” ಶ್ರೀ ಗುರುಕೃಪೆಯಿಂದ ನಿರಂತರ ಸೇವಾಭಾಗ್ಯ ದೊರಕಿದೆ ” : ಪ್ರತಿಮಾ ಭಟ್ಟ

ಮಾತೃತ್ವಮ್

 

” ಎರಡೂವರೆ ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ತವರುಮನೆಯಲ್ಲಿರುವಾಗಲೇ ಶ್ರೀಮಠದ ಸಂಪರ್ಕವಿತ್ತು. ಈಗ ಸೇವಾ ಭಾಗ್ಯವೂ ದೊರಕಿದೆ. ಬದುಕಿನಲ್ಲಿ ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ ” ಎಂಬ ನುಡಿಗಳು ಮೂಲತಃ ಸಿದ್ಧಾಪುರ ಮಂಡಲದವರಾದ ಪ್ರಸ್ತುತ ದಕ್ಷಿಣ ಬೆಂಗಳೂರು ಮಂಡಲ , ಬನಶಂಕರಿ ವಲಯ ನಿವಾಸಿಗಳಾಗಿರುವ ಗುಡ್ಡೆಕಣ ರಾಧಾಕೃಷ್ಣ ಹೆಗಡೆ ಅವರ ಪತ್ನಿ ಪ್ರತಿಮಾ ಭಟ್ ಅವರದ್ದು.

ಸಿದ್ಧಾಪುರ ತಾಲೂಕು ಮುಸವಳ್ಳಿ ಗ್ರಾಮದ ಕಲಗಾರು ಮಹಾಬಲೇಶ್ವರ ಭಟ್ , ಸಾವಿತ್ರಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಪೂರ್ಣಪ್ರಮಾಣದ ದಾನಿಯಾಗಿ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುವ ಇವರು ‘ ಔಷಧ ವಿಮುಕ್ತ ಜೀವನ ‘ ( ಮೆಡಿಸಿನ್ ಫ್ರೀ)ದ ಪ್ರಚಾರಕರಾಗಿ ಅನೇಕ ಮಂದಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ಶ್ರೀಮಠದ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

” ದಾನ ನೀಡಿದ ವಿಷಯ, ಸೇವೆ ಮಾಡಿದ ವಿವರಗಳನ್ನು ಹೇಳಬಾರದು, ಆದರೂ ನಮ್ಮ ಕೊಡುಗೆ ಇತರರಿಗೆ ಮಾದರಿಯಾಗಲಿ ಎಂಬ ಕಾರಣಕ್ಕಾಗಿ ಹೇಳುತ್ತಿದ್ದೇನೆ. ಗೋಸ್ವರ್ಗಕ್ಕೆ ಕಾಣಿಕೆ ನೀಡುವ ಅವಕಾಶ ದೊರಕಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ‘ ಗೋವಿಗಾಗಿ ಮೇವು ‘ ಕಾರ್ಯಕ್ರಮದ ಸಂದರ್ಭದಲ್ಲಿ ದ್ವಿಚಕ್ರ ವಾಹನವೊಂದನ್ನು ಕೊಡುವ ಭಾಗ್ಯ ಸಿಕ್ಕಿದೆ. ಮೂಲ ಮಠ ಹಾಗೂ ಶ್ರೀಮಠದ ವಿವಿಧ ಯೋಜನೆಗಳಿಗೆ ನಮ್ಮಿಂದ ಸಾಧ್ಯವಾದಷ್ಟು ಕಾಣಿಕೆಗಳನ್ನು ಸಮರ್ಪಿಸುತ್ತಿದ್ದೇವೆ.
ವರ್ಷಕ್ಕೊಮ್ಮೆ ಶ್ರೀಗುರುಗಳ ಪಾದಪೂಜೆ, ಭಿಕ್ಷಾಸೇವೆ ನಡೆಸಲೂ ಸಾಧ್ಯವಾಗುತ್ತಿದೆ. ಇದೆಲ್ಲವೂ ಶ್ರೀಗುರುಗಳ ಅನುಗ್ರಹದಿಂದ ಸಾಧ್ಯವಾದುದೇ ವಿನಃ ನಮ್ಮದೇನೂ ಇಲ್ಲ. ಶ್ರೀಗುರುಗಳ ಕಾರುಣ್ಯದಿಂದ ಬದುಕು ಹಸನಾಗಿದೆ ” ಎನ್ನುವ ಪ್ರತಿಮಾ ಭಟ್ ಶ್ರೀಮಠದ ವಿವಿಧ ಯೋಜನೆಗಳಲ್ಲಿ ಇನ್ನಷ್ಟು ತೊಡಗಿಸಿಕೊಂಡು ತಮ್ಮ ಸೇವೆಯನ್ನು ಮುಂದುವರಿಸುವ ಇಚ್ಛೆ ಹೊಂದಿದ್ದಾರೆ. ಇವರ ಎಲ್ಲಾ ಕಾರ್ಯಗಳಿಗೂ ಮನೆಯವರ ಸಂಪೂರ್ಣ ಸಹಕಾರವಿದೆ .

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *