” ಗೋಮಾತೆಗಾಗಿ ಸಮಾಜ ಒಗ್ಗೂಡಲು ಕಾರಣ ಶ್ರೀಗುರುಗಳು ” : ಪೂರ್ಣಿಮಾ ಈಶ್ವರ ಭಟ್, ಮಂಗಳೂರು

ಮಾತೃತ್ವಮ್

 

” ಸಮಾಜದ ಒಳಿತಿಗಾಗಿ ಶ್ರೀಗುರುಗಳು ಕೈಗೊಂಡಿರುವ ಅನೇಕ ಯೋಜನೆಗಳಲ್ಲಿ ಅತ್ಯಂತ ಸರಳ,ಸುಲಭವಾಗಿರುವ ಯೋಜನೆ ಮಾತೃತ್ವಮ್. ಶ್ರೀಗುರುಗಳ ಅನುಗ್ರಹವಿದ್ದರೆ ಇದರಲ್ಲಿ ಗುರಿ ತಲುಪುವುದು ಕಷ್ಟಕರವಲ್ಲ. ಇಂದು ಗೋಮಾತೆಯ ಸೇವೆಗಾಗಿ ಸಮಾಜ ಒಂದಾಗುತ್ತಿದೆ ಎನ್ನಲು ಹರ್ಷವಾಗುತ್ತಿದೆ ” ಎಂದವರು ಮಂಗಳೂರು ಮಂಡಲ ಮಧ್ಯ ವಲಯದ ಕಿಳಿಂಗಾರು ಈಶ್ವರ ಭಟ್ ಅವರ ಪತ್ನಿ ಪೂರ್ಣಿಮಾ .

 

ಗೃಹಿಣಿಯಾಗಿರುವ ಇವರು ಗಂಗರಮಜಲು ಈಶ್ವರ ಭಟ್ , ಶಾರದಾ ದಂಪತಿಗಳ ಪುತ್ರಿ.‌

 

” ಲಕ್ಷ್ಮೀ ಪ್ರಕಾಶ್ ಹಾಗೂ ಸುಮಾ ರಮೇಶ್ ಅವರ ಪ್ರೋತ್ಸಾಹದಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ.‌ ಅನೇಕ ಮಂದಿ ದಾನಿಗಳು ಗೋಮಾತೆಯ ಸೇವೆಗೆ ಕೈ ಜೋಡಿಸಿದ್ದಾರೆ. ದೇಶೀಯ ಹಸುಗಳ ರಕ್ಷಣೆಯ ಬಗ್ಗೆ ಜನರು ಆಸಕ್ತಿ ಹೊಂದಿದ್ದಾರೆ. ದೇಶೀಯ ಗೋತಳಿಗಳ ಮಹತ್ವವನ್ನು ತಿಳಿಸುವ ಈ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇರಿದ ಐದೇ ತಿಂಗಳಲ್ಲಿ ನಾನು ಒಂದು ವರ್ಷದ ಗುರಿ ತಲುಪಿದೆ ” ಎನ್ನುವ ಇವರು ಉಳಿದ ಮೊತ್ತವನ್ನು ತಾವೇ ಭರಿಸಿ ಲಕ್ಷದ ಗುರಿಯನ್ನು ತಲುಪಿದ ಮಾಸದ ಮಾತೆಯಾಗಿ ಮುಂದಿನ ವಾರ ಗೋಸ್ವರ್ಗದ ಮಾತೃ ಸಮಾವೇಶದಲ್ಲಿ ಶ್ರೀಗುರುಗಳ ಕರಕಮಲಗಳಿಂದ ಬಾಗಿನ ಸ್ವೀಕರಿಸುವ ಹುಮ್ಮಸ್ಸಿನಲ್ಲಿದ್ದಾರೆ.

 

ಎಳವೆಯಿಂದಲೇ ಶ್ರೀಮಠದ ಸಂಪರ್ಕ ಹೊಂದಿದ್ದ ಇವರು ಇತ್ತೀಚಿನ ಎರಡು ದಶಕಗಳಿಂದ ಮತ್ತಷ್ಟು ನಿಕಟವಾಗಿದ್ದಾರೆ. ತವರುಮನೆಯಲ್ಲಿ ಹಸುಗಳ ಒಡನಾಟದ ನಡುವೆ ಬೆಳೆದ ಪೂರ್ಣಿಮಾ ಅವರಿಗೆ ಗೋವುಗಳ ಮೇಲೆ ಈಗಲೂ ವಿಶೇಷ ಮಮತೆ.

 

” ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಎಲ್ಲಾ ರೀತಿಯ ಯಶಸ್ಸುಗಳು ಲಭಿಸಿದೆ. ಶ್ರೀಮಠದ ಸೇವೆ ಮಾಡುವ ಅವಕಾಶ ದೊರಕುವುದೇ ಪೂರ್ವ ಜನ್ಮದ ಸುಕೃತದಿಂದ. ನನ್ನ ಶ್ರೀಮಠದ ಸೇವೆಗೆ ಮನೆಯವರೆಲ್ಲರ ಸಂಪೂರ್ಣ ಸಹಕಾರವಿದೆ ” ಇವರಿಗೆ ಶೀಘ್ರದಲ್ಲೇ ಎರಡು ವರ್ಷಗಳ ಗುರಿ ತಲುಪುವ ಭರವಸೆಯಿದೆ.

 

 

ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *