ಭಾರತೀಯ ವಾಸ್ತುಶಿಲ್ಪಾಸಕ್ತ , ಪ್ರಯೋಗಶೀಲ ಮನೋಭಾವದ ಚಿತ್ರಕಲಾವಿದ ಶ್ರೇಯಸ್

ಅಂಕುರ

 

ವಿವಿಧ ಕ್ಷೇತ್ರಗಳಲ್ಲಿ ಹೆಜ್ಜೆಗುರುತು ಮೂಡಿಸುತ್ತಿರುವ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉದಯಕುಮಾರ ಮತ್ತು ವಿಜಯಲಕ್ಷ್ಮಿ ಅವರ ಸುಪುತ್ರ ಶ್ರೇಯಸ್ ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
೨-೧೦ ನೇ ತರಗತಿವರೆಗೆ ಪ್ರತಿಭಾಕಾರಂಜಿಯಲ್ಲಿ ಧಾರ್ಮಿಕ ಪಠಣ, ರಸಪ್ರಶ್ನೆ ಹಾಗೂ ಕ್ರೀಡಾ ಸ್ಪರ್ಧೆಗಳಾದ ಚದುರಂಗ ಸ್ಪರ್ಧೆ, ವಾಲಿಬಾಲ್ ಹೀಗೆ ಹತ್ತು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟ ಹಾಗೂ ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳದವರು ಏರ್ಪಡಿಸಿದಂತಹ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಅಧ್ಯಯನವನ್ನು ಆಧರಿಸಿ ನಡೆಸುವ ಶ್ಲೋಕ, ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಶ್ರೇಯಸ್ ಎಂ ಓದಿನಲ್ಲೂ ಮುಂದಿದ್ದಾರೆ. ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ. ವಿದ್ಯಾಭಾರತಿ ಸಂಸ್ಕೃತಿ- ಶಿಕ್ಷಾ ಸಂಸ್ಥಾನ ಅವರು ನಡೆಸುವ ಅಖಿಲ ಭಾರತೀಯ ಸಂಸ್ಕೃತಿ ಜ್ಞಾನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.
ಹಾಗೂ ಇವರು ನಡೆಸಿದಂತಹ development of scientific ಟೆಂಪರ್ment ಎಂಬ ವಿಷಯದ ಕುರಿತಾದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
ಹವ್ಯಕ ಮಂಡಲ, ಬೆಳ್ಳಾರೆ ವಲಯ ಪರಿಷತ್ತು ಇವರ ಆಶ್ರಯದಲ್ಲಿ ನಡೆದ ವಸಂತ ವೇದಪಾಠ ಶಿಬಿರ ಇದರಲ್ಲಿ ಪ್ರಥಮ ವರ್ಷ ಉತ್ತಮ ಕಾರ್ಯಕ್ಷಮತೆಯೊಂದಿಗೆ, ದ್ವಿತೀಯ ವರ್ಷ ದ್ವಿತೀಯ ಸ್ಥಾನ ಹಾಗೂ ಮೂರನೇ ವರ್ಷ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳ ತಾಲೂಕು ಮಟ್ಟದ ಮಕ್ಕಳ ಮೇಳ ,2013 – 2014 ರಲ್ಲಿ ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆ ಗೊಂಡಿದ್ದಾರೆ.

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) , ಲಘು ಉದ್ಯೋಗ ಭಾರತಿ ಕರ್ನಾಟಕ ಮತ್ತು CAMPCO Ltd. ಇವರ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ Agri tinkering fest annveshana 2019 ಭಾಗವಹಿಸಿರುತ್ತಾರೆ. ಕುಂಕುಮ ಕಾಯಿಯಿಂದ ನೈಸರ್ಗಿಕ ಉಗುರು ಬಣ್ಣ ಮತ್ತು lipstick ತಯಾರಿಸುವ ಪ್ರಯೋಗವನ್ನು ಮಾಡುತ್ತಿದ್ದಾರೆ.

ಚಿತ್ರಕಲಾವಿದ ಶ್ರೇಯಸ್ ಎಂ.

ಧರ್ಮಭಾರತಿಯ ಶಂಕರಪಂಚಮಿಯ ವಿಶೇಷಾಂಕದಲ್ಲಿ ಶಂಕರಾಚಾರ್ಯರ ಚಿತ್ರ ಪ್ರಕಟಗೊಂಡಿದೆ.
ಶ್ರೀರಾಘವೇಶ್ವರಭಾರತೀಸ್ವಾಮೀಜಿ , ಶಂಕರಾಚಾರ್ಯರು, ಅಣ್ಣಾಮಲೈ, ಅನೂಪ್ ಶಂಕರ್, ವಿಷ್ಣುದೇವ ಕೆ. ಎಸ್ ಹೀಗೆ ನಾನಾ ತರದ ಚಿತ್ರಗಳನ್ನು ಚಿತ್ರಸಿದ್ದಾರೆ.
ವಿವಿಧ ರೀತಿಯ ಚಿತ್ರಗಳನ್ನು artist_shreyas ಎಂಬ intstragram ಪುಟದಲ್ಲಿ ಪ್ರಕಟಿಸುತ್ತಿದ್ದಾರೆ.
ಭಾರತೀಯ ವಾಸ್ತುಶಿಲ್ಪದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೇಯಸ್ ಉತ್ತಮ ಇಂಜಿನಿಯರ್ ಹಾಗು ಕಲಾವಿದನಾಗ ಬೇಕೆಂಬ ಗುರಿಯನ್ನು ಹೊಂದಿದ್ದಾರೆ. ಶ್ರೇಯಸ್ ನವರ ಕನಸು ನನಸಾಗಲಿ ಎಂಬ ಶುಭ ಹಾರೈಕೆ ನಮ್ಮದು.

Leave a Reply

Your email address will not be published. Required fields are marked *