ಸಾಧನೆಯ ಹಾದಿಯತ್ತ ಚಿನ್ಮಯಿ ವಿ. ಭಟ್ಟ

ಅಂಕುರ

 

ಎನ್. ಸಿ. ಸಿ (ನೇವಿ )ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದ ಚಿನ್ಮಯಿ ವಿ. ಭಟ್ಟ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ
ಬಿ. ಜಿ ವೆಂಕಟೇಶ್ ಮತ್ತು ಛಾಯಾ ದಂಪತಿಯ ಸುಪುತ್ರಿ.

2010 ರಲ್ಲಿ ರಾಜ್ಯ ಮಟ್ಟದ ಅಬಕಾಸ್ ನಲ್ಲಿ ಪ್ರಥಮ ಸ್ಥಾನ, ರಾಷ್ಟ್ರ ಮಟ್ಟದಲ್ಲೂ ಪ್ರಥಮ ಸ್ಥಾನ ಗಳಿಸಿದ ಇವರು ಹೀಗೆ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತ ಬಂದಿದ್ದಾರೆ. ನಂತರ 2012 -ರಾಜ್ಯ ಮಟ್ಟದ science exhibition ನಲ್ಲಿ ತೃತೀಯ ಸ್ಥಾನ ಗಳಿಸಿದ ಇವರು ರಾಷ್ಟ್ರ ಮಟ್ಟದ ಇಂಡಿಯನ್ ಟ್ಯಾಲೆಂಟ್ ಪರೀಕ್ಷೆಯಲ್ಲಿ ದ್ವಿತಿಯ ಸ್ಥಾನ ಗಳಿಸಿದ್ದಾರೆ.
ಇನ್ಸ್ಪೈರ್ ಅವಾರ್ಡ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ,ತಾಲೂಕು ಕಲಾಶ್ರೀ ವಿಜ್ಞಾನ ಮಾದರಿಯಲ್ಲಿ ಪ್ರಥಮ ಸ್ಥಾನ, ಚದುರಂಗ ಆಟದಲ್ಲೂ ಒಂದು ಹೆಜ್ಜೆ ಮುಂದಿರುವ ಚಿನ್ಮಯಿ 2014ರಲ್ಲಿ ನಡೆದಂತಹ ಜಿಲ್ಲಾ ಮಟ್ಟದ ನಲಂದ ಚೆಸ್ ಅಕಾಡೆಮಿಯಲ್ಲಿ ಎಂಟನೇ ಸ್ಥಾನ ಹಾಗು ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ಯಲ್ಲಿ ದ್ವಿತಿಯ ಸ್ಥಾನವನ್ನು ಗಳಿಸುವುದರ ಮೂಲಕ ಸಾಧನೆಗೈದಿರುತ್ತಾರೆ.

ಬರವಣಿಗೆಯಲ್ಲೂ ವಿಶೇಷ ಆಸಕ್ತಿ ಹೊಂದಿರುವ ಇವರು 2014 ರಲ್ಲಿ ತಾಲೂಕು ಕಲಾಶ್ರೀ ಪ್ರಶಸ್ತಿಯಲ್ಲಿ ಕವನ ಮತ್ತು ಕಥಾ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

2015 ರಲ್ಲಿ ಜಿಲ್ಲಾ ಮಟ್ಟದ youth Parliament ನಲ್ಲಿ ತೃತೀಯ ಸ್ಥಾನ, 2016 ಜಿಲ್ಲಾ ಮಟ್ಟದ ಖೋ ಖೋ ಆಟದಲ್ಲಿ ದ್ವಿತೀಯ ಸ್ಥಾನ
ರಾಷ್ಟ್ರ ಮಟ್ಟದಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ 12 ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಇವರ ಪ್ರತಿಭೆಯನ್ನು ಗಮನಿಸಿ 2018 ರಲ್ಲಿ ಬಾನ್ಕುಳಿ ಮಠದಲ್ಲಿ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಪ್ರತಿಭಾ ಪುರಸ್ಕಾರವನ್ನು ನೀಡಿ ಆಶೀರ್ವಾದಿಸಿದ್ದಾರೆ ಹಾಗು 2016 ರಲ್ಲಿ ಕಾಲೇಜಿನಲ್ಲಿ ಬಹುಮುಖ ಪ್ರತಿಭೆ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಇಷ್ಟೇ ಅಲ್ಲದೆ ಶೈಕ್ಷಣಿಕ ವಿಷಯದಲ್ಲಿಯೂ ಪ್ರತಿಭಾಶಾಲಿಯಾಗಿರುವ ಇವರು ಎಸ್. ಎಸ್ ಎಲ್ ಸಿ ಯಲ್ಲಿ 97% ಮತ್ತು ದ್ವಿತಿಯ ಪಿ. ಯು. ಸಿ ಯಲ್ಲಿ 90%, ಬಿ.ಎಸ್ಸಿ ಯಲ್ಲಿ 9.05 ಸಿಜಿಪಿಏ ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ತಂದೆ ತಾಯಿಗೆ ಕೀರ್ತಿ ತಂದ ಹೆಗ್ಗಳಿಕೆ ಇವರದ್ದು.

Author Details


Srimukha

Leave a Reply

Your email address will not be published. Required fields are marked *