ಮಾತು~ಮುತ್ತು : ವಿಶ್ವಾಸವೇ ಮುಖ್ಯ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

ಒಂದು ದಿನ ಒಂದು ಶಾಲೆಯಲ್ಲಿ ಒಬ್ಬ ಅಧ್ಯಾಪಕರು ವಿದ್ಯಾರ್ಥಿಗಳ ಹತ್ತಿರ, ದೇವರು ಕಾಣಿಸದೇ ಇರುವುದರಿಂದ ದೇವರಿಲ್ಲ ಎಂದು ತಿಳಿಸುವುದಕ್ಕಾಗಿ,

“ನಿಮಗೆ ಹೊರಗಡೆ ಗಿಡಮರಗಳು ಕಾಣಿಸುತ್ತದೆಯೇ?” ಎಂದು ಕೇಳುತ್ತಾರೆ.
ಆಗ ವಿದ್ಯಾರ್ಥಿಗಳು “ಹೌದು” ಎನ್ನುತ್ತಾರೆ.

“ಆಕಾಶ ಕಾಣಿಸುತ್ತದೆಯೆ? ಸುತ್ತಮುತ್ತಲಿನ ವಸ್ತುಗಳು ಕಾಣಿಸುತ್ತವೆಯೆ?” ಎಂದು ಕೇಳುತ್ತಾರೆ.
ವಿದ್ಯಾರ್ಥಿಗಳು “ಹೌದು” ಎನ್ನುತ್ತಾರೆ.

ಕೊನೆಯಲ್ಲಿ, “ದೇವರು ಕಾಣಿಸುತ್ತಾನೆಯೆ?” ಎಂದು ಕೇಳುತ್ತಾರೆ.
ವಿದ್ಯಾರ್ಥುಗಳು “ಇಲ್ಲ” ಎನ್ನುತ್ತಾರೆ.

ಆಗ ಅಧ್ಯಾಪಕರು, “ಯಾವುದು ಕಣ್ಣಿಗೆ ಗೋಚರಿಸುವುದಿಲ್ಲವೋ ಅದು ಇಲ್ಲ ಎಂದೇ ಅರ್ಥ” ಎಂದು ವಿವರಿಸುತ್ತಾರೆ.

ಆ ಅಧ್ಯಾಪಕರು ಹೊರಗಡೆ ಹೋದಾಗ ಒಬ್ಬ ಪುಟ್ಟ ಹುಡುಗ ಸಹಪಾಠಿಗಳ ಹತ್ತಿರ,
“ನಿಮಗೆ ಯಾರಿಗಾದರೂ ಅಧ್ಯಾಪಕರ ಮೆದುಳು ಕಾಣಿಸುತ್ತದೆಯೆ?” ಎಂದು ಕೇಳುತ್ತಾನೆ.
ಸಹಪಾಠಿಗಳು ಒಕ್ಕೊರಲಿನಿಂದ “ಇಲ್ಲ” ಎನ್ನುತ್ತಾರೆ.

ಆಗ ಈ ಹುಡುಗ,
“ಮೆದುಳು ಕಾಣಿಸದೇ ಇರುವುದರಿಂದ ನಮ್ಮ ಅಧ್ಯಾಪಕರಿಗೆ ಮೆದುಳೇ ಇಲ್ಲ” ಎಂದು ಹೇಳುತ್ತಾನೆ.

ಕಾಣಲಿಲ್ಲ ಎಂದ ಮಾತ್ರಕ್ಕೆ ಅದಿಲ್ಲ ಎಂದು ಅರ್ಥವಲ್ಲ. ನಮಗೆ ಕಾಣಲಿಲ್ಲ ಎಂದು ಅರ್ಥ. ನಮಗೆ ವಿಶ್ವಾಸವಿದ್ದರೆ ಸಾಕು. ದೇವರಿದ್ದಾನೆ, ನಮ್ಮ ಕಷ್ಟ ಪರಿಹರಿಸುತ್ತಾನೆ ಎಂಬ ವಿಶ್ವಾಸವೇ ನಮ್ಮನ್ನು ಕಾಪಾಡುವ ಸಾಧ್ಯತೆ ಇದೆ.

Author Details


Srimukha

1 thought on “ಮಾತು~ಮುತ್ತು : ವಿಶ್ವಾಸವೇ ಮುಖ್ಯ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

Leave a Reply

Your email address will not be published. Required fields are marked *