” ಶ್ರೀಗುರುಗಳ ದರ್ಶನ ಮಾತ್ರದಿಂದಲೇ ಮನದ ಗೊಂದಲ ನಿವಾರಣೆ ” : ತೇಜಸ್ವಿನಿ ಕೆ.ಎನ್ ಬೆಂಗಳೂರು

ಮಾತೃತ್ವಮ್

 

” ಮದುವೆಗೂ ಮೊದಲು ಶ್ರೀಮಠದ ಸಂಪರ್ಕ ದೊರಕಿತ್ತು. ಚಾತುರ್ಮಾಸ್ಯದ ಸಂದರ್ಭಗಳಲ್ಲಿ ಶ್ರೀಮಠಕ್ಕೆ ಹೋಗುತ್ತಿದ್ದೆ. ಶ್ರೀಗುರುಗಳ ದರ್ಶನ ಮಾತ್ರದಿಂದಲೇ ಮನದ ಅನೇಕ ಗೊಂದಲಗಳು ನಿವಾರಣೆಯಾಗಿವೆ. ಜೀವನದ ಸಣ್ಣ ಪುಟ್ಟ ಸಮಸ್ಯೆಗಳಿಗೂ ಕೇವಲ ಪ್ರಾರ್ಥನೆಯಿಂದಲೇ ಪರಿಹಾರ ದೊರಕಿದೆ. ಮದುವೆಯ ನಂತರ ಬೆಂಗಳೂರಿಗೆ ಬಂದ ಮೇಲೆ ಶ್ರೀಮಠದ ಸಂಪರ್ಕ ಹೆಚ್ಚಾಯಿತು. ಮಠದ ವಿವಿಧ ಯೋಜನೆಗಳಿಗೂ ಕೈ ಜೋಡಿಸುವ ಅವಕಾಶ ದೊರಕಿತು ” ಎನ್ನುವವರು ದಕ್ಷಿಣ ಕನ್ನಡದ ಪುಣಚ ದಂಬೆ ಮೂಲದ ಪ್ರಸ್ತುತ ಬೆಂಗಳೂರಿನ ಸರ್ವಜ್ಞ ವಲಯ ನಿವಾಸಿಗಳಾಗಿರುವ ರವಿಶಂಕರ ಶಾಸ್ತ್ರಿ ಅವರ ಪತ್ನಿ ತೇಜಸ್ವಿನಿ ಕೆ.ಎನ್

ಬಿಇ, ಎಂ.ಟೆಕ್ ಓದಿ ನೋಕಿಯಾ ನೆಟ್ವರ್ಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ತೇಜಸ್ವಿನಿಯವರು ಕೀರಿಕ್ಕಾಡು ಮೂಲದ ಪ್ರಸ್ತುತ ಸುಳ್ಯ ಎಣ್ಮೂರು ನಿವಾಸಿಗಳಾಗಿರುವ ನಾರಾಯಣ ಭಟ್, ಗಾಯತ್ರಿ ದಂಪತಿಗಳ ಪುತ್ರಿ.

ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ತೇಜಸ್ವಿನಿ ಕಥೆ, ಕವನ, ಭಾವಗೀತೆಗಳನ್ನು ರಚಿಸಿದ್ದಾರೆ. ‌ ವೀಣಾ ಗೋಪಾಲ್ ಅವರ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದ ಇವರು ಒಂದು ಗೋವಿನ ಒಂದು ವರ್ಷದ ಮೊತ್ತವನ್ನು ತಾವೇ ಸಂಪೂರ್ಣವಾಗಿ ನೀಡಿ ಪೂರ್ಣಪ್ರಮಾಣದ ದಾನಿಯಾಗಿದ್ದಾರೆ.

” ಶ್ರೀಗುರುಗಳ ಆಶೀರ್ವಚನಗಳನ್ನು ಕೇಳುತ್ತಿರುತ್ತೇನೆ. ಬದುಕಿಗೆ ಸ್ಪೂರ್ತಿ , ಧೈರ್ಯ, ಭರವಸೆ ತುಂಬುವುದು ಶ್ರೀಗುರುಗಳ ವಚನಗಳು. ತವರುಮನೆ ಹಾಗೂ ಪತಿಯ ಮನೆಯಲ್ಲಿ ಶ್ರೀಮಠದ ಸೇವೆ ಮಾಡಲು ಪೂರಕವಾದ ವಾತಾವರಣ ದೊರಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದೆನಿಸುತ್ತಿದೆ. ನಮ್ಮವರು ಹಾಗೂ ಮಗ ಇಬ್ಬರು ನನ್ನ ಸೇವೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ” ಎನ್ನುವ ತೇಜಸ್ವಿನಿಗೆ ಗೋಸೇವೆಯನ್ನು ಮುಂದುವರಿಸುವ ಅಭಿಲಾಷೆಯಿದೆ.

Leave a Reply

Your email address will not be published. Required fields are marked *