ಮಾತು~ಮುತ್ತು : ಪ್ರೀತಿಯ ಮಹತ್ತ್ವ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

ಒಬ್ಬ ಯುವಕ ಒಂದು ಯುವತಿಯನ್ನು ತುಂಬ ತುಂಬಾ ಪ್ರೀತಿಸುತ್ತಿದ್ದ. ಅವನ ಈ ಹುಚ್ಚನ್ನು ನೋಡಿ ಅವನ ಸ್ನೇಹಿತರು, ಬಂಧುಗಳು- ‘ಇವನ ಪ್ರೀತಿ ತಿರಸ್ಕೃತವಾದರೆ ಏನು?’ ಎಂದು ಭಯಪಡುತ್ತಾರೆ.  ಆದರೆ ಆ ಯುವತಿಯ ಹತ್ತಿರ ಒಮ್ಮೆಯೂ ತನ್ನ ಪ್ರೀತಿಯ ವಿಷಯವನ್ನು ಆತ ಹೇಳಿರುವುದಿಲ್ಲ. ಆದರೆ ಇವನು ಪ್ರೀತಿಸುವ ವಿಷಯ ಅವಳಿಗೆ ತಿಳಿದಿರುತ್ತದೆ.

 

ಒಮ್ಮೆ ಹೇಗೋ ಮನಸ್ಸು ಮಾಡಿ ಆ ಯುವತಿಗೆ ತನ್ನ ಅಗಾಧ ಪ್ರೀತಿಯ ವಿಷಯ ಹೇಳುತ್ತಾನೆ.
ಆಗ ಅವಳು- “ನನಗೆ ನಿನ್ನಲ್ಲಿ ಆ ರೀತಿಯ ಯಾವ ಭಾವನೆಯೂ ಇಲ್ಲ” ಎಂದುಬಿಡುತ್ತಾಳೆ.

 

ಆಗ ಅವನ ಸ್ನೇಹಿತರು, ಬಂಧುಗಳು- “ನಿರಾಶನಾದ ಇವನು ಏನು ಮಾಡುತ್ತಾನೆಯೋ, ದುಶ್ಚಟಕ್ಕೆ ಬೀಳಬಹುದು. ಆತ್ಮಹತ್ಯೆ ಮಾಡಿಕೊಳ್ಳಬಹುದು” ಇತ್ಯಾದಿ ನೆನಪಿಸಿಕೊಂಡು ಚಿಂತಿತರಾಗುತ್ತಾರೆ. ಆದರೆ ಆ ಯುವಕ ಏನೂ ಆಗದಿರುವಂತೆ ಎಂದಿನಂತೆ ನಗುನಗುತ್ತಾ ಇರುತ್ತಾನೆ. ಅವನ ಸುತ್ತಲಿರುವವರು ಬಹಳ ಆಶ್ಚರ್ಯಗೊಂಡು ಅವನನ್ನು ಕೇಳುತ್ತಾರೆ-
“ನಿನಗೆ ತೀವ್ರ ನಿರಾಶೆಯಾಗಲಿಲ್ಲವೇ?”
ಆಗ ಯುವಕ ಹೇಳುತ್ತಾನೆ- “ನಾನು ಪ್ರೀತಿಸಿದ್ದು ನಿಜ; ಆದರೆ ಅವಳಿಗೆ ಅದೃಷ್ಟವಿಲ್ಲ; ಅದಕ್ಕೆ ನಾನೇಕೆ ಬೇಸರಗೊಳ್ಳಲಿ? ಪ್ರೀತಿಯ ಮಹತ್ತ್ವ ತ್ಯಾಗದಲ್ಲಿ ಇದೆ” ಎನ್ನುತ್ತಾನೆ.

 

ನಾವು ನಮ್ಮ ಕೆಲಸವನ್ನು ಪ್ರೀತಿಯಿಂದ ಮಾಡೋಣ ಜೀವನದಲ್ಲಿ ಸಂತೋಷ ಪಡೋಣ.

Author Details


Srimukha

1 thought on “ಮಾತು~ಮುತ್ತು : ಪ್ರೀತಿಯ ಮಹತ್ತ್ವ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

Leave a Reply

Your email address will not be published. Required fields are marked *