ಪೂರ್ಣ ಜೀವನದ ಪುಣ್ಯವಂತ ನೆಬ್ಬೂರು ನಾರಾಯಣ ಭಾಗವತ

ನೆಬ್ಬೂರು ಮತ್ತು ಯಕ್ಷಗಾನ, ನೆಬ್ಬೂರು ಮತ್ತು ಕೆರೆಮನೆ ಈ ಎರಡು ಪದಪುಂಜಗಳು ಅವಿನಾಭಾವವಾದ ಸಂಬಂಧವನ್ನು ಹೊಂದಿವೆ. ಇದನ್ನು ನೋಡುತ್ತ ಹೋಗುವಾಗ ಒಂದು ವಿಸ್ಮಯ ಲೋಕ ನಮ್ಮ ಕಣ್ಣೆದುರು ಕಂಡು ಬರುತ್ತದೆ. ನೆಬ್ಬೂರು ಎನ್ನುವುದು ಶಿರಸಿಯ ಸಮೀಪದ ಒಂದು ಸಣ್ಣ ಹಳ್ಳಿ. ಶಿರಸಿ-ಕುಮಟಾ ಮಾರ್ಗದಲ್ಲಿ ಅಮ್ಮಿನಳ್ಳಿಯಲ್ಲಿ ಎಡಕ್ಕೆ ಅರ್ಧ ಕಿ.ಮೀ. ನಲ್ಲಿ ಇರುವ ಐದಾರು ಮನೆಯ ಒಂದು ಸಣ್ಣ ಪ್ರದೇಶ. ಆದರೆ ಈಗ ಅದು ಸಣ್ಣ ಪ್ರದೇಶವಾಗಿ ಉಳಿದಿಲ್ಲ. ಯಾವಾಗ ನೆಬ್ಬೂರು ಭಾಗವತರು ಪ್ರಸಿದ್ಧರಾದರೋ ಆಗ ಎಲ್ಲೆಲ್ಲಿ ಯಕ್ಷಗಾನ […]

Continue Reading

ಮುಗಿಯಿತೇ ಕರ್ತವ್ಯ ಮತ ಚಲಾಯಿಸಿದಲ್ಲಿಗೇ?

ದೇಶದೆಲ್ಲೆಡೆ ನಡೆದ ಏಳು ಹಂತಗಳ ಚುನಾವಣೆ ಮುಗಿದಿದೆ. ಮತ ಚಲಾಯಿಸಿದವರು, ಮತ ಚಲಾಯಿಸಲಾಗದೇ ಉಳಿದವರು, ಮತ ಚಲಾಯಿಸದಿದ್ದವರು… ಹೀಗೆ ನಾವು ಈ ಯಾವುದೇ ಕೆಟಗರಿಯಲ್ಲಿದ್ದರೂ ಕೂಡ ಚುನಾವಣೆಯ ಫಲಿತಾಂಶ, ಅದರಿಂದಾಗುವ ಬದಲಾವಣೆಗಳು ಹಾಗೂ ಅದೆಲ್ಲದರ ಒಟ್ಟು ಪರಿಣಾಮ ಎಲ್ಲರ ಮೇಲೂ ಆಗಲಿದೆ. ಹಾಗಾಗಿ ನಮ್ಮೆಲ್ಲರ ಕಣ್ಣು ಕಿವಿಗಳು ಫಲಿತಾಂಶದ ದಿನಕ್ಕಾಗಿ ಕಾಯುತ್ತಿವೆ. ಈ ಹೊತ್ತಿನಲ್ಲಿ ಯೋಚಿಸಬೇಕಾದ ಒಂದು ಅಂಶವಿದೆ. ನಾವು ಮತ ಚಲಾಯಿಸಿದ್ದೇವೆ. ಆದರೆ ಅಷ್ಟಕ್ಕೇ ಮುಗಿಯಿತೇ ನಮ್ಮ ಕರ್ತವ್ಯ? ದೇಶದ ಪ್ರಜೆಗಳಾಗಿ ನಮ್ಮದೊಂದಷ್ಟು ಕರ್ತವ್ಯಗಳಿವೆ. ಈ […]

Continue Reading

ಸುವ್ವಾಲಿ ಗೀತಗಳು

ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ | ಸಂಗೀತ ಮತ್ತು ಸಾಹಿತ್ಯಗಳು ಕಲಾಮಾತೆ ಸರಸ್ವತಿಯ ದಿವ್ಯಪಯೋಧರಗಳೆಂಬ ಧಾರ್ಮಿಕ ನೆಲೆಗಟ್ಟಿನಲ್ಲಿಯೇ ನಮ್ಮ ಸಂಗೀತ – ನೃತ್ಯ –  ಸಾಹಿತ್ಯಾದಿ ಲಲಿತಕಲೆಗಳು ಬೆಳೆದವು. ಶಿಷ್ಟ – ಜನಪದ ಸಂಗೀತ – ಸಾಹಿತ್ಯಗಳು ಪರಸ್ಪರವಾಗಿ ಕೊಂಡು – ಕೊಳ್ಳುವಿಕೆಯಿಂದ ಶ್ರೀಮಂತವಾದವು. ದೇಶದ ಮೇಲೆ ಅನೇಕಾನೇಕ ಪರ – ಹೊರ ಮತಗಳ, ಸಂಸ್ಕೃತಿಗಳ, ರಾಜಕೀಯ ದಾಳಿಗಳೇ ಆದರೂ ಸಂಗೀತ – ಸಾಹಿತ್ಯಗಳು ಆಯಾ ದೇಶಭಾಷೆಗಳಲ್ಲಿ ರಚಿತಗೊಂಡು, ತಮ್ಮಲ್ಲಿ ತುಕ್ಕು ಹಿಡಿದಿದ್ದನ್ನು ತ್ಯಜಿಸುತ್ತ, ಸ್ವೀಕಾರಾರ್ಹವಾದ ಹೊಸತನ್ನು […]

Continue Reading

ಯಥೋ ಧರ್ಮಃ ತತೋ ಜಯಃ

ಅವಳು ಅಪ್ಪಟ ಭಾರತೀಯ ನಾರಿ. ನಮ್ಮ ಪುರಾಣೇತಿಹಾಸದಲ್ಲಿ ಅವಳು ಬಹುವಾಗಿ ಕಾಣದೇ ಉಳಿದಳು. ಕಣ್ಣಿಂದ ಕಾಣದೇ ಇದ್ದುದನ್ನು ತಾನು ಮನಸ್ಸಿನಿಂದ ಕಂಡಳು. ಜೀವನದಲ್ಲಿ ಅವಳು ಎಂದೂ ತಪಸ್ಸನ್ನು ಮಾಡಲಿಲ್ಲ. ಜೀವನವನ್ನೇ ತಪಸ್ಸನ್ನಾಗಿಸಿದಳು. ಆ ಮಹಾ ತಪಸ್ವಿನಿಯು ಲೋಕಕ್ಕೆ ನೀಡಿದ್ದು ಏನು ಎಂದು ಕೇಳಿದರೆ ಲೋಕ ಎಂದೂ ಮರೆಯದ ಮಾತು. ಅದಕ್ಕೆ ಸರಿಯಾದ ಇನ್ನೊಂದು ಅಂತಹ ಮಾತಿಲ್ಲ. ಆ ಮಾತೇ  ‘ಯಥೋ ಧರ್ಮಃ ತತೋ ಜಯಃ|’ ಆ ಮಾತೆಯೇ ಗಾಂಧಾರಿ.   ಆ ಕಣ್ಣಿಂದ ಅವಳನ್ನು ಅರಿಯೋಣ ಬನ್ನಿ. […]

Continue Reading

ಬದಲಿಸಬೇಕು ಬದುಕಿನ ನಕ್ಷೆ

ಇದೀಗ ಫಲಿತಾಂಶಗಳ ಸಮಯ. ಫಲಿತಾಂಶಕ್ಕೆ, ಪರೀಕ್ಷೆಗೆ ಮಕ್ಕಳು ಹೆದರುವುದು, ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಬೆಚ್ಚಿಬೀಳುವಂತೆ ಮಾಡುತ್ತವೆ. ಅದಕ್ಕೆ ಕಾರಣವೇನು ಎಂಬುದನ್ನು ನಾವು ಅರಿತಿದ್ದೇವೆಯೇ? ಅರಿತಿದ್ದೇವಾದರೆ ಪರಿಹಾರವೇಕೆ ಸಿಕ್ಕಿಲ್ಲ ಇನ್ನೂ?   ಈ ಸಮಸ್ಯೆ ಇಂದಿನದಲ್ಲ. ಅಂದರೆ ಈಗ ಇದ್ದಕ್ಕಿದ್ದಂತೆ ಆರಂಭವಾದದ್ದಲ್ಲ. ಯಾವುದೇ ಸಮಸ್ಯೆ ಒಂದು ಕ್ಷಣದಲ್ಲಿ ಇದ್ದಕ್ಕಿದ್ದಂತೆ ಉದ್ಭವ ಆಗುವುದೂ ಇಲ್ಲ. ನಮ್ಮ ದೇಹದ ರೋಗಗಳಂತೆ, ನಮ್ಮ ಸಮಾಜದ ರೋಗಗಳೂ ನಿಧಾನಕ್ಕೆ ಮೊಳೆತು ಬೆಳೆಯುವಂಥವು. ಅದನ್ನು ನಾವು ಮೊಳೆಯಲು ಬಿಟ್ಟದ್ದೇ ಸರಿ ಅಲ್ಲ. ಬೆಳೆಯಲು ಬಿಟ್ಟದ್ದು ಅಪರಾಧ. […]

Continue Reading

ಅವರಂತಲ್ಲ, ನಮ್ಮಂತಾಗಬೇಕು ನಾವು!

ಅಲ್ಲೊಬ್ಬ ರೈತ. ಸಮೃದ್ಧ ಭೂಮಿ, ಬೇಕಾದಷ್ಟು ನೀರು, ವಾಸಕ್ಕೆ ಯೋಗ್ಯ ಮನೆ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದ ಎಂಬಂತೆ ಹಳೆ ಅಡಿಕೆ ತೋಟಕ್ಕೆ ಬೇಸಾಯ ಮಾಡಿಕೊಂಡು ಅದರಲ್ಲೇ ಜೀವನ. ಅಲ್ಲೇ ಪಕ್ಕದಲ್ಲಿ ಇನ್ನೊಬ್ಬರ ಮನೆ. ಆತ ಸರ್ಕಾರಿ ನೌಕರ. ದಿನ ಬೆಳಗ್ಗೆ ರೆಡಿ ಆಗಿ ನೌಕರಿಗೆ ಹೋಗೋದು ಆತನ ಕೆಲಸ.   ಈ ರೈತ ಪ್ರತಿ ದಿನ ನೌಕರ ಕೆಲಸಕ್ಕೆ ಹೊರಡೊದನ್ನ ನೋಡಿ ಮನದಲ್ಲೇ ಕೊರಗಿ ಅಸೂಯೆ ಪಡುತ್ತಿದ್ದ. ಅವನಾದರೆ ಸೂಟು ಬೂಟು ಹಾಕಿ […]

Continue Reading

ಅಭಿಮಾನಿಗಳ ದೇವರಿಗೆ 90ನೇ ಜಯಂತಿ

ಕೇವಲ ಮೂರನೇ ತರಗತಿಯವರೆಗೆ ಓದಿ ದೇಶ ಹೆಮ್ಮೆ ಪಡುವಂತಹ ನೂರಾರು ಸಾಧನೆ ಮಾಡಿ ಇಂದಿಗೂ ಕೋಟ್ಯಂತರ ಕನ್ನಡಿಗರ ಸ್ಪೂರ್ತಿಯ ಶಕ್ತಿಯಾಗಿರುವ ವರನಟ ಡಾ|| ರಾಜ್‍ಕುಮಾರ್ ಹುಟ್ಟಿದ್ದು ಎಪ್ರಿಲ್ 24, 1929 ನಿನ್ನೆ ಅಂದರೆ ಎಪ್ರಿಲ್ 24, 2019ಕ್ಕೆ ಅವರು ಹುಟ್ಟಿ 90 ವರ್ಷಗಳಾದವು. ಈ ಸಂದರ್ಭದಲ್ಲಿ ಅವರ ಸಾಧನೆಗಳು, ಅವರ ಜೀವ‌ನದ ಕುರಿತು ನಾವು ತಿಳಿಯಲೇಬೇಕಾದ ಕೆಲವು ಅಂಶಗಳನ್ನು ನೋಡೋಣ. ಡಾ|| ರಾಜ್ ಅವರ ಜನ್ಮತಃ ಬಂದ ನಾಮ ಮುತ್ತುರಾಜ್. ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿ ಗೌಡರು ಗುಬ್ಬಿ […]

Continue Reading

ಸಂಗೀತಜ್ಞ – ವಿಜ್ಞಾನಿ ಭಾರತರತ್ನಗಳು

ಸಂಗೀತವು ಇಹಕ್ಕೂ ಪರಕ್ಕೂ ಸಾಧನವೆಂದು ಭಾರತದಲ್ಲಿ ಪ್ರಾಚೀನದಿಂದಲೂ ನಂಬುಗೆಯಿದ್ದು ಆಧ್ಯಾತ್ಮಿಕವಾದ, ಧಾರ್ಮಿಕ ನೆಲೆಯಲ್ಲೇ ಹುಟ್ಟಿ ಬೆಳೆದರೂ, ಪ್ರಾಚೀನದಿಂದಲೂ ವೈಜ್ಞಾನಿಕವಾಗಿಯೇ ಭಾರತೀಯ ಸಂಗೀತವು ಬೆಳೆದಷ್ಟು ವಿಶ್ವದಲ್ಲಿಯೇ ಇಂದಿಗೂ ಬೇರೆಲ್ಲಿಯೂ ಹೀಗೆ, ಇಲ್ಲವೆಂದೇ ಹೇಳಬೇಕು. ಪ್ರಾಚೀನದಿಂದಲೂ ಋಷಿಸದೃಶರಾಗಿದ್ದ, ಬಹುಶ್ರುತ ವಿದ್ವಾಂಸರಾಗಿ ಸಂಗೀತಶಾಸ್ತ್ರಕಾರರಾಗಿದ್ದ ನಂದಿಕೇಶ್ವರ, ಕಶ್ಯಪ, ಮತಂಗ, ಅಭಿನವಗುಪ್ತ, ಸೋಮೇಶ್ವರ, ಪಾರ್ಶ್ವದೇವ, ಶಾರ್ಙ್ಗದೇವ, ಸಿಂಹಭೂಪಾಲ,ಕುಂಭಕರ್ಣ, ವೆಂಕಟಮಖಿ ಮುಂತಾದ ಅನೇಕರಲ್ಲಿ ಕೆಲವರು ರಾಜರೂ ಅಥವಾ ಅವರಿಂದ ಪೋಷಿಸಲ್ಪಟ್ಟವರೂ ಆಗಿದ್ದು ವೈದಿಕಕಲ್ಪ, ವೈದ್ಯ. ಶಿಲ್ಪ. ಧರ್ಮಶಾಸ್ತ್ರ, ಜ್ಯೋತಿಷ (ಈಗಿನಂತೆ ಫಲ ಜ್ಯೋತಿಷವಲ್ಲ, ನಕ್ಷತ್ರಾದಿಗಳು ಹಾಗೂ […]

Continue Reading

ಮೊದಲ ಮಳೆ

ದುಂಡನೆಯ ಬೆವರ ಹನಿಯೊಂದು ಹಣೆಯ ಮೇಲಿಂದ ಸರ್ರನೇ ಜಾರಿ, ಕಣ್ರೆಪ್ಪೆಯ ತುದಿಯಿಂದ ಜೋತು, ಕಣ್ಣೊಳಗೇ ಇಳಿದು ಒಂದು ಕ್ಷಣ ಅವನ ದೃಷ್ಟಿಯನ್ನು ಮಂಜಾಗಿಸಿತ್ತು. ಚಿಗುರು ಮೀಸೆಯ ಮೇಲೆಲ್ಲ ಸಾಲುಗಟ್ಟಿ ನಿಂತ ಬೆವರ ಹನಿಗಳು ಆಗೊಮ್ಮೆ ಈಗೊಮ್ಮೆ ತುಟಿಯ ಮೇಲಿಳಿದು ಉಗುಳನ್ನು ಉಪ್ಪಾಗಿಸುತ್ತಿದ್ದವು. ಎಲೆಗಳಿಲ್ಲದೇ ಬೆತ್ತಲಾಗಿರುವ ಮನೆಯ ಮುಂದಿನ ಮಾಮರಗಳು ಅಲುಗಾಟವಿಲ್ಲದೇ ಮಂಕಾಗಿ ನಿಂತಿದ್ದವು. ಆರಾಮ ಕುರ್ಚಿಯಲ್ಲಿ ಬುಸ್ಸೆಂದು ಪವಡಿಸಿದ ಅಪ್ಪ ಬೀಸಣಿಗೆಯನ್ನು ಬೀಸಿಕೊಳ್ಳುತ್ತಾ “ಅಬ್ಬಾ, ಉರಿಯೇ!” ಎಂದು ತನಗೆ ತಾನೇ ಗೊಣಗಿಕೊಳ್ಳುತ್ತಿದ್ದರು. ಮುಂಬಾಗಿಲ ಬಳಿ ತೋರಣದಂತೆ ಬೆಳೆದು […]

Continue Reading

ತೂಕದ ಮಾತು, ಮಾತಿನೊಳಗಿನ ಧಾಟಿ

ಮಗುವೊಂದು ಜೋರಾಗಿ ಅಳುತ್ತಿದೆ. ಅದು ಹಸಿವಾಗಿ ಅಳುತ್ತಿದೆಯೋ, ಹೊಟ್ಟೆ ನೋವಿನಿಂದ ಅಳುತ್ತಿದೆಯೋ ಅಥವಾ ನಿದ್ರೆ ಬಂತೆಂದು ಅಳುತ್ತಿದೆಯೋ ಎಂದು ಕೂಡಲೇ ಅದರಮ್ಮನಿಗೆ ತಿಳಿಯುತ್ತದೆ. ಇನ್ನೂ ಜಗತ್ತನ್ನು ಸರಿಯಾಗಿ ನೋಡದ ಮಗು, ಟಿ. ವಿ. ಯಲ್ಲಿ ಬರುವ ಸಿನೆಮಾವನ್ನು ನೋಡುವಾಗ ಇವನು ಕೆಟ್ಟವನು, ಇವನು ಒಳ್ಳೆಯವನು ಎಂದು ಸರಿಯಾಗಿ ಗುರುತಿಸುತ್ತದೆ. ಬೆಳಿಗ್ಗೆ ಹೇಳುವ ಒಂದು “ಗುಡ್ ಮಾರ್ನಿಂಗ್” ಬಾಸ್ ನ ಮೂಡ್ ಆಫೀಸಿಗೆ ಬಂದ ಕೂಡಲೇ  ಅದನ್ನು ತಿಳಿಸಿಬಿಡುತ್ತದೆ. ಗಂಡ ಸಂಜೆ ಆಫೀಸಿನಿಂದ ಬಂದ ಕೂಡಲೇ, ಬಿಸಿ ಬಿಸಿ […]

Continue Reading

ಸಂಗೀತ ಸಾಹಿತ್ಯ ಕಲೆ ಇವುಗಳ ಪ್ರಸ್ತುತತೆ

ನಮ್ಮ ಭಾರತೀಯ ಪರಂಪರೆಯಲ್ಲಿ ನಾವು ವೇದಗಳಿಗೆ ಯಾವ ಮಹತ್ತ್ವವನ್ನು, ಗೌರವವನ್ನು, ಪೂಜ್ಯ ಭಾವನೆಯನ್ನು ಸಲ್ಲಿಸುತ್ತಾ ಬಂದಿದ್ದೇವೆಯೋ ಅದೇ ರೀತಿ ಸಾಂಸ್ಕಂತಿಕ ವಿಷಯಕ್ಕೂ ಸಲ್ಲಿಸುತ್ತಲೇ ಬಂದಿದ್ದೇವೆ. ಆದುದರಿಂದಲೇ ಭಾರತೀಯ ಪರಂಪರೆಯ ಗುಣಗಳಲ್ಲಿ ಜ್ಞಾನ, ಆ ಜ್ಞಾನದ ಹಲವು ಶಾಖೆಗಳು, ಅವುಗಳನ್ನು ಅಭ್ಯಸಿಸುತ್ತ ಅವುಗಳ ಮೇಲೆ ಸಿದ್ಧಿಯನ್ನು ಗಳಿಸುತ್ತಾ ಸಾಗುವುದು ಶ್ರೇಷ್ಠ ಲಕ್ಷಣಗಳಲ್ಲಿ ಒಂದಾಗಿದೆ. ನಾಲ್ಕು ವೇದಗಳು ಈ ಪ್ರಪಂಚಕ್ಕೆ ನಾವು ನಂಬಿದ ದೈವದಿಂದ ಕೊಡಲ್ಪಟ್ಟ ಮೇಲೆ ಅವುಗಳನ್ನು ಆರಾಧಿಸುವ, ಅವುಗಳ ಮಹತ್ತ್ವವನ್ನು ಅರ್ಥ ಮಾಡಿಕೊಳ್ಳುವ, ಹಾಗೆಯೇ ಅವುಗಳನ್ನು ಅನುಸರಿಸುತ್ತ […]

Continue Reading

*ನಡೆಯುತ್ತಿರಲಿ ಬದುಕು – ಯಾರಿದ್ದರೂ; ಇರದಿದ್ದರೂ*

ಶಾಲೆಗೂ ನಮ್ಮ‌ ಬಡಾವಣೆಗೂ ಬಹುಶಃ ಒಂದೂವರೆ ಕಿಲೋಮೀಟರ್ ಇದ್ದಿರಬಹುದು. ಮಧ್ಯಮವರ್ಗದವರೇ ಬರುತ್ತಿದ್ದ ಶಾಲೆ. ಹೆಚ್ಚಿನ ಮಕ್ಕಳು ನಡೆದುಕೊಂಡೇ ಬರುತ್ತಿದ್ದುದು. ನಾವೊಂದು ನಾಲ್ಕೈದು ಜನ ಮಕ್ಕಳದ್ದು ಮನೆ ಇದ್ದುದು ಒಂದೇ ಬಡಾವಣೆಯಲ್ಲಿ. ಪರಸ್ಪರ ಮಾತನಾಡಿಕೊಂಡು ಒಟ್ಟಿಗೇ ಹೊರಡಲು ಈಗಿನಂತೆ ಸಂಪರ್ಕ ಸಾಧನಗಳೇನೂ ಇರಲಿಲ್ಲವಾಗಿ ಬೆಳಗ್ಗೆ ನಮ್ಮ ನಮ್ಮ ಸಮಯಕ್ಕೆ ನಾವು ಹೊರಡುತ್ತಿದ್ದೆವು. ಸಿಕ್ಕರೆ ಜೊತೆ ಇರುತ್ತಿತ್ತು. ಇಲ್ಲದಿದ್ದರೆ ಒಂಟಿ ಪಯಣ. ಆದರೆ ಸಂಜೆ ಹಾಗಲ್ಲ. ಎಲ್ಲರೂ ಒಟ್ಟಿಗೇ ಹೊರಡುತ್ತಿದ್ದೆವು ಶಾಲೆಯಿಂದ. ಬಡಾವಣೆಗೆ ತಲುಪಿದ ಅನಂತರ ಒಬ್ಬೊಬ್ಬರದು ಒಂದೊಂದು ರಸ್ತೆಯ […]

Continue Reading

ಪೂರ್ತಿ ಲೆಕ್ಕ ತಪ್ಪಿಸುವ ಒಂದು ಚುಕ್ಕಿ!

ಕೆಲ ದಿನಗಳ ಹಿಂದೆ ನಮ್ಮ ಮನೆ ಬಳಿಯ ಸರ್ಕಾರಿ ಶಾಲೆಯಲ್ಲಿ ಶಾರದಾ ಪೂಜೆ ಕಾರ್ಯಕ್ರಮ ವಿತ್ತು. ಅಲ್ಲಿನ ಪೋಷಕರಿಗೆಂದು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ನಾನೂ ಭಾಗವಹಿಸಿದ್ದೆ. ಹೀಗೆ ರಂಗೋಲಿ ಬಿಡಿಸುವಾಗ ಒಂದು ಚುಕ್ಕಿ ತಪ್ಪಾಗಿ ಇಟ್ಟೆ. ಅಲ್ಲೇ ಇದ್ದ ಒಬ್ಬರು ಅಜ್ಜಿ ನಾ ಇಡುತ್ತಿದ್ದ ಚುಕ್ಕಿ ನೋಡಿ ‘ಮಗಾ, ಒಂದು ಚುಕ್ಕಿ ತಪ್ಪಾಯಿತ್ತಲ್ಲ  ಸರಿ ಮಾಡು’ ಅಂದರು. ನಾನು, ‘ಹೇಗೂ ಒಂದೇ ಚುಕ್ಕಿ ಅಲ್ವಾ ಬಿಡಜ್ಜೀ, ರಂಗೋಲಿ ಬಿಡಿಸುವಾಗ ಸರಿ ಆಗತ್ತೆ’ ಅಂತ ಹಾಗೆ ಮುಂದು ವರೆಸಿದೆ. […]

Continue Reading

ಸಾವಿರಾರು ಭಾರತೀಯರನ್ನು ಬಲಿ ಪಡೆದ ಬ್ರಿಟೀಷ್ ಕ್ರೌರ್ಯದ ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ನೂರುವರ್ಷಗಳು

ಅಂದು ಸಿಖ್ಖರ ಪವಿತ್ರ ದಿನ ವೈಶಾಕಿ ಹಬ್ಬ, ಅದನ್ನ ಬೈಸಾಕಿ ಎಂದೂ ಕರೆಯುತ್ತಾರೆ. ಅಂದಿನ ಸಂಭ್ರಮದ ದಿನ ಸೂತಕದ ದಿನವಾಗಿ ಪರಿಣಮಿಸಿತ್ತು. ಹಬ್ಬ ಆಚರಿಸುತ್ತಾ, ಬ್ರಿಟೀಷರ ದುರಾಡಳಿತದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಸಾವಿರಾರು ಭಾರತೀಯರು ಬ್ರೀಟಿಷರ ಕ್ರೌರ್ಯಕ್ಕೆ ಬಲಿಯಾಗಿದ್ದರು. ಬ್ರಿಟೀಷರು ಜಾರಿಗೊಳಿಸಿದ್ದ ರೌಲತ್ ಕಾಯ್ದೆಯ ವಿರುದ್ಧ ಗಾಂಧೀಜಿ ಪ್ರಬಲವಾಗಿ ದನಿ ಎತ್ತಿದ್ದರು. 1919 ಮಾರ್ಚ್ 30 ರಂದು ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ರೀತಿಯಲ್ಲಿ ರೌಲತ್ ಕಾಯ್ದೆಯ ವಿರುದ್ಧ ಹರತಾಳ ಯಶಸ್ವಿಯಾಗಿ ನಡೆಯಿತು. ಆದರೆ ಅತ್ತ ಪಂಜಾಬ್‌‍ನಲ್ಲಿ ದಂಗೆ […]

Continue Reading

ಗೆಜ್ಜೆಯ ಪೂಜೆ

ನಾದವು ಬ್ರಹ್ಮ. ಆಹತನಾದವು ಸಗುಣಬ್ರಹ್ಮವಾದರೆ ಅನಾಹತನಾದವು ನಿರ್ಗುಣಬ್ರಹ್ಮ. ಆಹತನಾದವು ಶ್ರುತಿ, ಸ್ವರ ಇತ್ಯಾದಿಗಳಲ್ಲಿ ಲೋಕರಂಜಕವೂ ಭವಭಂಜಕವೂ ಆಗಿದೆ. ಅನಾಹತನಾದವು ಯೋಗಿಜನರು ಗುರೂಪದಿಷ್ಟಮಾರ್ಗದಿಂದಲೇ ಉಪಾಸನೆಯನ್ನು ಮಾಡಿ ಮೋಕ್ಷವನ್ನು ಸಂಪಾದಿಸಬೇಕಾದ ವಿದ್ಯೆ.  ಮೋಕ್ಷಾಪೇಕ್ಷ ಯೋಗಿಗಳು ತಮ್ಮ ಪ್ರಾಣಾಯಾಮ ಹಾಗೂ ಪ್ರತ್ಯಾಹಾರ ಸಾಧನೆಯ ಸಮಯದಲ್ಲಿ ಸ್ಥೂಲೇಂದ್ರಿಯಗಳಿಗೆ ಗೋಚರವಾಗದ ನಾದಯೋಗವನ್ನು ಸಿದ್ಧಿಸಿಕೊಳ್ಳುತ್ತಾರೆ. ಚಿತ್ತವನ್ನು ಸ್ಥಿರಗೊಳಿಸಿ ದೇಹದಲ್ಲಿ ವಿವಿಧ ನಾದಗಳನ್ನು ಆಲಿಸಿ ಅನಾಹತನಾದಯೋಗವನ್ನು ಸಾಧಿಸುತ್ತಾರೆ. ಪ್ರಥಮಾಭ್ಯಾಸಕಾಲದಲ್ಲಿ ಅನೇಕ ನಾದಗಳು ಮಹತ್ತಾಗಿ, ಸ್ಥೂಲವಾಗಿ ಯೋಗಿಗಳಿಗೆ ಗೋಚರಿಸುತ್ತವೆ. ಅವು ಅಭ್ಯಾಸವು ವೃದ್ಧಿಯಾದಂತೆಲ್ಲ ಸೂಕ್ಷ್ಮವಾಗುತ್ತ ಬಂದು ಕಡೆಯಲ್ಲಿ ಅತ್ಯಂತ […]

Continue Reading

ಹವ್ಯಕ ಮಹಾಸಭಾ – ಶ್ರೀ ಗಿರಿಧರ ಕಜೆ

ಶ್ರೀ ಅಖಿಲ ಹವ್ಯಕ ಮಹಸಭಾ ಎನ್ನುವ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಲ್ಲಿ ಸಮಾಜದ ಪ್ರತಿಯೊಂದು ಸ್ತರಗಳಲ್ಲಿಯೂ ಚರ್ಚೆಯಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಬೇರೆ ಬೇರೆ ಸಮಾಜದವರೂ ಕೂಡ ಈ ಸಮಾಜವನ್ನು ನಿಬ್ಬೆರಗಾಗಿ ನೋಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲಿಯೋ ಒಮ್ಮೆ ನಾವೂ ಹಿಂದಿರುಗಿ ನೋಡಿದಾಗ ಒಂದಿಷ್ಟು ವಿಚಾರಗಳ ನಡುವೆ ಸಿಲುಕಿಕೊಂಡು ಒಂದಿಷ್ಟು ನಿರ್ದಿಷ್ಟ ಕಾರ್ಯಕ್ರಮಗಳ ಸುತ್ತಮುತ್ತ ಸಾಗುತ್ತ, ಒಂದು ಸಮಾಜದ ಪ್ರಾತಿನಿಧಿಕ ಸಂಸ್ಥೆ ಮುಂದುವರಿಯುತ್ತಿರುವುದನ್ನು ಗಮನಿಸುತ್ತಿದ್ದೆವು.   ಆದರೆ ಇತ್ತೀಚೆಗೆ ಯಾವ ಕಟ್ಟಡ ಅಪೂರ್ಣವಾಗಿತ್ತೋ ಯಾವ ಕಟ್ಟಡದ ಮೇಲೆ ಋಣಭಾರ […]

Continue Reading

ಘಟನೆಗಳ ಘೋಷಯಾತ್ರೆ

ದಿನ ಬೆಳಗಾದರೆ ಸಂಜೆಯವರೆಗೆ ನಮ್ಮ ಕಣ್ಣ ಮುಂದೆ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ. ಆ ದಿನ ನಾವೆಷ್ಟು ನಿರತರಾಗಿರಬೇಕು, ಏನೇನು ಮಾಡಬೇಕು, ಎಷ್ಟು ರೇಗಾಡಬೇಕು, ಎಷ್ಟು ನಲಿದಾಡಬೇಕು, ಯಾರ್ಯಾರನ್ನು ಸಂಧಿಸಬೇಕು, ಯಾವಾಗ ಉಣಬೇಕು, ಯಾವಾಗ ಮಲಗಬೇಕು, ಎಲ್ಲವನ್ನೂ ಸಾಲು ಸಾಲಾಗಿ ನಡೆದು ಹೋಗುವ ಘಟನೆಗಳೇ ನಿರ್ಧರಿಸುತ್ತವೆ! ಜೀವನದುದ್ದಕ್ಕೂ ನಮ್ಮ ಕಣ್ಣ ಮುಂದೆ ನಡೆದು ಹೋಗುವ ಘಟನೆಗಳಿಗೆ ನಾವು ಯಾವ ರೀತಿಯಲ್ಲಿ ಸ್ಪಂದಿಸುತ್ತೇವೆ, ಅವು ನಮ್ಮ ಮನಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದರ ಮೇಲೆಯೇ ನಮ್ಮ […]

Continue Reading

ನಡೆಯುತ್ತಾರವರು – ನಾವು ಬಿಡಬೇಕು ಅಷ್ಟೇ !

1) ನನ್ನ ಮಗನಿಗೆ ಕಲಿಯುವುದರಲ್ಲಿ ಆಸಕ್ತಿ ಇಲ್ಲ. ಎಷ್ಟೇ ಪ್ರಯತ್ನಪಟ್ಟರೂ ಅಕ್ಷರ, ಸಂಖ್ಯೆಗಳು ಮತ್ತು ಪದಗಳನ್ನು ಬರೆಯುತ್ತಿಲ್ಲ. ಬರೆಯಲು ಕೂರಿಸಿದ ತಕ್ಷಣ ಬೇರೆ ಆಟಕ್ಕೆ ಹೊರಡುತ್ತಾನೆ. ಅವನಿಗೆ ಕಲಿಯುವಿಕೆಯ ಸಮಸ್ಯೆಗಳಿವೆ ಅನಿಸುತ್ತಿದೆ. ಏನು ಮಾಡುವುದು? ಅವನ ವಯಸ್ಸು ನಾಲ್ಕು ವರ್ಷ. 2) ಮೂರು ವರ್ಷದ ನನ್ನ ಮಗಳಿಗೆ ಸರಿಯಾಗಿ ತಿನ್ನಲು ಬರುವುದಿಲ್ಲ. ಸುತ್ತಲೂ ಚೆಲ್ಲುತ್ತಾಳೆ. She is messy. How do I discipline her? 3) ನನ್ನ ಮಗನಿಗೆ ಪೆನ್ಸಿಲ್ ಹಿಡಿದು ನೀಟಾಗಿ ಬರೆಯಲು ಬರುವುದಿಲ್ಲ. […]

Continue Reading

ಕಳೆಯುತ್ತಿರುವುದು ಏನು – ಸಮಯವೇ? ಸಂಸ್ಕೃತಿಯೇ?

ಬೇಸಿಗೆಯ ಬಿಸಿಲು ಜೋರಾಗಿದೆ. ಇನ್ನು ಮಕ್ಕಳಿಗೆ ರಜೆ ಬೇರೆ ಪ್ರಾರಂಭ. ಜೊತೆಗೆ ಮಾವು ಹಲಸು ಎಲ್ಲಾ ನಮಗಾಗೇ ಫಲ ಬಿಟ್ಟು ನಿಂತಿವೆ. ಬೇಸಿಗೆ ಬಂತು ಎಂದರೆ ಹಳ್ಳಿ ಹೆಂಗಸರಿಗೆ ಬಿಡುವಿಲ್ಲದ ಕೆಲಸ. ಹಪ್ಪಳ, ಸಂಡಿಗೆ, ತರ ತರದ ಉಪ್ಪಿನಕಾಯಿ, ಮಾವಿನ ಮಿಡಿ ಹಾಕೋದು. ನಡುವೆ ಅಲ್ಲಿ ಇಲ್ಲಿ ಊಟದ ಮನೆ. ಜೊತೆಗೆ ರಜೆಗೆ ಬರೋ ನೆಂಟರು. ತಾವು ಮಕ್ಕಳ ಜೊತೆ ರಜೆಯ ತಿರುಗಾಟ ಹೀಗೆ.   ಮೊನ್ನೆ ಯಾವುದೋ ಕಾರ್ಯಕ್ರಮದಲ್ಲಿ ಎರಡು ಹೆಂಗಸರ ಸಂಭಾಷಣೆ ಕೇಳಿಸಿಕೊಂಡೆ. ಹಳ್ಳಿ […]

Continue Reading

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಿಡಿಗೆ 162 ವರ್ಷಗಳು

ಭಾರತ ದೇಶದ‌ ಭವ್ಯ ಸಂಪತ್ತನ್ನು ಲೂಟಿಮಾಡಲೆಂದೆ ಹತ್ತು ಹಲವು ದೇಶದವರು ಪ್ರಾಂತ್ಯದವರು ದಾಳಿ ಮಾಡಿದರು. ಭಾರತದಿಂದ ಅವರೆಲ್ಲರೂ ಸಾಕಷ್ಟು ಲೂಟಿ ಮಾಡಿಕೊಂಡು ಹೋದರು. ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ವೈಭವದ ಪರಂಪರೆಯನ್ನು ಧ್ವಂಸ ಮಾಡುವ ಸಾಕಷ್ಟು ಪ್ರಯತ್ನಗಳೂ ನಡೆದಿವೆ. ಕೊನೆಯಲ್ಲಿ ಬ್ರಿಟಿಷರು ಸಂಪತ್ತಿನ ಲೂಟಿಯ ಜೊತೆಗೆ ಭಾರತವನ್ನು ಜೀತದಂತೆ ಆಳುವ ದುರುದ್ದೇಶದೊಂದಿಗೆ ಭಾರತಕ್ಕೆ ಕಾಲಿಟ್ಟಿತು. ಈಸ್ಟ್ ಇಂಡಿಯಾ ಕಂಪನಿಯ ನೆಪದಲ್ಲಿ ಭಾರತವನ್ನು ಬ್ರಿಟೀಷರು ವಶಪಡಿಸಿಕೊಂಡಾಗಿತ್ತು. ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲೂ ನಮ್ಮ ದೇಶದ್ದು ಅತ್ಯಂತ ಶ್ರೇಷ್ಠ ಇತಿಹಾಸ ಇದೆ. ಕೋಟ್ಯಾಂತರ […]

Continue Reading