ಭಾದ್ರಪದ ಮಾಸದ ಶುಕ್ಲ ಪೂರ್ಣಿಮಾ ತಿಥಿಯಂದು ದಿನಾಂಕ 7-9-25 ರವಿವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ಭಾರತದಾದ್ಯಂತ ಗೋಚರವಿರುವುದರಿಂದ ಗ್ರಹಣಾಚರಣೆ ಇದೆ.
ಭೋಜನವನ್ನು ಎಲ್ಲರೂ ಮಧ್ಯಾಹ್ನ 12.30 ರ ಒಳಗಾಗಿ ಮಾಡಬೇಕು, ನಂತರ ಭೋಜನ ನಿಶಿದ್ಧ
ವೃದ್ಧರು,ಮಕ್ಕಳು, ಗರ್ಭಿಣಿಯರು, ಅಶಕ್ತರು, ರೋಗಿಗಳು ಸಾಯಂಕಾಲ 4.30 ರ ಒಳಗೆ ಭೋಜನ ಮಾಡಬೇಕು
ಪೌರ್ಣಿಮೆ ಶ್ರಾದ್ಧಾದಿಗಳನ್ನು ಮಾಡುವವರು ಉಪವಾಸವಿದ್ದು ಮರುದಿನಮಾಡುವುದು
ಗ್ರಹಣ ಸ್ಪರ್ಶ ರಾತ್ರಿ ಗಂಟೆ 9.57
ಸಮ್ಮೀಲನ ಕಾಲ ರಾತ್ರಿ ಗಂಟೆ 11.01
ಗ್ರಹಣ ಮಧ್ಯ ಕಾಲ ರಾತ್ರಿ ಗಂಟೆ 11.42
ಗ್ರಹಣ ಉನ್ಮೀಲನ ಕಾಲ ರಾತ್ರಿ ಗಂಟೆ 12.23
ಗ್ರಹಣ ಮೋಕ್ಷ ಕಾಲ ರಾತ್ರಿ ಗಂಟೆ 1.27
ಆದ್ಯಂತ ಪುಣ್ಯ ಕಾಲ 3.30
ಗ್ರಹಣ ಸ್ಪರ್ಶ ಆದ ನಂತರ ಸಚೈಲಸ್ನಾನ, ಮಧ್ಯದಲ್ಲಿ ಪೂಜೆ,ಹೋಮ,ಜಪಾನುಷ್ಠಿನಗಳನ್ನು ಮಾಡಬೇಕು.
ಗ್ರಹಣ ಬಿಡುವ ಸಂದರ್ಭದಲ್ಲಿ ದಾನ ಕೊಡಬೇಕು
ಬಿಟ್ಟಮೇಲೆ ಪುನಃ ಸ್ನಾನ ಮಾಡಬೇಕು
ಜನನ ಮರಣ ಅಶೌಚವಿದ್ದರೂಸಹ ಗ್ರಹಣ ನಿಮಿತ್ತ ಸ್ನಾನಾದಿಗಳನ್ನು ಮಾಡಬೇಕು
ಗ್ರಹಣವು ಶತಭಿಷಾ ನಕ್ಷತ್ರ ಕುಂಭ ರಾಶಿಯಲ್ಲಿ ಆರಂಭವಾಗಿ ಪೂರ್ವಾಭಾದ್ರ ನಕ್ಷತ್ರ ಕುಂಭ ರಾಶಿಯಲ್ಲಿ ಮೋಕ್ಷವಾಗುವುದು
ಮೇಷ,ಕನ್ಯಾ,ವೃಷಭ,ಧನು ರಾಶಿಯವರಿಗೆ ಶುಭ ಫಲ
ಮಿಥುನ,ಸಿಂಹ,ತುಲಾ,ಮಕರ ರಾಶಿಯವರಿಗೆ ಮಿಶ್ರ ಫಲ
ಕುಂಭ, ಮೀನ, ಕರ್ಕಾಟಕ, ವೃಶ್ಚಿಕ ರಾಶಿಯವರಿಗೆ ಅಶುಭಫಲ
ದೋಷ ಇರುವವರು ಬೆಳ್ಳಿ ಯ ಚಂದ್ರ ಬಿಂಬ ಮತ್ತು ನಾಗಬಿಂಬ, ಎಳ್ಳು,ವಸ್ತ್ರ ಸಹಿತ ದಾನ ಮಾಡಬೇಕು
ಗ್ರಹಣಕಾಲದಲ್ಲಿ ಶೌಚ,ಅಭ್ಯಂಗ,ನಿದ್ರೆ,ಆಹಾರಸೇವನೆ ಮೊದಲಾದವು ಮಾಡಬಾರದು
ಲೇಖನ: ಪ್ರಣೀತ ವೆಂಕಟೇಶ ಶರ್ಮಾ