ಗೋಸಂರಕ್ಷಣೆ ಮನುಕುಲದ ಅಸ್ತಿತ್ವಕ್ಕೆ ಅತೀ ಅಗತ್ಯ : ಮಂಗಳಾ ಶ್ರೀಧರ ಜೋಶಿ

ಮಾತೃತ್ವಮ್

 

 

” ಗೋವು ಭಾರತೀಯರ ಜೀವನಾಡಿ. ಗೋವಿಲ್ಲದೆ ನಾವಿಲ್ಲ. ಗೋ ಸಂರಕ್ಷಣೆ ನಮ್ಮ ಬದುಕಿಗೆ, ಅಸ್ತಿತ್ವಕ್ಕೆ ಅತೀ ಅಗತ್ಯ ಎಂಬುದನ್ನು ತಿಳಿಸುವುದಕ್ಕಾಗಿಯೇ ನಮ್ಮ ಗುರುಗಳು ದೇಶೀಯ ಹಸುಗಳ ಸಂರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ. ಶ್ರೀಗುರುಗಳ ಅನುಗ್ರಹದಿಂದ ಅದರಲ್ಲೊಂದು ಸೇವಾಬಿಂದುವಾಗಿ ನಮ್ಮ ಕೈಲಾದಷ್ಟು ಸೇವೆ ಸಲ್ಲಿಸುವ ಸದವಕಾಶ ಒದಗಿ ಬಂದಿದ್ದು ಪೂರ್ವ ಜನ್ಮದ ಸುಕೃತದಿಂದ ” ಎಂದವರು ಹೊನ್ನಾವರ ಕಾಸರಕೋಡು ಮೂಲದ ಪ್ರಸ್ತುತ ಮಂಗಳೂರು ದಕ್ಷಿಣ ಮಂಡಲ ನಿವಾಸಿಗಳಾಗಿರುವ ಶ್ರೀಧರ ಜೋಶಿ ಅವರ ಪತ್ನಿ ಮಂಗಳಾ.

 

ಹೊನ್ನಾವರ ಸಮೀಪದ ಕೋಡಾಣಿಯ ರಾಮಚಂದ್ರ ಸುಬ್ರಾಯ ಹೆಗಡೆ, ದೇವಕಿ ರಾಮಚಂದ್ರ ಅವರ ಪುತ್ರಿಯಾದ ಮಂಗಳಾ ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

 

” ಒಂದೂವರೆ ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿದ್ದೇನೆ. ಅಭಯಾಕ್ಷರ ಅಭಿಯಾನ, ಹಲಸಿನ ಮೇಳವೇ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಹಲಸಿನ ಮೇಳದಲ್ಲಿ ಭಾಗವಹಿಸಿ ದೊರಕಿದ ಮೊತ್ತವನ್ನು ಗೋಸ್ವರ್ಗಕ್ಕೆ ಕಾಣಿಕೆಯಾಗಿ ನೀಡಿದ್ದೇನೆ. ಮಾಸದ ಮಾತೆಯಾಗಿ ಗುರಿ ಸೇರಲು ಅನೇಕ ಮಂದಿ ಸಹಕಾರ ನೀಡಿದ್ದಾರೆ. ‘ ನೀವು ಎಷ್ಟು ವರ್ಷಗಳ ಕಾಲ ಸಂಗ್ರಹಿಸುತ್ತೀರೋ ಅಷ್ಟು ಕಾಲವೂ ಗೋಮಾತೆಗಾಗಿ ಕಾಣಿಕೆ ನೀಡುತ್ತಲೇ ಇರುತ್ತೇವೆ ‘ ಎಂದವರೂ ಇದ್ದಾರೆ. ಎರಡು ವರ್ಷಗಳ ಗುರಿ ತಲುಪಿದ ನಂತರ ಈಗಲೂ ಈ ಸೇವೆಯನ್ನು ಮುಂದುವರಿಸುತ್ತಲೇ ಇದ್ದೇನೆ ” ಎನ್ನುವ ಮಂಗಳಾ ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಬಾಗಿನವನ್ನು ಸ್ವೀಕರಿಸಿದ್ದಾರೆ.

 

” ಶ್ರೀಗುರುಗಳ ಆಶೀರ್ವಚನದ ಪ್ರೇರಣೆಯಿಂದ ಮಾಸದ ಮಾತೆಯಾದೆ. ಮನೆಯವರ ಸಂಪೂರ್ಣ ಸಹಕಾರ ನನಗಿತ್ತು. ಹೆಣ್ಣುಮಕ್ಕಳಿಬ್ಬರೂ ಗೋಮಾತೆಯ ಸೇವೆಗೆ ಕೈ ಜೋಡಿಸಿದ್ದಾರೆ. ಮೊದಲ ಕಾಣಿಕೆ ನೀಡಿದವರು ಮನೆಯವರೇ ” ಎನ್ನುವ ಇವರಿಗೆ ಶ್ರೀಗುರುಗಳ ಮೇಲೆ ಅತೀವ ಶ್ರದ್ಧಾಭಕ್ತಿಗಳಿವೆ.

 

ಯಾವುದೇ ಶುಭಕಾರ್ಯಗಳಿಗೆ ಹೋಗುವಾಗ ಮಂತ್ರಾಕ್ಷತೆ ಧರಿಸಿಯೇ ಹೋಗುವ ರೂಢಿ ಇರಿಸಿಕೊಂಡಿರುವ ಮಂಗಳಾ ಅದನ್ನೇ ತಮ್ಮ ಮಕ್ಕಳಿಗೂ ಕಲಿಸಿದ್ದಾರೆ. ತಾವು ಗೋಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಇತರರಿಗೂ ಮಾದರಿಯಾದ ಇವರು ಮಾತೆಯೊಬ್ಬರನ್ನು ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಲು ಪ್ರೋತ್ಸಾಹ ನೀಡಿದ್ದಾರೆ.

 

” ಶ್ರೀಮಠದ ಸೇವೆಯಲ್ಲಿ ನಿರತರಾದ ಮೇಲೆ ಬದುಕಿನಲ್ಲಿ ಸದಾ ಒಳಿತೇ ಆಗಿದೆ. ಗೋಸೇವೆ, ಗುರುಸೇವೆ ನಮ್ಮ ಬದುಕಿನಲ್ಲಿ ನಿರಂತರವಾಗಿ ಮುಂದುವರಿಯಬೇಕೆಂಬುದೇ ನನ್ನ ಅಭಿಲಾಷೆ ಎನ್ನುವ ಮಂಗಳಾ ಜೋಶಿ ಸಾವಯವ ವಸ್ತುಗಳ ಉಪಯೋಗಕ್ಕೆ ಸದಾ ಆದ್ಯತೆ ನೀಡುವವರು.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *