” ಗವ್ಯ ವಸ್ತುಗಳ ಬಳಕೆಯಿಂದ ಗೋ ವಂಶ ಸಮೃದ್ಧಿ ” : ಕಮಲಾಕ್ಷಿ ಚಂದ್ರಶೇಖರ್ , ಮಕ್ಕಿಮನೆ

ಮಾತೃತ್ವಮ್

 

” ಭಾರತೀಯ ಗೋತಳಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ತಾಯಿಯಂತೆ ಹಾಲಿತ್ತು ಸಲಹುವ ಗೋವಿನ ಉತ್ಪನ್ನಗಳನ್ನು ನಿತ್ಯ ಜೀವನದಲ್ಲಿ ಬಳಸಿದರೆ ನಮ್ಮ ಬದುಕು ಹಸನಾಗುವ ಜೊತೆಗೆ ಗೋವಂಶದ ಅಭಿವೃದ್ಧಿಯೂ ಆಗಬಹುದು ” ಎಂದವರು ಮೂಲತಃ ಕೊಡಗು ಚೈಯಂಡಾಣೆಯ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ ಭುವನಗಿರಿ ವಲಯ ನಿವಾಸಿಗಳಾಗಿರುವ ಚಂದ್ರಶೇಖರ ಮಕ್ಕಿಮನೆ ಅವರ ಪತ್ನಿ ಕಮಲಾಕ್ಷಿ.

ಕೊಡಗಿನ‌ ಮಂಜಯ್ಯ ,ಜಾನಕಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಗವ್ಯೋತ್ಪನ್ನಗಳ ಬಳಕೆಯಿತ್ತು. ಗೋವಿನ ಐದು ವಿಧದ ಉತ್ಪನ್ನಗಳನ್ನು ಬಳಸಿ ತಯಾರಿಸುತ್ತಿದ್ದ ಪಂಚಗವ್ಯಕ್ಕೆ ಅತ್ಯಂತ ಮಹತ್ವವಿದೆ. ಸನಾತನ ಧರ್ಮದಲ್ಲೇ ಪೂಜನೀಯ ಸ್ಥಾನ ಹೊಂದಿರುವ ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ” ಎನ್ನುವ ಕಮಲಾಕ್ಷಿ ನಿವೃತ್ತ ಅಧ್ಯಾಪಿಕೆ.

ಸುಮಾರು ಎರಡೂವರೆ ದಶಕಗಳಿಂದಲೂ ಶ್ರೀಮಠದ ನಿಕಟವರ್ತಿಗಳಾಗಿರುವ ಇವರ ಕುಟುಂಬದ ಸದಸ್ಯರೆಲ್ಲರೂ ಶ್ರೀಮಠದ ಸೇವೆಯಲ್ಲಿ ಆಸಕ್ತಿಹೊಂದಿದವರು.

” ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವಳು ನಾನು. ತವರುಮನೆಯಲ್ಲಿ ಹಟ್ಟಿ ತುಂಬ ಹಸುಗಳಿದ್ದವು. ಮಾತೃತ್ವಮ್ ಯೋಜನೆಗೆ ಸೇರಲು ಇದುವೇ ಮೂಲ ಪ್ರೇರಣೆ. ಗೋಮಾತೆಯ ಸೇವೆಗೆ ಅನೇಕ ಮಂದಿ ಸಹಕಾರ ನೀಡಿದ್ದಾರೆ. ಶ್ರೀಗುರುಗಳ ಕೃಪೆಯಿಂದ ಲಕ್ಷ ಬಾಗಿನವನ್ನು ಸ್ವೀಕರಿಸುವ ಸೌಭಾಗ್ಯವೂ ದೊರಕಿದೆ ” ಎನ್ನುವ ಇವರಿಗೆ ಇನ್ನು ಮುಂದೆಯೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರಬೇಕೆಂಬ ಅಭಿಲಾಷೆಯಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *