’ಭರತನಾಟ್ಯ’- ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೊಂದು. ನವರಸಗಳನ್ನೊಳಗೊಂಡ ಭರತನಾಟ್ಯರಂಗದಲ್ಲಿಗೆಜ್ಜೆಕಟ್ಟಿಕುಣಿದು ಅಭಿಮಾನಿಗಳ ಹೃದಯಗೆದ್ದಅಪರೂಪದ ಪ್ರತಿಭೆ ಸಿಂಧೂರಲಕ್ಷ್ಮೀ ಕನ್ನೆಪ್ಪಾಡಿ.
ಕಡಲಿನ ಒಡಲುದಕ್ಷಿಣಕನ್ನಡದಕನ್ನೆಪ್ಪಾಡಿಯ ಶಿವರಾಮ ಭಟ್ ಮತ್ತು ಸಂಧ್ಯಾದಂಪತಿಯ ಪುತ್ರಿ ಸಿಂಧೂರಲಕ್ಷ್ಮೀ ಕನ್ನೆಪ್ಪಾಡಿ. ಮಂಗಳೂರಿನ ತ್ರಿಶಾಕಾಲೇಜ್‌ಆಫ್ ಕಾಮರ್ಸ್ & ಮ್ಯಾನೆಜ್‌ಮೆಂಟ್‌ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಮುಗಿಸಿ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯತಯಾರಿ ನಡೆಸುತ್ತಿರುವ ಈಕೆ ಒಂಭತ್ತನೆಯ ವಯಸ್ಸಿಗೇ ಭರತನಾಟ್ಯರಂಗವನ್ನು ಪ್ರವೇಶಿಸಿದಳು. ಪುತ್ತೂರಿನ ಶ್ರೀಮೂಕಾಂಬಿಕಾ ನೃತ್ಯಾಲಯದ ವಿ.ಬಿ. ದೀಪಕ್‌ಕುಮಾರ್‌ಅವರ ಬಳಿಯಲ್ಲಿ ಅಧ್ಯಯನ ನಡೆಸಿರುವ ಸಿಂಧೂರಲಕ್ಷ್ಮೀ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿರಾಜ್ಯಕ್ಕೆ ಏಳನೇ ಸ್ಥಾನ ಪಡೆಯುವ ಮೂಲಕ ತೇರ್ಗಡೆ ಹೊಂದಿರುವುದುಇವರಕಲಾನೈಪುಣ್ಯತೆಗೆ ಸಾಕ್ಷಿ.
ಆಫ್ರಿಕಾದಲ್ಲೂ ಭರತನಾಟ್ಯ ಪ್ರದರ್ಶನ:
ಗುರು ವಿ. ಬಿ.ದೀಪಕ್‌ಕುಮಾರ್‌ಅವರೊಂದಿಗೆ ಪುತ್ತೂರು, ಬೆಂಗಳೂರು, ಚಿತ್ರದುರ್ಗ, ತೀರ್ಥಹಳ್ಳಿ, ಕಳಸ, ಧರ್ಮಸ್ಥಳ ಲಕ್ಷದೀಪೋತ್ಸವ, ಪೇರಾಜೆ ಮಾಣಿ ಮಠ ಸೇರಿದಂತೆರಾಜ್ಯದ ನಾನಾ ಭಾಗಗಳಲ್ಲಿ ಈವರೆಗೆ ೭೫ ಕ್ಕೂ ಅಧಿಕ ಪ್ರದರ್ಶನ ನೀಡಿದ್ದಾಳೆ. ಅಲ್ಲದೇಕೇಂದ್ರ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯ ಪಶ್ಚಿಮ ಆಫ್ರಿಕಾದಐವರಿಕೋಸ್ಟ್‌ನಲ್ಲಿ ಆಯೋಜಿಸಿದ್ದ ನೃತ್ಯಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಈಕೆಯ ಹೆಗ್ಗಳಿಕೆ.
ರಾಮಕಥೆರೂಪಕದಲ್ಲಿ ವಿಶೇಷ ಪಾತ್ರ:
ಈ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿದ್ದರಾಮಕಥೆಯಲ್ಲಿಅಹಲ್ಯಾಬಾಯಿ ಶಾಪವಿಮೋಚನೆ ರೂಪಕದಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸುವ ಮೂಲಕ ಗಮನಸೆಳೆದಿದ್ದು ವಿಶೇಷ. ರಾಮಕಥೆಯರೂಪಕದಲ್ಲಿ ಪಾತ್ರ ನಿರ್ವಹಿಸಿದ್ದು ಮತ್ತುಆಫ್ರಿಕಾದಲ್ಲಿ ನಡೆದಕಾರ್ಯಕ್ರಮಇದೆರಡೂ ಮರೆಯಲಾಗದ ಅವಿಸ್ಮರಣೀಯ ಕ್ಷಣಗಳು ಎನ್ನುತ್ತಾಳೆ ಸಿಂಧೂರಲಕ್ಷ್ಮೀ ಕನ್ನೆಪ್ಪಾಡಿ.
ಓದಿನಲ್ಲಿಯೂ ಮುಂದೆ:
ಭರತನಾಟ್ಯದಲ್ಲಿಇಷ್ಟೆಲ್ಲಾ ಸಾಧನೆಗೈದರೂ ಸಿಂಧೂರಲಕ್ಷ್ಮೀ ಓದಿನಲ್ಲಿ ಹಿಂದುಳಿದಿಲ್ಲ. ತಮ್ಮ ಓದಿನ ಜೊತೆಗೆ ಭರತನಾಟ್ಯವನ್ನೂ ಸಂಭಾಳಿಸಿಕೊಂಡು ಬರುತ್ತಿರುವ ಈಕೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೯೬ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.೯೬ ಅಂಕ ಪಡೆದಿರುವುದುಗಮನಾರ್ಹ.
ಈಕೆಯ ಸಾಧನೆಯನ್ನು ಪರಿಗಣಿಸಿ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ಪ.ಪೂ.ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಿಶೇಷ ಪುರಸ್ಕಾರಅನುಗ್ರಹಿಸಿದ್ದಲ್ಲದೇ, ಹಲವಾರು ವೇದಿಕೆಯಲ್ಲಿ ಸನ್ಮಾನ ಪುರಸ್ಕಾರವನ್ನು ಪಡೆದಿದ್ದಾಳೆ. ಚಿಕ್ಕವಯಸ್ಸಿನಲ್ಲೇ ದೊಡ್ಡ ವೇದಿಕೆಯನ್ನುಏರಿರುವ ಈ ಯುವಪ್ರತಿಭೆಗೆ ಪ್ರೀತಿಯಿಂದ ಹಾರೈಸೋಣ ಬನ್ನಿ.