“ಶ್ರೀಗುರುಗಳ ಸೇವೆಗಾಗಿ ದೊರಕಿದ ಪುನರ್ಜನ್ಮವಿದು”: ಕಲ್ಪನಾ ತಳವಾಟ

ಮಾತೃತ್ವಮ್

“೧೯೯೯ರಲ್ಲಿ ಶ್ರೀಮಠಕ್ಕೆ ಕುಟುಂಬ ಸಮೇತಳಾಗಿ ಹೋಗಿದ್ದಾಗ ಶ್ರೀ ಸಂಸ್ಥಾನದವರು ‘ಗುರುಸೇವೆ ಮಾಡು’ ಎಂದು ಆಶೀರ್ವಾದ ಮಾಡಿದ್ದರು. ಅಂದಿನಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ೨೦೦೩ ರಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದೆ, ಮುಂದೆ ಆರು ವರ್ಷಗಳ ನಂತರ ಸಿದ್ಧಾಪುರ ಮಂಡಲದ ಮಾತೃಪ್ರಧಾನೆಯಾದೆ, ಮುಂದಿನ ಮೂರು ವರ್ಷಗಳ ಕಾಲ ಮಹಾಮಂಡಲದ ಮಾತೃಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ್ದೇನೆ” ಎನ್ನುವ ಕಲ್ಪನಾ ತಳವಾಟ ಇವರು ಸಿದ್ಧಾಪುರ ಮಂಡಲದ ತಾಳಗುಪ್ಪ ವಲಯದ ಸತೀಶ್ ತಳವಾಟ ಅವರ ಪತ್ನಿ. ಪ್ರಸ್ತುತ ಮಾತೃತ್ವಮ್ ನ ಗೃಹ ಲಕ್ಷ್ಮಿ ಯಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿಯ ಜಿಲ್ಲಾ ಕಾರ್ಯದರ್ಶಿಯಾಗಿಯೂ ಇರುವ ಕಲ್ಪನಾ ಅವರು ಎರಡು ವರ್ಷಗಳಿಗೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸಿದವರು. ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದ ಕಲ್ಪನಾ ಅವರು ಹಲವಾರು ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ದೇಶೀಯ ಹಸುಗಳ ಮಹತ್ವದ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ನೀಡುವ ಮೂಲಕ ಸಮಾಜದ ಜನರಿಗೆ ದೇಶೀ ಗೋತಳಿಯ ವಿಶೇಷತೆಗಳನ್ನು ತಿಳಿಯ ಪಡಿಸಿದವರು. ತಮ್ಮ ಜೀವನದಲ್ಲಿ ನಡೆದ ಒಂದು ವಿಶಿಷ್ಟ ಘಟನೆ ಹಾಗೂ ಶ್ರೀಗುರುಗಳ ಕೃಪೆಯಿಂದ ಮರುಜನ್ಮ ಪಡೆದಂತೆ ತಾನು ಅದರಿಂದ ಪಾರಾದ ಘಟನೆಯನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ.

“ಕೆಲವು ವರ್ಷಗಳ ಹಿಂದೆ ಬಾನ್ಕುಳಿ‌ಮಠಕ್ಕೆ ಶಂಕರ ಪಂಚಮಿಗೆ ಹೋಗುವಾಗ ಬೈಕ್ ಅಪಘಾತವಾಗಿ ಕೆಳಗೆ ಉರುಳಿಬಿದ್ದೆ, ಬೀಳುವಾಗ ಬಾಯಿಯಿಂದ ಅರಿವಿಲ್ಲದೆ ಬಂದ ನುಡಿ ” ಗುರುವೇ…..” ಅಂತ. ಆ ಕ್ಷಣವೇ ಶ್ರೀಸಂಸ್ಥಾನದವರ ವಾಹನ ರಾಮದೂತ ಅಲ್ಲಿಗೆ ಬಂತು. ಅದರಲ್ಲಿ ಇದ್ದವರು ಶ್ರೀ ಪರಿವಾರದ ‘ ಗುರು’. ”
ಆ ದಿನ ಶ್ರೀಗುರುಗಳ ಅನುಗ್ರಹದಿಂದ ನನಗೆ ಪುನರ್ಜನ್ಮ ದೊರಕಿತು. ಈ ಬದುಕು ಶ್ರೀ ಸಂಸ್ಥಾನದವರ ಕೃಪೆಯಿಂದ ದೊರಕಿದ ಕಾರಣ ಇನ್ನು ಮುಂದಿನ ಬದುಕು ಶ್ರೀಮಠದ ಸೇವೆಗೆ ಮೀಸಲು ಎಂದು ಕೊಂಡಿದ್ದೇನೆ ಎಂದು ಕಲ್ಪನಾ ಭಾವಪೂರ್ಣವಾಗಿ ನುಡಿಯುತ್ತಾರೆ.

ಶ್ರೀಮಠದ ಸೇವೆಗೆ ಮನೆಯವರ ಸಂಪೂರ್ಣ ಸಹಕಾರವಿದೆ ಎನ್ನುವ ಕಲ್ಪನಾ ಅವರು ತಮ್ಮ ಬಂಧುಗಳ ಸಹಕಾರದಿಂದ ಗುರಿಯನ್ನು ತಲುಪಿದ್ದಾರೆ. ವಿ.ವಿ.ವಿ.ಗಾಗಿಯೂ ತಮ್ಮ ಸೇವೆ ಸಲ್ಲಿಸುತ್ತಿರುವ ಇವರು ತಾವು ಗುರಿ ತಲುಪಿದ ನಂತರ ಇತರ ಮಾತೆಯರು ಗುರಿ ಸೇರಲು ಸಹಕಾರ ನೀಡುತ್ತಿದ್ದಾರೆ.
ಗೋವುಗಳ ಮೇಲೆ ವಿಪರೀತ ಪ್ರೀತಿ ಹೊಂದಿರುವ ಇವರ ಮನೆಯಲ್ಲಿಯೂ ಮೂರು ಹಸುಗಳಿವೆ. ತಮಗೆ ಶ್ರೀಗುರು ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಂಪೂರ್ಣ ಮಾರ್ಗದರ್ಶನ ನೀಡಿದವರು ಬೇರ್ಕಡವು ಈಶ್ವರಿ ಅಕ್ಕ. ಅವರ ಸಹಕಾರ ಎಂದೂ ಮರೆಯಲಾರದು ಎನ್ನುವ ಕಲ್ಪನಾ ಅವರಿಗೆ ತನಗೆ ಸಾಧ್ಯವಿರುವಷ್ಟು ಕಾಲ, ಸಾಧ್ಯವಾದ ರೀತಿಯಲ್ಲಿ ಶ್ರೀಮಠದ ಸೇವೆ, ಗೋಸೇವೆಗಳನ್ನು ಮುಂದುವರಿಸಬೇಕೆಂಬ ಹಂಬಲವಿದೆ.

Author Details


Srimukha

Leave a Reply

Your email address will not be published. Required fields are marked *