ಮಾತು~ಮುತ್ತು : ಒಂದು ಮಾತು ಸಾಕು – ಸ್ಫೂರ್ತಿ ತುಂಬಲು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಒಮ್ಮೆ ಅದಾವುದೋ ವಿಷಯವಾಗಿ ಕಂಪನಿಯ ವರಿಷ್ಠರೊಂದಿಗೆ ವಿರಸ ಉಂಟಾಗಿ, ಅದು ವಿಕೋಪಕ್ಕೆ ಹೋಗಿ, ಅವನನ್ನು ಕಂಪನಿಯಿಂದ ತೆಗೆದು ಹಾಕುತ್ತಾರೆ.

 

ಅವನು ತುಂಬ ಬೇಸರದಿಂದ ಮನೆಗೆ ಬರುತ್ತಾನೆ. ನಡೆದ ವಿಷಯ ಕೇಳಿ ಅವನ ಹೆಂಡತಿ-
“ಏನೂ ಚಿಂತಿಸಬೇಡಿ; ಆಗುವುದೆಲ್ಲ ಒಳ್ಳೆಯದಕ್ಕೆ” ಎನ್ನುತ್ತಾಳೆ.
ಆಗ ಅವನು-
“ಅದು ಸರಿ; ಈಗ ಜೀವನಕ್ಕೇನು ಮಾಡೋಣ?” ಎನ್ನುತ್ತಾನೆ.
ಆಗ ಅವಳು ಅಡಿಗೆ ಮನೆಗೆ ಹೋಗಿ ಡಬ್ಬಿಯಲ್ಲಿ ತಾನು ಸಂಗ್ರಹಿಸಿದ್ದ ಹಣವನ್ನು ಅವನಿಗೆ ಕೊಟ್ಟು-
“ಇದರಿಂದ ಜೀವನ ನಡೆಸುವೆವು. ನಿಮಗೆ ಹೇಗೂ ಲೇಖನಗಳನ್ನು ಬರೆಯುವ ಹವ್ಯಾಸವಿದೆ; ಅದನ್ನೇ ಮುಂದುವರಿಸಿ ಒಳ್ಳೆಯ ಪುಸ್ತಕಗಳನ್ನು ಬರೆಯಿರಿ”ಎಂದು ಸ್ಫೂರ್ತಿ ತುಂಬುತ್ತಾಳೆ.

 

ಅವನು ಆ ದೆಶೆಯಲ್ಲಿ ಅಪಾರ ಶ್ರಮವಹಿಸಿ ಅದ್ಭುತ ಎನ್ನುವಂತ ಕಾದಂಬರಿಗಳನ್ನು ಬರೆದು ಲಕ್ಷಾಧೀಶ್ವರನೂ, ಲೋಕವಿಖ್ಯಾತನೂ ಆಗುತ್ತಾನೆ.

 

ಆದ್ದರಿಂದ ಕಷ್ಟದಲ್ಲಿರುವವರಿಗೆ, ಸಂಕಟದಲ್ಲಿರುವವರಿಗೆ ಒಂದೇ ಒಂದು ಸ್ಫ್ಪೂರ್ತಿಯುತ ಮಾತು ಅವರ ಬದುಕನ್ನು ಬದಲಿಸಬಹುದು. ಅಂತಹ ಮಾತನಾಡುವ ವ್ಯಕ್ತಿಗಳು ನಾವಾಗೋಣ.

Author Details


Srimukha

2 thoughts on “ಮಾತು~ಮುತ್ತು : ಒಂದು ಮಾತು ಸಾಕು – ಸ್ಫೂರ್ತಿ ತುಂಬಲು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

Leave a Reply

Your email address will not be published. Required fields are marked *