ಹಿಂದೆ ಯು.ಎಸ್. ಎ. ಯಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯ ‘ ಬಾಸ್’ ಗೆ ಪೋನ್ ಮಾಡಿ ಮಾತೃತ್ವಮ್ ಯೋಜನೆಯ ಬಗ್ಗೆ ಮಾಹಿತಿ ನೀಡಿದಾಗ ಅನ್ಯ ಮತದವರಾದ ಅವರು ಗೋ ಸಂರಕ್ಷಣೆಯ ಮಹತ್ವವನ್ನು ಮನಗಂಡು ಭಾರತೀಯ ಗೋ ತಳಿಗಳ ರಕ್ಷಣೆಯ ಬಗ್ಗೆ ಅತೀವ ಕಾಳಜಿ ವ್ಯಕ್ತ ಪಡಿಸಿ ೫೦೦ ಡಾಲರ್ ಗಳನ್ನು ಸಂತೋಷದಿಂದ ನೀಡಿದರು. ಇದು ನಿಧಿ ಹೆಗಡೆಯ ಮಾಸದ ಮಾತೆಯ ಅಭಿಯಾನಕ್ಕೆ ಭರವಸೆ ತುಂಬಿತು. ಮುಂದೆ ಸಹಪಾಠಿಗಳು, ಸ್ನೇಹಿತರು, ನೆಂಟರು …..ಹೀಗೇ ಹತ್ತಾರು ಮಂದಿಯ ಸಹಕಾರ ದೊರಕಿದಾಗ ಒಂದು ವರ್ಷದ ಗುರಿ ತಲುಪುವುದು ಬಹಳ ಸುಲಭವಾಯಿತು.
ಶ್ರೀ ಮಠದ ಪ್ರಸ್ತುತಿ ವಿಭಾಗದಲ್ಲಿ ಸೇವೆ ಸಲ್ಲಿಸುವ ನಿಧಿ ಹೆಗಡೆ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿ ಪ್ರಸ್ತುತ ಬೆಂಗಳೂರಿನ ಗಿರಿ ನಗರದಲ್ಲಿ ವಾಸಿಸುತ್ತಿರುವವರು.
” ವಾರದ ರಜಾ ದಿನಗಳಲ್ಲಿ ಗಿರಿನಗರದ ಶ್ರೀ ರಾಮಾಶ್ರಮಕ್ಕೆ ಭೇಟಿ ನೀಡುವುದೇ ಮನಸ್ಸಿಗೆ ಇಷ್ಟವಾಗುವ ಕಾರ್ಯ” ಎನ್ನುವ ನಿಧಿಗೆ ದಿನದ ಬಿಡುವಿನ ವೇಳೆಗಳಲ್ಲಿ ಶ್ರೀ ಗುರುಗಳ ಪ್ರವಚನ ಕೇಳುವುದೇ ನೆಚ್ಚಿನ ಹವ್ಯಾಸ.
” ಮಾಸದ ಮಾತೆಯಾಗಿ ಒಂದು ವರ್ಷದ ಗುರಿಯನ್ನು ಬಹಳ ಸುಲಭವಾಗಿ ಮುಟ್ಟಿದೆ. ಇನ್ನಷ್ಟು ಸಹಕಾರ ನೀಡಲು ಗೋ ಪ್ರೇಮಿಗಳು ಮುಂದೆ ಬಂದಿದ್ದಾರೆ. ಅವರು ನೀಡುವ ಹಣದೊಂದಿಗೆ ನನ್ನದೂ ಕಿಂಚಿತ್ ಕಾಣಿಕೆ ಸೇರಿಸಿ ಇನ್ನೊಂದು ವರ್ಷದ ಗುರಿ ತಲುಪಬೇಕು. ಗುರಿ ತಲುಪುವ ಭರವಸೆಯೂ ಇದೆ” ಎನ್ನುತ್ತಾರೆ ನಿಧಿ ಹೆಗಡೆ.
ಮಾಸದ ಮಾತೆಯಾಗಿ ಸೇವೆ ಮಾಡಲು ಸೇರುವ ಮೊದಲು ಮನದಲ್ಲಿ ಇದ್ದ ಅಳುಕು ಅವರಿಗೆ ಈಗ ಇಲ್ಲ. ಸಮಾಜ ಭಾರತೀಯ ಗೋ ತಳಿಗಳ ವಿಶೇಷತೆಯನ್ನು ಅರ್ಥ ಮಾಡಿಕೊಳ್ಳುತ್ತಿದೆ ಎಂಬುದು ಅರಿವಾಗಿದೆ.
” ತಾಯ್ತಂದೆಯರ, ಅಣ್ಣನ ಪೂರ್ಣ ಬೆಂಬಲ ನನ್ನ ಈ ಕಾರ್ಯಕ್ಕೆ ದೊರಕಿದೆ. ಅವರ ಪ್ರೋತ್ಸಾಹದಿಂದ ನನಗೆ ಇನ್ನಷ್ಟು ಗೋ ಸೇವೆ ಮಾಡುವ ಸ್ಪೂರ್ತಿ ಮೂಡಿತು” ಎಂದು ಸಂತಸದಿಂದ ನುಡಿಯುವ ನಿಧಿ ಹೆಗಡೆಯ ಗೋ ಸೇವೆಯ ಕನಸು ನನಸಾಗುವುದರೊಂದಿಗೆ ,ಅವರ ಯಶಸ್ಸು ಇತರ ಮಾಸದ ಮಾತೆಯರಿಗೆ ಪ್ರೇರಣೆಯಾಗಲಿ.