ಬಾಲ ಸಂಶೋಧಕಿ ನೇಹಾ ಭಟ್

ಅಂಕುರ

ವಯಸ್ಸು ಇನ್ನು ಕಿರಿಯದು. ಆದರೆ ಸಾಧನೆ ಹಿರಿಯದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುರಳೀಧರ ಕೆ. ಮತ್ತು ಮೀರಾ ಮುರಳಿ ಇವರ ಸುಪುತ್ರಿ ನೇಹಾ ಭಟ್ ಬಾಲ ಸಂಶೋಧಕಿಯಾಗಿ ಭವ್ಯ ಭವಿಷ್ಯದ ಭರವಸೆ ಮೂಡಿಸುತ್ತಿದ್ದಾರೆ .
ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಯಲ್ಲಿ ದ್ವಿತೀಯ ಸ್ಥಾನ ಪಡೆದು, 9ನೇ ತರಗತಿಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಹಾಗೂ ಅದೇ ವರ್ಷ INSEF ಪ್ರಾಂತೀಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಮತ್ತು ರಾಷ್ಟ್ರೀಯ ಮಟ್ಟದ Nxplorers students project showcaseನಲ್ಲಿ ಭಾಗವಹಿಸಿ National children’s science congressನಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಹಾಗೂ ಕೇರಳದ ತಿರುವನಂತಪುರಂ ನಲ್ಲಿ ನಡೆದ ರಾಷ್ಟ್ರಮಟ್ಟದ NCSCನಲ್ಲಿ ಭಾಗವಹಿಸಿ B+grade ಅನ್ನು ಗಳಿಸಿ ಸಾಧನೆಗೈದಿರುತ್ತಾರೆ.

*”ಹತ್ತನೇ ತರಗತಿಯಲ್ಲಿ CSIR Innovation Award for school children (CIASC) ನಲ್ಲಿ ಭಾಗವಹಿಸಿ ತೃತೀಯ ಬಹುಮಾನವನ್ನು ಮತ್ತು ಜೊತೆಗೆ 30,000 ನಗದು ಬಹುಮಾನವನ್ನು ಪಡೆದಿದ್ದಾರೆ.*”
ಅನ್ವೇಷಣೆಯ ಹಿನ್ನೆಲೆ :
ರೈತರೇ ದೇಶದ ಬೆನ್ನೆಲೆಬು.
ರೈತರ ಕಷ್ಟ ರೈತರಿಗೇ ಅರ್ಥವಾಗುವುದು ಅಲ್ಲವೇ! ಹಾಗೇ ತಮ್ಮ ಕುಟುಂಬ ಹಾಗೂ ಇತರ ರೈತರು ಪಡುವ ಕಷ್ಟ ನೋಡಿದ ಈ ಪೋರಿ ಅವರ ಶ್ರಮವನ್ನು ಕಡಿಮೆ ಮಾಡಲು ಒಂದು ಆಲೋಚನೆ ಮಾಡಿದರು. ನಮ್ಮ ರಾಜ್ಯದಲ್ಲಿ ಮಲೆನಾಡು, ದಕ್ಷಿಣ ಕನ್ನಡ ಹಾಗೂ ಇನ್ನೂ ಇತರ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯನ್ನು ನಂಬಿ ಜೀವನ ಸಾಗಿಸುವವರು ಅತ್ಯಧಿಕ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಕೊಳೆರೋಗದಿಂದ ಅಡಿಕೆ ಬೆಳೆಯನ್ನು ರಕ್ಷಿಸುವ ಸಲುವಾಗಿ ಬೋರ್ಡೋ ಮಿಕ್ಸರ್, ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡಲಾಗುತ್ತದೆ.
ಈಗಲೂ ಹಳೆಕಾಲದ ಪದ್ದತಿಯನ್ನೇ ಮುಂದುವರೆಸಿರುವ ರೈತರು ಗಟಾರ್ ಪಂಪ್ ಬಳಸಿ ಅಡಿಕೆ ಮರಗಳಿಗೆ ಕೊಳೆ ನಾಶಕಗಳನ್ನು ಸ್ಪ್ರೇ ಮಾಡುವುದರಿಂದ ಬಹಳ ವೆಚ್ಚ ಉಂಟಾಗುತ್ತದೆ. ಯಾಕೆಂದರೆ ಕೆಮಿಕಲ್ ಮಿಕ್ಸ್ ಮಾಡೋದಕ್ಕೆ ಒಬ್ಬರು, ಗಟಾರ್ ಪಂಪ್ ಪ್ರೆಶರ್ ನೀಡುವುದಕ್ಕೆ ಇನೊಬ್ಬರು ಸ್ಪ್ರೇ ಮಾಡಲು ಮತ್ತೊಬ್ಬರು‌, ಹೀಗೆ ಕಾರ್ಮಿಕರ ಖರ್ಚು ತುಂಬಾ ಬರುತ್ತದೆ‌. ಇದರಿಂದ ಕಾರ್ಮಿಕರ ಆರೋಗ್ಯ ಕೂಡ ಕೆಡುತ್ತದೆ. ತಮ್ಮ ಅಡಿಕೆ ತೋಟದ ಬಳಿ ಹೋದಾಗ ಈ ಎಲ್ಲಾ ಕಷ್ಟಗಳನ್ನ ತಮ್ಮ ತಾತನಿಂದ ಕೇಳಿದ 13 ವರ್ಷದ ಪುತ್ತೂರಿನ ನೇಹ ಇದಕ್ಕೆ ಯಾವುದಾದರೂ ಒಂದು ಉಪಾಯ ಮಾಡಬೇಕಲ್ಲಾ ಎಂದುಕೊಂಡು ಮಾಹಿತಿ ಕಲೆಹಾಕಲು ಮುಂದಾದಳು.
“ಪ್ರಯತ್ನಂ ಸರ್ವಸಿದ್ಧಿ ಸಾಧನಮ್” ಎನ್ನುವಂತೆ
ಸುಮಾರು ಎರಡು ವರ್ಷ ಪ್ರಯತ್ನ ಪಟ್ಟ ನೇಹ ಕೊನೆಗೂ ಯಶಸ್ಸನ್ನು ಕಂಡಿದ್ದಾರೆ. ಹಠದಿಂದ ಸತತ ಪ್ರಯತ್ನ ಪಟ್ಟ ನೇಹ ಈಗ ಆಟೋಮೆಟಿಕ್ ಸ್ಪ್ರೇ ಮೆಷಿನ್ ಅನ್ನು ಕಂಡುಹಿಡಿದಿದ್ದಾರೆ. ಗೇರ್ ಬಾಕ್ಸ್, ಲಿಥಿಯಮ್ ಬ್ಯಾಟರಿ, ಡಿಸಿ ಮೋಟರ್, ಎರಡು ಗಟಾರ್ ಪಂಪ್ಸ್, ಎಕ್ಸಲೇಟರ್ ಉಪಯೋಗಿಸಿಕೊಂಡು ಆಟೋಮೆಟಿಕ್ ಮೆಷಿನನ್ನು ಸಿದ್ಧ ಮಾಡಿದ್ದಾರೆ . ಒಂದು ಬಾರಿ ಚಾರ್ಜ್ ಮಾಡಿದರೆ 5 ಗಂಟೆ ರನ್ ಆಗುತ್ತದೆ‌ ಈ ಮೆಷಿನ್. ಹಾಗೆಯೇ ಇದರಲ್ಲಿ ಇಂಡಿಕೇಟರ್ ಕೂಡ ಇದ್ದು ಕೆಮಿಕಲ್ ಇನ್ನೂ ಎಷ್ಟಿದೆ ಅಂತ ತೋರಿಸುತ್ತದೆ.
10ನೇ ತರಗತಿಯ ನೇಹಾಳ ಈ ಅನ್ವೇಷಣೆಗೆ 2020 ರ ಸಿ.ಎಸ್ ಐ.ಆರ್. ನ ತೃತೀಯ ಬಹುಮಾನ ಬಂದಿದೆ. ಈ ಆಟೋಮೆಟಿಕ್ ಸ್ಪ್ರೇ ಮೆಷಿನ್ ಅನ್ನು ಈಗ ರೈತರು ಬಳಸೋದಕ್ಕೆ ಶುರುಮಾಡಿದ್ದು ನೇಹಾಳ ಅನ್ವೇಷಣೆಗೆ ಮನಸೋತಿದ್ದಾರೆ. ಈ ಆಟೋಮೆಟಿಕ್ ಮೆಷಿನ್ ನಿಂದ ಶೇ.40 ರಷ್ಟು ಕಾರ್ಮಿಕರ ವೆಚ್ಚ ಕಡಿಮೆಯಾಗುತ್ತದೆ.. ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವುದಿಲ್ಲ. ತಾತನ ಮಾತುಗಳನ್ನು ಕೇಳಿ ಹಠಕ್ಕೆ ಬಿದ್ದು ಕೇವಲ 15 ವರ್ಷ ವಯಸ್ಸಿನಲ್ಲೇ ಈ ಸಾಧನೆ ಮಾಡಿದ ನೇಹ ಪರಿಶ್ರಮಕ್ಕೆ ಮೆಚ್ಚಲೇ ಬೇಕು. ಇವರ ಸಾಧನೆ ನಮ್ಮಗೆಲ್ಲಾ ಮಾದರಿ.

ಈ ಸಾಧನೆಗಾಗಿ ಮಾನ್ಯ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾವರಿಂದ ಶ್ಲಾಘನಾ ಪತ್ರವನ್ನು ಪಡೆದ ಹೆಗ್ಗಳಿಕೆ ಇವರದ್ದು.
ಹಾಗೇ mommakkalu ACE of Innovationನಲ್ಲಿ ಭಾಗವಹಿಸಿ ಸ್ವರ್ಣ ಪದಕ, ಹಾಗು ₹25,000/- ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿಯೂ ಆಸಕ್ತಿಯನ್ನು ಹೊಂದಿರುವ ನೇಹಾ ಭಟ್ ಸಂಗೀತ ಸೀನಿಯರ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆಯುರ್ವೇದ ವೈದ್ಯೆಯಾಗಿ ಆ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳನ್ನು ನಡೆಸುವ ಮಹದಾಸೆ ಕನಸು ನನ್ನದು ಎನ್ನುತ್ತಾಳೆ ನೇಹಾ.


ಪ್ರಸ್ತುತ ಪುತ್ತೂರಿನ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪುತ್ತೂರಿನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಇವರು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬ ಶುಭಹಾರೈಕೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *