ಕನ್ಯಾನ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪದಂತೆ ಅ.೨೧ರಂದು ಪ್ರಾರಂಭಿಸಿ ಅ.೨೯ g ವರೆಗೆ ಕನ್ಯಾನ ಹವ್ಯಕ ವಲಯದಲ್ಲಿ ರಾಮಾಯಣ ಪಾರಾಯಣ ನಡೆಯಿತು.
ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಂಗಳವಾರ ಪ್ರತಿ ರುದ್ರ ಪಾರಾಯಣ ಮತ್ತು ವಿಷ್ಣು ಸಹಸ್ರನಾಮ ಪಠಣದೊಂದಿಗೆ ಸಮಾಪನಗೊಂಡಿದೆ. ರಾಮಾಯಣದ ಅರ್ಥವಿವರಣೆಯನ್ನು ವೇದಮೂರ್ತಿ ಶಂಕರ ಭಟ್ಟರು ನೆರವೇರಿಸಿದರು.
ಸಮಾರೋಪ ಸಮಾರಂಭದಲ್ಲಿ ಕನ್ಯಾನ ಹವ್ಯಕ ವಲಯ ಅಧ್ಯಕ್ಷ ಈಶ್ವರಪ್ರಸಾದ್, ಕಾರ್ಯದರ್ಶಿ ರವಿಶಂಕರ ಪನೆಯಡ್ಕ ಮತ್ತು ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.