ಕಾಸರಗೋಡಿನ ಮೇಧಾ ಭಟ್ ನಾಯರ್ಪಳ್ಳರವರ ಹರಿಕಥಾ ಪಯಣ.

ಅಂಕುರ

ಹಲವು ಕಡೆ ಹರಿಕಥಾ ಕಾರ್ಯಕ್ರಮಗಳನ್ನು ನೀಡುವ ಮೂಲಕ ಹರಿದಾಸ ಪರಂಪರೆಯಲ್ಲಿ ತನ್ನ ಛಾಪು ಮೂಡಿಸುತ್ತಿರುವ ಯುವ ಪ್ರತಿಭೆ ಮೇಧಾ ಭಟ್ ನಾಯರ್ಪಳ್ಳ. ಕಾಸರಗೋಡಿನ ಪೈವಳಿಕೆಯ ಗೋಪಾಲಕೃಷ್ಣ ಭಟ್ ಮತ್ತು ಮಾಲತಿ ಅವರ ಸುಪುತ್ರಿ ಮೇಧಾ ಭಟ್ ನಾಯರ್ಪಳ್ಳರವರರು ಕೆಲವೊಂದನ್ನು ಕೇಳಿ ತಿಳಿಯಬೇಕು ಕೆಲವೊಂದನ್ನು ನೋಡಿ ತಿಳಿಯಬೇಕು ಎಂಬಂತೆ ಹಿರಿಯರ ಹರಿಕಥೆ ಕೇಳಿ ತನಗೂ ಹರಿ ಕಥೆ ಕಲಿಯಬೇಕೆಂಬ ಹಂಬಲ ಮನದಲ್ಲಿ ಚಿಗುರಿತು ಎನ್ನುತ್ತಾರೆ. ಹೊನ್ನಾವರ , ಕುಂಬ್ಳೆ, ಕಾಸರಗೋಡು, ಬೆಳ್ತಂಗಡಿ ಅಷ್ಟೇ ಅಲ್ಲದೆ ನಮ್ಮ ದೇಶದ ರಾಜಧಾನಿಯಾದ ದೆಹಲಿಯಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜನಮಾನಸವನ್ನು ಗೆದ್ದಿದ್ದಾರೆ. ಇತರ ಕ್ಷೇತ್ರದಲ್ಲೂ ಆಸಕ್ತಿಯನ್ನು ಹೊಂದಿದ್ದರಿಂದ PCRA ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಜಿಲ್ಲಾಮಟ್ಟದ ಕವಿತಾ ರಚನೆಯಲ್ಲಿ ದ್ವಿತೀಯ ಸ್ಥಾನ,ನಾಟಕದಲ್ಲಿ A ಗ್ರೇಡ್, news reading ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೂ ಕಾಲಿಟ್ಟ ಮೇಧಾ ಭಟ್ಟ ರಾಜ್ಯ ಮಟ್ಟದ ಕನ್ನಡ ಕಂಠಪಾಠ ಸ್ಪರ್ಧೆಯ ಪಿಯುಸಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಹೆಗ್ಗಳಿಕೆ ಇವರದ್ದು.
Zonal level chess competition, ಬೇಲೂರಿನ ಗಮಕ ಸಮ್ಮೇಳನ, ವಿಶ್ವ ತುಳು ಸಮ್ಮೇಳನ ಹಾಗು ಆಳ್ವಾಸ ನುಡಿಸಿರಿ ಯಲ್ಲಿ ಭಾಗವಹಿಸಿ ತಮ್ಮ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಂಡಿದ್ದಾರೆ.

ವಿಜ್ಞಾನದ ನೂತನ ಆವಿಷ್ಕಾರಗಳತ್ತ ಆಸಕ್ತಿ ಹೊಂದಿರುವ ಮೇಧಾ ಅವರು 2018ರಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾಗಲೇ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ “ಇಂಧನ ಉಳಿತಾಯದ ಸಣ್ಣ ಹೆಜ್ಜೆ ದೊಡ್ಡ ಬದಲಾವಣೆ ಉಂಟುಮಾಡಬಹುದು”ಎಂಬ ಪ್ರಬಂಧಕ್ಕೆ ಪ್ರಶಸ್ತಿ ಗಳಿಸಿ ಸಿಂಗಾಪುರ ಪ್ರವಾಸದ ಅವಕಾಶವನ್ನು ತನ್ನದಾಗಿಸಿಕೊಂಡಿದ್ದರು.

ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ತನ್ನ ಸಾಧನೆಗಳಿಗಾಗಿ ಎರಡು ಸಲ ಪ್ರತಿಭಾ ಪುರಸ್ಕಾರ ಪ್ರಾಪ್ತವಾಗಿರುವುದೂ ಸೇರಿದಂತೆ ಎಳೆಯ ವಯಸ್ಸಿನಲ್ಲಿಯೇ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿರುವ ಹೆಗ್ಗಳಿಕೆ ಇವರದು.
ದ್ವೀತೀಯ ಪಿಯುಸಿ ಯಲ್ಲಿ 98.5% ಪಡೆದು ಓದಿನಲ್ಲು ಒಂದು ಹೆಜ್ಜೆ ಮುಂದೆ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ. ಅಧ್ಯಾಪಕಿಯಾಗ ಬೇಕೆಂಬ ಕನಸನ್ನು ಹೊತ್ತ ಮೇಧಾ ಭಟ್ ಇನ್ನಷ್ಟು ಸಾಧನೆ ಮಾಡುವಂತಗಾಲಿ ಎಂಬ ಶುಭಹಾರೈಕೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *