ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೪೦

ಅರಿವು-ಹರಿವು
ಶ್ರೀಮನ್ನಾರಯಣನೇ ಭುವಿ ಜನರುದ್ಧಾರಕ್ಕಾಗಿ  ‘ಗುರು’ ವೆಂಬ ರೂಪದಿಂದ ಧರೆಗವತರಸಿ ಬಂದುದು ಮತ್ತು  ‘ಪರತತ್ವ ಕಂಡ ಗುರುವನರಸುವುದೆಲ್ಲಿ’ .. ಎಂಬ ಸಂಶಯ ಬಾರದಂತೆ ಗುರುಮೂರ್ತಿಯನ್ನು ನೀಡಿ ನೆರವಾದ  ಮಠವೆಂಬ ವ್ಯವಸ್ಥೆ ಗೆ ಪ್ರಣಾಮಿಸುತ್ತಾ ಗುರುಪರಂಪರೆಯ ಮುಂದುವರಿಕೆಯಾಗಿ ತೋರ್ಪಟ್ಟ ಅರಿವಿನ ಹರಿವಿನ ನೆಲೆಯಾದ ಮೂವತ್ತ್ಮೂರನೇ ಪೀಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಶ್ರೀಗಳು (೮) ಪಾತ್ರವನ್ನೊಮ್ಮೆ ಅವಲೋಕಿಸೋಣ.
  ಪೂಜ್ಯ ರಾಘವೇಶ್ವರಭಾರತೀ ಶ್ರೀಗಳು(೮)  ತಮ್ಮ ದೀಕ್ಷಾ ಗುರುಗಳಾದ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಪೂರ್ವಾಶ್ರಮದ ಕುಟುಂಬಸ್ಥರೇ ಆಗಿದ್ದು ತಮ್ಮ ಹದಿನಾರನೆಯ ವಯಸ್ಸಿನಲ್ಲಿಯೇ ಯೋಗಪಟ್ಟಾಭಿಷಿಕ್ತಗೊಂಡರು.ಅದಾದ ಬಳಿಕದ ಕೆಲ ಘಟಾನಾವಳಿಗಳನ್ನು ಕೊಂಚ ನೋಡಿ ಅರಿವಿಗಾಗಿ ಸ್ಫೂರ್ತಿಗೊಳ್ಳೋಣ. ಪೀಠಾಧೀಶರಿಗೆ ಕಡ್ಡಾಯವಾಗಿ ಆಗಬೇಕಿದ್ದ ಅಧ್ಯಯನಕ್ಕಾಗಿ ಶ್ರೀಮಠದಲ್ಲಿಯೇ ಅಲ್ಲಿದ್ದ ಆಚಾರ್ಯರಿಂದ ಶ್ರೀರಾಘವೇಶ್ವರಭಾರತೀಗಳಿಗೆ ಅಧ್ಯಾಪನ ಶ್ರೀಮದ್ರಾಘವೇಂದ್ರಭಾರತೀಗಳ ಆಗ್ರಹದ ಮೇರೆಗೆ ನಿಯೋಜನೆಗೊಂಡಿತ್ತು. ಆದರೆ ಪೂಜ್ಯರಿಂದ ಅಧ್ಯಯನದ ತೀವ್ರತೆ  ಸಾಕಾಗುತ್ತಿಲ್ಲವೆಂದು  ಶ್ರೀಮದ್ರಾಘವೇಂದ್ರಭಾರತೀಗಳು ಅದನ್ನು, ವೇದಾಂತ ಕಲಿಸುವ  ಆಚಾರ್ಯರಿಗೆ ಅಧ್ಯಾಪನ ಸಾಕಾಗುತ್ತಿಲ್ಲವೆಂದು ಪದೇ ಪದೇ ಹೇಳುತ್ತಿರುತ್ತಾರಂತೆ.   ಶ್ರೀರಾಘವೇಶ್ವರಭಾರತೀಗಳು (೮), ಗುರುಗಳು ನೇರವಾಗಿ ತಮ್ಮೊಡನೆ ಹೇಳಲಾರದೆ ಈ ರೂಪದಲ್ಲಿ ಹೇಳುತ್ತಿದ್ದಾರೆಂದು ಗ್ರಹಿಸಿ ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆಯೇ ಅಧ್ಯಯನಕ್ಕಾಗಿ ಮಠವನ್ನು ಬಿಟ್ಟು ಹೊರಡುತ್ತಾರೆ. ಅಲ್ಲಿಂದ ತಾಮ್ರಪರ್ಣೀ ನದಿಯ ತಟದ  ಕಾಂಚೀಕ್ಷೇತ್ರದ ‘ಪಾಲಾಮಡಿ’ ಪ್ರದೇಶಕ್ಕೆ ತೆರಳುತ್ತಾರೆ. ಇತ್ತ ಪರಂಪರೆಯಲ್ಲಿ ಕಂಡಿರದ ರೀತಿಯ ಆಗುಗಳನ್ನು ನೋಡಿದ ಶ್ರೀಮದ್ರಾಘವೇಂದ್ರಭಾರತೀಗಳು ಕಳವಳಗೊಂಡರೂ ಸಾಂತ್ವಾನ ತಂದುಕೊಳ್ಳುತ್ತಾರೆ. ಕಾಂಚೀ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ ಶ್ರೀಮದ್ರಾಘವೇಶ್ವರಭಾರತೀಗಳು (೮) ತಮ್ಮ ಅಸ್ತಿತ್ವ ತಿಳಿಯಬಾರದಂತೆ ‘ಗೋಕರ್ಣಸ್ವಾಮಿ’ ಎಂಬ ಹೆಸರಿನಲ್ಲಿಯಷ್ಟೇ ವ್ಯವಹರಿಸುತ್ತಾರೆ. ಕೆಲ ಕಾಲದಲ್ಲಿಯೇ ಅಲ್ಲಿಂದ ಶ್ರೀಮದ್ರಾಘವೇಂದ್ರಭಾರತೀಗಳಿಗೆ ಪತ್ರವನ್ನು ಬರೆಯುತ್ತಾರೆ. ತಾವು ಅಧ್ಯಯನಕ್ಕಾಗಿ ಇಲ್ಲಿರುವುದಾಗಿಯೂ ಮತ್ತೆ ಮರಳುವುದಾಗಿಯೂ.. ತದನಂತರದಲ್ಲಿ ಪತ್ರವ್ಯವಹಾರ ನಡೆಯುತ್ತಿದ್ದು ಅದರಲ್ಲಿ, ಅತಿ ಕ್ಲಿಷ್ಟಕರವಾದ ವೇದಾಂತ ತತ್ವಗಳು ಈಗ ಮನಸ್ಸಿಗೆ ಬರುತ್ತಿವೆ ಎಂಬ ಉಲ್ಲೇಖಗಳು ಇವೆ. ರಾಮನೇನು ದೇವನೇ ಇಲ್ಲ ಮಾನವನೇ ಎಂಬ ಪ್ರಶ್ನೆಗೆ ನಮಗೆಲ್ಲ ತಿಳಿದುತ್ತರ ಅದುವೆ ‘ದೇವಮಾನವ’ ಎಂದಲ್ಲವೇ.. ಹಾಗೆಯೇ ಅದೇ ಶ್ರೀಮನ್ನಾರಯಣನ ಪ್ರತಿರೂಪ ಗುರುವೂ ಅರಿವನ್ನು ಅವ್ಯಾಹತವಾಗಿ ಹೊರಸೂಸುವ ದೇವಮಾನವನಷ್ಟೇ. ಆದ್ದರಿಂದಲೇ ಸಾಮಾನ್ಯ ಮಾನವನಂತೆ ಪ್ರಕೃತಿ ಎಂತು ತೋರ್ಪಟ್ಟಿತ್ತೋ ಅಂತೆಯೇ ಇದ್ದು ಪುರುಷ  ಪ್ರಯತ್ನವಗೈದು ಅರಿವಿನ ಅಕ್ಷರ ರೂಪವನ್ನೂ ತಮ್ಮದಾಗಿಸಿಕೊಂಡು ಅದನ್ನು ಲೋಕಕ್ಕೆ ಬೆಳಕಾಗಿ ನೀಡಲು ಸಹಜವಾಗಿದ್ದ ದೈವೀಸ್ವರೂಪವನ್ನು ಮೆರೆದುದು. ಅಜ್ಞಾತವಾಸದಲ್ಲಿಯೇ ಇದ್ದರೂ ಸಹ, ಏಲಕ್ಕಿ ತಿಂದು ಮಾತನಾಡಬೇಕೆಂದಾಗ ಅದರ ಪರಿಮಳವನ್ನು ಗೌಪ್ಯವಾಗಿಡಲ್ಹೇಗೆ ಸಾಧ್ಯವಿಲ್ಲವೋ ಅಂತೆಯೇ ಅರಿವಿನ ಅಪರಿಮಿತ ಪ್ರಭೆ, ಆಳವಾದ ವಿದ್ವತ್ತಿನಿಂದ ಕಂಗೊಳಿಸುತ್ತಿದ್ದ ಅವಿಚ್ಛಿನ್ನ ಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ ಪೀಠಾಧಿಪತಿಗಳ ಗುರುತನ್ನು ಮರೆಮಾಚಲು ಸಾಧ್ಯವೇ??.. ಆದ್ದರಿಂದ ಕಾಂಚಿರಾಜನಿಗೂ ಈ ವಿಷಯ ತಿಳಿಯಿತು.  ಅದನ್ನರಿತ ರಾಜನು ಅರಿವಿನ ಈ ಮೂರ್ತಿವೆತ್ತ ರೂಪದ ಪೂಜ್ಯ ಗುರುಗಳಿಗೆ ಕಾಣಿಕೆ ನೀಡಿ ಗೌರವಿಸಿ ಆಶೀರ್ವಾದ ಪಡೆದುದಲ್ಲದೇ ಪ್ರಪಂಚದೊಳಿತಿಗಾಗಿ ಹೊಂದಿದ್ದ ಗುರುಗಳ ಇನ್ನೊಂದು ಅಪೇಕ್ಷೆಯನ್ನೂ ಅರಿತುಕೊಳ್ಳುತ್ತಾನೆ. ಅದೇನೆಂದರೆ,,ಆನೆ . ಶ್ರೀಮದ್ರಾಘವೇಶ್ವರಭಾರತೀಗಳು(೮)  ಶಿಷ್ಯ ಸ್ವೀಕಾರವಾದ ಹೊಸದರಲ್ಲಿ ಆನೆ ಬೇಕೆಂಬ  ಅಪೇಕ್ಷೆಯನ್ನಿಡುತ್ತಾರೆ. ಆಗ ತಡಮಾಡದೇ ಶ್ರೀಮದ್ರಾಘವೇಂದ್ರಭಾರತೀಗಳು ಕೊಡಗಿನ ಅರಸರಿಗೆ ಆನೆ ಬೇಕೆಂಬುದಾಗಿ ಪತ್ರ ಬರೆಸಿರುತ್ತಾರೆ. ಆದರೆ ಅಷ್ಟರಲ್ಲಿಯೇ ನೂತನ ಪೀಠಾಧೀಶರು ಕಾಂಚಿಗೆ ತೆರಳಿದ್ದರಿಂದ ಅದು ಈಡೇರಿರುವುದಿಲ್ಲ. ಆದರಿದೀಗ ಕಾಂಚಿಯ ಮಹಾರಾಜ ತನ್ನ ಗಜಗಳನ್ನು ತೋರಿಸಿ ಅದನ್ನಾರಿಸಿ ಸ್ವೀಕರಿಸಬೇಕೆಂಬ ಕೋರಿಕೆಯನ್ನಿಡುತ್ತಾನೆ. ಅದರಂತೆಯೇ ಅಲ್ಲಿದ್ದೊಂದು ತುಂಟ ಆನೆಯನ್ನು ಆರಿಸಿ ಸ್ವೀಕರಿಸಿ ಅದಕ್ಕೆ ಪ್ರೀತಿಯಿಂದ ತಾವೆಯೇ ‘ರಾಮಭದ್ರ’ ನೆಂಬ ನಾಮವನ್ನಿಡುತ್ತಾರೆ.. ಮುಂದೇನಾಯಿತು.. ಮುಂದಿನ ಸಂಚಿಕೆಯಲ್ಲಿ.

Author Details


Srimukha

Leave a Reply

Your email address will not be published. Required fields are marked *