ಉಪ್ಪಿನಂಗಡಿ: ಉಜಿರೆ ವಲಯದ ನಡ ಘಟಕ ಗುರಿಕ್ಕಾರರಾದ ಬೈಪದವು ರಾಮಕೃಷ್ಣ ಭಟ್ಟರ ಶ್ರೀರಾಮ ನಿಲಯ, ಕುಕ್ಕಿನ ಕಟ್ಟೆ ಮನೆಗೆ 12 -06 -2016 ರಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಚಿತ್ತೈಸಿದರು.
ಶ್ರೀಗುರುಗಳ ಯೋಜನೆಗಳಲ್ಲಿ ಒಂದಾದ ‘ ಭತ್ತದ ಭಕ್ತಿ ‘ ಎಂಬ ಯೋಜನೆಯಡಿಯಲ್ಲಿ ಪ್ರತಿ ಮನೆಯಲ್ಲಿ ಬಿತ್ತನೆಗೆ ಭತ್ತ ವಿತರಿಸಿದ ಸಂದರ್ಭದಲ್ಲಿ ಕುಕ್ಕಿನಕಟ್ಟೆ ಮನೆಯ ಅಂಗಳದಲ್ಲಿನ ಗದ್ದೆಗೆ ಶ್ರೀಗುರುಗಳ ದಿವ್ಯ ಹಸ್ತದಿಂದ ಬಿತ್ತನಾಕಾರ್ಯ ಮಾಡಿದರು.
ಈ ಗದ್ದೆಯಲ್ಲಿ ಭತ್ತದ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕ ಬಳಕೆ ಇಲ್ಲ. ದೇಶಿ ಗೊಬ್ಬರ ಮಾತ್ರ ಉಪಯೋಗ ಮಾಡುವುದು. ಜೂನು ತಿಂಗಳಲ್ಲಿ ಬಿತ್ತನೆ ಮಾಡಿದರೆ ಅಕ್ಟೋಬರ್ ತಿಂಗಳಲ್ಲಿ ಕೊಯಿಲು ಮಾಡುವುದು. ಶ್ರೀಗುರುಗಳ ಉಪಸ್ಥಿತಿಯಲ್ಲಿ ನೇರವಾಗಿ ಸಮರ್ಪಣೆ ಮಾಡುವುದು. ಮುಂದಿನ ವರ್ಷದ ಬಿತ್ತನೆ ಭತ್ತಕ್ಕೆ ಅನುಗ್ರಹ ಮಂತ್ರಾಕ್ಷತೆ ಪಡೆಯುವುದು.
ಇದೇ ರೀತಿ ನಡೆದುಕೊಂಡು ಇಲ್ಲಿಗೆ 9 ವರ್ಷಗಳ ಕೊಯಿಲು ಪೂರ್ಣಗೊಂಡಿರುತ್ತದೆ. ಸರಾಸರಿ ವರ್ಷಕ್ಕೆ 35/40 ಕೆಜಿ ಭತ್ತ ಸಮರ್ಪಣೆ ಮಾಡಲಾಗುತ್ತದೆ. ಇದರಲ್ಲಿ ವಿಶೇಷ ಏನೆಂದರೆ ಶ್ರೀಗುರುಗಳ ಬಿತ್ತನೆ ಇದುವರೆಗೆ ಬೇರೆ ಎಲ್ಲಿಯೂ ನಡೆದಿಲ್ಲ. ಕುಕ್ಕಿನಕಟ್ಟೆ ಮನೆಯಲ್ಲಿ ಮಾತ್ರ ಅನುಗ್ರಹಿಸಲ್ಪಟಿದೆ. ಸ್ವತಃ ಮನೆಯವರೇ ಮಾಡುತ್ತಿರುವ ಶ್ರೀರಾಮ ಸೇವೆಯಿದು.