ಯಕ್ಷ ಋಷಿ ದಿ. ಹೊಸ್ತೋಟ ಮಂಜುನಾಥ ಭಾಗವತರಿಗೆ ಶ್ರದ್ಧಾಂಜಲಿ ಸಲ್ಲಿಸುವ “ಭಾಗವತರಿಗೆ ಭಾವಾರ್ಪಣ” ಕಾರ್ಯಕ್ರಮ ಫೆಬ್ರವರಿ 01 ರಂದು ಮಧ್ಯಾಹ್ನ 3.30 ರಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಲಿದೆ.
ಭಾಗವತರ ವ್ಯಕ್ತಿತ್ವ ದರ್ಶನ ಹಾಗೂ ನಾಡಿನ ಗಣ್ಯರು, ವಿದ್ವಾಂಸರು ಹಾಗೂ ಕಲಾವಿದರ ಸಂವಾದ ಮುಂತಾದ ವಿಶೇಷ “ಗುಣ ~ ಗಾನ ~ ಗೌರವ” ಕಾರ್ಯಕ್ರಮಗಳು ನಡೆಯಲಿದ್ದು, ಎಂ.ಕೆ ಭಾಸ್ಕರ್ ರಾವ್ ಹಾಗೂ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ ಎಂ. ಎ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂವಾದದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ವಸಂತ ಭಾರದ್ವಾಜ್, ನಾರಾಯಣ ಯಾಜಿ, ಡಾ. ಶ್ರೀಪಾದ್ ಹೆಗಡೆ, ಗೀತಾ ಸಾಲ್ಕಣಿ, ಪ್ರೊ ಎಸ್ ಜಿ ಭಟ್, ಸುಬ್ರಾಯ ಕೆರೆಕೊಪ್ಪ, ಪರಮೇಶ್ವರ ಭಟ್, ಶ್ರೀಪಾದ ಜೋಶಿ ಭಾಗವಹಿಸಿ ಭಾಗವತರಿಗೆ ಭಾವಾರ್ಪಣೆ ಮಾಡಲಿದ್ದಾರೆ.
‘ಶ್ರೀರಾಮ ಮಹಿಮೆ’ ತಾಳಮದ್ದಲೆ ಪ್ರಸಂಗ ನಡೆಯಲಿದ್ದು, ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ಸಂಪ ಲಕ್ಷ್ಮೀನಾರಾಯಣ ಹಾಗೂ ನಾರಾಯಣ ಹೆಬ್ಬಾರ್ ಇರಲಿದ್ದು, ಅರ್ಥದಾರಿಗಳಾಗಿ ಎಂ ಎ ಹೆಗಡೆ, ವಿದ್ವಾನ್ ಜಗದೀಶ್ ಶರ್ಮಾ, ಎಂ ಎನ್ ಹೆಗಡೆ, ಹುಕ್ಲಮಕ್ಕಿ ಶ್ರೀಪಾದ ಹೆಗಡೆ, ವಿದ್ವಾನ್ ಪ್ರಸನ್ನ , ಶಶಾಂಕ ಅರ್ನಾಡಿ ಮುಂತಾದ ಹಿರಿಯರು ಭಾಗವಹಿಸಿ ಭಾಗವತರಿಗೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ.
ಯಕ್ಷ ಋಷಿ ಭಾಗವತರಿಗೆ ಭಾವಾರ್ಪಣೆ ಮಾಡುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹೊಸ್ತೋಟ ಭಾಗವತರ ಎಲ್ಲಾ ಅಭಿಮಾನಿಗಳು ಭಾಗವಹಿಸಿ, ಅವರ ಆತ್ಮಕ್ಕೆ ಶಾಂತಿ ಕೋರಬೇಕಾಗಿ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್ ಸಂಪ, ನಿರ್ದೇಶಕ ಮೋಹನ ಭಾಸ್ಕರ ಹೆಗಡೆ ಹಾಗೂ ಹವ್ಯಕ ಯಕ್ಷಗಾನ ವೇದಿಕೆಯ ಸಂಚಾಲಕಿ ಡಾ. ಮಮತಾ ಜಿ ಕೋರಿದ್ದಾರೆ.