” ಶ್ರೀಗುರುಗಳ ಕೃಪೆಯಿಂದ ದೊರಕಿದ ಅಳಿಲು ಸೇವೆ ” : ವಸಂತಿ ಭಟ್, ಉಪ್ಪಂಗಳ

ಮಾತೃತ್ವಮ್

 

” ತವರುಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದರು. ಆಗಲೇ ಗೋವುಗಳ ಮೇಲೆ ಮಮತೆಯಿತ್ತು. ಮುಂದೆ ಕಲಿಕೆ,ಉದ್ಯೋಗಗಳ ನಡುವೆ ಹಸುಗಳ ಒಡನಾಟವೇ ತಪ್ಪಿ ಹೋದಂತಾಗಿತ್ತು. ಇದೀಗ ಶ್ರೀಗುರುಗಳ ಕೃಪೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಈ ಕಾರ್ಯಕ್ಕೆ ನನ್ನ ಅಳಿಲ ಸೇವೆ ಸಲ್ಲಿಸುತ್ತಿದ್ದೇನೆ ” ಎನ್ನುವವರು ಉಪ್ಪಿನಂಗಡಿ ಮಂಡಲ ಪುತ್ತೂರು ವಲಯದ ಉಪ್ಪಂಗಳ ರವಿಶಂಕರ ಭಟ್ ಅವರ ಪತ್ನಿ ವಸಂತಿ ಭಟ್.

ಪಾಂಡೇಲು ಮಹಾಲಿಂಗ ಭಟ್ , ಪರಮೇಶ್ವರಿ ಅಮ್ಮ ದಂಪತಿಗಳ ಪುತ್ರಿಯಾದ ವಸಂತಿ ಭಟ್ ಹಾಸನದ ಸರಕಾರಿ ಸೈನ್ಸ್ ಕಾಲೇಜ್ ನಲ್ಲಿ ಸಹ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲಕ್ಷ್ಮಿ ಪ್ರಕಾಶ್ ಇಳಂತಿಲ ಅವರ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಗೆ ಸೇರಿ ಮಾಸದ ಮಾತೆಯಾದ ಇವರು ಎರಡು ವರ್ಷದ ಮೊತ್ತವನ್ನು ಸಂಪೂರ್ಣ ತಾವೇ ಭರಿಸಿ ಗೋಮಾತೆಯ ಸೇವೆ ಮಾಡಿದವರು.

” ನನ್ನ ಉದ್ಯೋಗದ ನಡುವೆ ಸಮಯ ದೊರಕಿದಾಗ ಶ್ರೀಮಠಕ್ಕೆ ಹೋಗುತ್ತಿದ್ದೇನೆ. ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಶ್ರೀಗುರುಗಳ ಆಶೀರ್ವಾದದಿಂದ ಸಮಸ್ಯೆಗಳೆಲ್ಲ ಬಹಳ ಬೇಗನೆ ಬಗೆಹರಿದು ಮನದ ಇಚ್ಛೆಗಳೆಲ್ಲ ಕೈಗೂಡಿವೆ ” ಎನ್ನುವ ವಸಂತಿ ಭಟ್ ಅವರ ಪತಿ ರವಿಶಂಕರ ಭಟ್ ಸಹಾ ಶ್ರೀಮಠದ ಪರಮ ಭಕ್ತರು.

ಎಂ.ಡಿ . ಓದುತ್ತಿರುವ ಪುತ್ರಿ ಹಿರಣ್ಮಯಿ ಹಾಗೂ ಮನೆಯವರ ಸಂಪೂರ್ಣ ಪ್ರೋತ್ಸಾಹದಿಂದ ಗೋಸೇವೆ ಮಾಡುತ್ತಿರುವ ವಸಂತಿ ಭಟ್ ಅವರಿಗೆ ಶ್ರೀಗುರುಸೇವೆ, ಗೋಸೇವೆಗಳನ್ನು ನಿರಂತರವಾಗಿ ಮುಂದುವರಿಸುವ ಇಚ್ಛೆಯಿದೆ.

Leave a Reply

Your email address will not be published. Required fields are marked *