ಕಾವ್ಯಾರಾಮ – ಭರತಮುನಿಯ ಧ್ರುವಾ ಧಾಮ

‘ಕಾವ್ಯಾರಾಮ’ ವೆಂಬ  ವಾಟ್ಸಾಪ್ (ಈಗ ಫೇಸ್ಬುಕ್ ನಲ್ಲಿಯೂ) ಗ್ರೂಪೊಂದು ಮೂರ್ನಾಲ್ಕು ವರ್ಷಗಳಿಂದ ಅತ್ಯುತ್ತಮ ಮೇಧಾವಿ ಕವಿಗಳು-ಕವಯಿತ್ರಿಗಳನ್ನು ಹೊಂದಿದ್ದು ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕವಿತೆಗಳನ್ನು ಛಂದೋಬದ್ಧವಾಗಿಯೂ ಮನೋಜ್ಞ ಕಲ್ಪನೆಗಳಲ್ಲಿಯೂ ರಚಿಸುತ್ತ ಸದ್ದಿಲ್ಲದೆ ಕನ್ನಡಾಂಬೆಯ, ಸಾಹಿತ್ಯಸರಸ್ವತಿಯ ಸೇವೆಗೈಯುತ್ತಿದೆ. ಇದನ್ನು ಆರಂಭಿಸಿ ರೂಪಿಸಿದ್ದು ಹಿರಿಯ ವಿದ್ವಾಂಸರೂ, ಕವಿಗಳೂ, ಬರಹಗಾರರೂ, ರಂಗಭೂಮಿಯಲ್ಲಿ ಬಹಳವಾದ ಪರಿಶ್ರಮವಿದ್ದು ಇನ್ನೂರೈವತ್ತಕ್ಕೂ ಮಿಕ್ಕಿ ರಂಗರೂಪಕಗಳನ್ನು ರಚಿಸಿ, ಮಾಡಿಸಿದ, ಪ್ರಖ್ಯಾತ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರವರು. ಆಶುಕವಿತ್ವದಲ್ಲಿಯೂ ಈ ಗ್ರೂಪಿನ ಕವಿ-ಕವಯಿತ್ರಿಗಳು ಅನೇಕ ವಿಷಯಗಳಲ್ಲಿ ಅನನ್ಯ ಕವಿತೆಗಳನ್ನು ರಚಿಸುತ್ತ ನಮ್ಮಂತಹವರಿಗೆ […]

Continue Reading

ಎಲ್ಲಿಂದಲೋ ಬಂದವನು

ಪಡಸಾಲೆಯಲ್ಲಿರುವ ಹಳೆಯದಾದ ತನ್ನ ಮರದ ಕುರ್ಚಿಯ ಮೇಲೆ ಕುಳಿತು ಪಂಚಾಂಗ ಪುಸ್ತಕದ ಪುಟಗಳನ್ನು ತಿರುವುತ್ತಿದ್ದರು ಶಾಸ್ತ್ರಿಗಳು. ಹೆಗಲ ಮೇಲೆ ಇಳಿ ಬಿಟ್ಟಿದ್ದ ಕರವಸ್ತ್ರವನ್ನು ಆಗಾಗ್ಗೆ ಕೈಯಲ್ಲೆತ್ತಿ ಬೀಸಿಕೊಳ್ಳುತ್ತಾ, ತಲೆಯ ಮೇಲೆ ನಿಧಾನವಾಗಿ ಸುತ್ತುತ್ತಿದ್ದ ಫ್ಯಾನ್ ಕಡೆ ದೃಷ್ಟಿ ಹಾಯಿಸಿ ಬೆವರೊರೆಸಿಕೊಳ್ಳುತ್ತಿದ್ದರು ಅವರು. ಸಂಕ್ರಾಂತಿಗಿನ್ನೂ ಹದಿನೈದು ದಿನಗಳಿವೆ. ಆಗಲೇ ಬಿಸಿಲ ಕಾವು ಅದೆಷ್ಟು ಏರುತ್ತಿದೆ! ಅಂಗಳದತ್ತ ದೃಷ್ಟಿ ಹಾಯಿಸಿ ಯೋಚಿಸುತ್ತಲೇ ಇದ್ದರು ಶಾಸ್ತ್ರಿಗಳು.   ಕಳೆದ ವಾರ ಬಂದ ಜ್ವರದ ಆಯಾಸ ಇನ್ನೂ ಅವರನ್ನು ಬಿಟ್ಟು ಹೋಗಿರಲಿಲ್ಲ. ಅಂಗಳದಲ್ಲಿ […]

Continue Reading

ನಾಳೆ ಬಾ

ಪ್ರೀತಿಯ ಕಂದನನ್ನು ಗಟ್ಟಿಯಾಗಿ ತಬ್ಬಿಕೊಂಡು ಸವಿನಿದ್ರೆಯಲ್ಲಿದ್ದೆ ಒಂದಿರುಳು. ಯಾರದೋ ಹೆಜ್ಜೆಯ ಸದ್ದು. ಕಣ್ಣು ಬಿಟ್ಟೆ. ಕತ್ತಲು ಕಾಣಿಸಲಿಲ್ಲ. ಪುನಃ ಕಣ್ಮುಚ್ಚಿದೆ. “ಬೇಗ ಏಳು. ಸಮಯವಾಯಿತು, ಬಾ” ಎಂದು ಎಳೆದರು ಯಾರೋ. ಸವಿನಿದ್ರೆಯನ್ನು ಕೆಡಿಸಿದ ಕೋಪ. ಸಿಡಿಮಿಡಿಗೊಳ್ಳುತ್ತಾ “ನೀವಾರು? ಏನು ಬೇಕಿತ್ತು?” ಎಂದೆ. “ನಿನ್ನ ಸಮಯ ಮುಗಿಯಿತು.” ಎನ್ನುತ್ತಾ ಎಳೆದುಕೊಂಡು ಹೊರಟುಬಿಟ್ಟರು. ಗಾಬರಿಯಿಂದ ಗಂಡನಿಗಾಗಿ ಕೈಚಾಚಿದೆ. ಸಿಕ್ಕುತ್ತಿಲ್ಲ. ಜೋರಾಗಿ ಕರೆದೆ. ಅವರಿಗೆ ಕೇಳಿಸುತ್ತಲೇ ಇಲ್ಲ. ಕೊನೆಯ ಸಾರಿ ಮಗನನ್ನು ಮುದ್ದುಗರೆದು ಬರುತ್ತೇನೆ, ಬಿಡಿ ಎಂದೆ. ಕೇಳಲಿಲ್ಲ. ನಿಮ್ಮನ್ನು ತುಂಬಾ […]

Continue Reading

ಶ್ರೀ ಕ್ಷೇತ್ರ ಗಯಾ

ಬಿಹಾರ ರಾಜ್ಯದಲ್ಲಿ ಪಾಟ್ನಾದಿಂದ ಸುಮಾರು 200 ಕಿ.ಮೀ. ದೂರ ಇರುವ ಪುಣ್ಯಕ್ಷೇತ್ರ ಗಯಾ. ಈ ಕ್ಷೇತ್ರ ಕಾಲಶ್ರಾದ್ಧಕ್ಕೆ ಹೆಸರಾಗಿದೆ. ಇಲ್ಲಿ ಹಲವಾರು ಶಕ್ತಿ ಸ್ಥಳಗಳಿವೆ. ಬುದ್ಧಗಯಾ ಎಂಬ ಪ್ರಸಿದ್ಧ ಸ್ಥಳವೂ ಇಲ್ಲಿಯೇ ಇದೆ. ಈ ಕ್ಷೇತ್ರ ದರ್ಶನದ ಯೋಗಭಾಗ್ಯ ಸದ್ಯಕ್ಕೆ ಒದಗಿ ಬಂದಿದ್ದರಿಂದ, ಅದನ್ನು ವಿಶೇಷವಾಗಿ ನೋಡಿದ್ದರಿಂದ ಇಲ್ಲಿ ಹಂಚಿಕೊಳ್ಳಬಯಸಿದೆ. ನಮ್ಮ ಸ್ನೇಹಿತರಾದ ಜಗದೀಶ ಪೈ, ಅಮೋಘ ಹಾಗೂ ಸುದೀಪ್ತ ಘೋಷರೊಂದಿಗೆ ಕಾರ್ಯಾರ್ಥ ಈ ಪುಣ್ಯಕ್ಷೇತ್ರದ ಸಮೀಪ ಹೋಗಿದ್ದೆ. ಹಾಗಾಗಿ ಈ ತೀರ್ಥಕ್ಷೇತ್ರವನ್ನು ದರ್ಶಿಸುವ ಮನಸ್ಸು ಮಾಡಿದೆವು. […]

Continue Reading

ಸೇರಿನಿಂದ ಅಳೆಯಲಾದೀತೇ ದೂರವನ್ನು?

  ದೇವಸ್ಥಾನ ಕ್ಕೆ ನಾವೇಕೆ ಹೋಗಬೇಕು? ಇಲ್ಲಿದೆ ವೈಜ್ಞಾನಿಕ‌ ಕಾರಣ. ವಿವಾಹಿತ ಸ್ತ್ರೀಯರು ಕರಿಮಣಿಯ ಸರ ಮತ್ತು ಕಾಲುಂಗುರ ಧರಿಸುವುದರ ವೈಜ್ಞಾನಿಕ ಕಾರಣ ಗೊತ್ತೇ? ಹಣೆಗೆ ಕುಂಕುಮ, ವಿಭೂತಿ, ಗಂಧ ಹಚ್ಚುವ ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣವೇನು? ಮರಕ್ಕೆ ಪ್ರದಕ್ಷಿಣೆ ಬರುವುದರ ವೈಜ್ಞಾನಿಕ‌ ಹಿನ್ನೆಲೆ. ದಶಾವತಾರವು ವೈಜ್ಞಾನಿಕವಾದ ವಿಕಾಸವಾದವನ್ನು ಪ್ರತಿಪಾದಿಸುತ್ತದೆ.   ಹೀಗಿರುವ ನೂರೆಂಟು ‘ವೈಜ್ಞಾನಿಕ’ ಸಂಶೋಧನೆಗಳನ್ನು ದಿನನಿತ್ಯ ಕಾಣುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ನಮ್ಮ ಇನ್ಬಾಕ್ಸಿನಲ್ಲಿ. ವೈಜ್ಞಾನಿಕ ಎಂದ ತಕ್ಷಣ ನಮ್ಮ ಕುತೂಹಲ ಚಿಗುರುತ್ತದೆ. ಓದುತ್ತೇವೆ. […]

Continue Reading

*ಸೇರಿನಿಂದ ಅಳೆಯಲಾದೀತೇ ದೂರವನ್ನು?*

ದೇವಸ್ಥಾನಕ್ಕೆ ನಾವೇಕೆ ಹೋಗಬೇಕು? ಇಲ್ಲಿದೆ ವೈಜ್ಞಾನಿಕ‌ ಕಾರಣ. ವಿವಾಹಿತ ಸ್ತ್ರೀಯರು ಕರಿಮಣಿಯ ಸರ ಮತ್ತು ಕಾಲುಂಗುರ ಧರಿಸುವುದರ ವೈಜ್ಞಾನಿಕ ಕಾರಣ ಗೊತ್ತೇ? ಹಣೆಗೆ ಕುಂಕುಮ, ವಿಭೂತಿ, ಗಂಧ ಹಚ್ಚುವ ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣವೇನು? ಮರಕ್ಕೆ ಪ್ರದಕ್ಷಿಣೆ ಬರುವುದರ ವೈಜ್ಞಾನಿಕ‌ ಹಿನ್ನೆಲೆ. ದಶಾವತಾರವು ವೈಜ್ಞಾನಿಕವಾದ ವಿಕಾಸವಾದವನ್ನು ಪ್ರತಿಪಾದಿಸುತ್ತದೆ. ಹೀಗಿರುವ ನೂರೆಂಟು ‘ವೈಜ್ಞಾನಿಕ’ ಸಂಶೋಧನೆಗಳನ್ನು ದಿನನಿತ್ಯ ಕಾಣುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ನಮ್ಮ ಇನ್ಬಾಕ್ಸಿನಲ್ಲಿ. ವೈಜ್ಞಾನಿಕ ಎಂದ ತಕ್ಷಣ ನಮ್ಮ ಕುತೂಹಲ ಚಿಗುರುತ್ತದೆ. ಓದುತ್ತೇವೆ. ನಮ್ಮ ಪರಿಚಿತರೊಂದಷ್ಟು ಜನಕ್ಕೆ […]

Continue Reading

ನಾವೇ ಬತ್ತಿಸಿದ ಬಾವಿ – ಬತ್ತಿಸೀತು ನಮ್ಮ ಬದುಕನ್ನೇ

ಹೀಗೊಂದು ವಿಡಿಯೋ ವಾಟ್ಸ್ಯಾಪಲ್ಲಿ ಹರಿದಾಡುತಿತ್ತು. ಒಂದು ಬೈಕಲ್ಲಿ ಅಪ್ಪ ಮತ್ತು ಪುಟ್ಟ ಮಗು. ರೈಲ್ವೇ ಹಳಿ ದಾಟುವಾಗ ಆ ಬೈಕ್ ರೈಲು ಹಳಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿತು. ಅದನ್ನು ತಪ್ಪಿಸಲು ಹರಸಾಹಸ ಮಾಡಿದರೂ ಆಗಲೇ ಇಲ್ಲ ಅಪ್ಪನ ಕೈಯಲ್ಲಿ. ಇನ್ನೇನು ರೈಲು ಹತ್ತಿರವೇ ಬರುತ್ತಾ ಇತ್ತು. ಕಡೆಗೆ ಹೇಗೂ ತಾನು ಮತ್ತು ಮಗು ಆಚೆ ಕಡೆ ಹಾರಿಕೊಂಡರು. ಆದರೂ ಬೈಕ್ ಸಿಕ್ಕಿ ಹಾಕಿಕೊಂಡಿತ್ತಲ್ಲ. ಅದರ ಮೇಲೆ ವ್ಯಾಮೋಹ. ಮಗು, ಬಿಟ್ಟು ಹೋಗಬೇಡ ಅಂತ ಎಸ್ಟೇ ಕಾಲು ಹಿಡಿದು ಜಗ್ಗಿದರೂ […]

Continue Reading

ಕೇಳಿದಿರಾ ಸ್ವಾತಂತ್ಯಕ್ಕಾಗಿನ ಮೊದಲ ಹೋರಾಟದ ಯಶೋಗಾಥೆಯನ್ನು

ಸುಮಾರು 25-30 ವರ್ಷದ ಸ್ನಿಗ್ಧ ಸೌಂದರ್ಯದ 20 ಮಹಿಳೆಯರು ತನ್ನತ್ತ ಬರುವುದನ್ನು ಆ ಕಾವಲುಗಾರ ಗಮನಿಸಿದ. ಅವನಿಗೆ ಯಾವ ಅನುಮಾನವೂ ಬರಲಿಲ್ಲ. ಎರಡು ಮಹಿಳೆಯರು ದೊಡ್ಡ ದೊಡ್ಡ ಮಡಿಕೆಗಳನ್ನೂ, ಎರಡು ಮಹಿಳೆಯರು ಹತ್ತಿಯ ಮುದ್ದೆಯನ್ನೂ, ಕೆಲವರು ಹೂವಿನ ಬುಟ್ಟಿಗಳನ್ನು ಮತ್ತು ಕೆಲವರು ದೀಪ ಹಚ್ಚುವ ಹಣತೆಗಳನ್ನು ಹಿಡಿದುಕೊಂಡು ಬಂದಿದ್ದರು. ಹತ್ತಿರ ಬಂದ ಕೂಡಲೇ ಕಣ್ಣಿನಲ್ಲೇ ಅವರ ಸೌಂದರ್ಯವನ್ನು ಸವಿದ ಕಾವಲುಗಾರ, ಅವರನ್ನು ತಡೆಯಲು ಪ್ರಯತ್ನಿಸಿದಾಗ, ಕದ್ದುಮುಚ್ಚಿ ತಂದಿದ್ದ ಶಸ್ತ್ರಾಸ್ತ್ರಗಳಿಂದ ಕಾವಲುಗಾರನನ್ನು ಬಡಿದು ದೇವಸ್ಥಾನದ ಒಳ ಬರುತ್ತಾರೆ. ಆ […]

Continue Reading

ಭಜನೆಯೆಂಬ ಸತ್ಸಂಪ್ರದಾಯದ ಭಕ್ತಿಸಂಗೀತ

ನೀವು ದೇವಾಲಯದಲ್ಲಿ ದೇವದರ್ಶನ ಮಾಡಲು ಹೋದಾಗ ಮೊದಲು ನಿಮ್ಮ ದೃಷ್ಟಿ, ಗಮನಗಳು ಯಾವುದರ ಮೇಲಿರುತ್ತದೆ? ದೇವರ ಮುಖವೇ? ಕಣ್ಣೇ? ಮೈಯೇ? ಪಾದವೇ? ಅಲಂಕಾರವೇ? ಪೂಜೆಯ ಮೇಲೆಯೇ? ಯಾವುದರ ಮೇಲೆ ನಿಮ್ಮ ಮನಸ್ಸನ್ನು ನಿಲ್ಲಿಸುತ್ತೀರಿ? ಮನಸ್ಸಿನ ನಿಜವಾದ ಏಕಾಗ್ರತೆಗೆ ಕಣ್ಣು ಮುಚ್ಚಿಯೇ ಧ್ಯಾನಿಸಬೇಕಲ್ಲವೇ? ಈ ಸಂಶಯಕ್ಕೆ ಎಡೆಕೊಡದಂತೆ, ಭಜನೆಯು ಮನಸ್ಸಿನ ಏಕಾಗ್ರತೆಗೆ ಸಹಾಯಕವಾಗಿ, ಭಗವಂತನ ನಾಮಸ್ಮರಣೆಯತ್ತಲೇ ನಮ್ಮ ಮನವು ನಿಲ್ಲುವಂತೆ ಮಾಡುತ್ತದೆ ಎಂದೇ ಹರಿದಾಸರು ‘ನೀನ್ಯಾಕೋ ನಿನ್ನ ಹಂಗ್ಯಾಕೋ! ನಿನ್ನ ನಾಮದ ಬಲ ಒಂದಿದ್ದರೆ ಸಾಕೋ’ ಎಂದರು. ಏಕವ್ಯಕ್ತಿಯಾಗಲೀ […]

Continue Reading

ಸಾವಿನೊಳಗೊಂದು ಜೀವನದ ಕಲ್ಪನೆ

ಅವನು ಮರಣಶಯ್ಯೆಯಲ್ಲಿ ಮಲಗಿದ್ದನು. ಘಳಿಗೆ ಘಳಿಗೆಗೂ ಅದಾವುದೋ ಒಂದು ಶೀತಲ ಹೊದಿಕೆಯು ಅವನನ್ನು ಆವರಿಸಿ ಬರುತ್ತಿತ್ತು. ಕಣ್ಣ ಮುಂದೆಲ್ಲ ಬರೀ ಕತ್ತಲು. ಗೋಡೆಯ ಮೇಲಿರುವ ಗಡಿಯಾರವು ಅದಾವುದೋ ಒಂದು ನಿಶ್ಚಿತ ಘಳಿಗೆಯೆಡೆಗೆ ಮುನ್ನುಗ್ಗುತ್ತಿರುವಂತೆ ಟಿಕ್ ಟಿಕ್ ಎಂದು ಸದ್ದು ಮಾಡುತ್ತಲೇ ಇತ್ತು. ಸುತ್ತಲೂ ಕುಳಿತು ಗೋಳೋ ಎಂದು ಅಳುತ್ತಿದ್ದರು ಅವನ ಮನೆಯ ಮಂದಿ. “ಅಷ್ಟಕ್ಕೂ ಸತ್ಹೋಗೋ ಪ್ರಾಯ ಎಲ್ಲಿ ಆಗಿತ್ತು ಇವನಿಗೆ? ಮದುವೆಯ ಪ್ರಾಯ ಆಗಿ ನಿಂತಿದ್ದಾಳೆ ಮಗಳು. ಇರೋ ಒಬ್ಬನೇ ಮಗ. ಇನ್ನೂ ತನ್ನ ಕಾಲ […]

Continue Reading

ಸ್ವೇಚ್ಛೆಗೊಂದು ಎಲ್ಲೆಯಿರಲಿ

ಸಂಸ್ಕೃತದಲ್ಲಿ ಪ್ರತಿ ಅಕ್ಷರಗಳಿಗೂ ಅವುಗಳದೇ ಆದ ಒಂದು ಮಿತಿ. ಅಂದರೆ ಕೆಲವು ಓಷ್ಠದಿಂದ. ಕೆಲವು ಕಂಠದಿಂದ. ಕೆಲವು ಮೂರ್ಧನಿಯಿಂದ. ಕೆಲವು ದಂತದಿಂದ. ಇನ್ನು ಕೆಲವು ನಾಭಿಯಿಂದ. ಆ ಸ್ಥಾನವನ್ನು ಬಿಟ್ಟು ಬೇರೆ ಸ್ಥಾನದಿಂದ ನುಡಿದರೆ, ಅದು ಅಪಭ್ರಂಶವಾಗುತ್ತದೆ. ನೋಡುತ್ತಾ ಹೋದರೆ ಸೃಷ್ಟಿಯೇ ಹಾಗೆ. ಗ್ರಹಗಳಿಗೆ ಅವುಗಳದೇ ಆದ ಒಂದು ದಾರಿಯಿದೆ. ಆ ಕಕ್ಷೆಯನ್ನು ಬಿಟ್ಟು ಬೇರೆಡೆಗೆ ಸಾಗಿದರೆ ಪ್ರಕೃತಿ ವಿಕೋಪಗಳಾಗಬಹುದು. ನದಿ-ನದಗಳಿಗೊಂದು ಪರಿಧಿಯಿದೆ. ಅದನ್ನು ದಾಟಿ ಹರಿದರೆ, ಪ್ರವಾಹಗಳಾಗಬಹುದು. ಎಲ್ಲೆಯೇ ಇಲ್ಲದಂತೆ ಕಾಣುವ ವಿಶಾಲ ಶರಧಿಗೂ ಒಂದು […]

Continue Reading

ಶ್ರೀಮಚ್ಛರಾವತೀತೀರವಾಸ

ನಮ್ಮ ಶ್ರೀರಾಮಚಂದ್ರಾಪುರ ಮಠದ ಶ್ರೀ ಸಂಸ್ಥಾನವನ್ನು ಆದರಿಸಿಕೊಳ್ಳುವ, ಬರಮಾಡಿಕೊಳ್ಳುವ ಮತ್ತೊಂದು ಪರಾಕು – ‘ಶ್ರೀಮಚ್ಛರಾವತೀತೀರವಾಸ’. ಇದನ್ನು ಹೇಳುವಾಗ ಬಹಳ ಮಹತ್ತ್ವಪೂರ್ಣವಾದ ಮಾಹಿತಿಗಳು ಲಭ್ಯವಾಗುತ್ತವೆ. ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತವಾದ ಶ್ರೀಮಠವನ್ನು ಪರಿಪಾಲಿಸಿಕೊಂಡು ಬಂದ ಸಮಸ್ತ ಸಮಾಜಕ್ಕೆ ಮಾರ್ಗದರ್ಶಿಯಾಗಿ ನಿಂತ ಯತಿವರೇಣ್ಯರುಗಳಲ್ಲಿ ಅವಿಚ್ಛಿನ್ನ ಪರಂಪರೆಯ ಶ್ರೀಸಂಸ್ಥಾನದವರಲ್ಲಿ ಹನ್ನೊಂದನೆಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಮ್ಮ ಶಿಷ್ಯರಾದ ಶ್ರೀರಾಮಚಂದ್ರಭಾರತೀ ಶ್ರೀಗಳವರನ್ನು ಪಟ್ಟದಲ್ಲಿ ಕೂರಿಸಿ ಅವರಿಗೆ ದಿವ್ಯ ಮಂತ್ರೋಪದೇಶವನ್ನು ಮಾಡುತ್ತಾರೆ. ಹನ್ನೆರೆಡನೆಯ ಪೂಜ್ಯ ಶ್ರೀಸಂಸ್ಥಾನದವರು ತಮ್ಮ ಕಾಲಘಟ್ಟದಲ್ಲಿ ಈಗಿನ ಶ್ರೀರಾಮಚಂದ್ರಾಪುರಮಠಕ್ಕೆ ತೆರಳಿ […]

Continue Reading

ಅಸಾಮಾನ್ಯರಿಗೆ ಸಮಾನತೆಯ ನ್ಯಾಯ!

ಮನೆ ಮನೆಯಲಿ ದೀಪ ಉರಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೇ… ಈ ನಾಲ್ಕು ಸಾಲು ಎಲ್ಲವನ್ನೂ ಹೇಳಿಬಿಡುತ್ತವೆ. ಜೀವವೊಂದು ಭೂಮಿಗಿಳಿಯಬೇಕಾದರೆ ಅವಳ ಗರ್ಭವೇ ಮಾರ್ಗ. ಮನೆಯೊಂದು ಬೆಳಗುವುದು ಹಚ್ಚಿದ ದೀಪದಿಂದ ಮಾತ್ರವಲ್ಲ. ಆ ದೀಪದ ಬೆಳಕನ್ನು ಪ್ರತಿಬಿಂಬಿಸುವ ಅವಳ ಹೊಳೆವ ಕಂಗಳಿಂದಲೂ. ಬೆಳಕು ಅವಳು; ಕುಟುಂಬಕ್ಕೂ, ಸಮಾಜಕ್ಕೂ. ಅವಳು ಭೂಮಿಯಂತೆ. ಅದಕ್ಕಿಂತ ಹೆಚ್ಚೇನು ಹೇಳುವುದು ಅವಳ ಬಗ್ಗೆ! ಹೀಗಿರುವ ಅವಳಿಗೆ ಒಂದು […]

Continue Reading

ಶ್ರಮದಷ್ಟೇ ಮುಖ್ಯ ಮಾಡುವ ಕ್ರಮ!

ಹೀಗೊಂದು ಕಾಡಿದ ಪ್ರಶ್ನೆ. ಕೆಲಸವನ್ನು ಕಷ್ಟಪಟ್ಟು ಮಾಡ್ತೀವಾ? ಇಷ್ಟಪಟ್ಟು ಮಾಡ್ತೀವಾ? ಕೇವಲ ಕಷ್ಟಪಟ್ಟು ಮಾಡಿದ ಕೆಲಸ ಯಶಸ್ಸು ಕಾಣತ್ತ?    ಕಷ್ಟಪಟ್ಟು ಕೆಲಸ ಮಾಡಿದರೆ ಉದ್ಧಾರ ಆಗಬಹುದು. ಕಷ್ಟಪಟ್ಟು ಓದಿದ್ರೆ ಒಳ್ಳೆ ಮಾರ್ಕ್ಸ್ ಬರತ್ತೆ. ಬೆಳಗ್ಗೆಯಿಂದ  ಮನೆ ಕೆಲಸನ ಪಾಪ, ಕಷ್ಟಪಟ್ಕೊಂಡು ಮಾಡತಾನೇ ಇದಾಳೆ. ಕಷ್ಟ ಪಟ್ಟರೆ ಸುಖ. ಹೀಗೆ ಕಷ್ಟ ಎಂಬ ಪದಗಳ ಸರಮಾಲೆ. ಅಯ್ಯೋ ದೇವರೇ ಕಷ್ಟ ಕೊಡಬೇಡಪ್ಪ ಅಂತ ಬೇಡಿಕೊಳ್ಳೋದೂ ನಾವೇ. ಇಲ್ಲಿ ಎಲ್ಲ ಕೆಲಸವನ್ನು ಕಷ್ಟಪಟ್ಟು ಮಾಡಬೇಕು ಅನ್ನೋದೂ ನಾವೇ. ಹಾಗಾದ್ರೆ […]

Continue Reading

ಆಜಾದರ ಅಜೇಯತೆ ಭಾರತದ ಅಜೇಯತೆಗೆ ಪ್ರೇರಣೆಯಾಗಲಿ

ಜವಾಬ್ದಾರಿ ಅರಿತು ನಡೆಯುವ ಕರ್ತವ್ಯ ಪ್ರತಿಯೊಬ್ಬ ನಾಗರಿಕರದ್ದು. ಭಾರತಕ್ಕೆ ಆಜಾದಿಯ ಕಲ್ಪನೆಯನ್ನು ಕೊಟ್ಟು ಅಜೇಯರಾಗಿಯೇ ಬದುಕು ಪೂರೈಸಿದ ಕ್ರಾಂತಿಕಾರಿ ಚಂದ್ರಶೇಖರ ಆಜಾದರು ತಮ್ಮ ಜೀವವನ್ನು ದೇಶಕ್ಕಾಗಿ ಅರ್ಪಿಸಿದ್ದು ನಿನ್ನೆಯ ದಿನ ಅಂದರೆ ಫೆಬ್ರವರಿ 27, 1931ರಲ್ಲಿ. ಅಹಿಂಸಾ ಪರಮೋ ಧರ್ಮಃ’ ಎಂಬ ಮಾತಿನಲ್ಲೇ ಮುಳುಗಿದ್ದ ಭಾರತೀಯರಿಗೆ ಭಾರತದವರೇ ಹೇಳಿದ ‘ಧರ್ಮಹಿಂಸಾ ತಥೈವ ಚ’ ಎಂಬದನ್ನು ನೆನಪಿಸುವ ಮೂಲಕ ಕ್ರಾಂತಿಕಾರಿ ಹೋರಾಟಕ್ಕೆ ಮುನ್ನುಡಿ ಬರೆದವರು ಆಜಾದರು. ಅವರ ತ್ಯಾಗದ ಸ್ಪೂರ್ತಿ ನಮ್ಮೆಲ್ಲರ ಹೃದಯದಲ್ಲಿ ನಿತ್ಯಸತ್ಯವಾಗಿದೆ. ಈ ಸ್ಮರಣೆಯಲ್ಲಿ ಒಂದು […]

Continue Reading

‘ಆರ್ಯಾ’- ಎಂಬ ಪ್ರಾಚೀನ ಸಂಗೀತ ಪ್ರಬಂಧ

ಪ್ರಾಚೀನ ಭಾರತೀಯ ಸಂಗೀತದಲ್ಲಿ ಹಲವು ಗೇಯ ಪ್ರಬಂಧಗಳು ಸ್ವನಾಮಕ ವೃತ್ತದಿಂದಲೇ ಉದಯಿಸಿ, ಅವುಗಳಿಂದ ಕ್ರಮೇಣ ಬೇರ್ಪಟ್ಟು ಪ್ರತ್ಯೇಕ ಗೇಯವ್ಯಕ್ತಿತ್ವವನ್ನು ಪಡೆದವು. ಹಯಲೀಲಾ, ಗಜಲೀಲಾ, ಕ್ರೌಂಚಪದ, ಆರ್ಯಾ, ದ್ವಿಪಥಕ, ಕಲಹಂಸ, ತೋಟಕ, ಝಂಪಟ, ಪದ್ಧಡೀ ಮುಂತಾದುವು ಇದಕ್ಕೆ ನಿದರ್ಶನಗಳು. ಪ್ರಾಚೀನ ಪ್ರಬಂಧ (ಹಾಡು) ಗಳಲ್ಲಿ ಮೂರು ವಿಧಗಳಿವೆ. ಅವು ಶುದ್ಧ, ಛಾಯಾಲಗ (ಅನಂತರದ ಕಾಲದಲ್ಲಿ ಸಾಲಗ) ಮತ್ತು ಸಂಕೀರ್ಣ. ಸಂಕೀರ್ಣ ಪ್ರಬಂಧಗಳಿಗೆ ಕ್ಷುದ್ರವೆಂಬ ಬೇರೆ ಹೆಸರೂ ಇತ್ತು. ಭರತಮುನಿಯ ಕಾಲದಲ್ಲಿಯೇ ಆರ್ಯಾವೃತ್ತವು ನಾಟ್ಯದಲ್ಲಿ ಪ್ರಚಲಿತವಿದ್ದು ಭರತನು ತನ್ನ ನಾಟ್ಯಶಾಸ್ತ್ರದ […]

Continue Reading

ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಬಾಲ್ಯವೇ ವ್ಯಕ್ತಿತ್ವದ ಅಡಿಪಾಯ

ಗರ್ಭಾಂಕುರವಾದಾಗ ಅಣುಗಾತ್ರದಲ್ಲಿರುವ ವ್ಯಕ್ತಿಯ ಭ್ರೂಣ ಪ್ರಸವದ ವೇಳೆಗೆ ತೂಕದಲ್ಲಿ ಸುಮಾರು ಹನ್ನೊಂದು ದಶಲಕ್ಷ ಪಟ್ಟು ಬೆಳೆದಿರುತ್ತದೆ. ಜನನಾನಂತರವೂ ಈ ದೈಹಿಕ ಬೆಳವಣಿಗೆ ಸಾಕಷ್ಟು ವೇಗವಾಗಿಯೇ ಮುಂದುವರೆಯುತ್ತದೆ. ಕ್ರಮೇಣ ನಿಧಾನವಾಗುತ್ತ ಸಾಗುವ ಈ ದೈಹಿಕ ಬೆಳವಣಿಗೆ ತಾರುಣ್ಯದ ನಂತರ ಬಹುತೇಕ ತಟಸ್ಥವಾಗುತ್ತದೆ ಎಂಬುದು ವೈಜ್ಞಾನಿಕ ವಿಶ್ಲೇಷಣೆ. ಶರೀರದ  ಗಾತ್ರ ಮತ್ತು ಕ್ರಿಯೆಗಳಲ್ಲಿ ಮಾರ್ಪಾಡುಗಳು ಉಂಟಾಗುವಂತೆಯೇ ಮನೋಸಾಮರ್ಥ್ಯದಲ್ಲಿಯೂ ಬದಲಾವಣೆಗಳು ಸಂಭವಿಸುತ್ತದೆ. ಆಯುರವಧಿಯ ಮೊದಲರ್ಧ ಕಾಲ ವೃದ್ಧಿಯಾದರೆ , ಕ್ರಮೇಣ ಶಕ್ತಿಯು ಕುಂದುತ್ತಾ ಕ್ಷೀಣಿಸುತ್ತಾ ಸಾಗುತ್ತದೆ. ಈ ಕ್ಷೀಣವಾಗುವ ಪ್ರಕ್ರಿಯೆಯಲ್ಲಿ ಕೂಡ […]

Continue Reading

ಗುಬ್ಬಚ್ಚಿ ಕಂಡ ಲೋಕ

ನಾನೊಂದು ಗುಬ್ಬಚ್ಚಿ. ಅದೋ, ಆ ಗುಡಿಸಲ ಸೂರಿನ ಸಂದಿಯಲ್ಲಿಯೇ ನನ್ನ ವಾಸ. ಈಗಲೂ ನೆನಪಿದೆ ನನಗೆ, ಅದೇ ಗುಡಿಸಲಿನ ಸೂರಿನೆಡೆಯಲ್ಲಿನ ಪುಟ್ಟ ಗೂಡಿನಲ್ಲಿ ಮೊಟ್ಟೆಯಿಂದ ಬಿರಿದೆದ್ದು ಮೊತ್ತ ಮೊದಲ ಬಾರಿಗೆ ಈ ಪ್ರಪಂಚವನ್ನು ನಾ ಕಂಡ ಆ ಕ್ಷಣ. ಮನೆಯೊಳಗೆ ಯಾರೂ ಇಲ್ಲದ ಸಮಯವನ್ನು ನೋಡಿ, ಭತ್ತದ ಮೂಟೆಯನ್ನು ಕುಕ್ಕಿ, ಅದರೊಳಗಿನ ಭತ್ತವನ್ನು ತಂದು ನನ್ನ ಬಾಯೊಳಗಿಡುತ್ತಿದ್ದಳು ಅಂದು ಅಮ್ಮ. ಒಂದು ದಿನ, ಅದು ಹೇಗೋ ಆ ದೃಶ್ಯವನ್ನು ಕಂಡನು ಆ ಮನೆಯ ಪುಟ್ಟ ಪೋರ. ಚಪ್ಪಾಳೆ […]

Continue Reading

ನಾಳೆಗೊಂಚಂಬ್ ನೀರಿರ್ಲಿ ಗೋವಿಂದ

ನನ್ನ ಮಗನ ಶಾಲೆಯ ಬಳಿ ಕೆಲವು ಜೋಪಡಿಗಳಿವೆ. ಎದುರಿಗೆ ಒಂದು ಚಪ್ಪಡಿ ಕಲ್ಲು. ಒಂದು ದಿನ ಅದರ ಮೇಲೆ ಒಂದು ಬಕೆಟ್ ಅಲ್ಲಿ ಅರೆಕೆಂಪು ಬಣ್ಣದ ನೀರು ಇಟ್ಟುಕೊಂಡು, ತುದಿಕಾಲಿನಲ್ಲಿ ಕುಳಿತು ಆಕೆ ಕೈಯಲ್ಲಿ ಚೂರು ಚೂರೇ ನೀರು ಹಾಕುತ್ತಾ, ಮಸಿ ಹಿಡಿದ ಪಾತ್ರೆಯನ್ನು ತಿಕ್ಕುತ್ತಿದ್ದಳು. ಮತ್ತೊಂದು ದಿನ ಹಾಗೆಯೇ ಕೈಯಲ್ಲಿ ಚೂರು ಚೂರೇ ನೀರು ಹಾಕುತ್ತಾ ಬಟ್ಟೆಗಳನ್ನು ತೊಳೆಯುತ್ತಿದ್ದಳು. ಇನ್ನೊಂದು ದಿನ ತನ್ನ ಮಗುವಿನ ಮೈಯನ್ನು ಒಂದೇ ಚಂಬು ನೀರಿನಿಂದ ತೊಳೆದು ಒರೆಸುತ್ತಿದ್ದಳು. ಈ ದೃಶ್ಯಗಳು […]

Continue Reading

ಶ್ರೀಮದ್ರಾಜಾಧಿರಾಜಗುರು

ಇದು ಶ್ರೀಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಪೂಜ್ಯರಿಗೆ ಸಲ್ಲಿಸುವ ಇನ್ನೊಂದು ಪರಾಕು. ಏನಿದರ ವಿಶೇಷ ಎಂದು ಗಮನಿಸುವಾಗ ನಾವು ರೋಮಾಂಚಗೊಳ್ಳಬೇಕು. ಸಾಮಾನ್ಯವಾಗಿ ಯತಿವರೇಣ್ಯರನ್ನು ಸಂನ್ಯಾಸಿಗಳನ್ನು ಗುರುತಿಸುವಾಗ ಅವರು ಲೌಕಿಕತೆಯಿಂದ ಆಚೆ ಇರುವ ಪಾರಿಮಾರ್ಥಿಕತೆಯನ್ನು ಮಾತ್ರ ನೋಡುತ್ತಿರಬೇಕು ಎಂಬ ಅರ್ಥದಲ್ಲಿ ಜನ ಸಾಮಾನ್ಯರು ಯೋಚಿಸುತ್ತಾರೆ. ಆದರೆ ಎಷ್ಟೋ ಸಂದರ್ಭದಲ್ಲಿ ಈ ಪೀಠವನ್ನು ರಾಜಗುರುಪೀಠ ಎನ್ನುತ್ತಾ ಬಂದಿರುವುದನ್ನು ಗಮನಿಸಿದ್ದೇವೆ. ಎಲ್ಲ ಪರಂಪರೆಗೂ ಈ ರೀತಿಯ ಉಪಾಧಿ ಇಲ್ಲ. ಹಾಗೆ ಇರುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಈ ಶ್ರೀರಾಮಚಂದ್ರಾಪುರಮಠದ ಪೀಠಕ್ಕೆ ಹೀಗೊಂದು ವಿಶೇಷವಾದ ಪರಾಕು […]

Continue Reading