರವೀಣ್ ಅವರಲ್ಲಿ ಚಿತ್ರಕಲೆ ಕುರಿತು ಅಧ್ಯಯನ ಮಾಡುತ್ತಿದ್ದು, ಕಳೆದ ನಾಲ್ಕೂವರೆ ವರ್ಷಗಳಿಂದ ಪ್ರತಿದಿನಕ್ಕೊಂದರಂತೆ ಈತ ಈವರೆಗೆ ಬಿಡಿಸಿದ ಚಿತ್ರಗಳು ಸಾವಿರದ ಆರುನೂರಕ್ಕೂ ಅಧಿಕ!

2016 ರಲ್ಲಿ ನಡೆದ ಶಂಕರಪಂಚಮಿಯಲ್ಲಿ ಬಿಡಿಸಿದ ಹನುಮಾನ್ ಚಾಲೀಸಾ ಚಿತ್ರಗಳಿಗೆ ಶ್ರೀರಾಘವೇಶ್ವರ ಶ್ರೀಗಳಿಂದ ವಿಶೇಷ ಪುರಸ್ಕಾರ ದೊರೆತಿದೆ. ಪ್ರತಿನಿತ್ಯ ಚಿತ್ರಬಿಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದೇನೆ. ಇದರಿಂದ ನನಗೆ ತುಂಬಾ ಪ್ರೋತ್ಸಾಹ ದೊರೆಯಿತು. ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಗುರಿ ನನ್ನದು” ಎನ್ನುತ್ತಾನೆ ಮನಮೋಹನ.

Author Details


Srimukha

Leave a Reply

Your email address will not be published. Required fields are marked *