” ಶ್ರೀಗುರು ತೋರಿದ ಪಥದಲ್ಲಿ ಮುನ್ನಡೆಯುವೆವು ” : ವಸಂತಿ ಆರ್ ಭಟ್ ಪದ್ಯಾಣ

ಮಾತೃತ್ವಮ್

 

” ಸಮಾಜದ ಶ್ರೇಯೋಭಿವೃದ್ಧಿಗಾಗಿ ನಮ್ಮ ಗುರುಗಳು ಕೈಗೊಳ್ಳುವ ಅನೇಕ ಯೋಜನೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರಕಿರುವುದೇ ಸುಕೃತ. ಇಂತಹ ಗುರುಗಳನ್ನು ಪಡೆದ ನಾವೇ ಭಾಗ್ಯವಂತರು. ಶ್ರೀಗುರುಗಳನ್ನು ನಂಬಿದವರಿಗೆ ಬದುಕಿನಲ್ಲಿ ನೆಮ್ಮದಿ, ಶಾಂತಿ ಖಂಡಿತ ದೊರಕುತ್ತದೆ. ಅದಕ್ಕಾಗಿಯೇ ಅವರು ತೋರಿದ ಪಥದಲ್ಲಿ ಮುನ್ನಡೆಯುವ ಅಭಿಲಾಷೆ ನಮ್ಮದು ” ಹೀಗೆನ್ನುವವರು ಮಂಗಳೂರು ಮಂಡಲ ಮಧ್ಯ ವಲಯದ ನಿವಾಸಿಗಳಾಗಿರುವ ಪದ್ಯಾಣ ರಾಮಕೃಷ್ಣ ಭಟ್ಟರ ಪತ್ನಿ ವಸಂತಿ ಆರ್ ಭಟ್ .

ಕಳಂಜ ವಾರಣಾಸಿಯ ಸೀತಾರಾಮಯ್ಯ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸಂಪರ್ಕವನ್ನು ಹೊಂದಿದ್ದಾರೆ.

” ಎರಡು ವರ್ಷಗಳ ಹಿಂದೆ ಶ್ರೀಗುರುಗಳು ನಂತೂರಿಗೆ ಬಂದಿದ್ದಾಗ ಅವರ ಆಶೀರ್ವಚನದ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ. ಗೋಮಾತೆಯ ಸೇವೆಗೆ ಅನೇಕ ಮಂದಿ ಕೈ ಜೋಡಿಸಿದ್ದಾರೆ. ಕೇಳಿದವರು ಯಾರೂ ನಿರಾಕರಿಸಲಿಲ್ಲ.‌ ಸಮಾಜದ ಎಲ್ಲಾ ಸಮುದಾಯದವರೂ ದೇಶೀಯ ಗೋವುಗಳ ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದಾರೆ‌. ಶ್ರೀಗುರುಗಳ ಕೃಪೆಯಿಂದ ಬಹಳ ಬೇಗನೆ ಗುರಿ ತಲುಪಿದೆ ” ಎನ್ನುವ ವಸಂತಿ ಭಟ್ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ಮಂಗಳೂರು ಮಧ್ಯ ವಲಯದಲ್ಲಿ ಶ್ರೀಕಾರ್ಯಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಿರುವ ಇವರಿಗೆ ಶ್ರೀಮಠದ ಸೇವೆಗಳಲ್ಲಿ ಕೈ ಜೋಡಿಸಲು ವಿಶೇಷ ಒಲವಿದೆ. ಬದುಕಿನಲ್ಲಿ ಶಿಸ್ತು, ನೆಮ್ಮದಿ ನೆಲೆಸಿದ್ದು ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಎನ್ನುವ ನಂಬಿಕೆ ಇವರದ್ದು.

” ಇಬ್ಬರು ಹೆಣ್ಣುಮಕ್ಕಳಿಗೂ ಶ್ರೀಮಠದ ಸೇವೆಯಲ್ಲಿ ಆಸಕ್ತಿಯಿದೆ. ನನ್ನ ಸೇವೆಗೆ ಅವರ ಸಹಕಾರವೂ ಇದೆ. ಮ‌ನೆಯವರ ಬೆಂಬಲ ಪ್ರೋತ್ಸಾಹ ನನಗೆ ಸದಾ ಸ್ಪೂರ್ತಿ. ಇನ್ನಷ್ಟು ಕಾಲ ಶ್ರೀಗುರುಗಳ ಸೇವೆಗೆ ಬದುಕನ್ನು ಮುಡಿಪಾಗಿಡಬೇಕೆಂಬುದೇ ದೇವರಲ್ಲಿ ಪ್ರಾರ್ಥನೆ ” ಎನ್ನುವ ವಸಂತಿ ಆರ್ ಭಟ್ ಅವರ ಮನಸ್ಸು ಸದಾ ಗುರುಸೇವೆ ,ಗೋಸೇವೆಗಾಗಿ ಮಿಡಿಯುತ್ತಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *