” ಗೋವು ಬದುಕಿನ ಜೀವನಾಡಿ ” : ಪಾರ್ವತಿ ಸುಬ್ಬರಾವ್

ಮಾತೃತ್ವಮ್

 

” ಹಸುಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಗೋ ಉತ್ಪನ್ನಗಳ ಬಳಕೆಯಿಲ್ಲದೆ ಮಾನವನಿಗೆ ಬದುಕಲು ಸಾಧ್ಯವಿಲ್ಲ. ಗೋವಿಲ್ಲದಿದ್ದರೆ ಆರೋಗ್ಯವೂ ಇಲ್ಲ. ನಮ್ಮ ಬದುಕಿನ ಜೀವನಾಡಿಯೇ ಗೋವು. ನಮ್ಮ ಪೂಜ್ಯ ಗುರುಗಳ ವಿಶೇಷ ಸಂಕಲ್ಪವು ಇಂದು ಜನಮಾನಸವನ್ನು ತಲುಪಿ ಜನತೆ ಗೋಮಾತೆಯ ಬಗ್ಗೆ ಪೂಜ್ಯ ಭಾವನೆಯನ್ನು ತಾಳುತ್ತಿದೆ. ಜನರು ಒಳಗಣ್ಣು ತೆರೆದು ಗೋಮಾತೆಯ ಸೇವೆಗೆ ಕೈ ಜೋಡಿಸಲಾರಂಭಿಸಿದ್ದಾರೆ ” ಈ ನುಡಿಗಳು ಸಾಗರ ಮಂಡಲದ ಬೋಳುಗೋಡು ವಲಯದ ಆನೆಗುಳಿ ಸುಬ್ಬರಾವ್ ಅವರ ಪತ್ನಿ ಪಾರ್ವತಿಯವರದ್ದು.

ಸಿದ್ದಾಪುರದ ಸಾತನಕೇರಿಯ ಸುಬ್ರಾಯ ಹೆಗಡೆ, ಜಾನಕಿ ಸುಬ್ರಾಯ ಹೆಗಡೆಯವರ ಪುತ್ರಿಯಾದ ಪಾರ್ವತಿ ಸುಬ್ಬರಾವ್ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ಗೋಸ್ವರ್ಗದ ಸಸ್ಯಸೇವಾ ವಿಭಾಗದಲ್ಲಿ ನಮ್ಮವರು ಸೇವೆ ಮಾಡುತ್ತಿದ್ದರು. ಅಲ್ಲಿ ‘ ಹರೇರಾಮ, ಗೋಸ್ವರ್ಗ ‘ ಎಂಬ ವಿನ್ಯಾಸದಲ್ಲಿ ಗಿಡಗಳನ್ನು ನೆಡಲು ರೂಪುರೇಷೆ ನೀಡಿದವರು ನಮ್ಮವರು. ಮನೆಯಲ್ಲೂ ಗೋವುಗಳನ್ನು ಸಾಕುವ ನಮಗೆ ಗೋಸೇವೆ ರಕ್ತಗತವಾಗಿ ಬಂದಿದೆ ” ಎನ್ನುವ ಇವರಿಗೆ ತಮ್ಮ ಜೀವನದ ಸಕಲ ಕಷ್ಟಗಳು ಪರಿಹಾರವಾಗಿದ್ದು ಶ್ರೀಗುರುಗಳ ಕೃಪೆಯಿಂದ ಎಂಬ ನಂಬಿಕೆ.

” ಕೆಲವು ತಿಂಗಳುಗಳ ಹಿಂದೆ ನಮ್ಮವರಿಗೆ ಕಿರು ಅಪಘಾತವಾಗಿತ್ತು. ಶ್ರೀಗುರುಗಳ ಅನುಗ್ರಹದಿಂದ ಇಂದು ಸಂಪೂರ್ಣ ಗುಣಮುಖರಾಗಿದ್ದಾರೆ. ಶ್ರೀಗುರು ಅನುಗ್ರಹ ನಮ್ಮನ್ನು ಸದಾ ಕಾಯುತ್ತಿದೆ ಎನ್ನುವ ನಂಬಿಕೆಯೇ ಜೀವನಾಧಾರ. ಇಬ್ಬರು ಹೆಣ್ಣುಮಕ್ಕಳಿಗೂ ಮದುವೆಯಾಗಿದೆ. ನೆಮ್ಮದಿಯ ಬದುಕು ಶ್ರೀಗುರುಗಳ ಕೃಪೆ ” ಪಾರ್ವತಿಯವರ ಮಾತುಗಳಲ್ಲಿ ಅಚಲವಾದ ಶ್ರೀಗುರು ಭಕ್ತಿ ಎದ್ದು ಕಾಣುತ್ತದೆ.

” ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ಮಾಸದ ಮಾತೆಯಾದೆ. ಗೋಮಾತೆಯ ಸೇವೆಗೆ ಅನೇಕ ಮಂದಿ ಕೈ ಜೋಡಿಸಿದ್ದಾರೆ. ಶ್ರೀಗುರುಗಳ ಕೃಪೆಯಿಂದ ಗುರಿ ತಲುಪಲು ಸಾಧ್ಯವಾಯಿತು ” ಎನ್ನುವ ಇವರಿಗೆ ಇನ್ನಷ್ಟು ಗೋಸೇವೆ, ಶ್ರೀಮಠದ ಸೇವೆಯಲ್ಲಿ ಮುಂದುವರಿಯುವ ಅಭಿಲಾಷೆಯಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *