” ನೆಮ್ಮದಿಯ ಬದುಕಿಗೆ ಶ್ರೀಗುರುಕೃಪೆಯೊಂದಿದ್ದರೆ ಸಾಕು” : ಭವಾನಿ ವಿ. ಹೆಗಡೆ , ಕುಮಟಾ

ಮಾತೃತ್ವಮ್

” ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದೇವೆ. ಶ್ರೀಗುರುಕೃಪೆಯಿಂದಲೇ ಬದುಕು ಇಂದು ಸರಾಗವಾಗಿ ಮುನ್ನಡೆಯುತ್ತಿದೆ. ಮನದ ಭಾವಗಳನ್ನೆಲ್ಲ ಮಾತುಗಳ ಮೂಲಕ ಹೇಳುವುದು ಕಷ್ಟ. ಅಂತರಂಗದ ಭಾವ ಸಮರ್ಪಣೆಯ ಸೇವೆ ನಮ್ಮದು. ತ್ರಿಮೂರ್ತಿಗಳ ಸಾಕ್ಷಾತ್ ಸ್ವರೂಪರಾದ ಶ್ರೀಗುರುಗಳ ಅನುಗ್ರಹವೊಂದಿದ್ದರೆ ಬದುಕಿನಲ್ಲಿ ಪವಾಡವೇ ನಡೆಯುತ್ತದೆ ” ಎಂದು ಭಾವಪೂರ್ಣವಾಗಿ ನುಡಿದವರು ಕುಮಟಾ ಮಂಡಲ, ಗುಡೇಅಂಗಡಿ ವಲಯದ ” ವರಲಕ್ಷ್ಮಿ” ನಿವಾಸದಲ್ಲಿರುವ ವೆಂಕಟ್ರಮಣ ಹೆಗಡೆಯವರ ಪತ್ನಿ ಭವಾನಿ ವಿ.ಹೆಗಡೆ.

 

ಕುಮಟಾದ ಮೂರೂರಿನ ವಿಷ್ಣು ಭಟ್ , ವರದಾ ಭಟ್ ದಂಪತಿಗಳ ಪುತ್ರಿಯಾಗಿರುವ ಇವರು ಕುಮಟಾ ಮಂಡಲ ಮಾತೃತ್ವಮ್ ವಿಭಾಗದ ಕಾರ್ಯದರ್ಶಿಯಾಗಿ ಹಾಗೂ ಗುಡೇ ಅಂಗಡಿ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

 

” ಶ್ರೀಗುರುಗಳು ನಮ್ಮ ಊರಿಗೆ ಮೊದಲ ಬಾರಿ ಬಂದಾಗಲೇ ಶ್ರೀಮಠದ ಸಂಪರ್ಕಕ್ಕೆ ಬಂದೆವು. ಅಂದಿನಿಂದ ಇಂದಿನವರೆಗೂ ಶ್ರೀಮಠದ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿ ಬಂದಿದೆ. ನಮ್ಮ ವಲಯದ ಮಾತೆಯರ ತಂಡದೊಂದಿಗೆ ಅಶೋಕೆಗೆ ಹೋಗಿ ಅಲ್ಲಿರುವ ವಿದ್ಯಾರ್ಥಿಗಳಿಗಾಗಿ ಸಿಹಿತಿಂಡಿಗಳನ್ನು ತಯಾರಿಸುವ ಅವಕಾಶವೂ ದೊರಕಿದೆ ” ಎನ್ನುವ ಭವಾನಿ ಹೆಗಡೆಯವರು ಬೇರ್ಕಡವು ಈಶ್ವರಿ ಅವರ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯಲ್ಲಿ ಮಾಸದಮಾತೆಯಾದವರು. ಈಗಾಗಲೇ ಒಂದು ವರ್ಷದ ಗುರಿ ತಲುಪಿರುವ ಭವಾನಿ ವಿ. ಹೆಗಡೆಯವರಿಗೆ ಗೋಮಾತೆಯ ಸೇವೆಯನ್ನು ಇನ್ನಷ್ಟು ಮುಂದುವರಿಸುವ ಹಂಬಲವಿದೆ.

 

” ಗೋಮಾತೆಯ ಸೇವೆಗೆ ಅನೇಕ ಮಂದಿ ಸಹಕಾರ ನೀಡಿದ್ದಾರೆ. ಕೇಳಿದವರೆಲ್ಲ ಖುಷಿಯಿಂದ ಗೋಸೇವೆಗೆ ಕೈ ಜೋಡಿಸಿದ್ದಾರೆ ” ಎಂದು ಸಂತಸದಿಂದ ನುಡಿಯುವ ಇವರ ಎಲ್ಲಾ ಸೇವೆಗಳಿಗೂ ಮನೆಯವರ ಸಂಪೂರ್ಣ ಬೆಂಬಲವಿದೆ.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *