ಮಾತು~ಮುತ್ತು : ದೇವತೆಗಳು ಮತ್ತು ಅಸುರರು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

ದೇವಲೋಕ, ಭೂಲೋಕ ಮತ್ತು ಪಾತಾಳಲೋಕ ಎಲ್ಲವೂ ಭಗವಂತನ ಸೃಷ್ಟಿಯೇ. ದೇವತೆಗಳೆಂದರೆ ಬೆಳಕು, ರಾಕ್ಷಸರೆಂದರೆ ಕತ್ತಲು. ದೇವತೆಗಳು ಸ್ವರ್ಗದಲ್ಲಿ ಇದ್ದರೆ, ರಾಕ್ಷಸರು ಪಾತಾಳದಲ್ಲಿ ಇರುತ್ತಾರೆ. ರಾಕ್ಷಸರಿಗೆ ಅನಿಸುತ್ತದೆ; ಇದು ತಾರತಮ್ಯ. ಹಾಗಾಗಿ ಅವರು ಬ್ರಹ್ಮನಲ್ಲಿ ಹೋಗಿ ಕೇಳುತ್ತಾರೆ-
“ನಾವೇಕೆ ಪಾತಾಳದಲ್ಲಿರಬೇಕು?” ಎಂದು.
ಬ್ರಹ್ಮನು- “ನಾಳೆ ಬನ್ನಿ. ದೇವತೆಗಳನ್ನೂ ಕರೆಯುತ್ತೇನೆ. ನಿಮಗೆಲ್ಲರಿಗೂ ಭೋಜನ ಏರ್ಪಡಿಸಿ ಉತ್ತರ ತಿಳಿಸುತ್ತೇನೆ” ಎನ್ನುತ್ತಾನೆ.

 

ದೇವತೆಗಳೂ, ರಾಕ್ಷಸರೂ ಮರುದಿನ ಒಟ್ಟಾಗಿ ಸೇರುತ್ತಾರೆ.
ರಾಕ್ಷಸರು-
“ನಮಗೇ ಮೊದಲು ಭೋಜನ ಬಡಿಸಿ” ಎನ್ನುತ್ತಾರೆ.
ಬ್ರಹ್ಮ-
“ಹಾಗೇ ಆಗಲಿ; ಆದರೆ ಒಂದು ಷರತ್ತು, ನೀವೆಲ್ಲರೂ ಎದುರು ಬದುರಾಗಿ ಸಾಲಿನಲ್ಲಿ ಕುಳಿತು ಕೈ ಬಾಗಿಸದೇ ಊಟ ಮಾಡಬೇಕು” ಎನ್ನುತ್ತಾನೆ.

 

ರಾಕ್ಷಸರು ಅದಕ್ಕೆ ಒಪ್ಪುತ್ತಾರೆ. ಆದರೆ ಕೈ ಬಾಗಿಸದೇ ಊಟ ಮಾಡಲು ಸಾಧ್ಯವಾಗದೇ ಹಸಿವಿನಿಂದ ಬಳಲುತ್ತಾರೆ. ಈಗ ದೇವತೆಗಳ ಸರದಿ. ಅವರು ಅದೇ ರೀತಿ ಕುಳಿತುಕೊಳ್ಳುತ್ತಾರೆ. ಆದರೆ ಉಪಾಯ ಒಂದನ್ನು ಯೋಚಿಸಿ ಕೈ ಬಾಗಿಸದೇ ಊಟ ಮಾಡಿ ಸಂತೋಷ ಪಡುತ್ತಾರೆ.

 

ಆಗ ಬ್ರಹ್ಮ ಹೇಳುತ್ತಾನೆ- “ಇದೇ ಕಾರಣಕ್ಕಾಗಿ ನೀವು ಹೀಗಿದ್ದೀರಿ, ದೇವತೆಗಳು ಹಾಗಿದ್ದಾರೆ.”

 

ದಾತಾ ಎಂದರೆ ದೇವತೆಗಳು, ರಕ್ತಾ ಎಂದರೆ ರಾಕ್ಷಸರು. ಯಾರು ಇತರರಿಗೆ ಕೊಡುತ್ತಾರೆಯೋ ಅವರು ದೇವರ ಸಮಾನರಾಗುತ್ತಾರೆ. ಯಾರು ಎಲ್ಲವನ್ನೂ ತಮಗೇ ಸ್ವಾರ್ಥಕ್ಕಾಗಿ ಬಳಸುತ್ತಾರೋ ಅವರು ರಾಕ್ಷಸರಾಗುತ್ತಾರೆ. ನಮ್ಮಿಂದ ಸಾಧ್ಯವಾದಷ್ಟು ನಾವು ದಾನಮಾಡಿದರೆ ದೈವೀಗುಣ ಸಂಪನ್ನರಾಗುತ್ತೇವೆ.

Author Details


Srimukha

Leave a Reply

Your email address will not be published. Required fields are marked *