‘ಹಾಸಿಗೆ ಇಪ್ಪಷ್ಟೇ ಕಾಲು ನೀಡೆಕು ‘ ಹೇಳುವ ಗಾದೆ ನಮಗೆಲ್ಲ ಗೊಂತಿದ್ದು. ನಮ್ಮ ಮನೆಗಳ ಒಂದು ಶಿಸ್ತಿನ ಬದುಕಿನ ಸುರುವಾಣ ಮೆಟ್ಲು ಅದು. ಮದಲಿಂಗೆ ಮನೆಯ ಹಿರಿಯರು ಮಾತಾಡುಗ ಅದೆಷ್ಟು ಗಾದೆಗೊ, ನುಡಿಕಟ್ಟುಗಳ ಹೇಳುಗು. ಈಗ ಹಾಂಗೆ ಮಾತಾಡುವವು ಕಮ್ಮಿಯಾಗಿ ನವಗೆ ಜೀವನದ ಪಾಠಂಗಳ ಹೇಳಿ ಕೊಡುವವು ಕಮ್ಮಿ ಆಯಿದವು
ನಾವೀಗ ಹಾಸಿಗೆ ಇಪ್ಪಷ್ಟೇ ಕಾಲು ನೀಡೆಕು ‘ ಹೇಳುವ ವಿಶಯಲ್ಲಿ ಮಾತಾಡುವ°. ಮದಲಿಂಗೆಲ್ಲ ನಮ್ಮ ಸಮಾಜಲ್ಲಿ ತುಂಬಾ ಸರಳವಾಗಿ ಬದ್ಕುವವೇ ಇದ್ದದು. ನವಗೆ ಎಷ್ಟು ಸಂಪಾದನೆ ಇದ್ದೋ ಅದರ ನೋಡಿ ಹದಾಕೆ ಖರ್ಚು ಮಾಡೆಕು ಹೇಳಿ ಹಿರಿಯರು ಹೇಳುಗು.
ನಮ್ಮ ಬಾಲ್ಯವ ಒಂದರಿ ನೆಂಪು ಮಾಡಿದರೆ ನಮ್ಮ ಹಿರಿಯರು ಪ್ರತಿಯೊಂದನ್ನು ಹೆಂಗೆ ಹಿತಮಿತವಾಗಿ ಜಾಗ್ರತೆಂದ ಮುಗಿಶಿಂಡಿತ್ತಿದ್ದವು ಹೇಳಿ ನೆಂಪಕ್ಕು. ಹೆಜ್ಜೆ ಮಡುಗಲೆ ಅಕ್ಕಿ ತೊಳದ ನೀರಿನ ಸಾನು ದನಗೊಕ್ಕೆ ಕೊಡ್ಲಕ್ಕು ಹೇಳಿ ಅದರ ಅಂತೇ ಚೆಲ್ಲದ್ದೆ ತೆಗದು ಮಡುಗ್ಗು. ತೋಟಲ್ಲಿ ಬಿದ್ದ ಒಂದು ಹಾಳೆಯ ಕೂಡಾ ಹಾಳು ಮಾಡದ್ದಷ್ಟು ಜಾಗ್ರತೆ ನಮ್ಮ ಹಿರಿಯರಿಂಗೆ ಇತ್ತಿದ್ದು.
ಪೈಸಿನ ವಿಶಯಲ್ಲೂ ಅವು ಅಷ್ಟೇ ಜಾಗ್ರತೆ ಮಾಡುಗು. ಅತೀ ಅಗತ್ಯ ಇಲ್ಲದ್ದೆ ಯೇವದೇ ಸಾಮಾನು ತೆಗೆಯವು. ಮಿತವ್ಯಯ ಬದುಕಿಂಗೆ ಆದರ್ಶವಾಗಿದ್ದತ್ತು. ಅತಿವೃಷ್ಟಿ, ಅನಾವೃಷ್ಟಿ, ಕೊಳೆರೋಗ ಎಂತ ಬಂದರೂ ತಡಕ್ಕೊಂಬ ಮಾನಸಿಕ ದೃಢತೆ ಹಿರಿಯರಿಂಗೆ ಇಪ್ಪಲೆ ಕಾರಣ ಅವರ ಈ ಮುಂದಾಲೋಚನೆ. ಪೈಸೆ ಇದ್ದರೂ, ಆಸ್ತಿ ಇದ್ದರೂ ಆ ಸಂಪತ್ತಿನ ಅಭಿವೃದ್ಧಿ ಮಾಡ್ಲೆ ನೋಡುಗಷ್ಟೆ ಹೊರತು ಅನಗತ್ಯವಾಗಿ ಒಂದು ಪೈಸೆ ಖರ್ಚು ಮಾಡವು.
ನೆರೆಕರೆಯವ° ಹೊಸ ಕಾರು ತೆಗದ° ಹೇಳಿ ಈಚಮನೆಯವ° ರಜವೂ ತಲೆಬೆಶಿ ಮಾಡ°. ಎಂತಾ ಹೇಳಿದರೆ ಅವನ ಮನೆಯ ಶಿಸ್ತಿನ ಕ್ರಮವ ಅವ° ಅನುಸರಿಸುಗ ಇನ್ನೊಬ್ಬರ ಕಂಡು ಹೊಟ್ಟೆಕಿಚ್ಚು ಪಡುವ ಅಭ್ಯಾಸ ಅವಕ್ಕೆ ಇರ್ತಿಲ್ಲೆ. ಮನೆಲಿ ಅನುಪ್ಪತ್ಯ ಮಾಡುಗಲೂ ಮಿತಿ ಮೀರಿ ಖರ್ಚು ಮಾಡುವ, ಆಡಂಬರದ ಪ್ರದರ್ಶನ ಮಾಡುವ ಕ್ರಮ ನಮ್ಮ ಹಿರಿಯರಿ೦ಗೆ ಇತ್ತಿದ್ದಿಲ್ಲೆ. ಐವತ್ತು ಜನಕ್ಕೆ ಹೇಳಿಕೆ ಹೇಳುವ ತಾಕತ್ತಿಪ್ಪವ° ಸಾಲ ಮಾಡಿ ಐನೂರು ಜೆನಕ್ಕೆ ಹೇಳಿಕೆ ಹೇಳಿಂಡಿತ್ತಿದ್ದಾ° ಇಲ್ಲೆ.
ಈಗ ಕಾಲ ಬದಲಿದ್ದು. ಈಗಾಣ ಪೇಟೆ ಸಂಸ್ಕೃತಿ ನಮ್ಮ ಜೀವನದ ಭಾಗವೇ ಆಗಿ ಹೋದಿಪ್ಪಗ ‘ ಹಾಸಿಗೆ ಇಪ್ಪಷ್ಟು ಕಾಲು ನೀಡು ‘ ಹೇಳುವ ಬದಲು ಸಾಲ ಮಾಡಿಯಾದರೂ ರಾಜನಾಂಗೆ ಬದ್ಕೆಕು ‘ ಹೇಳುವಲ್ಲಿಗೆ ಎತ್ತಿದ್ದು.
ಈಗಾಣ ಜವ್ವನಿಗರು ಅವರ ಸಂಪಾದನೆಂದಲೂ ಹೆಚ್ಚು ಖರ್ಚು ಮಾಡ್ತವು. ಸಣ್ಣ ಸಂಬಳದ ಕೆಲಸ ಆದರೂ, ಕೃಷಿಲಿ ಹುಟ್ಟಾವಳಿ ಕಮ್ಮಿ ಇದ್ದರೂ, ಮಿತಿ ಮೀರಿ ಪೈಸೆಯ ನೀರಿನ ಹಾಂಗೆ ಖರ್ಚು ಮಾಡುವವೇ ಹೆಚ್ಚಿನವುದೆ. ಅಗತ್ಯ ಇದ್ದಾ ಇಲ್ಲೆಯಾಳಿ ನೋಡದ್ದೆ ಅದೇಷ್ಟೋ ಸಾಮಾನುಗಳ ತೆಗವದು ಅಭ್ಯಾಸ ಆಗಿ ಹೋಯಿದು. ಇನ್ನೊಬ್ಬರ ಒಟ್ಟಿಂಗೆ ನಮ್ಮನ್ನೂ ಹೋಲಿಸಿಂಡು ಅವರಿಂದ ನಾವು ಯೇವದರ್ಲೂ ಕಮ್ಮಿಯಿಲ್ಲೇಳಿ ತೋರ್ಸುವ ಗೌಜಿ ನಮ್ಮಲ್ಲಿ ಹೆಚ್ಚುತ್ತಾಯಿದ್ದು.
ಒಬ್ಬ° ದೊಡ್ಡ ಮನೆ ಕಟ್ಟಿದರೆ ಇನ್ನೊಬ್ಬಂಗೆ ಅವನಿಂದಲೂ ದೊಡ್ಡ ಮನೆ ಕಟ್ಸೆಕೂಳಿ ಆಶೆಯಾವ್ತು. ಖರ್ಚು ಮಾಡುವ ತಾಕತ್ತಿಲ್ಲದ್ರೂ ಸಾಲ ಮಾಡಿ ದೊಡ್ಡ ದೊಡ್ಡ ಮನೆ ಕಟ್ಟುವ, ದುಬಾರಿ ವಾಹನ ತೆಗವವರ ಸಂಖ್ಯೆ ಹೆಚ್ಚುತ್ತು.
ಆಟ, ಆಯನ, ಸಿನೆಮಾ ಹೇಳಿ ಹಿಂದೆಮುಂದೆ ನೋಡದ್ದೆ ಹೋವ್ತು.ಸಂತೆ ತಿರುಗಿ ಸುಮಾರು ಸಾಮಾನು ತೆಗೆತ್ತು. ಇನ್ನು ಓನ್ ಲೈನ್ ಲಿ ಸಾಮಾನು ತೆಗವ ವಿಚಾರ ಹೇಳುದೇ ಬೇಡ. ಕಣ್ಣಿಂಗೆ ಚೆಂದ ಕಂಡ ವಸ್ತುಗಳ ಅಗತ್ಯ ಇದ್ದೋ, ಇಲ್ಲೆಯೋ ನೋಡದೆ ತೆಗೆವವೇ ಹೆಚ್ಚಿನವುದೆ. ಆದರೆ ಅಲ್ಲಿಂದ ತೆಗೆದು ತಂದ ಸಾಮಾನುಗಳ ನಾವು ಎಷ್ಟು ಸರ್ತಿ ಉಪಯೋಗ ಮಾಡಿದ್ದು, ಅದರಿಂದ ಎಂತ ಅಗತ್ಯ ಇದ್ದು ಹೇಳಿ ಸಾನು ನಮಗೆ ಎಷ್ಟೋ ಸರ್ತಿ ಗೊಂತಿರ್ತಿಲ್ಲೆ. ಒಟ್ರಾಸಿ ನಮ್ಮ ಕಿಸೆ ಖಾಲಿಯಾದ್ದು ಬಂತು ಹೇಳುವ ಸ್ಥಿತಿ ಅದೆಲ್ಲ.
ಹೀಂಗೆ ಆದಾಯ ಕಮ್ಮಿ ಇದ್ದರೂ, ಅನಗತ್ಯವಾಗಿ ದೊಡ್ಡ ಖರ್ಚು ಮಾಡಿ ಆಡಂಬರಲ್ಲಿ ಮೆರವವಕ್ಕೆ ಫಕ್ಕನೆ ಒಂದು ಸಂಕಷ್ಟ ಬಂದರೆ ಅದರ ತಾಂಗುಲೆಡಿತ್ತಿಲ್ಲೆ. ಅಷ್ಟಪ್ಪಗ ಎಂತ ಮಾಡೆಕೊಳಿ ಅರಡಿತ್ತಿಲ್ಲೆ. ಜೀವನವೇ ಭಾರ ಹೇಳಿ ಆವ್ತು. ಹಾಂಗಾಗಿ ನಾವು ಈ ವಿಶಯಲ್ಲಿ ರಜಾ ಜಾಗ್ರತೆ ಮಾಡ್ಲೇ ಬೇಕು. ನಮ್ಮ ಆದಾಯಕ್ಕೆ ತಕ್ಕ ಹಾಂಗೆ ಖರ್ಚು ಮಾಡುವ ಅಭ್ಯಾಸ ಮಾಡೆಕು. ಅನಗತ್ಯವಾಗಿ ನಾವು ಎಷ್ಟು ಖರ್ಚು ಮಾಡ್ತು ಹೇಳಿ ಗೊಂತಾಯೆಕಾದರೆ ನಮಗೊಂದು ದಿನಚರಿ ಪುಸ್ತಕ ಮಡುಗಿ ಅದರ್ಲಿ ನಮ್ಮ ಸಂಪಾದನೆಯನ್ನೂ, ಖರ್ಚನ್ನು ಬರದು ಮಡುಗಿದರೆ, ಅಗತ್ಯ ಇಲ್ಲದ್ದೆ ನಾವು ಎಷ್ಟು ಪೈಸೆ ಖರ್ಚು ಮಾಡ್ತು ಹೇಳುವ ಲೆಕ್ಕ ಸಿಕ್ಕುತ್ತು. ಹೀಂಗಿದ್ದ ಲೆಕ್ಕಾಚಾರ ಹಾಕಿಯೇ ನಮ್ಮ ಹಿರಿಯರು ನಮಗೆ ಒಂದಿಷ್ಟು ಜಾಗೆ, ಸಂಪತ್ತು ಒಳಿಶಿದ್ದು ಹೇಳಿ ನಮಗೆ ನೆಂಪು ಬೇಕು. ಹಾಂಗಾಗಿ ನಾವುದೆ ಅವರ ದಾರಿಲೇ ನಡವ°. ಆರ್ಥಿಕವಾದ ಶಿಸ್ತು ನಮ್ಮ ಬದ್ಕಿಂಗೆ ಸುರುವಿಂಗೆ ಕಷ್ಟ ಹೇಳಿ ಆದರೂ, ಅದು ಯೇವತ್ತೂ ವ್ಯರ್ಥ ಆಗ. ಅದರಿಂದ ಮುಂದಂಗೆ ಒಳ್ಳೆದಕ್ಕಷ್ಟೆ ಹೇಳುವ ಪಾಠವ ನಾವು ಕಲಿವ°. ನಮ್ಮ ಮಕ್ಕೊಗೂ ಕಲುಶುವ°.
ಪ್ರಸನ್ನಾ ವಿ. ಚೆಕ್ಕೆಮನೆ