ಬಹುಮುಖ ಪ್ರತಿಭೆ ಪದ್ಮಿನಿ ಸಿ.ಆರ್.

ಅಂಕುರ

ಸಂಗೀತ, ಭರತನಾಟ್ಯ, ಚಿತ್ರಕಲೆ, ಶಿಕ್ಷಣ… ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವ ವಿಶಿಷ್ಟ ಪ್ರತಿಭೆ ಪದ್ಮಿನಿ ಸಿ.ಆರ್.ಬಾಳಿಲ ಸಮೀಪದ ನಿಡ್ಮಾರಿನ ಸಿ.ವಿ.ರಾಜಾರಾಮ ಮತ್ತು ರತ್ನಕುಮಾರಿ ದಂಪತಿಯ ಪುತ್ರಿ ಪದ್ಮಿನಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡುತ್ತಾ ಗಮನಸೆಳೆದಿದ್ದಾಳೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ 98% ಅಂಕ ಗಳಿಸಿರುವ ಈಕೆ, ವಿ.ಶಂಕರಿಮೂರ್ತಿ ಬಾಳಿಲ ಅವರ ಶಿಷ್ಯೆ. ಶಾಸ್ತ್ರೀಯ ಸಂಗೀತದ ಜೊತೆಗೆ ಗಾನಸಿರಿ ಡಾ.ಕಿರಣಕುಮಾರ್ ಮತ್ತು ಬಾಬಣ್ಣ ಪುತ್ತೂರು ಇವರಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ.ಭರತನಾಟ್ಯದಲ್ಲಿಯೂ ಆಸಕ್ತಿ ಹೊಂದಿರುವ ಪದ್ಮಿನಿ, ವಿ.ಸ್ವಸ್ತಿಕಾ ರೈ, ಕುದ್ಕಾಡಿ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.ಶಿಕ್ಷಣದಲ್ಲೂ ಮುಂದಿರುವ ಈಕೆ, ರಾಜ್ಯಮಟ್ಟದ ಪ್ರೌಢಶಾಲಾ ರಾಮಾಯಣ ಪರೀಕ್ಷೆಯಲ್ಲಿ 91% ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ, ಕಳೆದ ಸಾಲಿನ ‘ಹಿಂದಿ ಪ್ರವೀಣ, ಮಧ್ಯಮ ಪರೀಕ್ಷೆಯಲ್ಲಿ‌ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾಳೆ.

ಈಕೆಯ ಸಾಧನೆಗೆ ರಾಜ್ಯಮಟ್ಟದ “ಅರಳು ಮಲ್ಲಿಗೆ” ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.ಓದಿನ ಜೊತೆಗೆ ಮುಂದಿನ ದಿನಗಳಲ್ಲಿ ಸಂಗೀತ, ಭರತನಾಟ್ಯ, ಚಿತ್ರಕಲೆ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂಬ ಆಸೆ ಇದೆ ಎನ್ನುತ್ತಾಳೆ ಪದ್ಮಿನಿ ಸಿ.ಆರ್.ಈಕೆಯ ಕನಸುಗಳು ಈಡೇರಲಿ, ಜೊತೆಗೆ ಇನ್ನಷ್ಟು ಸಾಧನೆಗೈಯ್ಯಲಿ ಎಂಬುದು ನಮ್ಮ ಹಾರೈಕೆ.

Author Details


Srimukha

Leave a Reply

Your email address will not be published. Required fields are marked *