ಯೋಧರ ಬಲಿದಾನಕ್ಕೆ‌ ಯೋಗ್ಯರೇ ನಾವು?

  ಜಗತ್ತಿನ ಅತಿ ಪುರಾತನ ಮತ್ತು ಸನಾತನ ಸಂಸ್ಕೃತಿ ನಮ್ಮದು. ನಮ್ಮ ಇತಿಹಾಸ, ನಮ್ಮ ಕಲೆ, ನಮ್ಮ ಸಾಹಿತ್ಯ, ನಮ್ಮ ಭಾಷೆ ಎಲ್ಲವೂ ಜಗತ್ತಿಗೆ ಎಂದಿಗೂ ಅಚ್ಚರಿಯೇ. ಸಾವಿರ ವರ್ಷಕ್ಕೂ ಹೆಚ್ಚು ಕಾಲದಿಂದ ಆಕ್ರಮಣಕ್ಕೊಳಗಾಗಿಯೂ ತನ್ನತನವನ್ನು ಇನ್ನೂ ಉಳಿಸಿಕೊಂಡಿರುವ ಯಾವುದಾದರೂ ಬೇರೆ ದೇಶ ಇದೆಯೇ ಜಗತ್ತಿನಲ್ಲಿ? ಅಲೆಕ್ಸಾಂಡರನಿಂದ ಆರಂಭವಾಗಿ ಮೊನ್ನೆ ಪುಲ್ವಾಮಾದಲ್ಲಿ ನಡೆದ ಆಕ್ರಮಣದ ವರೆಗೆ, ಸಾವಿರವೇನು ಲಕ್ಷಕ್ಕೂ ಅಧಿಕ ಸಣ್ಣ-ದೊಡ್ಡ, ವಿವಿಧ ರೂಪದ ದಾಳಿಗಳು ನಡೆದಿವೆ ನಮ್ಮ ಮೇಲೆ. ಅದೆಲ್ಲದರ ಹೊರತಾಗಿಯೂ ಇಂದು ನಾವು ತಲೆ […]

Continue Reading

ಬೆಳಕಿನೊಳಗೊಂದು ಕತ್ತಲು

ನಮ್ಮೂರಲ್ಲೊಂದು ಮಾರಿಜಾತ್ರೆ. ಹಳ್ಳಿಯಲ್ಲಿ ಜಾತ್ರೆಯೆಂದರೆ ಅದೇನೋ ಸಂಭ್ರಮ. ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸೋ ಕ್ಷಣ. ಹಳೆ ಗೆಳೆಯ ಗೆಳತಿಯರು, ಪರಿಚಿತರು. ಹೀಗೆ ಊರ ಜಾತ್ರೆಯೆಂದರೆ ಒಂಥರ ಹಬ್ಬವೆಂದೇ ಹೇಳಬಹುದು. ಎಲ್ಲೆಡೆ ಬೆಳಕಿನ ಮೆರಗು. ವಿವಿಧ ಬಗೆಯ ಆಟಿಕೆಯ ಅಂಗಡಿ, ಹೂವಿನ ಅಲಂಕಾರಿಕ ಮಳಿಗೆ. ವಿವಿಧ ತಿಂಡಿ ತಿನಿಸುಗಳ ಅಂಗಡಿ. ಬಳೆ ಅಂಗಡಿಗಳಂತೂ ಲೆಕ್ಕವಿಲ್ಲದಷ್ಟು ಬಗೆಯವು. ಪ್ಲಾಸ್ಟಿಕ್ ಆಟಿಕೆ ಅಂಗಡಿ, ವಿವಿಧ ಗಾಜಿನ ಪಾತ್ರೆಯ ಮಳಿಗೆ. ಹೀಗೆ ಹತ್ತು ಹಲವು. ಬಣ್ಣದ ಬಲೂನು ಊದುತ್ತಾ, ಮಾರುತ್ತ ಸಾಗುವ ಹುಡುಗರು, […]

Continue Reading

ಸಂತೋಷ ಮತ್ತು ತೃಪ್ತಿ

“ನಾನು ಶ್ರೀಮಂತನಿದ್ದೇನೆ, ನನ್ನ ಬಳಿ ಎಲ್ಲವೂ ಇದೆ, ನನಗೆ ಎಲ್ಲವೂ ಗೊತ್ತಿದೆ.. ಆದರೂ ನನಲ್ಲಿ ಸಂತೋಷ ಮತ್ತು ಸಂತೃಪ್ತಿ ಇಲ್ಲ, ಯಾಕೆ?” ಎಂದು ಪ್ರತಿಷ್ಠಿತ ವೆಬ್ಸೈಟ್ ಕೋರಾದಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದರು. ಹಾಗಿದ್ದರೆ ಸಂತೋಷ ಮತ್ತು ತೃಪ್ತಿ ಯಾವಾಗ ಆಗುತ್ತದೆ, ಯಾವುದರಿಂದ ಆಗುತ್ತದೆ ಎಂಬುದರ ಕುರಿತು ನಾವು ತಿಳಿಯುವ ಪ್ರಯತ್ನ ಮಾಡೋಣ. ಸಂತೋಷಕ್ಕೂ ತೃಪ್ತಿಗೂ ವ್ಯತ್ಯಾಸ ಇದೆ. ಸಂತೋಷ ಎಂಬುದು ಆಹ್ಲಾದಕರ ಅನುಭವ, ಆನಂದದ‌ ಸ್ಥಿತಿ. ನಾವು ಇಷ್ಟಪಡುವ, ಪ್ರೀತಿಸುವ ವಸ್ತುಗಳು ಸಿಕ್ಕಾಗ, ಕೆಲಸಗಳನ್ನು ಮಾಡಿದಾಗ, ವ್ಯಕ್ತಿಗಳನ್ನು […]

Continue Reading

‘ಓವೀ’ ಎಂಬ ದೇಶೀ ಪ್ರಬಂಧ

ಭಾರತೀಯ ಸಂಗೀತ ಇತಿಹಾಸದಲ್ಲಿ ಸಂಗೀತಶಾಸ್ತ್ರಗ್ರಂಥರಚನೆಯ ಕೊಡುಗೆಯಲ್ಲಿ ಕರ್ಣಾಟಕದ ಶಾಸ್ತ್ರಕಾರರದೇ ಮೇಲುಗೈ. ಉತ್ತರ – ದಕ್ಷಿಣಾದಿ ಸಂಗೀತಗಳೆಂದು ಕವಲೊಡೆಯುವ ಸಂದರ್ಭವುಂಟಾದಾಗ, ಈಗಲೂ ಅದೆಷ್ಟೋ ಮೂಲವಾದ, ಪ್ರಾಚೀನ ವಿಷಯಗಳನ್ನು ಉಳಿಸಿಕೊಂಡಿರುವ ದಕ್ಷಿಣ ಭಾರತದ ಸಂಗೀತಕ್ಕೆ ಕರ್ಣಾಟಕಸಂಗೀತವೆಂದೇ ಹೆಸರುಂಟಾಗಲು ಕರ್ಣಾಟಕದ ಶಾಸ್ತ್ರಕಾರರ ಗ್ರಂಥಗಳೇ ಕಾರಣವಾದವು.   ಈಗ ಶಾಸ್ತ್ರೀಯ ಸಂಗೀತವೆಂದು ಕರೆಯಲ್ಪಡುವ ಸಂಗೀತವು ಸುಮಾರು 250-275 ವರ್ಷಗಳಿಗಿಂತ ಈಚೆಗೆ ರೂಪಿತವಾದಂತಹುದು. ಪ್ರಾಚೀನದಿಂದಲೂ ನಮ್ಮ ಸಂಗೀತಶಾಸ್ತ್ರಕಾರರು ಮಡಿವಂತರಾಗದೆ, ಕೇವಲ ಮಾರ್ಗಸಂಗೀತವನ್ನು ಮಾತ್ರ ಹೇಳದೆ ಭಾರತವಿಡೀ ಹಲವು ಪ್ರಾಂತ್ಯಗಳಲ್ಲಿ ಆಗ ಪ್ರಚಲಿತವಿದ್ದ ದೇಶೀ ಜನಪದ ಸಂಗೀತ […]

Continue Reading

ಮಗು ಕಾಯುವುದಿಲ್ಲ…

‘A baby is God’s opinion that the world should go on.’ ಇದು ಅಮೆರಿಕನ್ ಕವಿ ಕಾರ್ಲ್ ಸ್ಯಾಂಡ್ಬರ್ಗನ ಮಾತು. ‘ಜಗತ್ತಿನ ಮುಂದುವರಿಕೆಯ ಕುರಿತು ದೇವರ ನಿರ್ಣಯ ಮಗು’, ಅಂದರೆ ಜೀವಕೋಟಿಯ ಮುಂದುವರಿಕೆಗಾಗಿ ದೇವರು ಮಕ್ಕಳನ್ನು ಸೃಷ್ಟಿಸುತ್ತಾನೆ. ‌ಪೀಳಿಗೆ ಮತ್ತು ಸಂಸ್ಕೃತಿಗಳೆರಡೂ ಮುಂದುವರಿಯುವುದು ಮಕ್ಕಳಿಂದ. ಹಾಗಾಗಿ ಮಕ್ಕಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವುದೇ ನಮ್ಮ ಪರಂಪರೆಯ ಮುಂದುವರಿಕೆ.   ನಮಗೆ ನೋಬೆಲ್ ಪಾರಿತೋಷಕ ವಿಜೇತೆ, ಚಿಲಿ ದೇಶದ ಧೀಮಂತ ಮಹಿಳೆ ಗಾಬ್ರಿಯೆಲಾ ಮಿಸ್ತ್ರಾಲೆ ಪ್ರಪಂಚದ ಹಿರಿಯರಿಗೆ ನೀಡಿದ […]

Continue Reading

ದೊಡ್ಡ ಗೌಡರ ಆಲದ ಮರವೂ, ಪಾರಿವಾಳವೂ

ಭುರ್ರ್..ರ್..ರ್..! ಅಬ್ಬಾ…ಸಂಜೆಗೆಂಪಿನ ಬಾನಂಗಳದಲ್ಲಿ ಕಪ್ಪು ಚುಕ್ಕೆಗಳ ಚಿತ್ರ ವಿಸ್ಮಯವೇ! ಸಂಜೆಯಾಯಿತೆಂದರೆ, ಆ ಪಾರಿವಾಳಗಳ ಸಮೂಹ ನರ್ತನವನ್ನು ನೋಡಲೆಂದೇ ಬಂದು ಸೇರುವರು ಅಲ್ಲಿ ಊರ ಜನರು. ಪಿಚಕಾರಿಯಂತೆ ಚಿಮ್ಮುವ ಸಾಗರದ ಅಲೆಗಳಂತೆ ಒಮ್ಮೆಲೇ ಬಾನೆತ್ತರಕ್ಕೆ ಏರಿ ಹರಡುವ ಪಕ್ಷಿ ಸಮೂಹವು, ಸಾಗರ ಮಧ್ಯಕ್ಕೆ ಇಳಿದು ಜಾರಿ ಶಾಂತವಾಗುವ ತೆರೆಗಳಂತೆ ಒಮ್ಮೆಲೇ ದೊಡ್ಡಗೌಡರ ಮನೆಯ ಮುಂದಿನ ಆ ಆಲದ ಮರದ ಮೇಲಿಳಿದು ಸುಮ್ಮನಾಗುತ್ತವೆ. ಪಾರಿವಾಳಗಳು ಬಾನೆತ್ತರಕ್ಕೆ ಏರಿದಂತೆಯೇ ನೆರೆದ ಜನರ ಹರ್ಷೋದ್ಗಾರವೂ ಮುಗಿಲು ಮುಟ್ಟುತ್ತದೆ. ಆ ಊರ ಜನರಿಗೆ ಅವು […]

Continue Reading

ಇನ್ನೊಂದು ಯಾವಾಗ?

ನನ್ನ ಹತ್ತಿರದವರ ವಾಟ್ಸಾಪ್ ಗ್ರೂಪ್ ಒಂದಿದೆ. ಆ ಕುಟುಂಬಕ್ಕೆ ಮದುವೆಯಾಗಿ ಬಂದ ಹೆಣ್ಣುಮಕ್ಕಳೂ, ಆ ಮನೆತನದ ಹೆಣ್ಣುಮಕ್ಕಳನ್ನು ಮದುವೆಯಾದ ಹುಡುಗರೂ ಆ ಗುಂಪಿಗೆ ಸೇರ್ಪಡೆಯಾಗುತ್ತಾರೆ. ಒಬ್ಬೊಬ್ಬರ ಆಸಕ್ತಿ ಒಂದೊಂದರಲ್ಲಿ. ಅದು ಸಹಜವೇ. ಹಾಗೆಯೇ ಆಯ್ಕೆ ಮಾಡಿಕೊಂಡ ವೃತ್ತಿಯೂ ಬೇರೆ ಬೇರೆ. ಕೆಲವು ಜನ ವೈದ್ಯರು, ಕೆಲವು ಜನ ಎಂಜಿನೀಯರ್ ಗಳು, ಕೆಲವು ಜನ ಅಧ್ಯಾಪಕರು ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅಲ್ಲಿ ನಿತ್ಯವೂ ಒಂದಲ್ಲ ಒಂದು ವಿಷಯದ ಬಗ್ಗೆ ಮಾತುಕತೆ ನಡೆದಿರುತ್ತದೆ.   ಹೊಸತಾಗಿ […]

Continue Reading

ವಿಖ್ಯಾತ ವ್ಯಾಖ್ಯಾನ ಸಿಂಹಾಸನಾರೂಢ

ಹಿಂದಿನ ಸಲ ನಾವು ‘ಗುರುರಾಜ ಪಟ್ಟಭದ್ರ’ ಎಂಬ ಭೋಪರಾಕಿನ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದ್ದೆವು. ಈಗ ಇನ್ನೊಂದು ಪರಾಕು ‘ವಿಖ್ಯಾತ ವ್ಯಾಖ್ಯಾನ ಸಿಂಹಾಸನಾರೂಢ’ ಈ ವಿಷಯವನ್ನು ಚಿಂತಿಸುವುದಕ್ಕೆ ಯೋಚಿಸುವಾಗ ಸುಮಾರು ೨೦ ವರ್ಷಗಳ ಹಿಂದೆ ಕೆಕ್ಕಾರು ಮಠದಲ್ಲಿ ನಮ್ಮ ಶ್ರೀಸಂಸ್ಥಾನದ ಸವಾರಿ ತಂಗಿತ್ತು. ಪೀಠಕ್ಕೆ ಅವರು ಬರುವುದಕ್ಕಿಂತ ಮೊದಲು ಪೀಠದ ಎದುರಿನಲ್ಲಿ ನನ್ನ ಜೊತೆಯಲ್ಲಿ ವಿದ್ವಾಂಸರಾದ ಕಟ್ಟೆ ಪರಮೇಶ್ವರ ಭಟ್ಟರವರು ಕುಳಿತಿದ್ದರು. ಆಗ ‘ಎಂತಹ ದಿವ್ಯ ಪೀಠ ನಮ್ಮದು’ ಎಂದರು. ನಾನು ‘ಹೌದು, ಗುರುಗಳು ಬರುವಾಗ ಪರಾಕು […]

Continue Reading

ನಾಗಿಮಳ್ಳಿಯೆಂಬ ತಾಯಿ

ಅದೊಂದು ದಿನ ಶನಿವಾರ ಮಧ್ಯಾಹ್ನ ನಾನು ‘ಚಂಪಕ’, ಅಜ್ಜಿ ‘ಸುಧಾ’ ಪತ್ರಿಕೆಯ ಅಕ್ಷರಗಳನ್ನೆಲ್ಲಾ ಗುಕ್ಕು ಹಾಕಿಕೊಳ್ಳುತ್ತಿದ್ದೆವು. ನನ್ನ ಕೈಯಲ್ಲಿ ಚಂಪಕವಿದ್ದರೂ ಕಣ್ಣೆಲ್ಲಾ ಸುಧಾ ಪತ್ರಿಕೆಯ ಮೇಲೆ. ನನಗಾಗಲೇ ಅದರಲ್ಲಿ ಬರುತ್ತಿದ್ದ ಕಥೆಗಳನ್ನು ಓದುವ ಹುಚ್ಚು. ಆದರೆ ಚಿಕ್ಕಮಕ್ಕಳು ದೊಡ್ಡವರ ಕಥೆ ಪುಸ್ತಕ ಓದಬಾರದು ಎನ್ನುವುದು ನಮ್ಮಮ್ಮ ಮಾಡಿರುವ ಮಳ್ಳು ರೂಲ್ಸುಗಳಲ್ಲೊಂದಾಗಿತ್ತು.   ‘ಗೌರೀಶ್ ಕಾಯ್ಕಿಣಿ’,  ‘ಯಶವಂತ್ ಚಿತ್ತಾಲ’ ಮತ್ತು ‘ನಾ. ಡಿಸೋಜ’ ಇನ್ನೂ ಅನೇಕರ ಬರಹಗಳನ್ನು ನಮ್ಮ ಊರಿನವರೆಂಬ ಹೆಮ್ಮೆಯಿಂದ ಓದಿದ್ದನ್ನೇ ನಾಲ್ಕೈದು ಬಾರಿ ಓದಿದ ಅಸ್ಪಷ್ಟ […]

Continue Reading

ಏರದಿರಲಿ ಮನಸ್ಸು – ಭ್ರಮೆಯ ಬಲೂನನ್ನು

ಪ್ಲಾಸಿಬೊ ಇಫೆಕ್ಟ್ ಬಗ್ಗೆ ಕೇಳಿದ್ದೀರಾ? ಔಷಧಿಯಲ್ಲದ ಔಷಧಿ, ಚಿಕಿತ್ಸೆಯಲ್ಲದ ಚಿಕಿತ್ಸೆ. ಕೊಡುವ ಔಷಧಿಯಲ್ಲಿ ಯಾವುದೇ ಔಷಧೀಯ ಅಂಶವೇ ಇರುವುದಿಲ್ಲ. ಆದರೆ ಅದರಿಂದಾಗಿ ಔಷಧ ತೆಗೆದುಕೊಂಡ ವ್ಯಕ್ತಿಗೆ ಸಮಸ್ಯೆ ಪರಿಹಾರವಾಗಲೂಬಹುದು. ಪ್ಲಾಸಿಬೊ ತೆಗೆದುಕೊಂಡ ವ್ಯಕ್ತಿಯು ತಾನು ಔಷಧಿಯನ್ನೇ ತೆಗೆದುಕೊಂಡಿದ್ದೇನೆ ಎಂದುಕೊಂಡಿರುವಾಗ ಅವನಿಗೆ ತನ್ನ ಸಮಸ್ಯೆ ಕಡಿಮೆಯಾಗಿದೆ ಅನಿಸಬಹುದು. ಕಡಿಮೆಯೂ ಆಗಬಹುದು!   ಹೈಪೊಕಾಂಡ್ರಿಯಾ ಎಂಬೊಂದು ಸಮಸ್ಯೆ ಇದೆ. ಅದರಲ್ಲಿ ವ್ಯಕ್ತಿ ತನಗೆ ಯಾವುದೋ ಅನಾರೋಗ್ಯವಿದೆ ಎಂದುಕೊಂಡಿರುತ್ತಾನೆ. ತನಗೆ ಮಧುಮೇಹ, ಕ್ಯಾನ್ಸರ್, ಹೃದ್ರೋಗ ಹೀಗೆ ಏನೇನೋ ಇದೆಯೆಂದು ಭಾವಿಸಿಕೊಳ್ಳುತ್ತಾನೆ ಅವನು. […]

Continue Reading

ಮೇವು ಹುಡುಕುವ ಗೋವು, ಕಟುಕರಿಗೆ ಸುಲಭ ಮೇವು

ಬೆಳಗಾಗುತ್ತಿದ್ದಂತೆಯೇ ಮನೆ ನಡೆಸುವ ಅಮ್ಮಂದಿರ ದಿನಚರಿಯ ಮುಖ್ಯ ಕಾರ್ಯವೆಂದರೆ, ಹಟ್ಟಿಯ ಕೆಲಸಗಳು. ಹಟ್ಟಿಯಲ್ಲಿ ಅಂಬಾ ಎಂದು ಅದಾಗಲೇ ಕರೆಯಲು ಆರಂಭಿಸಿ ಮನೆಯೊಡತಿ ಅಮ್ಮನಿಗಾಗಿ ಕಾಯುತ್ತಿರುವ ದನಗಳಿಗೆ ಕಲಗಚ್ಚು, ಮಡ್ಡಿ ಉಣಿಸಿ; ಕರುವಿಗೆ ಕುಡಿಸಿ ಉಳಿದ ಹಾಲು ಕರೆದು, ಕುಡಿಯಲು ನೀರು ಕೊಟ್ಟು, ಹೆಸರಿನಿಂದ ಕರೆದು, ಮಗಳೇ ಎಂದು ಮುದ್ದಿಸಿ…   ಇವೆಲ್ಲ ನಾವುಗಳು ನೋಡಿ ಬೆಳೆದ ನಿತ್ಯಚರ್ಯೆಗಳು. ಅದಾಗಿ ದನಗಳನ್ನು ಮೇಯಲು ಗುಡ್ಡೆಗೆ ಬಿಡುವುದು. ದನಗಳೂ ಈ ದಿನಚರಿಗೆ ಅದೆಷ್ಟು ಒಗ್ಗಿದ್ದವೆಂದರೆ, ನಿತ್ಯವೂ ಬೆಳಗ್ಗೆ ಹಟ್ಟಿಯಿಂದ ಹೊರಟು […]

Continue Reading

ಒಪ್ಪಿಕೊಂಡಿದ್ದನ್ನು ಅಪ್ಪಿಕೊಳ್ಳೋಣ…

  ಬದುಕಿಗೊಂದು ಬದ್ಧತೆ ಬೇಕು. ನಾ ಹೀಗೆ ಬದುಕುವುದೆಂಬ ನಿರ್ಧಾರ ಬೇಕು. ಅದಕ್ಕೆ ಬೇಕಾದಂತೆ ತನ್ನ ಸುತ್ತಲಿನ ವಾತವರಣವನ್ನು ಸೃಷ್ಟಿಸಿಕೊಳ್ಳುವುದೇ ಜಾಣತನ. ಆಯ್ದುಕೊಂಡದನ್ನ ಪ್ರೀತಿಸಿದರೆ, ಒಪ್ಪಿಕೊಂಡಿದ್ದನ್ನ ಅಪ್ಪಿಕೊಂಡರೆ ಬದುಕು ನಿರಾಳ. ಕೆಲವೊಮ್ಮೆ ಆಲೋಚನೆ ಇಲ್ಲದೆಯೇ ಬದುಕು ನಿರ್ಧಾರವಾಗಿ ಬಿಡುವುದು. ಆಗ ಬಂದಿದ್ದನ್ನ ಸ್ವೀಕರಿಸಿ ಒಪ್ಪಿಕೊಳ್ಳೋದು ಅನಿವಾರ್ಯ.      ಗೆಳತಿಯೊಬ್ಬಳ ಮಾತಿನ ದಾಟಿ ಹೀಗಿತ್ತು. ‘ಹೋಗಿ ಹೋಗಿ ಹಳ್ಳಿ ಮನೆ ಒಪ್ಪಿಕೊಂಡು ಮದುವೆ ಆಗಿ ಬಿಟ್ಟೆಯಲ್ಲೇ. ಪೇಟೆ ಎಷ್ಟು ಚನ್ನಾಗಿದೆ ಗೊತ್ತಾ?’ ಅವಳ ಮಾತಿನ ದಾಟಿ ಅವಳ ಮನಸಿನ […]

Continue Reading

ನೆನೆಯಲೇಬೇಕು ದೇಶಕೆ ಧೈರ್ಯದ ಪಾಠ ಹೇಳಿಕೊಟ್ಟ ಪಂಜಾಬಿನ ಹುಲಿ

“ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಯಿಂದ ಸಿಕ್ಕುವಂತದ್ದಲ್ಲ, ಅದು ಹೋರಾಟ ಮತ್ತು ಬಲಿದಾನಗಳಿಂದ ಮಾತ್ರ ಸಾಧ್ಯ” ಎಂದು ಗುಡುಗಿ, ಭರತ ಸಂಸ್ಕೃತಿಯಲ್ಲಿ ಹೇಳಲಾದ ಸಾಮ – ದಾನ – ಬೇದ – ದಂಡ ಇವುಗಳಲ್ಲಿ ದುಷ್ಟರಿಗೆ ದಂಡವನ್ನೂ ಪ್ರಯೋಗಿಸಬಹುದು ಎಂಬುದನ್ನು ನೆನಪಿಸಿ ದಾಸ್ಯ ಪದ್ದತಿಯಲ್ಲಿ ಮುಳುಗಿದ್ದ ಭಾರತೀಯರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಬಡಿದೆಬ್ಬಿಸಿದ್ದು ಶ್ರೀ ಲಾಲಾ ಲಜಪತ್ ರಾಯ್. ಮೊನ್ನೆ ಜನವರಿ ೨೮ರಂದು ಲಾಲಾ ಅವರ ೧೫೧ನೇ ಜನ್ಮ ಜಯಂತಿಯ ಹಿನ್ನೆಲೆಯಲ್ಲಿ ಅವರ ಪ್ರೇರಣಾದಾಯಿ ಜೀವನಗಾಥೆಯನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡೋಣ. […]

Continue Reading

ನಾರದನಾಮಪ್ರಣೀತ ಸಂಗೀತಶಾಸ್ತ್ರಗ್ರಂಥಗಳು

ಸಂಗೀತಶಾಸ್ತ್ರ ಪ್ರಪಂಚದಲ್ಲಿ ಬೇರೆ ಬೇರೆ ಕಾಲದಲ್ಲಿ ನಾರದ ಪ್ರಣೀತವೆನ್ನುವ ಸಂಗೀತಶಾಸ್ತ್ರಗ್ರಂಥಗಳು ಲಭ್ಯವಿದೆ. ಪ್ರಾಚೀನದಿಂದ ಅರ್ವಾಚೀನದವರೆಗೂ ನಾಟ್ಯಶಾಸ್ತ್ರ, ಸಂಗೀತ, ಗಾಂಧರ್ವಶಾಸ್ತ್ರ ಇತ್ಯಾದಿ ವಿಚಾರಗಳಲ್ಲಿ ಉಲ್ಲೇಖಿಸಲ್ಪಟ್ಟ ಹತ್ತು ಮಂದಿ ನಾರದರು ಬೇರೆ ಬೇರೆ ಕಾಲಗಳಲ್ಲಿ ಕಂಡುಬರುತ್ತಾರೆ. ಇದರಲ್ಲಿ ನಾರದ ಪ್ರಣೀತವೆನ್ನುವ ಸಂಗೀತಶಾಸ್ತ್ರಗ್ರಂಥಗಳು ಇಂತಿವೆ.   ನಾರದೀಯಶಿಕ್ಷಾ : ವೇದದ ಸ್ವರವರ್ಣಾದಿಗಳನ್ನು ಉಚ್ಚರಿಸಬೇಕಾದ ಕ್ರಮವನ್ನು ಬೋಧಿಸುವ ಗ್ರಂಥಗಳಿಗೆ ಶಿಕ್ಷಾಗಳೆಂದು ಹೆಸರು. ನಾರದೀಯ ಶಿಕ್ಷೆಯು ಸಾಮವೇದದ ಶಿಕ್ಷಾ. ಸಾಮಗೀತೆಗೂ ಲೌಕಿಕ ಸಂಗೀತಕ್ಕೂ ಇದು ಸೇತುಬಂಧನವನ್ನುಂಟುಮಾಡುತ್ತದೆ. ನಾರದನು ನಾರದೀಯಶಿಕ್ಷೆಯ ಕರ್ತೃವೆಂಬುದು ಪ್ರಸಿದ್ಧವಾಗಿಯೇ ಇದೆ. ಇದು […]

Continue Reading

ನಗರದ ನೀರಡಿಕೆ ನೀಗಲು ನಾಳೆಗೂ  ನೀರು ಬೇಡವೇ?

ಮಗೂ, ಬದುಕಿಗೊಂದು ಅರ್ಥವೇ ಇಲ್ಲದೇ ವ್ಯರ್ಥವಾಗಿ ನಲ್ಲಿಯಿಂದ ತೊಟ್ಟಿಕ್ಕಿ ಬಚ್ಚಲಿಗೆ ಹರಿಯುತ್ತಿರುವ ತಣ್ಣೀರಿನ ಹನಿ ನಾನು. ಒಂದರ್ಥದಲ್ಲಿ ಕಣ್ಣೀರಿನ ಹನಿಯೂ ಕೂಡ. ಹೌದು, ಬೆಳಿಗ್ಗೆ ತಿಂಡಿ ತಿಂದು ಕೈತೊಳೆದ ನೀನು ನಲ್ಲಿಯನ್ನು ಅರ್ಧ ತಿರುವಿ  ಹಾಗೆಯೇ ಶಾಲೆಗೆ ಓಡಿ ಹೋಗಿ ಈಗ ಬಂದೆ. ಬಾ ಮಗೂ, ನಲ್ಲಿಯನ್ನು ಬಂದ್ ಮಾಡು. ಇದೋ ನೀನು ಹೋದಾಗಿನಿಂದ ನಾನು ‘ಟಪ್ ಟಪ್’ ಎಂದು ಸುಮ್ಮನೆ ಸುರಿಯುತ್ತಲೇ ಇದ್ದೇನೆ.   ನಿನ್ನ ತಂದೆತಾಯಿಯರಿಗೂ ನನ್ನ ಕುರಿತು ಗಮನವಿಲ್ಲ. ನಿಮ್ಮಪ್ಪ ಮುಖಕ್ಷೌರದ ವೇಳೆ, […]

Continue Reading

ಯೋಗಿ ಕಂಡ ಕನಸು

ವರುಷಗಳಿಂದ ಹಿಮಾಲಯದ ಆ ಚಳಿಯಲ್ಲಿ ಧ್ಯಾನಾಸಕ್ತನಾಗಿ ಹೆಪ್ಪುಗಟ್ಟಿ ಕುಳಿತಿದ್ದ ಯೋಗಿಗೊಂದು ಕನಸು ಬಿತ್ತು. ಆ ಕನಸಿನಲ್ಲಿ ಆತ ಕಂಡಿದ್ದು ದಟ್ಟ ಹಸಿರಿನಿಂದ ತುಂಬಿ ಕಂಗೊಳಿಸುವ ಪ್ರಶಾಂತವಾದ ಒಂದು ಲೋಕ. ಅಲ್ಲಿ ಫಲ ಬಿಡದ ಮಾಮರಗಳಿಲ್ಲ. ಪ್ರತಿಯೊಂದು ಹುಲ್ಲು ಕಡ್ಡಿಗಳಲ್ಲೂ ಹೂವುಗಳು ಅರಳಿ ನಿಂತಿವೆ. ಯಥೇಚ್ಛವಾಗಿ ಹರಿದು ಸಾಗರ ಸೇರುವ ತೊರೆ ನದಿಗಳಲ್ಲಿ ಕಲ್ಮಶವು ಲವಲೇಶವೂ ಇಲ್ಲ. ತಪೋವನ ತುಲ್ಯವಾದ ಆ ಪ್ರದೇಶದಲ್ಲಿ ಹೊಗೆಯಾಡುವ ಗುಡಿಸಲುಗಳೂ ಕಾಣಸಿಗುತ್ತವೆ ಅಲ್ಲಲ್ಲಿ. ಆ ಗುಡಿಸಲುಗಳ ಸುತ್ತ ಹರಡಿ ನಿಂತಿರುವ ವಿಶಾಲ ಹೊಲಗದ್ದೆಗಳಲ್ಲಿ […]

Continue Reading

ಇಲ್ಲಿ ಯಾರೂ ಅಮುಖ್ಯರಲ್ಲ

ಮನೆಯಲ್ಲಿ ಒಂದು ಮದುವೆಯಿದೆ ಅಂದುಕೊಳ್ಳಿ. ಕೆಲಸಗಳು ಒಂದೇ ಎರಡೇ? ಪಟ್ಟಿ ಮಾಡಿದರೂ ಮುಗಿಯದ ಕೆಲಸ. ಮನೆ ತುಂಬಾ ನೆಂಟರು, ಗ್ರಾಮಸ್ಥರು. ಮನೆಯ ಯಜಮಾನನಿಂದ ಹಿಡಿದು, ಊರಿನ ಕೊನೆ ಮನೆಯವರೆಗೆ ಎಲ್ಲರೂ ಒಂದಿಲ್ಲೊಂದು ಕೆಲಸ ಮಾಡುವವರೇ. ಬಣ್ಣ ಬಳಿಯುವ ಕೆಲಸ, ಅಂಗಳ ಸಾರಿಸುವ ಕೆಲಸ, ಚಪ್ಪರ ಹಾಕುವ ಕೆಲಸ, ತೋರಣ ಕಟ್ಟುವ ಕೆಲಸ, ಅಡುಗೆ ಕೆಲಸ, ತರತರದ ತಿಂಡಿಗಳನ್ನು ಮಾಡುವ ಕೆಲಸ, ಬೇಕಾದಷ್ಟು ಹಾಲು, ಮೊಸರು, ತುಪ್ಪ, ಮಜ್ಜಿಗೆಗಳ ವ್ಯವಸ್ಥೆ ಮಾಡುವ ಕೆಲಸ, ತರಕಾರಿ ಹೆಚ್ಚುವ ಕೆಲಸ, ಹೂವು […]

Continue Reading

ಗುರುರಾಜ ಪಟ್ಟ ಭದ್ರ

ನಮ್ಮ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು  ಯಾವತ್ತೂ ಪೀಠಕ್ಕೆ ಬಂದು ಆಸೀನರಾಗುವಾಗ ಅವರನ್ನು ಬಹುಪರಾಕಿನಿಂದ ಬರ ಮಾಡಿಕೊಳ್ಳಲಾಗುತ್ತದೆ.  ಗೌರವಿಸಲಾಗುತ್ತದೆ. ಆದರಿಸಲಾಗುತ್ತದೆ. ಹಾಗೆ ಹೇಳುವಾಗ ಆ ಪರಾಕಿಗೊಂದು ವಿಶೇಷವಾದ ಮೆರಗಿದೆ. ಇಡೀ ವಾತಾವರಣ ಶ್ರೀಸಂಸ್ಥಾನದವರ ಎತ್ತರ, ಮಹತ್ತ್ವಗಳನ್ನು ಭಕ್ತಿಪರವಶತೆಯಿಂದ ಕಾಣುತ್ತಾರೆ. ಕಣ್ಮುಚ್ಚಿ ಅವರನ್ನು ಧ್ಯಾನಿಸುತ್ತಾರೆ.   ಹಾಗಿದ್ದರೆ ಏನಿದು ಪರಾಕು? ಇದು ಕೇವಲ ಹೊಗಳುವಿಕೆಯಲ್ಲ. ಇದರ ಹಿಂದೆ ಅಪಾರವಾದ ಅರ್ಥವಿದೆ. ಇದು ಸುಮ್ಮ- ಸುಮ್ಮನೆ ಪೋಣಿಸಿದ ಶಬ್ದಗಳಲ್ಲ. ಇದು ಸಾಧಿಸಿ ಗಳಿಸಿಕೊಂಡ ಸಿದ್ಧಿ.  ಇದರಲ್ಲಿ ಎಂತಹ ಅಪಾರವಾದಂತಹ ಗುರು-ಶಿಷ್ಯ […]

Continue Reading

ತವರಿನ ತೇರು ಎಂಬ ಮಹಾಕಾವ್ಯ

ಸಂಕ್ರಾಂತಿ ಕಾಳು ಹಂಚುವ ಸಂಭ್ರಮ ಮುಗಿಯುವುದರೊಳಗೆ ತೇರಿನ ಸಡಗರದ ಗಡಿಬಿಡಿ ಶುರುವಾಗುತ್ತಿತ್ತು. ಸಂಕ್ರಾಂತಿಯ ಮರುದಿನ ಗೋರೆಯ ಸಮೀಪದ ಗೊಜ್ನುಗುಡಿಯ ಗುಡ್ಡದಲ್ಲಿ ನಡೆಯುವ ‘ಜಟಕ’ ದೇವರ ಸಣ್ಣಹಬ್ಬ ನಡೆಯುತ್ತಿತ್ತು. ಒಂದೆರಡು ಬಳೆ ಕುಂಕುಮದಂಗಡಿ, ಪುಗ್ಗೆ-ಪೀಪೀಯ ಹುಡುಗ, ಐಸ್ ಕ್ಯಾಂಡಿಯವರಷ್ಟೇ ಬರುವ ಹಬ್ಬವದು. ಪೂಜೆ ಮಾಡುವಾಗ ಜನರ ಗುಂಪಲ್ಲಿ ಸುಮ್ಮನೆ ಕೈಮುಗಿದು ನಿಂತಿರುವ ಕೆಲವರಿಗೆ ಇದ್ದಕ್ಕಿದ್ದಂತೆ ಮೈಮೇಲೆ ದೇವರು ಬಂದು, ಅವರ ಮನಸ್ಸಲ್ಲಿದ್ದದ್ದೆಲ್ಲ ಕಹಿ ನೀರಾಗಿ ಎರಚಾಡಿ ರಾಡಿಯೆಬ್ಬಿಸಿಬಿಡುತ್ತಿತ್ತು. ಹುಣ್ಣಿಮೆ ಸಮೀಪಿಸುವಾಗ ಇದನ್ನೆಲ್ಲ ನೋಡಿ ಹೆದರಿದರೆ ರಾತ್ರಿಯೆಲ್ಲ ರಗಳೆ ಮಾಡುವರೆಂಬ […]

Continue Reading

ಯಾರೂ ನೋಡದ್ದನ್ನು ನಾನೂ ನೋಡಿಲ್ಲವೇ?

She lost her legs in an accident, a day before the wedding.   The next day he lost his spine.     ಹೀಗೊಂದು ಸಣ್ಣ ಕಥೆ. ಎಲ್ಲೋ ಓದಿದ್ದು. ಇದರಲ್ಲಿ ಎರಡನೆಯ ಸಾಲು ಕಾಡುವಂಥದ್ದು. ಮೊದಲನೆಯ ಸಾಲು ಯೋಚನೆಗೆ ನೂಕುವಂಥದ್ದು. ಅದರಲ್ಲಿ ಯೋಚಿಸುವಂಥದ್ದೇನಿದೆ? ರಸ್ತೆಗಿಳಿದ ಪ್ರತಿಯೊಬ್ಬನೂ ಇನ್ನೊಂದು ಕಡೆಗೆ ಸುರಕ್ಷಿತವಾಗಿ ತಲುಪುತ್ತಾನೆಯೇ ಅಥವಾ ಮಧ್ಯದಲ್ಲಿಯೇ ಯಮನ ದೂತರು ಅವನನ್ನು ತಮ್ಮ ವಾಹನದಲ್ಲಿ ಹೇರಿಕೊಂಡು ಹೋಗಿಬಿಡುತ್ತಾರೆಯೇ. ಅಥವಾ ಅಂಗಾಂಗ ಕಳೆದುಕೊಂಡು […]

Continue Reading