ಗೋಸೇವೆಯೇ ನಮ್ಮ ಜೀವನ : ಆಶಾಕಿರಣ ಆರ್. ಹೆಮ್ಮಣ್ಣ

ಮಾತೃತ್ವಮ್

 

Hem’s ಸಂಸ್ಥೆಯ ಮೂಲಕ ಸಮಾಜಕ್ಕೆ ಪರಿಚಿತರಾಗಿರುವ ಆಶಾಕಿರಣ ಆರ್ ಹೆಮ್ಮಣ್ಣ ಅವರು ಎಳವೆಯಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವರು. ಶ್ರೀರಾಮಚಂದ್ರಾಪುರ ಮಂಡಲದ ಗನವಳ್ಳಿಯ ವಾಮದೇವಯ್ಯ ಹಾಗೂ ಲೀಲಾವತಿ ದಂಪತಿಗಳ ಪುತ್ರಿಯಾದ ಆಶಾಕಿರಣ ಪ್ರಸ್ತುತ ಮಂಗಳೂರು ಮಂಡಲ ಕುಂದಾಪುರ ವಲಯದ ನಿವಾಸಿಯಾಗಿದ್ದಾರೆ.

‘ ಸುರಭಿ ಸಾರ’ ದ ತಯಾರಕ ಸಂಸ್ಥೆಯಾದ ಹೆಮ್ಸ್ ಉದ್ಯಮವನ್ನು ನಡೆಸುತ್ತಿರುವ ರಾಘವೇಂದ್ರ ಹೆಮ್ಮಣ್ಣ ಅವರ ಪತ್ನಿಯಾದ ಇವರು ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆ.

” ಬಾಲ್ಯದಲ್ಲೇ ಶ್ರೀಮಠಕ್ಕೆ ಬರುತ್ತಿದ್ದೆ.‌ಮದುವೆಯ ನಂತರ ಮತ್ತಷ್ಟು ಹತ್ತಿರವಾದೆವು. ಗೋವುಗಳ ಮೇಲೆ ತುಂಬ ಪ್ರೀತಿಯಿದೆ. ಪ್ರತಿದಿನವೂ ಗೋಮಾತೆಗಾಗಿ ಕಾಣಿಕೆ ತೆಗೆದಿರಿಸುತ್ತೇವೆ. ನಮ್ಮ ಸಂಸ್ಥೆ ತಯಾರಿಸುತ್ತಿರುವ ಸುರಭಿ ಸಾರ’ ಕ್ಕಾಗಿ ಹೊಸನಗರದ ಗೋಶಾಲೆಯಿಂದಲೇ ಗೋಮೂತ್ರವನ್ನು ತರಿಸಿಕೊಳ್ಳುತ್ತೇವೆ. ಗೋಮಾತೆಯ ಸೇವೆಯೇ ನಮ್ಮ ಜೀವನ. ಗೋವುಗಳಿಗಾಗಿ ಏನಾದರು ಮಾಡಬೇಕು ಎಂದು ಮನಸ್ಸು ಸದಾ ತುಡಿಯುತ್ತಿರುತ್ತದೆ ” ಎನ್ನುವ ಆಶಾಕಿರಣ ಅವರು ಎರಡು ವರ್ಷಗಳ ಮೊತ್ತವನ್ನು ಸಂಪೂರ್ಣವಾಗಿ ತಾವೇ ಭರಿಸಿ ಪೂರ್ಣಪ್ರಮಾಣದ ಮಾಸದ ಮಾತೆಯಾದವರು.

ಶ್ರೀಗುರುಗಳ ಅನುಗ್ರಹದಿಂದ ಬದುಕಿನಲ್ಲಿ ನೆಮ್ಮದಿ ನೆಲೆಸಿದೆ ಎಂಬ ಭದ್ರ ಭರವಸೆ ಹೊಂದಿರುವ ಅವರಿಗೆ ಜೀವನದ ಅನೇಕ ಸಂದರ್ಭಗಳಲ್ಲಿ ಇದು ಅನುಭವಕ್ಕೆ ಬಂದಿದೆ ಎನ್ನುತ್ತಾರೆ.

” ಶ್ರೀರಾಮಾನುಗ್ರಹದಿಂದಲೇ ನಮಗೆ ಸಂತಾನ ಭಾಗ್ಯ ದೊರಕಿದೆ. ಈಗಲೂ ಪ್ರತಿದಿನ ನಾವು ತಪ್ಪದೆ ಮಂತ್ರಾಕ್ಷತೆಯನ್ನು ಸ್ವೀಕರಿಸುತ್ತೇವೆ. ಮಕ್ಕಳಿಗೂ ಶ್ರೀಮಠದ ಸೇವೆಯ ಮೇಲೆ ಆಸಕ್ತಿಯಿದೆ. ನಮ್ಮ ಗೋಸೇವೆ ನಿತ್ಯ ನಿರಂತರ ” ಎನ್ನುವ ಇವರು ಗೋ ಲೋಕದ ವಿವಿಧ ಗೋತಳಿಗಳನ್ನು ಸಮಾಜಕ್ಕೆ ಪರಿಚಯಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *