ಮಾನವಾ..ಮಾನವಾ.ಓ ಮಾನವಾ..!
ನೀ ಆರಿಗಾದೆಯೋ ಎಲೆ ಹುಲು ಮಾನವಾ,
‘ಗೋಸಂತತಿ’ಯ ಉಳಿಸದೇ..
ನನ್ನ ಹತ್ಯೆಯಾ ಮಾಡಿ
ಸಿಗುವ ಫಲವೇನು ಮಾನವಾ..|1|
ಎಳ್ಳ ಪ್ರೀತಿಯ ನೀ ಇತ್ತರೇ ಎನಗೆ
ಬೆಟ್ಟದಾ ಮಮತೆಯ ನಾ ಕೊಡುವೆ ನಿನಗೆ..
ಹಳಸಿ- ಪುಂಟಿಸಿದ ಹಿಂಡಿ
ಯನಿತ್ತರೆ…
‘ಅಮೃತಧಾರೆ’ಯನೇ ನಾ ಸುರಿವೆ ನಿನಗೆ..
ಅದರೂ ನಿನ್ನ ನಾಲಿಗೆಯ ಕ್ಷಣ ಚಪಲಕೆ..
ಎನ್ನ ಹತ್ಯೆಯ ಮಾಡಿ
ಸಿಗುವ ಫಲವೇನು ಓ ಮಾನವಾ.|2|
ಕರೆದರೆ ಹಾಲಾಗಿ,ಹೆಪ್ಪಿಸಿದರೆ ಮೊಸರಾಗಿ..
ಮಥಿಸಿದರೆ ಮಜ್ಜಿಗೆಯೊಳಗೆ ಬೆಣ್ಣೆಯಾಗಿ..
ತುಸು ಕಾಯಿಸಿದರೆ ತುಪ್ಪವಾಗಿ
ನಿನ್ನ ಮನೆಯನೇ ‘ಸು’ ವಾಸಿಸುವ
ಎನ್ನ ಹತ್ಯೆಯ ಮಾಡಿ
ಸಿಗುವ ಫಲವೇನು ಓ ಮಾನವಾ.|3|
ನಿನ್ನ ಜೀವನವಿಡೀ ಎನ್ನ ‘ಕ್ಷೀರ’ದಿ ಉಂಡೆ,ಮಿಂದೆ,ತೇಗಿದೆ….
ಸಿಹಿ ಮಾಡಿ ಹಂಚಿದೆ….
‘ಮೃತ್ಯು’ ವಿನ ಬಳಿಕವೂ ನಿನ್ನ ‘ಅಸ್ಥಿ’ ಯನು ಎನ್ನ ದಧಿ,ಕ್ಷೀರದಿ ಅದ್ದಿ ಶುಧ್ದಿಸಿದೆ..ಆದರೂ ನೀ
ಎನ್ನ ಹತ್ಯೆಯ ಮಾಡಿ
ಸಿಗುವ ಫಲವೇನು ಓ ಮಾನವಾ.|4|
ಯೋಚಿಸು,ಯೋಚಿಸು..ಇನ್ನಾದರೂ ಕಾಲ ಮಿಂಚಿಲ್ಲ..
ಎನ್ನ ಕಾಪಾಡಿದರೆ ನಿನ್ನ ಸಂಸಾರವನುಳಿಸುವೆ..
ನನಗೆ ತುತ್ತಿತ್ತರೆ ನಿನ್ನ ಜನುಮವಿಡೀ ತುತ್ತೀವೆ…
ಎನ್ನ ‘ಸೇವೆ’ಯ ಮಾಡಿದರೆ ನಿನ್ನ ಮರಣದ ನಂತರದಿ.,
ನಿನ್ನ ‘ಸ್ವರ್ಗ’ ಸುಖದ ಬಯಕೆಯ ತೀರಿಸಲು
ಎನ್ನ ಬಾಲವ ಪಿಡಿದು ನಿನ್ನ
ದಾಟಿಸುವೆ “ವೈತರಣೀ ನದಿ”ಯನು
ನೀ ಕಾಣುವೆ ಆ ಪರಮಾನಂದವ…ನಂಬೆನ್ನ ಮಾನವಾ.. ಆದರೂ..ನೀ
ಎನ್ನ ಹತ್ಯೆಯ ಮಾಡಿ
ಸಿಗುವ ಫಲವೇನು ಓ ಮಾನವಾ.|5|
ಬಿಡು ಬಿಡು ನಿನ್ನ ನೀಚ ಬುಧ್ದಿಯ..
ಬಿಡು ಬಿಡು ಎನ್ನ ಬದುಕಲು..
ಎನಗೆ ಕೊಡು “ಸಹಜ ಮರಣ”ದ ಅವಕಾಶವಾ…
ನೀ ಎನ್ನ ನೋವ ಅರಿಯ ಸಲುವಾಗಿ ಹುಟ್ಟಿ ಬಾ “ಪಶು”ವಾಗಿಯೆಂದು ಹೇಳಲೇ.ಶಪಿಸಲೇ….ಬೇಡ …ಬೇಡಾ..!!!!
ನೀ ‘ದಾನವ’ನಾಗದೆ “ಮಾನವ”ನಾಗಿ “ಮಾಧವಾನಾಗುವ” ಸಾಧನೆಯ ಮಾ…ಡೂ……
ಎನ್ನ ಕಾಯುವ ತಂದೆ “ಗೋವಿಂದಗೆ,….
ಆರಾಧ್ಯಗುರುವಿಗೆ,ಗೋಬಂಧು”ಗಳಿಗೆ ಇನ್ನಷ್ಟು ಶಕ್ತಿಯ ಕೊಡು ..
ಎನ್ನ ಸಂತತಿಯ ರಕ್ಷಿಸಲೂ…!!!!
!!!!!ನಾ ಶರಣು..ಶರಣೂ.. ದೇವಾ…ಗುರುದೇವಾ…ಪ್ರಭು ಶ್ರೀ ರಾ..ಮಾ….!!!!!|6|